ಕಾಂಗ್ರೆಸ್ ದಾರಿ ತಪ್ಪಿದೆ - ಒಂದರ್ಥದಲ್ಲಿ ಸಿದ್ಧರಾಮಯ್ಯ ಕಾಂಗ್ರೆಸ್ ಆಗಿದೆ; ಕೆ.ಎಸ್.ಈಶ್ವರಪ್ಪ ಲೇವಡಿ

ಇಡೀ ರಾಜ್ಯದ ಕಾಂಗ್ರೆಸ್ ನಂದೇ ಎನ್ನುವಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೊರಟಿದ್ದಾರೆ. ಕಾಂಗ್ರೆಸ್ ಗುಂಪುಗಾರಿಕೆಯಿಂದ ರಾಜ್ಯದಲ್ಲಿ ಅದರ ಬೆತ್ತಲೆ ಪ್ರದರ್ಶನ ನಡೆದಿದೆ ಎಂದರು.

news18-kannada
Updated:November 23, 2019, 1:15 PM IST
ಕಾಂಗ್ರೆಸ್ ದಾರಿ ತಪ್ಪಿದೆ - ಒಂದರ್ಥದಲ್ಲಿ ಸಿದ್ಧರಾಮಯ್ಯ ಕಾಂಗ್ರೆಸ್ ಆಗಿದೆ; ಕೆ.ಎಸ್.ಈಶ್ವರಪ್ಪ ಲೇವಡಿ
ಸಚಿವ ಈಶ್ವರಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ
  • Share this:
ಬೆಳಗಾವಿ(ನ.23): ಕಾಂಗ್ರೆಸ್ ಪಕ್ಷ ದಾರಿ ತಪ್ಪಿ‌ ಹೋಗಿದೆ. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಅವರೆಲ್ಲ ಚುನಾವಣೆಯೇ ಇಲ್ಲ ಎಂದು ಮೌನ ವಹಿಸಿದ್ದಾರೆ. ರಾಜ್ಯದ ಕಾಂಗ್ರೆಸ್ ಒಂದು ರೀತಿ ಸಿದ್ದು ಕಾಂಗ್ರೆಸ್ ಆಗಿದೆ ಎಂದು ಸಚಿವ ಕೆಎಸ್ ಈಶ್ವರಪ್ಪ ಲೇವಡಿ ಮಾಡಿದ್ದಾರೆ.

ಇಡೀ ರಾಜ್ಯದ ಕಾಂಗ್ರೆಸ್ ನಂದೇ ಎನ್ನುವಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೊರಟಿದ್ದಾರೆ. ಕಾಂಗ್ರೆಸ್ ಗುಂಪುಗಾರಿಕೆಯಿಂದ ರಾಜ್ಯದಲ್ಲಿ ಅದರ ಬೆತ್ತಲೆ ಪ್ರದರ್ಶನ ನಡೆದಿದೆ ಎಂದರು.

ಮಹಾರಾಷ್ಟ್ರ ಸರಕಾರ ರಚನೆ ವಿಚಾರವಾಗಿ ಮಾತನಾಡಿದ ಅವರು,  ಅಲ್ಲಿ ಕಾಂಗ್ರೆಸ್ ಕುತಂತ್ರ ಮಾಡಿತ್ತು. ಶಿವಸೇನೆ ಹಿಂದುತ್ವವಾದಿ ಎನ್ನುತ್ತ ಅವರ ಜೊತೆ ಸರಕಾರ ಮಾಡಲು ಹೊರಟಿದ್ದರು. ಕಾಂಗ್ರೆಸ್ಸಿನ ದ್ವಿಮುಖ ನಿಲುವು ಅಲ್ಲಿ ಸ್ಪಷ್ಟವಾಗಿತ್ತು. ಚುನಾವಣೆ ಸಂದರ್ಭದಲ್ಲಿಯೇ ಯಾರಿಗೆ ಬಹುಮತ ಇದೆಯೋ ಅವರೇ ಸಿಎಂ ಎಂದು ನಿರ್ಧಾರವಾಗಿತ್ತು. ಆದರೆ ಚುನಾವಣೆ ಬಳಿಕ ಶಿವಸೇನೆ ನಿಲುವು ಬದಲಿಸಿತ್ತು. ರಾಜಕೀಯ ಸರ್ಜರಿ ರಾತ್ರೋ ರಾತ್ರಿಯೇ ಆಗಬೇಕಿಲ್ಲ. ಬೆಳಗ್ಗೆಯೂ ಆಗುತ್ತೆ ಯಾವಾಗ ಬೇಕಾದ್ರೂ ಆಗುತ್ತೆ ಎಂದು ಹೇಳಿದರು.

ಅನರ್ಹರ ಬಗ್ಗೆ ಮಾಜಿ ಸಚಿವ ಕೃಷ್ಣ ಭೈರೇಗೌಡ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಜೊತೆ ಇದ್ದರೆ ಲಾಯಕ್ಕು. ಕಾಂಗ್ರೆಸ್ ಬಿಟ್ರೇ ಅವರ ಪಾಲಿಗೆ ನಾಲಾಯಕ್ ಆಗ್ತಾರೆ. ಆ ರೀತಿ ಪದ ಬಳಕೆ ಸರಿಯಿಲ್ಲ. ಮೊನ್ನೆ ಮೊನ್ನೆ ಇವರ ಪಕ್ಷದಲ್ಲಿ ಇದ್ದಾಗ ಲಾಯಕ್ ಇದ್ದವರು. ಸಿದ್ದರಾಮಯ್ಯ ಸಿಎಂ ಆದವರು ನಮ್ಮ ಸದಾನಂದಗೌಡ ಅವರಿಗೆ ಗೊಬ್ಬರ ಅಂತಾ ಅಂದಿದ್ರು. ಈ ಬಗ್ಗೆ ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಅಥಣಿಯಲ್ಲಿ ಸಚಿವ ಕೆ. ಎಸ್. ಈಶ್ವರಪ್ಪ ಆಗ್ರಹಿಸಿದರು.

ಸಾವರ್ಕರ್ ಬಗ್ಗೆ ಕಾಂಗ್ರೆಸ್ ಅಪಸ್ವರ ಎತ್ತಿತ್ತು : ಸಚಿವ ಜಗದೀಶ್ ಶೆಟ್ಟರ್​​

ಅಲ್ಲಿ ಜನರ ವಿರುದ್ಧವಾದ ಸರಕಾರ ಮಾಡಲು ಹೊರಟಿದ್ದರು ಅಂಥದ್ದೆ ಸಮ್ಮಿಶ್ರ ಸರಕಾರ ಅದು ಎನ್ ಸಿಪಿ ಗೆ ಅನಿಸಿತ್ತು ಅದಕ್ಕೆ ಬೆಂಬಲ ನೀಡಿತ್ತು. ಸಾವರ್ಕರ ಬಗ್ಗೆ ಕಾಂಗ್ರೆಸ್ ಅಪಸ್ವರ ಎತ್ತಿತ್ತು. ಆದರೆ ಅವರೊಂದಿಗೆ ಶಿವಸೇನೆ ಅಧಿಕಾರ ಮಾಡಲು ಹೊರಟಿತ್ತು ಕಡಿಮೆ ಸ್ಥಾನ ಇಟ್ಟುಕೊಂಡು ಶಿವಸೇನೆಗೆ ಸಿಎಂ ಸ್ಥಾನ ಕೇಳುವ ನೈತಿಕ ಹಕ್ಕು ಇರಲಿಲ್ಲ. ಶಿವಸೇನೆ ಲಾಲಸೆಯಿಂದ ತನ್ನ ಇತಿಮಿತಿ ಮೀರಿ ವರ್ತಿಸುತ್ತಿತ್ತು. ಅದಕ್ಕೆ ತಕ್ಕ ಪಾಠ ಕಲಿಸಿದಂತಾಗಿದೆ ಎಂದರು.

ಇದನ್ನೂ ಓದಿ : ಬಿಜೆಪಿಯಲ್ಲಿ ಸದಾನಂದ ಗೌಡರು ತಿರಸ್ಕೃತಗೊಂಡ ಗೊಬ್ಬರ ಇದ್ದಂತೆ; ಸಿದ್ದರಾಮಯ್ಯ ತಿರುಗೇಟುಪ್ರಧಾನಿ ಮಹಾರಾಷ್ಟ್ರ ಸರಕಾರ ರಚನೆಗೆ ಮಾತ್ರ ಟ್ವೀಟ್ ಮೂಲಕ ಶುಭಾಶಯ ಹೇಳಿದ ವಿಚಾರ ನಮ್ಮ ಸರಕಾರ ರಚನೆಯಾದಗಲೂ ಅಭಿನಂದನೆ ಸಲ್ಲಿಸಿದ್ದರು. ಟ್ವೀಟ್ ಮೂಲಕವೇ ಹೇಳಬೇಕು ಅಂತಿಲ್ಲ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.
First published: November 23, 2019, 12:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading