ಬೆಂಗಳೂರು: ಸಿದ್ದರಾಮಯ್ಯ (Siddaramaiah) ನೇತೃತ್ವದ ಕಾಂಗ್ರೆಸ್ (Congress) ಸರ್ಕಾರದ ಮೊದಲ ಕ್ಯಾಬಿನೆಟ್ ಸಭೆ (Cabinet Meeting) ಮುಕ್ತಾಯವಾಗಿದ್ದು, ಚುನಾವಣೆಗೂ ಮುನ್ನ ನೀಡಿದ್ದ ಐದು ಗ್ಯಾರೆಂಟಿಗಳನ್ನು ಜಾರಿ ಮಾಡಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಈ ಕುರಿತಂತೆ ಸುದ್ದಿಗೋಷ್ಠಿ ಮಾಹಿತಿ ನೀಡಿದ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು, ರಸ್ತೆಯಲ್ಲಿ ಹೋಗುವವರಿಗೆಲ್ಲಾ ಗ್ಯಾರಂಟಿ ಕೊಡಲು ಆಗಲ್ಲ. ಯಾರಿಗೆ ಕೊಡಬೇಕು, ಅವರ ಹೆಸರಿನಲ್ಲಿ ಖಾತೆ ಇದೆಯಾ ಎಂದು ನೋಡಿ ನಂತರ ಆದೇಶ ಹೊರಡಿಸಲಾಗುತ್ತೆ ಎಂದು ಕಾಂಗ್ರೆಸ್ ಗ್ಯಾರಂಟಿ (Congress Guarantee) ಕುರಿತಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಕೆ ಶಿವಕುಮಾರ್, ಐದು ಗ್ಯಾರಂಟಿಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಆಗಿದೆ. ಅದನ್ನು ಜಾರಿ ಮಾಡುವ ಆದೇಶ ಬರುವ ಕ್ಯಾಬಿನೆಟ್ ನಲ್ಲಿ ನೀಡಲಾಗುತ್ತದೆ. ಯಾವೆಲ್ಲ ನಿಯಮ, ಮಾನದಂಡ, ಇನ್ ಡೀಟೈಲ್ಸ್ ಆಗಿ ಬರುವ ಕ್ಯಾಬಿನೆಟ್ ನಲ್ಲಿ ಆದೇಶ ಹೊರಡಿಸಲು ನಿರ್ಧಾರ ಮಾಡಲಾಗಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಅನೇಕ ನಿರ್ಣಯ ಗಳನ್ನು ಕೈಗೊಂಡಿದ್ದೇವೆ. ಜನರ ವಿಶ್ವಾಸಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಬಸವಣ್ಣನ, ಕುವೆಂಪು, ಕನಕದಾಸರ ನಾಡಲ್ಲಿ, ನುಡಿದಂತೆ ನಡೆಯಲು ನಾವು ಬದ್ಧರಾಗಿದ್ದೇವೆ. ಪ್ರಮುಖ ನಿರ್ಧಾರ ಗಳನ್ನು ಮಾಡಿದ್ದೇವೆ ಎಂದು ತಿಳಿಸಿದರು.
ವಾರದೊಳಗೆ ಕೊಟ್ಟ ಮಾತನ್ನ ಉಳಿಸಿಕೊಳ್ಳುತ್ತೇವೆ
ನೂತನ ಸಚಿವ ಸತೀಶ್ ಜಾರಕಿಹೊಳಿ ನ್ಯೂಸ್ 18 ಜೊತೆಗೆ ಪ್ರತಿಕ್ರಿಯೆ ನೀಡಿ, ಇದು ಸರ್ಕಾರ, ಒಂದನೇ ತಾರೀಖಿನಿಂದಲೇ ಯಾವುದೇ ಆದೇಶ ಜಾರಿಗೆ ಬರುವುದು. ನಾವು ಇನ್ನೊಂದು ವಾರವಷ್ಟೇ ಹೇಳಿದ್ದೇವೆ. ಭಾಷಣಕ್ಕೂ ಸರ್ಕಾರಕ್ಕೂ ವ್ಯತ್ಯಾಸ ಇದೆ,
ಇನ್ನೊಂದು ವಾರದೊಳಗೆ ಕೊಟ್ಟ ಮಾತನ್ನ ಉಳಿಸಿಕೊಳ್ಳುತ್ತೇವೆ. ನನ್ನ ಪ್ರಕಾರ ಒಂದೇ ಡಿಸಿಎಂ ಹುದ್ದೆ ಇರಲಿದೆ. ಉಳಿದ ಹಿರಿಯರಿಗೂ ಕ್ಯಾಬಿನೆಟ್‌ನಲ್ಲಿ ಅವಕಾಶ ಮಾಡಿಕೊಡ್ತಾರೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ