ಚಿತ್ರದುರ್ಗ: ಚುನಾವಣೆ ಪ್ರಚಾರದ (Karnataka Election Campaign) ಹಿನ್ನೆಲೆ ಚಿತ್ರದುರ್ಗಕ್ಕೆ (Chitradurga) ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಬಿಜೆಪಿ ನಾಯಕರು (BJP Leaders) ಸ್ವಾಗತಿಸಿದರು. ಜಯದೇವ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಆಯೋಜನೆಯ ನವ ಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ ಭಾಯಾಗಿದ ಪ್ರಧಾನಿಗಳು ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ (BJP Candidates) ಪರ ಮತಯಾಚನೆ ಮಾಡಿದರು. ಈ ಬಾರಿ ಬಹುಮತದ ಸರ್ಕಾರಕ್ಕೆ ಆಶೀರ್ವದಿಸಬೇಕೆಂದು ಚಿತ್ರದುರ್ಗದ ಜನತೆಯಲ್ಲಿ ಮನವಿ ಮಾಡಿಕೊಂಡರು.
ಕಾಂಗ್ರೆಸ್ ವಿಶ್ವಾಸವನ್ನು ಕಳೆದುಕೊಂಡಿದೆ. ಕಾಂಗ್ರೆಸ್ನ ವ್ಯಾರಂಟಿ ಮುಗಿದಿದ್ದು, ಸುಳ್ಳಿನ ಕಂತೆಯ ಗ್ಯಾರಂಟಿಯನ್ನು ನೀಡುತ್ತಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವ್ಯಂಗ್ಯ ಮಾಡಿದರು.
ಎಲ್ಲಾ ವರ್ಗದವರ ಕಲ್ಯಾಣಕ್ಕೆ ಬಿಜೆಪಿ ಸರ್ಕಾರ
ಈ ಚುನಾವಣೆ ಮುಂದಿನ 25 ವರ್ಷದ ಕರ್ನಾಟಕ ಭವಿಷ್ಯವನ್ನು ನಿರ್ಧರಿಸಲಿದೆ. ದೇಶದಲ್ಲಿ ಕರ್ನಾಟಕ ನಂಬರ್ ಒನ್ ಮಾಡಲು ಬಿಜೆಪಿಗೆ ಮತ ಹಾಕಬೇಕಿದೆ. ಬಿಜೆಪಿ ಪ್ರಣಾಳಿಕೆಯು ಕರ್ನಾಟಕ ನಂಬರ್ ಒನ್ ಮಾಡುವ ಮಾರ್ಗವಿದೆ. ಪ್ರಣಾಳಿಕೆ ಎಲ್ಲಾ ವರ್ಗದವರ ಕಲ್ಯಾಣದ ಗುರಿಯನ್ನು ಹೊಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಕರ್ನಾಟಕದ ಜನತೆ ಕಾಂಗ್ರೆಸ್ ಮತ್ತು ಜೆಡಿಎಸ್ ಬಗ್ಗೆ ಎಚ್ಚರವಾಗಿರಬೇಕು. ಈ ಎರಡೂ ಪಕ್ಷಗಳು ಬೇರೆ ಬೇರೆ ಕಾಣಬಹುದು. ಆದ್ರೆ ಇವುಗಳ ಅಜೆಂಡಾ ಒಂದೇ ಆಗಿದೆ. ಭ್ರಷ್ಟಾಚಾರವನ್ನು ಮೈಗೂಡಿಸಿಕೊಂಡಿರುವ ಈ ಪಕ್ಷಗಳು ಕುಟುಂಬ ರಾಜಕಾರಣ ಮಾಡಿಕೊಂಡು ಬಂದಿವೆ.
ಭದ್ರಾ ಮೇಲ್ಡಂಡೆ ಯೋಜನೆಯನ್ನು ನಿರ್ಲಕ್ಷ್ಯ ಮಾಡಿರೋದು ಕಾಂಗ್ರೆಸ್ ಮತ್ತು ಜೆಡಿಎಸ್ ದುರಾಡಳಿತಕ್ಕೆ ಉದಾಹರಣೆ ಆಗಿದೆ. ಬಿಜೆಪಿ ಸರ್ಕಾರ ಈ ಯೋಜನೆಗೆ 5 ಸಾವಿರ ಕೋಟಿ ಅನುದಾನ ನೀಡಿದೆ. ವಾಣಿವಿಲಾಸ ಆಣೆಕಟ್ಟು ಅಭಿವೃದ್ಧಿಗೆ ಬದ್ಧವಾಗಿದೆ.
ಇದನ್ನೂ ಓದಿ: Karnataka Opinion Poll: ಕರ್ನಾಟಕದಲ್ಲಿ ಯಾರ ಅಧಿಪತ್ಯ? ಸಮೀಕ್ಷೆಯಲ್ಲಿ ಸಿಕ್ತು ಅಚ್ಚರಿಯ ಫಲಿತಾಂಶ!
ಡಬಲ್ ಇಂಜಿನ್ ಸರ್ಕಾರ ಬಂದ್ಮೇಲೆ ಎಲ್ಲಾ ಕೆಲಸಗಳು ವೇಗವಾಗಿ ನಡೆಯುತ್ತಿವೆ. ಆಧುನಿಕ, ಮೂಲಭೂತ ಸೌಕರ್ಯಕ್ಕೆ ಡಬಲ್ ಇಂಜಿನ್ ಸರ್ಕಾರ ಒತ್ತು ನೀಡುತ್ತಿದೆ ಎಂದು ಕಾಂಗ್ರೆಸ್-ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಏಳು ಸುತ್ತಿನ ಕೋಟೆ
ಚಿತ್ರದುರ್ಗದ ಏಳು ಸುತ್ತಿನ ಕೋಟೆ ಸುರಕ್ಷತೆಯ ಕೋಟೆ ಆಗಿದೆ. ಏಳು ಸುತ್ತಿನ ಕೋಟೆಯ ಉದಾಹರಣೆ ನೀಡಿ ಯೋಜನೆಗಳನ್ನು ಹೇಳಿದರು. ಬಿಜೆಪಿ ಸರ್ಕಾದ ಸಹ ಜನರಿಗಾಗಿ ಸುರಕ್ಷೆಯ ಯೋಜನೆ ತಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ