• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Siddaramaiah: ಮಾಜಿ ಸಿಎಂಗೆ ಶುರುವಾಯ್ತು ಹೊಸ ತಲೆನೋವು; ಇತ್ತ ಕೋಲಾರದಲ್ಲಿ ಫ್ಯಾಮಿಲಿ ಅಸ್ತ್ರ ಪ್ರಯೋಗ

Siddaramaiah: ಮಾಜಿ ಸಿಎಂಗೆ ಶುರುವಾಯ್ತು ಹೊಸ ತಲೆನೋವು; ಇತ್ತ ಕೋಲಾರದಲ್ಲಿ ಫ್ಯಾಮಿಲಿ ಅಸ್ತ್ರ ಪ್ರಯೋಗ

ಸಿದ್ದರಾಮಯ್ಯ, ಮಾಜಿ ಸಿಎಂ

ಸಿದ್ದರಾಮಯ್ಯ, ಮಾಜಿ ಸಿಎಂ

Karnataka Elections 2023: ಈ ಹಿನ್ನೆಲೆ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಹೊಸ ಸಂದೇಶವೊಂದನ್ನು ರವಾನಿಸಿದೆ ಎಂದು ಹೇಳಲಾಗಿದೆ. ಹೀಗಾಗಿ ಮಾಜಿ ಮುಖ್ಯಮಂತ್ರಿಗಳಿಗೆ ಹೊಸ ತಲೆನೋವು ಶುರುವಾಗಿದೆ.

 • Share this:

ಬೆಂಗಳೂರು: ಕೋಲಾರ ವಿಧಾನಸಭಾ ಕ್ಷೇತ್ರ  (Kolar Assembly Constituency) ಸುರಕ್ಷಿತ ಅಲ್ಲ ಎಂಬ ವರದಿಗಳಿವೆ. ಹೀಗಾಗಿ ಬೇರೆ ಕ್ಷೇತ್ರ ಆಯ್ಕೆ ಮಾಡಿಕೊಳ್ಳಿ ಎಂದು ಹೈಕಮಾಂಡ್ (Congress High Command) ಸೂಚಿಸಿದ ಬಳಿಕ ಅಡಕತ್ತರಿಯಲ್ಲಿ ಸಿಲುಕಿರುವ ಸಿದ್ದರಾಮಯ್ಯ (Former CM Siddaramaiah) ಅವರಿಗೆ ಹೊಸ ತಲೆನೋವು ಶುರುವಾಗಿದೆ. ಇಂದು 126 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲು ಕಾಂಗ್ರೆಸ್ ಸಿದ್ಧವಾಗಿದೆ. ಯಾವುದೇ ಗೊಂದಲ ಇಲ್ಲದ, ಹಾಲಿ ಶಾಸಕರ ಮತ್ತು ಬಂಡಾಯ ಆಗದಂತೆ ಸುರಕ್ಷಿತ ಕ್ಷೇತ್ರಗಳ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಲಿದೆ. ಈ ಹಿನ್ನೆಲೆ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಹೊಸ ಸಂದೇಶವೊಂದನ್ನು ರವಾನಿಸಿದೆ ಎಂದು ಹೇಳಲಾಗಿದೆ. ಹೀಗಾಗಿ ಮಾಜಿ ಮುಖ್ಯಮಂತ್ರಿಗಳಿಗೆ ಹೊಸ ತಲೆನೋವು ಶುರುವಾಗಿದೆ.


ಏನದು ಸಂದೇಶ?


ಮೊದಲ ಪಟ್ಟಿಯಲ್ಲೇ ಸಾಧ್ಯವಾದರೆ ನಿಮ್ಮ ಕ್ಷೇತ್ರ ಯಾವುದು ಅನ್ನೋದನ್ನು ಕ್ಲಿಯರ್ ಮಾಡಿಕೊಳ್ಳಿ. ನಿಮ್ಮ ಟಿಕೆಟ್ ದ್ವಂದ್ವ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿದೆ. ಇದನ್ನೇ ಬಿಜೆಪಿ ದಾಳವಾಗಿಸಿಕೊಂಡು ಚುನಾವಣೆ ಪ್ರಚಾರ ನಡೆಸುತ್ತಿದೆ. ಅನಗತ್ಯವಾಗಿ ಮಾಧ್ಯಮಗಳಲ್ಲು ಸುದ್ದಿ ಆಗ್ತಿದೆ ಎಂದು ಹೈಕಮಾಂಡ್ ಹೇಳಿದೆಯಂತೆ.


ಈ ಬೆಳವಣಿಗೆ ಸಾರ್ವಜನಿಕವಾಗಿ ಕೆಟ್ಟ ಸಂದೇಶ ರವಾನೆಯಾಗುವ ಸಾಧ್ಯತೆಗಳಿವೆ. ಕೂಡಲೇ ಕ್ಷೇತ್ರ ಯಾವುದೆಂದು ನಿರ್ಧರಿಸಿದ್ರೆ ಉತ್ತಮ. ಸಾಧ್ಯವಾದರೆ ಮೊದಲ ಪಟ್ಟಿಯಲ್ಲೇ ತಿಳಿಸಿ ಎಂದು ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹಾಕಿದೆ ಎಂದು ತಿಳಿದು ಬಂದಿದೆ.
ಕೋಲಾರದಲ್ಲಿ ಫ್ಯಾಮಿಲಿ ಅಸ್ತ್ರ ಪ್ರಯೋಗ


ಕೋಲಾರದ ಅಭಿಮಾನಿಗಳನ್ನು ಸಮಾಧಾನ ಮಾಡಲು ಸಿದ್ದರಾಮಯ್ಯ ಫ್ಯಾಮಿಲಿ ಅಸ್ತ್ರ ಪ್ರಯೋಗ ಮಾಡಿದ್ದಾರೆ. ನಾನು ಹೆಂಡತಿ ಮತ್ತು ಮಗನ ಜತೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಪ್ರಕಟಿಸುತ್ತೇನೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: Siddaramaiah: ‘ರಕ್ತ ಕೊಟ್ಟೇವು, ನಿಮ್ಮನ್ನು ಬಿಡೆವು’ ಕೋಲಾರದಲ್ಲೇ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಹೆಚ್ಚಿದ ಒತ್ತಡ!

top videos


  ಇಂದು ಕೋಲಾರದ ಸ್ಪರ್ಧೆಯ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ನಿರ್ಧಾರ ಪ್ರಕಟಿಸುವ ನಿರೀಕ್ಷೆ ಇದೆ.

  First published: