ಬೆಂಗಳೂರು: ಕಾಂಗ್ರೆಸ್ ಸರ್ಕಾರ (Congress Government) ಬಂತು, ಟಿಪ್ಪು ಜಯಂತಿ (Tipu Jayanti) ಮಾಡ್ತಾರೆ ಅಂತಾ ಅಂದುಕೊಂಡಿದ್ದವರಿಗೆಲ್ಲಾ ಸರ್ಕಾರವೇ ಸ್ಪಷ್ಟನೆ ನೀಡಿದೆ. ರಾಜ್ಯ ಸರ್ಕಾರದಿಂದ (Government Of Karnataka) ಈ ವರ್ಷ ಆಚರಿಸುವ ಒಟ್ಟು 31 ಜಯಂತಿಗಳ (Jayanti) ದಿನಾಂಕ ಪ್ರಕಟಿಸಿದೆ. ಆಚರಿಸುವ ದಿನದ ಜೊತೆಗೆ ಸ್ಥಳ ನಿಗದಿಯನ್ನೂ ಮಾಡಿ ಆದೇಶ ನೀಡಿದೆ. ಎಲ್ಲಾ ಸಮುದಾಯಗಳ ಸ್ವಾಮೀಜಿ, ಆದರ್ಶ ವ್ಯಕ್ತಿಗಳ ಹೆಸರಿನಲ್ಲಿ ಜಯಂತಿ ಮಾಡಲಾಗ್ತಿದೆ. ಆದರೆ, ಟಿಪ್ಪು ಜಯಂತಿಯನ್ನು ಕೇವಲ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಟಿಪ್ಪು ಜಯಂತಿ ಆಚರಿಸುವ ಸಾಧ್ಯತೆಗಳಿವೆ.
ಕಾಂಗ್ರೆಸ್ ಸರ್ಕಾರವೇ ತಂದಿದ್ದ ‘ಟಿಪ್ಪು ಜಯಂತಿ’ ಡ್ರಾಪ್ ಮಾಡಲಾಗುತ್ತದೆ ಎನ್ನಲಾಗ್ತಿದೆ. ಟಿಪ್ಪು ಜಯಂತಿ ಆಚರಣೆಯನ್ನ ಪಟ್ಟಿಯಿಂದ ಕಾಂಗ್ರೆಸ್ ಸರ್ಕಾರ ಕೈಬಿಟ್ಟಿದೆ. 31 ಮಹಾಪುರುಷರ ಜಯಂತಿ ಆಚರಣೆಗೂ ಹೊಸ ರೂಲ್ಸ್ ಮಾಡಲಾಗಿದೆ.
ಜಿಲ್ಲೆಗೊಂದು ಮಹಾಪುರುಷರ ಜಯಂತಿ ಆಚರಣೆಗೆ ಆದೇಶ ಹೊರಡಿಸಲಾಗಿದೆ. ರಾಜ್ಯವ್ಯಾಪಿ ಎಲ್ಲರ ಜಯಂತಿ ಆಚರಿಸಲು ಹಣ ರಿಲೀಸ್ ಮಾಡೋದು ಅನುಮಾನ ಎನ್ನಲಾಗಿದ್ದು, ಹೊಸ ಆದೇಶವನ್ನು ಸಿದ್ದರಾಮಯ್ಯ ಸರ್ಕಾರ ಹೊರಡಿಸಿದೆ.
ಸರ್ಕಾರ ಆಚರಣೆ ಮಾಡುತ್ತಿರುವ ಜಯಂತಿ ಮತ್ತು ಸ್ಥಳ ಹೀಗಿದೆ
1.ಭಗವಾನ್ ಮಹಾವೀರ ಜಯಂತಿ: ಬೆಂಗಳೂರು ನಗರ
2.ಅಕ್ಕ ಮಹಾದೇವಿ ಜಯಂತಿ: ಶಿವಮೊಗ್ಗ
3.ಬಸವ ಜಯಂತಿ: ಬೀದರ್
4.ಶ್ರೀ ಶಂಕರಾಚಾರ್ಯ ಜಯಂತಿ: ಚಿಕ್ಕಮಗಳೂರು
5.ಶ್ರೀ ಭಗೀರಥ ಜಯಂತಿ: ಚಾಮರಾಜನಗರ
6.ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ: ಬಳ್ಳಾರಿ
7.ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ: ಮಂಡ್ಯ
8.ಶ್ರೀ ಕೇಂಪೇಗೌಡ ಜಯಂತಿ: ಹಾಸನ
9.ಡಾ.ಫ.ಗು.ಹಳಕಟ್ಟಿ ಜಯಂತಿ: ವಿಜಯಪುರ
10.ಹಡಪದ ಅಪ್ಪಣ್ಣ ಜಯಂತಿ: ಧಾರವಾಡ
11.ನುಲಿಯ ಚಂದಯ್ಯ ಜಯಂತಿ: ಬೆಂಗಳೂರು ಗ್ರಾಮಾಂತರ
12.ಬ್ರಹ್ಮಶ್ರೀ ನಾರಾಯಣಗುರು ಜಯಂತಿ: ಉಡುಪಿ
13.ಶ್ರೀಕೃಷ್ಣ ಜಯಂತಿ: ದಕ್ಷಿಣ ಕನ್ನಡ
14.ವಿಶ್ವಕರ್ಮ ಜಯಂತಿ: ವಿಜಯನಗರ
15.ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ: ಬೆಳಗಾವಿ
16.ವೀರರಾಣಿ ಒನಕೆ ಓಬವ್ವ ಜಯಂತಿ: ದಾವಣಗೆರೆ
17.ಕನಕ ಜಯಂತಿ: ಗದಗ
18.ವಿಶ್ವಮಾನವ ದಿನಾಚರಣೆ: ಮೈಸೂರು
19.ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ದಿನಾಚರಣೆ: ತುಮಕೂರು
20.ಶಿವಯೋಗಿ ಸಿದ್ದರಾಮ ಜಯಂತಿ: ಚಿತ್ರದುರ್ಗ
21.ಮಹಾಯೋಗಿವೇಮನ ಜಯಂತಿ: ರಾಯಚೂರು
22.ಅಂಬಿಗರ ಚೌಡಯ್ಯ ಜಯಂತಿ: ಕಾರವಾರ
23.ಸವಿತಾ ಮಹರ್ಷಿ ಜಯಂತಿ: ಚಿಕ್ಕಬಳ್ಳಾಪುರ
24.ಮಡಿವಾಳ ಮಾಚಿದೇವ ಜಯಂತಿ: ರಾಮನಗರ
25.ಶ್ರೀ ಸಂತ ಸೇವಾಲಾಲ ಜಯಂತಿ: ಯಾದಗಿರಿ
26.ಕಾಯಕ ಶರಣರ ಜಯಂತಿ: ಕೊಪ್ಪಳ
27.ಛತ್ರಪತಿ ಶಿವಾಜಿ ಜಯಂತಿ: ಬಾಗಲಕೋಟೆ
28.ಸಂತಿ ಕವಿ ಸರ್ವಜ್ಞ ಜಯಂತಿ: ಕೊಡಗು
29.ಶ್ರೀ ಯೋಗಿ ನಾರೇಯಣ ಯತೀಂದ್ರರ ಜಯಂತಿ: ಕೋಲಾರ
ಇದನ್ನೂ ಓದಿ: Vijayapura Apple Farming: ಬರದ ನಾಡಿನಲ್ಲಿ ಕಾಶ್ಮೀರಿ ಸೇಬು ಬೆಳೆದು ಸೈ ಎನಿಸಿಕೊಂಡ ರೈತ!
30.ಶ್ರೀ ರೇಣುಕಾಚಾರ್ಯ ಜಯಂತಿ: ಹಾವೇರಿ
31.ದೇವರ ದಾಸಿಮಯ್ಯ ಜಯಂತಿ: ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ