• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • DK Brothers: ಕನಕಪುರದಿಂದ ಕಣಕ್ಕಿಳಿದ ಆರ್​ ಅಶೋಕ್​ಗೆ ಶಾಕ್ ಕೊಟ್ಟ ಕಾಂಗ್ರೆಸ್!

DK Brothers: ಕನಕಪುರದಿಂದ ಕಣಕ್ಕಿಳಿದ ಆರ್​ ಅಶೋಕ್​ಗೆ ಶಾಕ್ ಕೊಟ್ಟ ಕಾಂಗ್ರೆಸ್!

ಡಿಕೆ ಶಿವಕುಮಾರ್/ ಆರ್ ಅಶೋಕ್

ಡಿಕೆ ಶಿವಕುಮಾರ್/ ಆರ್ ಅಶೋಕ್

DK Suresh: ರಾಜ್ಯ ರಾಜಕಾರಣಕ್ಕೆ ಸಂಸದ ಡಿಕೆ ಸುರೇಶ್ ಕರೆತರಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಈ ಬಗ್ಗೆ ಸುಳಿವು ನೀಡಿದ್ದಾರೆ.

  • Share this:

ಬೆಂಗಳೂರು: ಕನಕಪುರ ವಿಧಾನಸಭಾ ಕ್ಷೇತ್ರದಿಂದ (Kanakapur Constituency) ಬಿಜೆಪಿ ಅಭ್ಯರ್ಥಿಯಾಗಿರುವ ಕಂದಾಯ ಸಚಿವ ಆರ್.ಅಶೋಕ್ (Minister R Ashok) ಅವರಿಗೆ ಡಿಕೆ ಬ್ರದರ್ಸ್​ (DK Brothers) ಶಾಕ್ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಅವರನ್ನು ಚುನಾವಣೆಯಲ್ಲಿ ಜಾತಿ ಸಮೀಕರಣದ ಆಧಾರದಲ್ಲಿ ಬಿಜೆಪಿ ಅಶೋಕ್​ ಅವರಿಗೆ ಟಿಕೆಟ್ ನೀಡಿತ್ತು ಎಂಬ ಮಾತುಗಳು ಕೇಳಿ ಬಂದಿದ್ದವು. ಕನಕಪುರದ ಜೊತೆಗೆ ಪದ್ಮನಾಭನಗರ ಕ್ಷೇತ್ರದಿಂದಲೂ (Padmanabhanagara) ಆರ್​.ಅಶೋಕ್ ಅವರಿಗೆ ಟಿಕೆಟ್ ನೀಡಲಾಗಿದೆ. ಈಗ ಇದೇ ಸಮೀಕರಣದ ಆಧಾರದಲ್ಲಿ ಪದ್ಮನಾಭನಗರ ಕ್ಷೇತ್ರಕ್ಕೆ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದೆ.


ರಾಜ್ಯ ರಾಜಕಾರಣಕ್ಕೆ ಸಂಸದ ಡಿಕೆ ಸುರೇಶ್ ಕರೆತರಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಈ ಬಗ್ಗೆ ಸುಳಿವು ನೀಡಿದ್ದಾರೆ.


ಇಂದು ಡಿಕೆ ಸುರೇಶ್ ನಾಮಿನೇಷನ್ ಫೈಲ್ ಮಾಡಲಿದ್ದಾರೆ ಎಂದು ಹೇಳಿರುವ ಡಿಕೆ ಶಿವಕುಮಾರ್ ಯಾವ ಕ್ಷೇತ್ರ ಎಂಬುದನ್ನು ಬಿಟ್ಟು ಕೊಟ್ಟಿಲ್ಲ. ಆರ್ ಅಶೋಕ್ ಪ್ರತಿನಿಧಿಸುವ ಪದ್ಮನಾಭನಗರದಿಂದಲೇ ಡಿಕೆ ಸುರೇಶ್ ಸ್ಪರ್ಧೆ ಮಾಡುವ ಸಾಧ್ಯತೆಗಳಿವೆ.




ಪುಲಿಕೇಶಿನಗರದಲ್ಲಿ ಅಖಂಡ ಶಕ್ತಿ ಪ್ರದರ್ಶನ


ಇಂದು ಎರಡನೇ ಬಾರಿ ಅಖಂಡ ಶ್ರೀನಿವಾಸಮೂರ್ತಿ ನಾಮಪತ್ರ ಸಲ್ಲಿಸಲಿದ್ದಾರೆ. ಡಿಜೆ ಹಳ್ಳಿ ಅಂಬೇಡ್ಕರ್ ಸರ್ಕಲ್​​ನಿಂದ ಮೆರವಣಿಗೆ ಮೂಲಕ ಸಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಕಾಂಗ್ರೆಸ್ ಟಿಕೆಟ್ ನಿರಾಕರಣೆ ಬಳಿಕ ಶಕ್ತಿ ಪ್ರದರ್ಶನ ಮೂಲಕ ಮತ್ತೆ ನಾಮಪತ್ರ ಸಲ್ಲಿಸುತ್ತಿದ್ದಾರೆ.


ಇದನ್ನೂ ಓದಿ: KGF Babu ನಿವಾಸದ ಮೇಲೆ ಐಟಿ ದಾಳಿ; ಚುನಾವಣೆ ತಯಾರಿಯಲ್ಲಿದ್ದ ಕುಟುಂಬಕ್ಕೆ ಶಾಕ್


ಡ್ಯಾಮೇಜ್ ಕಂಟ್ರೋಲ್​​ಗೆ ಬಿಜೆಪಿ ಕಸರತ್ತು


ಜಗದೀಶ್ ಶೆಟ್ಟರ್ ಪಕ್ಷ ತೊರೆದ ಹಿನ್ನೆಲೆ ಸಂಜೆ ಲಿಂಗಾಯತ ನಾಯಕರ ಸಭೆಯನ್ನು ಬಿಜೆಪಿ ಕರೆದಿದೆ. ಶೆಟ್ಟರ್, ಸವದಿ ಬಿಜೆಪಿ ತೊರೆದ ಕಾರಣ ಲಿಂಗಾಯತ ಸಮುದಾಯ ಪಕ್ಷದಿಂದ ದೂರವಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆ ಚುನಾವಣೆ ಸಂದರ್ಭದಲ್ಲಿ ಯಾವ ರೀತಿ ನಡೆ ಇರಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಗಳಿವೆ.

First published: