ಬೆಂಗಳೂರು: ಚುನಾವಣೆಗೂ (Elections) ಮುನ್ನ ರಾಜ್ಯದ ಜನತೆಗೆ ಕಾಂಗ್ರೆಸ್ (Congress) ಪಕ್ಷ ನೀಡಿದ್ದ ಗ್ಯಾರಂಟಿ ಯೋಜನೆಗಳನ್ನ ಶೀಘ್ರವೇ ಸರ್ಕಾರ ಜಾರಿಗೆ ತರಬೇಕು ಎಂದು ಜನರು ಪಟ್ಟು ಹಿಡಿದಿದ್ದಾರೆ. ಇದಕ್ಕಾಗಿ ಸರ್ಕಾರಿ ಅಧಿಕಾರಿಗಳ (Government officer) ವಿರುದ್ಧ ಜನಸಾಮಾನ್ಯರು ಗಲಾಟೆ ಮಾಡುತ್ತಿದ್ದಾರೆ. ಈಗ ಬಿಜೆಪಿ (BJP) ಹಾಗೂ ಜೆಡಿಎಸ್ (JDS) ಸಹ ಗ್ಯಾರಂಟಿ ಘೋಷಣೆ ಪಟ್ಟುಹಿಡಿದಿದ್ದೆ. ಮಾಜಿ ಸಿಎಂ ಹೆಚ್ಡಿಕೆ (HDK) ಮಾತನಾಡಿ, ಸರ್ಕಾರ ಗ್ಯಾರಂಟಿ ಘೋಷಣೆಗಳನ್ನ ಜಾರಿಗೆ ತರಬೇಕು. ಇಲ್ಲದಿದ್ದರೆ ಪ್ರತೀ ಕ್ಷೇತ್ರದಲ್ಲೂ ಹೋರಾಟ ಮಾಡುತ್ತೇವೆ ಎಂದಿದ್ದಾರೆ.
ಇದರ ಬೆನ್ನಲ್ಲೇ ಸಂಸದ ಪ್ರತಾಪ್ ಸಿಂಹ ಕೂಡ ಪ್ರತಿಕ್ರಿಯೆ ನೀಡಿದ್ದು, ಫ್ರೀ ಗ್ಯಾರಂಟಿಗಳನ್ನ ಶೀಘ್ರವೇ ಜಾರಿಗೆ ತನ್ನಿ. 200 ಯೂನಿಟ್ ಉಚಿತ ವಿದ್ಯುತ್ ನೀಡಿ ಎಂದು ಒತ್ತಾಯ ಮಾಡಿದ್ದಾರೆ. ಇತ್ತ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಗ್ಯಾರಂಟಿಗಳ ವಿಚಾರದಲ್ಲಿ ಕಾಂಗ್ರೆಸ್ ರಿವರ್ಸ್ ಗೇರ್ ಹಾಕಿದೆ ಅಂತ ವಾಗ್ದಾಳಿ ಮಾಡಿದ್ದಾರೆ. ಇದರ ಪರಿಣಾಮ ಜನರಿಗೆ ಕೂಡಲೇ ಗೊತ್ತಾಗಿದೆ ಅಂತ ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ: Karnataka Cabinet: ದೆಹಲಿಯಲ್ಲಿ ಸಚಿವ ಸಂಪುಟ ಸರ್ಕಸ್; 5+5+8 ಸೂತ್ರ! ಇಲ್ಲಿದೆ ಸಂಭನೀಯ ಸಚಿವರ ಪಟ್ಟಿ
ಕಾಂಗ್ರೆಸ್ ಗ್ಯಾರಂಟಿ ಗಳ ಬಗ್ಗೆ ಜೆಡಿಎಸ್ ನಿಂದ ಹೋರಾಟ ವಿಚಾರವಾಗಿ ಇಂದು ಮಾತನಾಡಿದ ಕುಮಾರಸ್ವಾಮಿ ಅವರು, ಎರಡು ಸಚಿವ ಸಂಪುಟ ಸಭೆ ಆಗಲಿ, ಆಮೇಲೆ ಹೋರಾಟದ ಬಗ್ಗೆ ತೀರ್ಮಾನ ಮಾಡುತ್ತೇವೆ. ಕಾಂಗ್ರೆಸ್ ಪಕ್ಷ ನಾಯಕರು ಜನರಿಂದ ಮತ ಹಾಕಿಸಿಕೊಂಡಿದ್ದಾರೆ. ಚಪ್ಪಾಳೆ ಗಿಟ್ಟಿಸಿಕೊಂಡು ಮತ ಹಾಕಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಯಾವ ಅಧಾರದ ಮೇಲೆ ಇವರು ಗ್ಯಾರಂಟಿ ಕೊಟ್ಟಿದ್ದಾರೆ. ಪರಮೇಶ್ವರ್ ಅವರೇ ಅಲ್ವಾ ಪ್ರಣಾಳಿಕೆ ಅಧ್ಯಕ್ಷರು? ನಮಗೂ ಫ್ರೀ, ನಿಮಗೂ ಫ್ರೀ ಅಂತ ಹೇಳಿದ್ಯಾರು? ಸುಳ್ಳು ಹೇಳಿ ಜನರಿಗೆ ಟೋಪಿ ಹಾಕಿದ್ದಾರೆ. ನಂದು ಜನತೆಯ ಸಮಸ್ಯೆ ಅಷ್ಟೇ. ಕಾಂಗ್ರೆಸ್ ಗ್ಯಾರಂಟಿಯೇ ನನ್ನ ಅಸ್ತ್ರ, ಚುನಾವಣೆಯಲ್ಲಿ ಸೋಲಿಗೆ ಹಲವು ಸಮುದಾಯಗಳು ಕಾರಣ. ಹಲವಾರು ಸಮಯದಾಯ ನಮಗೆ ಮೋಸ ಮಾಡಿವೆ. ಇದು ಪ್ರಪಂಚಕ್ಕೆ ಗೊತ್ತಿದೆ, ಈಗ ನಮಗೆ ಬುದ್ಧಿ ಕಲಿಸಿದ್ದಾರೆ. ನಾವು ಮುಂದೆ ಹೇಗೆ ಇರಬೇಕು ಎಂದು ಕಲಿತುಕೊಳ್ಳುತ್ತೇವೆ ಎಂದ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ