ಬೆಂಗಳೂರು: 2023ರ ವಿಧಾನಸಭಾ ಚುನಾವಣೆಗೆ ಕರ್ನಾಟಕ (Karnataka assembly elections) ಸಜ್ಜಾಗುತ್ತಿದೆ. ಚುನಾವಣೆ ಘೋಷಣೆಗೂ ಮುನ್ನವೇ ಎಲೆಕ್ಷನ್ ಜ್ವರ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ವಾಕ್ಸಮರ ಜೋರಾಗುತ್ತಿದೆ. ಎಲ್ಲಾ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು (ticket aspirants) ಈಗಾಗಲೇ ವರಿಷ್ಠರ ಗಮನ ಸೆಳೆಯೋದಕ್ಕೆ, ಶಕ್ತಿ ಪ್ರದರ್ಶನ ಮಾಡಿ ಟಿಕೆಟ್ ಗಿಟ್ಟಿಸೋದಕ್ಕೆ ಸರ್ಕಸ್ ಶುರು ಮಾಡಿದ್ದಾರೆ. ಈ ನಡುವೆ ರೌಡಿ ಶೀಟರ್ಗಳು (rowdy sheeters) ಬಿಜೆಪಿ (BJP) ಸೇರುವುದಕ್ಕೆ ಮುಂದಾಗುತ್ತಿದ್ದಾರೆ. ಇದನ್ನೇ ಬಂಡವಾಳವಾಗಿಸಿಕೊಂಡ ಕಾಂಗ್ರೆಸ್, ಬಿಜೆಪಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸುತ್ತಿದೆ. ಇದೀಗ ಬಿಜೆಪಿಯ ಕ್ಯಾಂಡಿಡೇಟ್ಗಳು ಅಂತ ರೌಡಿಶೀಟರ್ಗಳ ಪೋಸ್ಟರ್ ರಿಲೀಸ್ ಮಾಡಿ ಕಾಂಗ್ರೆಸ್ ಟಾಂಗ್ ಕೊಟ್ಟಿದೆ.
ಬಿಜೆಪಿ ವಿರುದ್ಧ ಕಾಂಗ್ರೆಸ್ನಿಂದ ಪೋಸ್ಟರ್ ರಿಲೀಸ್
ಬಿಜೆಪಿ ವಿರುದ್ಧ ಈಗಾಗಲೇ ಪೋಸ್ಟರ್ ಮೂಲಕ ಟಾಂಗ್ ಕೊಟ್ಟಿದ್ದ ಕಾಂಗ್ರೆಸ್, ಮತ್ತೊಮ್ಮೆ ಪೋಸ್ಟರ್ ಅಸ್ತ್ರ ಪ್ರಯೋಗಿಸಿದೆ. ಬಿಜೆಪಿಯ ರೌಡಿಸಂ ರಾಜಕೀಯವನ್ನು ಬಯಲಿಗೆಳೆಯಲು ಕರ್ನಾಟಕ ಪ್ರದೇಶ ಕಾಂಗ್ರೆಸ್ನಿಂದ ‘ಸೋರಿಕೆಯಾದ’ ಅಭ್ಯರ್ಥಿಗಳ ಪಟ್ಟಿಯೊಂದಿಗೆ ವೆಬ್ಸೈಟ್ ಬಿಡುಗಡೆಮಾಡಿದೆ ಅಂತ ಕಾಂಗ್ರೆಸ್ ಹೇಳಿಕೊಂಡಿದೆ.
ರೌಡಿಶೀಟರ್ಗಳ ಪೋಸ್ಟರ್ ರೀಲಿಸ್
“ಕರ್ನಾಟಕ, ಬಿಜೆಪಿ ರೌಡಿ ಶೀಟರ್ಗಳು ಮತ್ತು ಸಮಾಜವಿರೋಧಿಗಳ ತಾಣವಾಗಿ ಮಾರ್ಪಟ್ಟ ನಂತರ, ದಿನಕ್ಕೊಂದು ಹೊಸ ರೌಡಿಗಳು ಪಕ್ಷಕ್ಕೆ ಸೇರ್ಪಡೆಗೊಂಡ ನಂತರ, ಕರ್ನಾಟಕ ಕಾಂಗ್ರೆಸ್ ಬಿಜೆಪಿ ಅಭ್ಯರ್ಥಿಯಾಗಲು ಮಾನದಂಡಗಳ ಫೋಟೋಗಳೊಂದಿಗೆ 'ಸೋರಿಕೆಯಾದ' ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದೆ” ಅಂತ ಕಾಂಗ್ರೆಸ್ ಹೇಳಿಕೊಂಡಿದೆ.
ಇದನ್ನೂ ಓದಿ: Rowdy Sheeter: ನಾನೂ ರೌಡಿಶೀಟರ್, ನನ್ನನ್ನೂ ಪಕ್ಷಕ್ಕೆ ಸೇರಿಸಿಕೊಳ್ಳಿ! ಬಿಜೆಪಿ ಸೇರಲು ಪಾನಿಪುರಿ ಮಂಜು ಪ್ರತಿಭಟನೆ!
ಬಿಜೆಪಿ ವಿರುದ್ಧ ವೆಬ್ಸೈಟ್ ಲಾಂಚ್!
https://www.bjprowdymorcha.com ಎಂಬ ವೆಬ್ಸೈಟ್ ಅನ್ನು ಕಾಂಗ್ರೆಸ್ ರಿಲೀಸ್ ಮಾಡಿದೆ. ಕೊನೆಯ ದಿನಗಳಲ್ಲಿ ಬಿಜೆಪಿಯ ಕಪಾಟಿನಿಂದ ಅಸ್ಥಿಪಂಜರಗಳು ಉರುಳುತ್ತಿರುವಾಗ, INC KARNATAKA 2023 ರ ಚುನಾವಣೆಯ ಪೂರ್ವದಲ್ಲಿ ಬಿಜೆಪಿಯ ಅನೌಪಚಾರಿಕತೆಯನ್ನು ಪ್ರದರ್ಶಿಸಲು ಸಂಪೂರ್ಣ ವೆಬ್ಸೈಟ್ ಅನ್ನು ಮೀಸಲಿಟ್ಟಿದೆ. ಹೊಸ ವೆಬ್ಸೈಟ್ ಬೆಂಗಳೂರಿನ ರೌಡಿ ಶೀಟರ್ಗಳು ಮತ್ತು ಸ್ಲಂ ಲಾರ್ಡ್ಗಳನ್ನು ಬಿಜೆಪಿ ತನ್ನ ಕಾರ್ಯಕರ್ತರನ್ನಾಗಿ ಸೇರಿಸಿಕೊಳ್ಳುವ ಮೂಲಕ ರಾಜಕೀಯವನ್ನು ಹೇಗೆ ಅಪರಾಧೀಕರಿಸುತ್ತಿದೆ ಎಂಬುದರ ಕುರಿತು ವಿವರಗಳನ್ನು ಹೊಂದಿರುತ್ತದೆ ಅಂತ ಕಾಂಗ್ರೆಸ್ ತಿಳಿಸಿದೆ.
“ರೌಡಿಶೀಟರ್ಗಳೇ ಬಿಜೆಪಿ ಅಭ್ಯರ್ಥಿಗಳು”
ಕಾಂಗ್ರೆಸ್ ಬಿಡುಗಡೆಗೊಳಿಸಿದ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ವಿಲ್ಸನ್ ಗಾರ್ಡನ್ ನಾಗ, ಬೆತ್ತನಗೆರೆ ಶಂಕರ, ರೌಡಿ ಶೀಟರ್ ಉಪ್ಪಿ ಮುಂತಾದವರ ಹೆಸರುಗಳು ಒಳಗೊಂಡಿವೆ. ಪೋಸ್ಟರ್ ಮೂಲಕ ಇವರೆಲ್ಲಾ ಬಿಜೆಪಿಯ ಮುಂದಿನ ಚುನಾವಣೆಯ ಅಭ್ಯರ್ಥಿಗಳು ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಬಿಜೆಪಿ ಜೊತೆ ಗುರುತಿಸಿಕೊಳ್ಳುತ್ತಿರುವ ರೌಡಿಶೀಟರ್ಗಳು
ರೌಡಿ ಶೀಟರ್ಗಳು ಬಿಜೆಪಿ ಸೇರುವುದಕ್ಕೆ ಮುಂದಾಗುತ್ತಿದ್ದಾರೆ. ಈಗಾಗಲೇ ಫೈಟರ್ ರವಿ ಬಿಜೆಪಿಗೆ ಸೇರಿದ್ದು, ನಾಗಮಂಗಲದಿಂದ ಟಿಕೆಟ್ ಬಯಸಿದ್ದಾನೆ ಎನ್ನಲಾಗಿದೆ. ಮತ್ತೋರ್ವ ರೌಡಿ ಶೀಟರ್ ಸೈಲೆಂಟ್ ಸುನೀಲ ಬಿಜೆಪಿಗೆ ಸೇರುತ್ತಾನೆ ಎನ್ನಲಾಗಿದೆ. ಮತ್ತೊಂದೆಡೆ ರೌಡಿ ಶೀಟಲ್ ವಿಲ್ಸನ್ ಗಾರ್ಡನ್ ನಾಗ ಸಚಿವ ಸೋಮಣ್ಣ ಮನೆಗೆ ಭೇಟಿ ನೀಡಿದ್ದಾನೆ ಎನ್ನಲಾಗಿದ್ದು, ವಿವಾದಕ್ಕೆ ಕಾರಣವಾಗಿದೆ. ಇನ್ನು ಕುಖ್ಯಾತ ರೌಡಿ ಶೀಟರ್ ಬೆತ್ತನಗೆರೆ ಶಂಕರ ಕೂಡ ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾನೆ ಎನ್ನಲಾಗಿದೆ. ಮತ್ತೊಂದೆಡೆ ಆನೇಕಲ್ ವ್ಯಾಪ್ತಿಯ ರೌಡಿ ಶೀಟರ್ ಮಂಜುನಾಥ್ ಅಲಿಯಾಸ್ ಉಪ್ಪಿ ಎಂಬಾತನನ್ನು ಆನೇಕಲ್ ಪುರಸಭೆಗೆ ನಾಮನಿರ್ದೇಶನ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಇದನ್ನೂ ಓದಿ: Bettanagere Shankara: ಬಿಜೆಪಿ ಸೇರಲು ಮುಂದಾಗಿರುವ ಬೆತ್ತನಗೆರೆ ಯಾರು? ಇಲ್ಲಿದೆ ಶಂಕರನ 'ರಕ್ತ'ಚರಿತ್ರೆ!
ಬಿಜೆಪಿ ಸೇರಲು ಪಾನಿಪುರಿ ಮಂಜು ಪ್ರತಿಭಟನೆ!
ಮೈಸೂರಿನಲ್ಲಿ ರೌಡಿ ಶೀಟರ್ ಪಾನಿಪೂರಿ ಮಂಜು ಎಂಬಾತ ಏಕಾಂಗಿಯಾಗಿ, ಬ್ಯಾನರ್ ಹಿಡಿದು ಪ್ರತಿಭಟನೆ ಮಾಡಿದ್ದಾನೆ. ನಾನು ರೌಡಿ ಶೀಟರ್, ನನಗೂ ಸ್ಥಾನ-ಮಾನ ಕೊಡಿ, ಬಿಜೆಪಿಗರೇ ನನಗೂ ಟಿಕೆಟ್ ನೀಡಿ ಅಂತ ಆಗ್ರಹಿಸಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ