ಜೆಡಿಎಸ್​ನ ಜಾತ್ಯತೀತತೆ ಮತ್ತು ವಾಸ್ತವದ ಬಗ್ಗೆ ಕೆಪಿಸಿಸಿಯಿಂದ ಹೈಕಮಾಂಡ್​ಗೆ ವರದಿ

ಜೆಡಿಎಸ್​ನ ಅನುಕೂಲ ಸಿಂಧು ರಾಜಕಾರಣ; ಜಾತ್ಯತೀತತೆಯ ಇಮೇಜ್ ಇದ್ದರೂ ದೇವೇಗೌಡರ ನಿಲುವಿನಲ್ಲಿ ಬದಲಾವಣೆಯಾಗುತ್ತಿರುವುದು; ಕನ್ನಡ ಮತ್ತು ಇಂಗ್ಲೀಷ್ ಪತ್ರಿಕೆಗಳಲ್ಲಿ ಹಾಗೂ ಸುದ್ದಿವಾಹಿನಿಗಳಲ್ಲಿ ಬಂದಿರುವ ದೇವೇಗೌಡರ ಹೇಳಿಕೆಗಳು, ಸುದ್ದಿತುಣುಕುಗಳು, ವಿಶ್ಲೇಷಣೆಗಳು ಇತ್ಯಾದಿ ಎಲ್ಲವನ್ನೂ ಆಧಾರಗಳ ಸಮೇತವಾಗಿ ಕೆಸಿವಿ ವರದಿ ತಯಾರಿಸಿದ್ಧಾರೆ.

news18
Updated:November 8, 2019, 2:10 PM IST
ಜೆಡಿಎಸ್​ನ ಜಾತ್ಯತೀತತೆ ಮತ್ತು ವಾಸ್ತವದ ಬಗ್ಗೆ ಕೆಪಿಸಿಸಿಯಿಂದ ಹೈಕಮಾಂಡ್​ಗೆ ವರದಿ
ಕೆ.ಸಿ ವೇಣುಗೋಪಾಲ್​​
  • News18
  • Last Updated: November 8, 2019, 2:10 PM IST
  • Share this:
ಬೆಂಗಳೂರು(ನ. 08): ಜಾತ್ಯತೀತ ಜನತಾ ದಳ ಬಿಜೆಪಿ ಜೊತೆ ಸಖ್ಯಕ್ಕೆ ಮುಂದಾಗಿದ್ದಾರೆನ್ನುವ ವಿಚಾರ ರಾಜ್ಯ ರಾಜಕಾರಣದಲ್ಲಿ ಹಲವು ಸಾಧ್ಯತೆಗಳನ್ನ ತೆರೆದಿಟ್ಟಿದೆ. ಯಡಿಯೂರಪ್ಪ, ಸಿದ್ದರಾಮಯ್ಯ, ಬಿಜೆಪಿ ಶಾಸಕರು, ಅನರ್ಹ ಶಾಸಕರು, ಕೆಪಿಸಿಸಿ, ಜೆಡಿಎಸ್ ಕಾರ್ಯಕರ್ತರು ಹೀಗೆ ಪ್ರತಿಯೊಬ್ಬರೂ ತಮ್ಮದೇ ಕುತೂಹಲದ ಕಣ್ಣುಗಳಿಂದ ಈ ಬೆಳವಣಿಗೆಯನ್ನು ಗಮನಿಸುತ್ತಿದ್ದಾರೆ. ಕಾಂಗ್ರೆಸ್​ನ ಹೈಕಮಾಂಡ್ ಕೂಡ ಇತ್ತ ಒಂದು ಕಿವಿ ನೆಟ್ಟಿದೆ. ರಾಜ್ಯ ರಾಜಕಾರಣದ ಬಗ್ಗೆ, ಅದರಲ್ಲೂ ಮುಖ್ಯವಾಗಿ ಜೆಡಿಎಸ್​ನ ನಡೆ ಮತ್ತು ನಿಲುವುಗಳ ಬಗ್ಗೆ ಕೆಪಿಸಿಸಿಯಿಂದ ವರದಿ ತರಿಸಿಕೊಂಡಿದೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ತಯಾರಿಸಿರುವ ಈ ವರದಿಯಲ್ಲಿ ಜೆಡಿಎಸ್ ಪಕ್ಷವನ್ನು ತೀಕ್ಷ್ಣ ವಿಮರ್ಶೆಗೆ ಒಳಪಡಿಸಲಾಗಿದೆ.

ಜೆಡಿಎಸ್​ನ ಅನುಕೂಲ ಸಿಂಧು ರಾಜಕಾರಣ; ಜಾತ್ಯತೀತತೆಯ ಇಮೇಜ್ ಇದ್ದರೂ ದೇವೇಗೌಡರ ನಿಲುವಿನಲ್ಲಿ ಬದಲಾವಣೆಯಾಗುತ್ತಿರುವುದು; ಕನ್ನಡ ಮತ್ತು ಇಂಗ್ಲೀಷ್ ಪತ್ರಿಕೆಗಳಲ್ಲಿ ಹಾಗೂ ಸುದ್ದಿವಾಹಿನಿಗಳಲ್ಲಿ ಬಂದಿರುವ ದೇವೇಗೌಡರ ಹೇಳಿಕೆಗಳು, ಸುದ್ದಿತುಣುಕುಗಳು, ವಿಶ್ಲೇಷಣೆಗಳು ಇತ್ಯಾದಿ ಎಲ್ಲವನ್ನೂ ಆಧಾರಗಳ ಸಮೇತವಾಗಿ ಕೆಸಿವಿ ವರದಿ ತಯಾರಿಸಿದ್ಧಾರೆ.

ಇದನ್ನೂ ಓದಿ: ಸಿಬಿಐ ಒಂದು ಒಳ್ಳೆಯ ಸಂಸ್ಥೆ; ಇಡಿಯಂತೆ ನಿಯಮಾವಳಿ ಮೀರಲ್ಲ; ಯಾರ ಮಾತೂ ಕೇಳಲ್ಲ: ಡಿಕೆ ಶಿವಕುಮಾರ್​

ಮೈತ್ರಿ ಸರ್ಕಾರ ಪತನಗೊಳ್ಳುವ ಕಾಲ ಸನ್ನಿಹಿತವಾದಂದಿನಿಂದ ಸಿದ್ದರಾಮಯ್ಯ ಬಗ್ಗೆ ದೇವೇಗೌಡರು ಮತ್ತು ಕುಮಾರಸ್ವಾಮಿ ಚಿಕ್ಕದಾಗಿ ಅಪಸ್ವರ ಎತ್ತಿದ್ದರು. ಸರ್ಕಾರ ಪತನಗೊಂಡಾಗ ಅವರ ಹೇಳಿಕೆಗಳು ತೀವ್ರ ಸ್ವರೂಪ ಪಡೆದವು. ಮೈತ್ರಿ ಸರ್ಕಾರವನ್ನು ಉರುಳಿಸಿದ್ದೇ ಸಿದ್ದರಾಮಯ್ಯ ಎಂದು ಜೆಡಿಎಸ್ ವರಿಷ್ಠರು ಹೆಚ್ಚು ಗಟ್ಟಿಯಾಗಿ ಧ್ವನಿ ಹೊರಡಿಸಿದರು. ನಂತರ, ಕುಮಾರಸ್ವಾಮಿ ಅವರು ಬಿಜೆಪಿ ಬಗ್ಗೆ ಮೃದುಧೋರಣೆ ತೋರುವ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದರು. ದೇವೇಗೌಡರೂ ಕೂಡ ಇದಕ್ಕೆ ಧ್ವನಿಗೂಡಿಸಿದರು. ಜೆಡಿಎಸ್ ಮುಖ್ಯಸ್ಥರ ನಡಾವಣೆಯಲ್ಲಾದ ಈ ಎಲ್ಲಾ ಬದಲಾವಣೆಗಳನ್ನ ಕೆ.ಸಿ. ವೇಣುಗೋಪಾಲ್ ಅವರು ತಮ್ಮ ವರದಿಯಲ್ಲಿ ತೆರೆದಿಟ್ಟಿದ್ದಾರೆ.

ದೇವೇಗೌಡರ ಜಾತ್ಯತೀತ ಇಮೇಜ್ ಕಾಲಕ್ಕೆ ತಕ್ಕಂತೆ ಹೇಗೆಲ್ಲಾ ಬದಲಾವಣೆ ಆಗುತ್ತೆ, ಯಾಕೆ ಬದಲಾವಣೆ ಆಗುತ್ತೆ ಎಂಬುದನ್ನು ಈ ವರದಿಯಲ್ಲಿ ಒರೆಗೆ ಹಚ್ಚಲಾಗಿದೆ. ಹಾಗೆಯೇ, ಜೆಡಿಎಸ್ ಮುಳುತ್ತಿರುವ ಹಡಗಿನಂತಾಗಿದೆ. ಕುಟುಂಬ ರಾಜಕಾರಣದ ವಿರುದ್ಧ ಅವರದ್ದೇ ಶಾಸಕರು ಬಂಡಾಯ ಎದ್ದಿದ್ದಾರೆ. ಜೆಡಿಎಸ್​ಗೆ ಈಗ ಪಕ್ಷ ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ. ಆಪರೇಷನ್ ಕಮಲವನ್ನು ತಪ್ಪಿಸಬೇಕು. ಲಿಂಗಾಯತ ವಿರೋಧಿ ಹಣೆಪಟ್ಟಿ ಕಳಚಬೇಕು; ಐಎಂಎ, ಫೋನ್ ಕದ್ದಾಲಿಕೆ ಪ್ರಕರಣಗಳಿಂದ ಬಚಾವ್ ಆಗಬೇಕು; ಅವರ ಆಪ್ತ ಅಧಿಕಾರಿಗಳು ಆಯಕಟ್ಟು ಜಾಗದಲ್ಲೇ ಮುಂದುವರಿಯಬೇಕು. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷವನ್ನು ಹಣಿಯಬೇಕು. ಬಿಜೆಪಿ ಜೊತೆ ಕೈಜೋಡಿಸಿ ಸರ್ಕಾರ ನಡೆಸಿದರೆ ಇವೆಲ್ಲವೂ ಸಾಧ್ಯ ಎಂಬ ಅರಿವು ಜೆಡಿಎಸ್​ಗೆ ಇದೆ. ಹೀಗೆ, ದೇವೇಗೌಡರು ಒಂದೇ ಕಲ್ಲಿಗೆ ಹಲವು ಹಕ್ಕಿಗಳನ್ನು ಹೊಡೆಯಲು ತಂತ್ರ ರೂಪಿಸಿದ್ದಾರೆ ಎಂಬ ಮಾಹಿತಿಯನ್ನೂ ಕೆ.ಸಿ. ವೇಣುಗೋಪಾಲ್ ಅವರು ತಮ್ಮ ವರದಿಯಲ್ಲಿ ಬಿಚ್ಚಿಟ್ಟಿದ್ಧಾರೆ.

(ವರದಿ: ಚಿದಾನಂದ ಪಟೇಲ್)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 8, 2019, 2:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading