ಸಿದ್ದರಾಮಯ್ಯ-ಗುಂಡೂರಾವ್ ವಿರುದ್ಧ ದೂರು ನೀಡಿದವರಿಗೆ ಬಂತು ಕುತ್ತು; ನಾಲ್ವರ ಬಗ್ಗೆ ವರದಿ ಕೇಳಿದ ಹೈಕಮಾಂಡ್

ಈ ನಾಲ್ವರು ನಾಯಕರು ಎಷ್ಟು ದಿನ ಪ್ರಚಾರ ಮಾಡಿದರು? ಎಲ್ಲೆಲ್ಲಿ ಪ್ರಚಾರ ಮಾಡಿದರು? ವೈಯಕ್ತಿಕವಾಗಿ ಎಷ್ಟು ಸಮಾವೇಶಗಳನ್ನು ನಡೆಸಿದರು? ಉಪ ಚುನಾವಣೆಗೆ ಯಾವ ರೀತಿ ಸಿದ್ದತೆ ಮಾಡಿಕೊಂಡಿದ್ದರು? ಎಂಬುದರ ಬಗ್ಗೆ ವರದಿ ನೀಡುವಂತೆ ಕೆಪಿಸಿಸಿಗೆ ಕಾಂಗ್ರೆಸ್​ ಹೈಕಮಾಂಡ್ ಸೂಚನೆ ನೀಡಿದೆ.

HR Ramesh | news18-kannada
Updated:December 12, 2019, 7:19 AM IST
ಸಿದ್ದರಾಮಯ್ಯ-ಗುಂಡೂರಾವ್ ವಿರುದ್ಧ ದೂರು ನೀಡಿದವರಿಗೆ ಬಂತು ಕುತ್ತು; ನಾಲ್ವರ ಬಗ್ಗೆ ವರದಿ ಕೇಳಿದ ಹೈಕಮಾಂಡ್
ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್​
  • Share this:
ಬೆಂಗಳೂರು: ಉಪಚುನಾವಣೆಯ ಸೋಲಿನ ನೈತಿಕ ಹೊಣೆ ಹೊತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದರು. ಸೋಲಿಗೆ ಇವರಿಬ್ಬರೇ ಕಾರಣ. ಹೀಗಾಗಿ ಇವರ ರಾಜೀನಾಮೆಯನ್ನು ಅಂಗೀಕರಿಸಬೇಕು ಎಂದು ದೂರು ನೀಡಿದ ಪಕ್ಷದ ನಾಲ್ವರು ಮುಖಂಡರಿಗೆ ಈಗ ಕಂಟಕ ಎದುರಾಗಿದೆ.

ಉಪಚುನಾವಣೆ ಸೋಲಿಗೆ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಅವರೇ ನೇರ ಕಾರಣ. ಕೂಡಲೇ ಇವರ ರಾಜೀನಾಮೆ ಅಂಗೀಕರಿಸಿ, ಹೊಸಬರಿಗೆ ಅವಕಾಶ ಮಾಡಿಕೊಡಿ ಎಂದು ಒತ್ತಾಯ ಹೇರಿ ಕೆ.ಹೆಚ್ ಮುನಿಯಪ್ಪ,ರಾಜ್ಯಸಭಾ ಸದಸ್ಯರಾದ ಬಿ.ಕೆ ಹರಿಪ್ರಸಾದ್, ಜಿ.ಸಿ ಚಂದ್ರಶೇಖರ್, ನಾಸೀರ್ ಹುಸೇನ್ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ದೂರು ನೀಡಿದ್ದರು. ದೂರಿಗೆ ಸಂಬಂಧಿಸಿದಂತೆ ಆಂತರಿಕ ತನಿಖೆ ನಡೆಸುವಂತೆ ಸ್ವತಃ ಸೋನಿಯಾ ಗಾಂಧಿ ಅವರೇ ಹೇಳಿದ್ದಾರೆ.

ಇದನ್ನು ಓದಿ: ನಾನು ಆರೋಗ್ಯವಾಗಿದ್ದೇನೆ, ಗಾಳಿ ಸುದ್ದಿ ನಂಬಬೇಡಿ; ಸಿದ್ದರಾಮಯ್ಯ

ದೂರು ನೀಡಿದ ಕೆ.ಹೆಚ್.ಮುನಿಯಪ್ಪ, ಬಿ.ಕೆ. ಹರಿಪ್ರಸಾದ್, ನಾಸೀರ್ ಹುಸೇನ್, ಜಿ.ಸಿ. ಚಂದ್ರಶೇಖರ್ ಬಗ್ಗೆ ವರದಿ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿಗೆ ಹೇಳಿದೆ. ಉಪ ಚುನಾವಣೆಯಲ್ಲಿ ಈ ನಾಲ್ವರು ನಾಯಕರು ಎಷ್ಟು ದಿನ ಪ್ರಚಾರ ಮಾಡಿದರು? ಎಲ್ಲೆಲ್ಲಿ ಪ್ರಚಾರ ಮಾಡಿದರು? ವೈಯಕ್ತಿಕವಾಗಿ ಎಷ್ಟು ಸಮಾವೇಶಗಳನ್ನು ನಡೆಸಿದರು? ಉಪ ಚುನಾವಣೆಗೆ ಯಾವ ರೀತಿ ಸಿದ್ದತೆ ಮಾಡಿಕೊಂಡಿದ್ದರು? ಕೆಪಿಸಿಸಿ ತಯಾರಿ ಸಭೆಯಲ್ಲಿ ಎಷ್ಟು ದಿನ ಹಾಜರಿದ್ದರು? ಉಪ ಚುನಾವಣೆಯಲ್ಲಿ ವೈಯಕ್ತಿಕ ಕೊಡುಗೆಯೇನು? ಎಂಬುದವರ ಬಗ್ಗೆ ಸಂಪೂರ್ಣ ವರದಿಯನ್ನು ನೀಡುವಂತೆ ಬುಧವಾರ ಸಂಜೆ ಕೆಪಿಸಿಸಿಗೆ ಹೈಕಮಾಂಡ್ ಆದೇಶಿಸಿದೆ ಎಂಬ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಎಐಸಿಸಿ ಮೂಲಗಳಿಂದ ಲಭ್ಯವಾಗಿದೆ.

  • ವಿಶೇಷ ವರದಿ: ಚಿದಾನಂದ ಪಟೇಲ್

First published: December 12, 2019, 7:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading