• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Congress Guarantee: ಮೊದಲ ಸಂಪುಟ ಸಭೆಯಲ್ಲೇ 5 'ಗ್ಯಾರಂಟಿ' ಜಾರಿಗೆ ಒಪ್ಪಿಗೆ, ರಾಜ್ಯದ ಜನಕ್ಕೆ ಕೊಟ್ಟ ಮಾತು ಉಳಿಸಿಕೊಂಡ ಸಿದ್ದರಾಮಯ್ಯ

Congress Guarantee: ಮೊದಲ ಸಂಪುಟ ಸಭೆಯಲ್ಲೇ 5 'ಗ್ಯಾರಂಟಿ' ಜಾರಿಗೆ ಒಪ್ಪಿಗೆ, ರಾಜ್ಯದ ಜನಕ್ಕೆ ಕೊಟ್ಟ ಮಾತು ಉಳಿಸಿಕೊಂಡ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ

ಮುಂದಿನ ವಾರದಲ್ಲೇ ಕ್ಯಾಬಿನೆಟ್ ಸಭೆ ನಡೆಸುತ್ತೇವೆ. ಈ ಎಲ್ಲಾ ಯೋಜನೆಗಳನ್ನು ಜಾರಿ ಮಾಡಿ ಆದೇಶ ಹೊರಡಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

 • News18 Kannada
 • 4-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ರಾಜ್ಯವನ್ನು (State) ಸಾಲದ (Debt)  ಸುಳಿಗೆ ಸಿಲುಕದಂತೆ ನಾವು ಎಲ್ಲಾ ಗ್ಯಾರೆಂಟಿಗಳನ್ನು (Guarantee) ಈಡೇರಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಘೋಷಣೆ ಮಾಡಿದ್ದಾರೆ. ನಾವು ಬಜೆಟ್​ (Budget) ಮಂಡನೆ ಮಾಡಲಿದ್ದೇವೆ. ಗೃಹಜ್ಯೋತಿ ಪ್ರತಿಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಯೋಜನೆ ಜಾರಿ ಮಾಡುತ್ತೇವೆ. ಗೃಹಲಕ್ಷ್ಮೀ ಮನೆಯೊಡತಿಗೆ ಮಾಸಿಕ ₹2 ಸಾವಿರ ರೂಪಾಯಿ ಜಾರಿ ಮಾಡುತ್ತೇವೆ. ಅನ್ನಭಾಗ್ಯ ಯೋಜನೆ ಅಡಿ 10 ಕೆಜಿ ಅಕ್ಕಿ ನೀಡುತ್ತೇವೆ.


ಈ ವರ್ಷ ಪದವಿ ಶಿಕ್ಷಣ ಪೂರೈಸಿದ ಯುವ ಜನತೆಗೆ ಪ್ರತಿ ತಿಂಗಳು 3 ಸಾವಿರ ರೂಪಾಯಿ ಹಣವನ್ನು 2 ವರ್ಷಗಳ ಕಾಲ ನೀಡುತ್ತೇವೆ. ಸರ್ಕಾರಿ ಬಸ್​ನಲ್ಲಿ ಪ್ರಯಾಣ ಮಾಡುವ ಮಹಿಳೆಯರಿಗೆ ಉಚಿತ ಪಾಸ್ ನೀಡುತ್ತೇವೆ. ಕರ್ನಾಟಕದವರಿಗೆ ಮಾತ್ರ ಯೋಜನೆ ಜಾರಿ ಆಗಲಿದೆ. ಈ ಬಗ್ಗೆ ಆದೇಶವನ್ನು ಹೊರಡಿಸಲು ಹೇಳಿದ್ದೇವೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಮುಂದಿನ ವಾರದಲ್ಲೇ ಕ್ಯಾಬಿನೆಟ್ ಸಭೆ ನಡೆಸುತ್ತೇವೆ. ಈ ಎಲ್ಲಾ ಯೋಜನೆಗಳನ್ನು ಜಾರಿ ಮಾಡಿ ಆದೇಶ ಹೊರಡಿಸುತ್ತೇವೆ ಎಂದು ಸಿಎಂ ತಿಳಿಸಿದರು.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮ್ಯಯ ಅವರು, ನಾವು ಇವತ್ತು ಡಿಕೆ ಶಿವಕುಮಾರ್​ ಡಿಸಿಎಂ ಆಗಿ ಹಾಗೂ 8 ಶಾಸಕರು ಸಚಿವರಾಗಿ ಪ್ರಮಾಣ ವಚನ ತೆಗೆದುಕೊಂಡಿದ್ದೇವೆ. ನಾಡಿನ ಜನತೆಗೆ ಮತದಾರರಿಗೆ ಧನ್ಯವಾದ ತಿಳಿಸುವ ಕಾರ್ಯಕ್ರಮ ಮಾಡಿದ್ದೇವೆ. ರಾಷ್ಟ್ರದ ಬೇರೆ ಬೇರೆ ರಾಜ್ಯದ ಎಲ್ಲಾ ಬಿಜೆಪಿಯೇತರ ಪಾರ್ಟಿಯ ಅಧ್ಯಕ್ಷರು ಗಳು ಬಂದಿದ್ದರು. ಅವರು ಬಂದು ಹೊಸ ಸರ್ಕಾರಕ್ಕೆ ಶುಭ ಕೋರಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಖರ್ಗೆ, ವೇಣುಗೋಪಾಲ್ ಸೇರಿ ಹಲವರು ಬಂದು ಶುಭ ಕೋರಿದ್ದಾರೆ ಎಂದು ಸಿಎಂ ಸಿದ್ದರಾಮ್ಯಯ ತಿಳಿಸಿದ್ದಾರೆ.


ಇದನ್ನೂ ಓದಿ: Karnataka Oath Taking Ceremony: ಸಿದ್ದು, ಡಿಕೆಶಿ ಸೇರಿದಂತೆ ಯಾರು ಯಾರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ್ರು? ಇಲ್ಲಿದೆ ಕುತೂಹಲಕಾರಿ ಮಾಹಿತಿ


ನಾವು ಪಕ್ಷದ ಪ್ರಣಾಳಿಕೆಯಲ್ಲಿ ಹಲವು ಯೋಜನೆಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದೇವೆ. ಆದರೆ ಎಲ್ಲಾ ಭರವಸೆಗಳನ್ನು ಒಂದೇ ವರ್ಷದಲ್ಲಿ ಈಡೇರಿಸಲು ಆಗಲ್ಲ. 5 ಗ್ಯಾರೆಂಟಿ ಯೋಜನೆಗಳನ್ನು ಮೊದಲ ಕ್ಯಾಬಿನೆಟ್​ನಲ್ಲೇ ಜಾರಿ ಮಾಡುತ್ತೇವೆ ಹೇಳಿದ್ದೇವು. ಜನರಿಗೆ ನಮ್ಮ ಮೇಲೆ ವಿಶ್ವಾಸವಿದೆ, ಆದರೆ ವಿರೋಧ ಪಕ್ಷದವರು ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ.


ತಕ್ಷಣದ ಗ್ಯಾರೆಂಟಿಗಳನ್ನು ಈಡೇರಿಸಲು 50 ಸಾವಿರ ಕೋಟಿ ರೂಪಾಯಿ ಆಗಬಹುದು ಎಂದು ಲೆಕ್ಕಾಚಾರ ಮಾಡಿದ್ದೇವೆ. ರಾಜ್ಯದ ಬಿಜೆಟ್ ಗಾತ್ರ ಪ್ರತಿ ವರ್ಷ ಹೆಚ್ಚಾಗುತ್ತದೆ. ತೆರಿಗೆಯನ್ನು ಉತ್ತಮ ಸಂಗ್ರಹಣೆ ಮಾಡುವ ಮೂಲಕ ಆದಾಯ ಸಂಗ್ರಹ ಮಾಡುತ್ತೇವೆ. ಜಿಎಸ್​ಟಿ ಜಾರಿ ಮಾಡುವ ಮೂಲಕ ಕೇಂದ್ರ ಸರ್ಕಾರದವರು ನಮಗೇನು ಬಿಟ್ಟಿಲ್ಲ. ಉಳಿದರುವುದು ಕೇವಲ ಪೆಟ್ರೋಲ್ ಡಿಸೇಲ್​ ಮತ್ತುಸ್ಟ್ಯಾಪ್​ ಇತರೇ ಇದೆ ಎಂದು ಸಿದ್ದರಾಮಯ್ಯ ತಿಳಿಸಿದರು.


ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ, 165. ಭರವಸೆ ಗಳಲ್ಲಿ‌ 158 ಭರವಸೆ ಗಳನ್ನು ಹಿಂದೆ ಈಡೇರಿಸಿದ್ವಿ, ನಾವು ಹಿಂದೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಭರವಸೆಗಳಲ್ಲದೇ ಇನ್ನೂ 30 ಯೋಜನೆ ಗಳನ್ನು ಜಾರಿ ಮಾಡಿದ್ದೇವು. ಸದ್ಯ 15ನೇ ಹಣಕಾಸು ಆಯೋಗದಲ್ಲಿ 1 ಲಕ್ಷ ಕೋಟಿ ರೂಪಾಯಿ ಬರಬೇಕಿತ್ತು, ಆದರೆ ಹಿಂದಿನ ಸರ್ಕಾರದ ತಪ್ಪಿನಿಂದ 50 ಸಾವಿರ ಸಾವಿರ ಕೋಟಿ ಮಾತ್ರ ಬರಲಿದೆ ಎಂದು ಆರೋಪಿಸಿದರು.


ಕೆಲವು ಇಲಾಖೆಗಳಲ್ಲಿ ತೆರಿಗೆ ಹೆಚ್ಚಾಗಿ ಮಾಡದೆ ಇದ್ದರು ಕೂಡ, ಟಾರ್ಗೆಟ್ ಹೆಚ್ಚು ಮಾಡಲು ಸಾಧ್ಯವಾಗುತ್ತದೆ. ಕೇಂದ್ರದಿಂದ ನಮಗೆ ಅನ್ಯಾಯವಾಗಿದೆ. ಜಿಎಸ್​ಟಿ ಸೇರಿ 4 ಲಕ್ಷ ಕೋಟಿ ರೂಪಾಯಿ ಪಾವತಿ ಮಾಡುತ್ತೇವೆ. ಆದರೆ ನಮ್ಮ ಪಾಲನ್ನು ನಮಗೆ ನ್ಯಾಯಯುವಾಗಿ ನಮಗೆ ಕೊಟ್ಟಿಲ್ಲ. ನಮ್ಮ ಪಾಲು ಕೊಡುವುದರಲ್ಲಿ ನಮಗೆ ಅನ್ಯಾಯವಾಗಿದೆ. ಬೊಮ್ಮಾಯಿ ಜಿಎಸ್​ಟಿ ಕೌನ್ಸಿಲ್ ಮೆಂಬರ್ ಆಗಿದ್ದರೂ ಕೇಳಲಿಲ್ಲ ಎಂದು ಸಿದ್ದರಾಮಯ್ಯ ವಿವರಿಸಿದರು.

First published: