ಕಾಂಗ್ರೆಸ್ ತೊರೆದಿದ್ದ ಮಾಜಿ ರಾಜ್ಯಸಭಾ ಸದಸ್ಯ ಕೆ.ಸಿ. ರಾಮಮೂರ್ತಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆ

ಬಿಜೆಪಿ ಸೇರಿದ ಕೆ ಸಿ ರಾಮಮೂರ್ತಿ ಯವರು ಬಿಜೆಪಿ ಪ್ರಾಥಮಿಕ ಸದಸ್ಯತ್ವವನ್ನು ಪಡೆದುಕೊಂಡರು. ಒಂದು ವಾರದ ಹಿಂದೆ ಸೇರ್ಪಡೆ ಯಾಗಬೇಕಾಗಿತ್ತು ಅನಿವಾರ್ಯ ಕಾರಣಗಳಿಂದ ಕಾರ್ಯಕ್ರಮ ಮುಂದೆ ಹೋಗಿತ್ತು ಎನ್ನಲಾಗಿದೆ.

G Hareeshkumar | news18-kannada
Updated:October 22, 2019, 2:18 PM IST
ಕಾಂಗ್ರೆಸ್ ತೊರೆದಿದ್ದ ಮಾಜಿ ರಾಜ್ಯಸಭಾ ಸದಸ್ಯ ಕೆ.ಸಿ. ರಾಮಮೂರ್ತಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆ
ಕೆ.ಸಿ.ರಾಮಮೂರ್ತಿ
  • Share this:
ನವದೆಹಲಿ(ಅ.22) : ಕಾಂಗ್ರೆಸ್​ನ ರಾಜ್ಯಸಭಾ ಸದಸ್ಯತ್ವಕ್ಕೆ ಒಂದು ವಾರದ ಹಿಂದೆ ರಾಜೀನಾಮೆ ನೀಡಿದ್ದ ಕೆ.ಸಿ. ರಾಮಮೂರ್ತಿ ಇಂದು ಅಧಿಕೃತವಾಗಿ ಬಿಜೆಪಿ  ಪಕ್ಷಕ್ಕೆ ಸೇರಿದರು. ಮಾಜಿ ಪೊಲೀಸ್ ಅಧಿಕಾರಿಯೂ ಆಗಿರುವ ರಾಮಮೂರ್ತಿ ಯವರು ಇಲ್ಲಿಯ ಬಿಜೆಪಿ ಮುಖ್ಯ ಕಚೇರಿಯಲ್ಲಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್​ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ  ಸೇರ್ಪಡೆಗೊಂಡರು.

ಬಿಜೆಪಿ ಸೇರಿದ ಕೆ ಸಿ ರಾಮಮೂರ್ತಿ ಯವರು ಬಿಜೆಪಿ ಪ್ರಾಥಮಿಕ ಸದಸ್ಯತ್ವವನ್ನು ಪಡೆದುಕೊಂಡರು. ಒಂದು ವಾರದ ಹಿಂದೆ ಸೇರ್ಪಡೆ ಯಾಗಬೇಕಾಗಿತ್ತು ಅನಿವಾರ್ಯ ಕಾರಣಗಳಿಂದ ಕಾರ್ಯಕ್ರಮ ಮುಂದೆ ಹೋಗಿತ್ತು ಎನ್ನಲಾಗಿದೆ. ಬಿಜೆಪಿ ಸೇರ್ಪಡೆ ಕುರಿತು ಆ ಪಕ್ಷದ ರಾಷ್ಟ್ರೀಯ ನಾಯಕರೊಂದಿಗೆ ಹಲವು ದಿನಗಳ ಹಿಂದೆ  ಕೆ ಸಿ ರಾಮೂರ್ತಿ ಯವರು ಮಾತುಕತೆ ನಡೆಸಿದ್ದರು. ಇಂದು ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉಪಸ್ಥಿತರಿದ್ದರು.

ಸೇರ್ಪಡೆ ಬಳಿಕ ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದ ಕೆ.ಸಿ.‌ರಾಮಮೂರ್ತಿ, ಅತ್ಯಂತ ಸಂತೋಷದಿಂದ ಬಿಜೆಪಿ ಸೇರುತ್ತಿದ್ದೇನೆ ಎರಡೂವರೆ ವರ್ಷದಿಂದ ಕೈಲಾದಷ್ಟು ಕೆಲಸ ಮಾಡಿದ್ದೇನೆ. ಆದರೂ ಬಹಳ ಬಾರಿ ಆತ್ಮವಂಚನೆ ಮಾಡಿಕೊಂಡಿದ್ದೆ. ಈಗ ದೇಶದ ಬೆಳವಣಿಗೆ ದೃಷ್ಟಿಯಿಂದ ಬಿಜೆಪಿ ಸೇರುತ್ತಿದ್ದೇನೆ. ಮೊದಲು ದೇಶದಲ್ಲಿ ಈ ರೀತಿಯ ನಾಯಕ ಇರಲಿಲ್ಲ. ಈಗ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಮೆಚ್ಚಿ ಬಿಜೆಪಿ ಸೇರಿದ್ದೇನೆ. ಪಕ್ಷ ವಹಿಸುವ ಕೆಲಸ ಮಾಡಲು ಸಿದ್ದನಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ : ನನ್ನ ಮನೆಗೆ ಐಟಿ ರೇಡ್ ಆದರೆ ಯಡಿಯೂರಪ್ಪರ ದಾಖಲೆಗಳು ಸಿಗುತ್ತವೆ: ಕುಮಾರಸ್ವಾಮಿ 

ಬೆಂಗಳೂರು ನಿವಾಸಿಯಾಗಿರುವ ಕೆ.ಸಿ.ರಾಮಮೂರ್ತಿ ಮಾಜಿ ಐಪಿಎಸ್ ಅಧಿಕಾರಿಯಾಗಿದ್ದಾರೆ. ಸಿಎಆರ್​ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್, ಯುವಜನ ಸೇವೆ, ಸಂಚಾರ ಮತ್ತು ರಸ್ತೆ ಸುರಕ್ಷತೆಯ ಆಯುಕ್ತರು, ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತರಾಗಿ ಸೇವೆ ಸಲ್ಲಿಸಿರುವ ಕೆ.ಸಿ.ರಾಮಮೂರ್ತಿ ಅವರನ್ನು ಕಾಂಗ್ರೆಸ್​ 2016ರಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಮೊದಲ ಬಾರಿಗೆ ಆಯ್ಕೆ ಮಾಡಿತ್ತು. ಇದೀಗ ದಿಢೀರ್ ​ಆಗಿ ರಾಮಮೂರ್ತಿ ಅವರು ತಮ್ಮ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್​ಗೆ ಆಘಾತ ನೀಡಿದ್ದಾರೆ.

(ವರದಿ: ಧರಣೀಶ್ ಬೂಕನಕೆರೆ)

First published: October 22, 2019, 2:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading