CM Bommai: ಚಾರ್ಲಿಗೆ ಕಣ್ಣೀರು ಹಾಕುವ ತಾವು ಜನರ ಕಷ್ಟಕ್ಯಾಕೆ ಮರುಗುವುದಿಲ್ಲ? ಸಿಎಂಗೆ ಕಾಂಗ್ರೆಸ್ ಟಾಂಗ್

ಮಹಾರಾಷ್ಟ್ರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗುತ್ತಿದ್ದಂತೆ ಕರ್ನಾಟಕದಲ್ಲೂ ಇಂಧನ ಬೆಲೆ ಇಳಿಕೆ ಮಾಡಿ ಅಂತ ರಾಜ್ಯ ಸರ್ಕಾರಕ್ಕೆ ರಾಜ್ಯ ಕಾಂಗ್ರೆಸ್ ಘಟಕ ಆಗ್ರಹಿಸಿದೆ. ಈ ಕುರಿತಂತೆ ಟ್ವೀಟ್ ಮಾಡಿರುವ ಕೆಪಿಸಿಸಿ, ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಟಾಂಗ್ ನೀಡಿದೆ.

ಚಾರ್ಲಿ ಸಿನಿಮಾ ನೋಡಿ ಕಣ್ಣೀರಿಟ್ಟಿದ್ದ ಸಿಎಂ

ಚಾರ್ಲಿ ಸಿನಿಮಾ ನೋಡಿ ಕಣ್ಣೀರಿಟ್ಟಿದ್ದ ಸಿಎಂ

  • Share this:
ಬೆಂಗಳೂರು: ಮಹಾರಾಷ್ಟ್ರದಲ್ಲಿ (Maharashtra) ಅಲ್ಲಿನ ಜನರಿಗೆ ನೂತನ ಸಿಎಂ ಏಕನಾಥ್ ಶಿಂಧೆ (Eknath Shinde) ಇಂದು ಗುಡ್ ನ್ಯೂಸ್ (Good News) ಕೊಟ್ಟಿದ್ದಾರೆ. ಪೆಟ್ರೋಲ್ ದರ (Petrol Rate) ಹಾಗೂ ಡೀಸೆಲ್ ಬೆಲೆ (Diesel rate) ಇಳಿಸಿ ಜನರಿಗೆ ಇಂಧನದ (Fule) ಬೆಲೆ ಏರಿಕೆ (Price Hike) ಭಾರವನ್ನು ತಗ್ಗಿಸಿದ್ದರು. 1 ಲೀಟರ್‌ ಪೆಟ್ರೋಲ್‌ಗೆ 5 ರೂಪಾಯಿ ಹಾಗೂ 1 ಲೀಟರ್‌ ಡೀಸೆಲ್‌ಗೆ 3 ರೂಪಾಯಿ ಇಳಿಕೆ ಮಾಡಿದ್ದರು. ಇದೀಗ ಇದೇ ವಿಚಾರಕ್ಕೆ ರಾಜ್ಯ ಕಾಂಗ್ರೆಸ್ (State Congress) ಘಟಕವು ಕರ್ನಾಟಕದ (Karnataka) ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಅವರನ್ನು ಟ್ವಿಟರ್‌ನಲ್ಲಿ (Twitter) ತೀವ್ರ ತರಾಟೆಗೆ ತೆಗೆದುಕೊಂಡಿದೆ. ಈಗಾಗಲೇ ಕನ್ನಡ ಸಿನಿಮಾ ರಂಗದಲ್ಲಿ (Kannada Cinema Industry) ದಾಖಲೆ (Records) ನಿರ್ಮಿಸುತ್ತಿರುವ 777 ಚಾರ್ಲಿ (777 Charlie) ಸಿನಿಮಾ ನೋಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಭಾವುಕರಾಗಿ ಅತ್ತೇ ಬಿಟ್ಟಿದ್ದರು. ತಮ್ಮ ಮನೆಯಲ್ಲಿ ಮೃತಪಟ್ಟಿರುವ ನಾಯಿಯನ್ನು (Dog) ನೆನೆದು ಕಣ್ಣೀರು ಹಾಕಿದ್ದರು. ಇದೇ ವಿಚಾರವನ್ನು ನೆನೆಸಿಕೊಂಡಿರುವ ಕಾಂಗ್ರೆಸ್, ಇಂಧನ ಬೆಲೆ ಏರಿಕೆ ವಿಚಾರದಲ್ಲಿ ಸಿಎಂ ಅವರಿಗೆ ಟಾಂಗ್ ಕೊಟ್ಟಿದೆ.

 ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಿರುವ ಮಹಾರಾಷ್ಟ್ರ ಸರ್ಕಾರ

ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚಿಸಿರುವ ಏಕನಾಥ ಶಿಂಧೆ ಮತ್ತು ದೇವೇಂದ್ರ ಫಡ್ನವೀಸ್ ಭಾರೀ ಇಂದು ಕೊಡುಗೆ ಘೋಷಿಸಿದ್ದರು. ಪೆಡ್ರೋಲ್ ಡೀಸೆಲ್ ಬೆಲೆಗಳಲ್ಲಿ ಕಡಿತ ಮಾಡುವ ಕುರಿತು ಅಧಿಕೃತವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದಧೆ ಘೋಷಣೆ ಮಾಡಿದ್ದರು. ಪೆಟ್ರೋಲ್​ಗೆ ಲೀಟರ್​ಗೆ 5 ರೂ. ಕಡಿತಗೊಳಿಸುವುದಾಗಿ ಸಿಎಂ ಏಕನಾಥ ಶಿಂಧೆ ಘೋಷಿಸಿದ್ದರು. ಅಲ್ಲದೇ ಡೀಸೆಲ್​ಗೆ ಪ್ರತಿ ಲೀಟರ್​ಗೆ 3 ರೂ. ಕಡಿಮೆ ಮಾಡುವುದಾಗಿಯೂ ಅವರು ಅಧಿಕೃತಪಡಿಸಿದ್ದರು.

ಸಿಎಂ ಬಸವರಾಜ ಬೊಮ್ಮಾಯಿಗೆ ಕೆಪಿಸಿಸಿ ಟಾಂಗ್

ಮಹಾರಾಷ್ಟ್ರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗುತ್ತಿದ್ದಂತೆ ಕರ್ನಾಟಕದಲ್ಲೂ ಇಂಧನ ಬೆಲೆ ಇಳಿಕೆ ಮಾಡಿ ಅಂತ ರಾಜ್ಯ ಸರ್ಕಾರಕ್ಕೆ ರಾಜ್ಯ ಕಾಂಗ್ರೆಸ್ ಘಟಕ ಆಗ್ರಹಿಸಿದೆ. ಈ ಕುರಿತಂತೆ ಟ್ವೀಟ್ ಮಾಡಿರುವ ಕೆಪಿಸಿಸಿ, ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಟಾಂಗ್ ನೀಡಿದೆ.

ಇದನ್ನೂ ಓದಿ: PSI Recruitment Scam: ಎಡಿಜಿಪಿ ಅಮೃತ್ ಪೌಲ್​ಗೆ ನ್ಯಾಯಾಂಗ ಬಂಧನ

 ಚಾರ್ಲಿಗೆ ಕಣ್ಣೀರು ಹಾಕುವ ತಮಗೆ ಹೃದಯವಂತಿಕೆ ತೋರಲು ಕಷ್ಟವೇ?

ಈ ಹಿಂದೆ 777 ಚಾರ್ಲಿ ಸಿನಿಮಾ ನೋಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಭಾವುಕರಾಗಿ ಕಣ್ಣೀರು ಹಾಕಿದ್ದರು. ತಮ್ಮ ಮನೆಯ ಪ್ರೀತಿಯ ನಾಯಿ ಸನ್ನಿ ಮೃತಪಟ್ಟಿದ್ದು, ಅದರೊಂದಿಗೆ ಕಳೆದ ನೆನಪನ್ನು ಮೆಲುಕು ಹಾಕಿ, ಚಾರ್ಲಿ ಸಿನಿಮಾ ವೀಕ್ಷಣೆ ವೇಳೆ ಸಿಎಂ ಅತ್ತಿದ್ದರು. ಇದಕ್ಕೆ ಟಾಂಗ್ ನೀಡಿರುವ ಕಾಂಗ್ರೆಸ್, ಚಾರ್ಲಿಗೆ ಕಣ್ಣೀರು ಹಾಕುವ ತಮಗೆ ರಾಜ್ಯದ ಜನತೆಗೆ ನೆರವಾಗುವ ಕನಿಷ್ಠ ಹೃದಯವಂತಿಕೆ ತೋರಲು ಕಷ್ಟವೇ? ಅಂತ ಪ್ರಶ್ನಿಸಿದೆ.



ಕರ್ನಾಟಕದಲ್ಲಿ ಇಂಧನ ಬೆಲೆ ಇಳಿಕೆ ಯಾಕೆ ಸಾಧ್ಯವಿಲ್ಲ?

ಮಹಾರಾಷ್ಟ್ರದಲ್ಲಿ ಪೆಟ್ರೋಲ್ 5 ರೂಪಾಯಿ, ಡೀಸೆಲ್ 3 ರೂಪಾಯಿ ದರ ಇಳಿಕೆ ಆಗಿದೆ. ಮಹಾರಾಷ್ಟ್ರದ ಬಿಜೆಪಿ ಬೆಂಬಲಿತ ಸರ್ಕಾರ ಇಂಧನ ತೆರಿಗೆ ಇಳಿಸಿದೆ ಎಂದಾದರೆ ಕರ್ನಾಟಕದಲ್ಲಿ ಏಕೆ ಸಾಧ್ಯವಿಲ್ಲ ಸಿಎಂ ಅವರೇ ಅಂತ ಕಾಂಗ್ರೆಸ್ ಖಾರವಾಗಿ ಪ್ರಶ್ನಿಸಿದೆ.

ಇದನ್ನೂ ಓದಿ: Karnataka Government: ಸರ್ಕಾರಿ ಆಫೀಸ್​ಗಳಲ್ಲಿ ಫೋಟೋ-ವಿಡಿಯೋ ತೆಗೆಯೋದು ಬ್ಯಾನ್!

ಇಂದು ಎಷ್ಟಿದೆ ಪೆಟ್ರೋಲ್, ಡೀಸೆಲ್ ಬೆಲೆ?

ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 97.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.
Published by:Annappa Achari
First published: