ಕಾಂಗ್ರೆಸ್ ರೆಬೆಲ್ ಶಾಸಕ ರಮೇಶ್​ಗೆ ಗೇಟ್​ಪಾಸ್​? : ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿರುವ ಸಚಿವ ಸತೀಶ್​ ಜಾರಕಿಹೊಳಿ

lok sabha elections 2019: ಬೆಳಗಾವಿಯ ಚಿಕ್ಕೋಡಿ ನಿಪ್ಪಾಣಿ ಕ್ಷೇತ್ರದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಹಿರಂಗವಾಗಿಯೇ ಬಿಜೆಪಿ ಪರ ಕೆಲಸ ಮಾಡುತ್ತಿರುವುದು ಪಕ್ಷಕ್ಕೆ ನುಂಗಲಾರದ ತುತ್ತಾದರೆ, ರಮೇಶ್ ನಡೆಯಿಂದ ಸಹೋದರ ಸತೀಶ್​ ಜಾರಕಿಹೊಳಿಗೂ ಪಕ್ಷ ಹಾಗೂ ಕ್ಷೇತ್ರದಲ್ಲಿ ಇರಿಸುಮುರಿಸು ಉಂಟಾಗಿರುವುದು ಸುಳ್ಳಲ್ಲ.

news18
Updated:April 18, 2019, 11:40 AM IST
ಕಾಂಗ್ರೆಸ್ ರೆಬೆಲ್ ಶಾಸಕ ರಮೇಶ್​ಗೆ ಗೇಟ್​ಪಾಸ್​? : ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿರುವ ಸಚಿವ ಸತೀಶ್​ ಜಾರಕಿಹೊಳಿ
ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ.
news18
Updated: April 18, 2019, 11:40 AM IST
ಗೋಕಾಕ್ (ಏ.17): ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ರಮೇಶ್ ಜಾರಕಿಹೊಳಿ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

ಮೈತ್ರಿ ಸರ್ಕಾರದ ಸಂಪುಟ ಸಭೆ ವಿಸ್ತರಣೆಯ ನಂತರ ಸಚಿವ ರಮೇಶ್ ಜಾರಕಿಹೊಳಿಯನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಇದರಿಂದ ಕಾಂಗ್ರೆಸ್​ ವಿರುದ್ಧ ಮುನಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ ಕಳೆದ ಕೆಲ ತಿಂಗಳಿನಿಂದ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಅಲ್ಲದೆ ಚಿಂಚೊಳ್ಳಿ ಮಾಜಿ ಶಾಸಕ ಉಮೇಶ್ ಜಾಧವ್ ಸೇರಿದಂತೆ 4 ಶಾಸಕರ ಜೊತೆ ಮುಂಬೈ ತೆರಳಿ ಸರ್ಕಾರವನ್ನೇ ಬೀಳಿಸುವ ಬೆದರಿಕೆಯನ್ನೂ ಒಡ್ಡಿದ್ದರು.

ಇದನ್ನೂ ಓದಿ : ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ತಂತ್ರದಿಂದ ಸೋದರ ರಮೇಶ್ ಜಾರಕಿಹೊಳಿ ಅತಂತ್ರ..!

ಆದರೆ, ಅಷ್ಟೊತ್ತಿಗಾಗಲೆ ರಾಜ್ಯ ರಾಜಕೀಯದಲ್ಲಿ ಯಡಿಯೂರಪ್ಪ ಆಡಿಯೋ ಪ್ರಕರಣ ಸದ್ದು ಮಾಡಿದ ಪರಿಣಾಮ ರಮೇಶ್ ಸುಮ್ಮನಾಗಿದ್ದರು. ಆದರೆ, ಲೋಕಸಭಾ ಚುನಾವಣೆ ಗರಿಗೆದರಿರುವ ಈ ದಿನಗಳಲ್ಲಿ ರಮೇಶ್ ಮತ್ತೆ ರೆಬೆಲ್ ಆಗಿದ್ದಾರೆ.

ಈ ನಡುವೆ ಕಳೆದ ಕೆಲ ದಿನಗಳಿಂದ ಬೆಳಗಾವಿಯ ಚಿಕ್ಕೋಡಿ ನಿಪ್ಪಾಣಿ ಕ್ಷೇತ್ರದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಹಿರಂಗವಾಗಿಯೇ ಬಿಜೆಪಿ ಪರ ಕೆಲಸ ಮಾಡುತ್ತಿರುವುದು ಪಕ್ಷಕ್ಕೆ ನುಂಗಲಾರದ ತುತ್ತಾದರೆ, ರಮೇಶ್ ನಡೆಯಿಂದ ಸಹೋದರ ಸತೀಶ್​ ಜಾರಕಿಹೊಳಿಗೂ ಪಕ್ಷ ಹಾಗೂ ಕ್ಷೇತ್ರದಲ್ಲಿ ಇರಿಸುಮುರಿಸು ಉಂಟಾಗಿರುವುದು ಸುಳ್ಳಲ್ಲ.

ಇದನ್ನೂ ಓದಿ : ಇಂದು ಸಂಜೆಯೊಳಗೆ ರಮೇಶ್​ ಜಾರಕಿಹೊಳಿ 15 ಶಾಸಕರ ಲಿಸ್ಟ್ ಕೊಟ್ಟರೆ ಬಿಜೆಪಿ ಶಾಸಕರು ರೆಸಾರ್ಟ್​ಗೆ ಶಿಫ್ಟ್​?
Loading...

ಹೀಗಾಗಿ ಸಹೋದರನ ಪಕ್ಷ ವಿರೋಧಿ ಚಟುವಟಿಕೆ ಕುರಿತು ಗೋಕಾಕ್ ತಾಲೂಕಿನ ಕೊಳವಿ ಗ್ರಾಮದಲ್ಲಿ ಇಂದು ಹೇಳಿಕೆ ನೀಡಿರುವ ಸತೀಶ್ ಜಾರಕಿಹೊಳಿ, “ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಶಿಸ್ತು ಕ್ರಮಕ್ಕೆ ಹೈಕಮಾಂಡ್​ಗೆ ಶಿಫಾರಸು ಮಾಡಲಾಗುವುದು ಅಲ್ಲದೆ ಗೋಕಾಕ್ ವಿಧಾನ ಸಭಾ ಕ್ಷೇತ್ರದಲ್ಲಿ ರಮೇಶ್​ಗೆ ಪರ್ಯಾಯವಾಗಿ ಲಖನ್ ಜಾರಕಿಹೊಳಿಯನ್ನು ಬೆಳೆಸಲಾಗುವುದು” ಎಂದು ಹೇಳುವ ಮೂಲಕ ಭವಿಷ್ಯದಲ್ಲಿ ರೆಬೆಲ್ ಶಾಸಕ ರಮೇಶ್ ಪಕ್ಷದಲ್ಲಿ ಇರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

First published:April 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626