• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Election: ಪ್ರಚಾರದಲ್ಲಿ ಯಾವ ವಿಷಯ ಪ್ರಸ್ತಾಪಿಸಬೇಕು? ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹೈಕಮಾಂಡ್ ಕಟ್ಟಪ್ಪಣೆ

Karnataka Election: ಪ್ರಚಾರದಲ್ಲಿ ಯಾವ ವಿಷಯ ಪ್ರಸ್ತಾಪಿಸಬೇಕು? ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹೈಕಮಾಂಡ್ ಕಟ್ಟಪ್ಪಣೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಹಿಂದೆ ಗುಜರಾತ್ ವಿಧಾನಸಭೆ ಚುನಾವಣೆ ವೇಳೆ ಮೌತ್ ಕಾ ಸೌದಾಗರ್(ಸಾವಿನ ವ್ಯಾಪರಿ) ಎಂದು ಟೀಕೆ ಮಾಡಿದ್ದನೇ ಅಸ್ತ್ರ ಮಾಡಿಕೊಂಡಿದ್ದರು. ಮೋದಿ ಜನಪ್ರಿಯತೆ ಈಗಲೂ ಪ್ರಬಲವಾಗಿರುವುದರಿಂದ ಬಿಜೆಪಿಗೆ ನಾವು ಅಸ್ತ್ರ ಕೊಡಬಾರದು.

  • Share this:

ಬೆಂಗಳೂರು: ರಾಜಕೀಯ ಪಕ್ಷಗಳು (Politics) ಚುನಾವಣೆ ಪ್ರಚಾರ ನಡೆಸುತ್ತಿವೆ. ಕೆಲವೊಮ್ಮೆ ಪ್ರಚಾರದ ಭರದಲ್ಲಿ ರಾಜಕೀಯ ಮುಖಂಡರು (Political Leaders) ವಿರೋಧಿಗಳ ವೈಯಕ್ತಿಕ ಟೀಕೆಗೆ ಮುಂದಾಗುತ್ತಾರೆ. ಕೆಲವೊಮ್ಮೆ ಇಂತಹ ಹೇಳಿಕೆ ರಾಜಕೀಯದಲ್ಲಿ ಸಂಚಲನವನ್ನೇ ಸೃಷ್ಟಿ ಮಾಡುತ್ತವೆ. ಆದ್ದರಿಂದ ಈ ಬಾರಿ ಪಕ್ಷದ ಹೈಕಮಾಂಡ್ ತಮ್ಮ ಅಭ್ಯರ್ಥಿ ಹಾಗೂ ವಕ್ತಾರರಿಗೆ ಹೇಗೆ ಪ್ರಚಾರ ನಡೆಸಬೇಕು ಎಂದು ಸಲಹೆ ನೀಡುತ್ತಿವೆ. ಕಾಂಗ್ರೆಸ್ ಹೈಕಮಾಂಡ್ (Congress High command) ಸಹ ಕರ್ನಾಟಕದ ಎಲ್ಲಾ ಮುಖಂಡರಿಗೆ ಸಂದೇಶವನ್ನು ರವಾನಿಸಿದೆ. ಯಾವೆಲ್ಲಾ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂಬ ನಿಯಮಗಳನ್ನು ಹೇಳಿದೆ. ಕಟ್ಟುನಿಟ್ಟಾಗಿ ಎಲ್ಲಾ ನಿಯಮಗಳನ್ನು ಪಾಲಿಸುವಂತೆ ಖಡಕ್ ಸಂದೇಶವನ್ನು ರವಾನಿಸಿದೆ.


ಯಾವುದೇ ಕಾರಣಕ್ಕೂ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ವೈಯಕ್ತಿಕ  ಟೀಕೆ ಮಾಡಬಾರದು. ಮೋದಿ ಟೀಕೆ ಮಾಡಿದಷ್ಟು ಬಿಜೆಪಿ ಅನುಕೂಲವಾಗಲಿದೆ ಎಂದು ಕಾಂಗ್ರೆಸ್ ತನ್ನ ಕಾರ್ಯಕರ್ತರಿಗೆ ಹೇಳಿದೆ ಎಂಬ ಮಾಹಿತಿ ಲಭ್ಯವಾಗಿದೆ.


ಈ ಹಿಂದೆ ಗುಜರಾತ್ ವಿಧಾನಸಭೆ ಚುನಾವಣೆ ವೇಳೆ ಮೌತ್ ಕಾ ಸೌದಾಗರ್(ಸಾವಿನ ವ್ಯಾಪರಿ) ಎಂದು ಟೀಕೆ ಮಾಡಿದ್ದನೇ ಅಸ್ತ್ರ ಮಾಡಿಕೊಂಡಿದ್ದರು. ಮೋದಿ ಜನಪ್ರಿಯತೆ ಈಗಲೂ ಪ್ರಬಲವಾಗಿರುವುದರಿಂದ ಬಿಜೆಪಿಗೆ ನಾವು ಅಸ್ತ್ರ ಕೊಡಬಾರದು.


ಬಿಜೆಪಿ ಬಗ್ಗೆ ಜನರಿಗೆ ಸಿಟ್ಟು ಆಕ್ರೋಶ ಇದ್ದರೂ ಮೋದಿ ಸಾಕಷ್ಟು ಒಲವು ಇಟ್ಟುಕೊಂಡಿದ್ದಾರೆ.ಹೀಗಾಗಿ ಪ್ರಚಾರದ ಸಂದರ್ಭದಲ್ಲಿ ಮೋದಿ ಬಗ್ಗೆ ವೈಯಕ್ತಿಕ ನಿಂದನೆ ಬೇಡ ಎಂಬ ಸಂದೇಶವನ್ನು ರವಾನಿಸಿದೆ ಎಂದು ತಿಳಿದು ಬಂದಿದೆ.


ಚುನಾವಣೆ ಪ್ರಚಾರದಲ್ಲಿ ಯಾವೆಲ್ಲಾ ವಿಷಯ ಪ್ರಸ್ತಾಪಿಸಬೇಕು?


*ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಕೋಮುವಾದ, ಜಾತಿ ಧ್ರುವೀಕರಣ ಇದರ ಬಗ್ಗೆ ಹೆಚ್ಚು ಪ್ರಸ್ತಾಪಿಸಬೇಕು


*40% ಕಮೀಷನ್ ಭ್ರಷ್ಟಾಚಾರ, ಪಿಎಸ್‍ಐ ನೇಮಕಾತಿ ಅಕ್ರಮ, ಕೆಪಿಎಸ್‍ಸಿ ನೇಮಕಾತಿಯಲ್ಲಿ ನಡೆದ ಅವ್ಯವಹಾರ, ಇಲಾಖಾವಾರು ಭ್ರಷ್ಟಾಚಾರ ಪ್ರಸ್ತಾಪಿಸಬೇಕು.


*ಪ್ರತಿದಿನ  ಪಕ್ಷದ ಕೇಂದ್ರ ಕಚೇರಿ ಹಾಗೂ ಜಿಲ್ಲಾ ಕಚೇರಿಗಳಲ್ಲಿ ಪತ್ರಿಕಾಗೋಷ್ಠಿ ನಡೆಸಬೇಕು.


ಇದನ್ನೂ ಓದಿ: Congress: ರಾಜಕೀಯ ಸಂಚಲನ ಸೃಷ್ಟಿಸಿದ ಸಿದ್ದರಾಮಯ್ಯ ಹೇಳಿಕೆ; ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ ಮಾಜಿ ಸಿಎಂ


*ಪ್ರಧಾನಿ ಮೋದಿ ಬರುವ ವೇಳೆಗೆ ಕೇಂದ್ರದಿಂದ ಆಗಿರುವ ಅನ್ಯಾಯವನ್ನು ಪ್ರಸ್ತಾಪಿಸಬೇಕು.




*ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ಕುಸಿದು ಬಿದ್ದಿರುವ ಕಾನೂನು ಸುವ್ಯವಸ್ಥೆ,ಮಹಿಳೆಯರ ಮೇಲಿನ ಅತ್ಯಾಚಾರ ಇತ್ಯಾದಿ ವಿಷಯಗಳನ್ನು  ಪ್ರಸ್ತಾಪಿಸಿ

First published: