ಬೆಂಗಳೂರು: ಚುನಾವಣೆಯಲ್ಲಿ ಬಿಜೆಪಿ ನಾಯಕರ (BJP Leaders) ಹೇಳಿಕೆ ಮತ್ತು ಭಾಷಣ ಖಂಡಿಸಿ ರಾಜ್ಯ ಕಾಂಗ್ರೆಸ್ ಇಂದು (Karnataka Congress) ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಪೊಲೀಸ್ ಠಾಣೆಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar), ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್ದೀಪ್ ಸುರ್ಜೇವಾಲಾ (Randeep Surjewala) ದೂರು ದಾಖಲಿಸಿದರು. ಸಚಿವ ವಿ ಸೋಮಣ್ಣ (V Somanna) ಚಾಮರಾಜನಗರ ಜೆಡಿಎಸ್ ಅಭ್ಯರ್ಥಿಗೆ ಬೆದರಿಕೆ ಹಾಗೂ ಆಮಿಷವೊಡಿದ್ದಾರೆ ಎನ್ನಲಾದ ಆಡಿಯೋ ಲೀಕ್ ಆಗಿತ್ತು. ಚುನಾವಣೆ ಪ್ರಚಾರದ ವೇಳೆ ಅಮಿತ್ ಶಾ (Amit Shah), ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗಲಾಟೆಗಳು, ಘರ್ಷಣೆಗಳು, ಗಲಭೆಗಳು ಹೆಚ್ಚಾಗುತ್ತವೆ ಎಂಬ ಹೇಳಿಕೆ ನೀಡಿದ್ದರು. ಈ ಇಬ್ಬರ ಹೇಳಿಕೆ ಖಂಡಿಸಿ ಇದೀಗ ಕಾಂಗ್ರೆಸ್ ದೂರು ದಾಖಲಿಸಿದೆ.
ದೂರು ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರಣ್ದೀಪ್ ಸುರ್ಜೇವಾಲಾ, ನಾವು ಇವತ್ತು ಒಂದು ಗಂಭೀರ ವಿಚಾರದ ಬಗ್ಗೆ ದೂರು ನೀಡಿದ್ದೇವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ದೂರು ನೀಡಿದ್ದೇವೆ. ಏಪ್ರಿಲ್ 25 ರಂದು ಚುನಾವಣೆ ಭಾಷಣದ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೋಮುಗಲಭೆಗಳು ಆಗುತ್ತವೆ ಅಂತ ಅಮಿತ್ ಶಾ ಹೇಳಿದ್ದಾರೆ. ಈ ಹೇಳಿಕೆ ಸಮುದಾಯಗಳ ನಡುವೆ ಘರ್ಷಣೆ ಉಂಟು ಮಾಡುತ್ತವೆ ಎಂದು ಹೇಳಿದರು.
ಅಮಿತ್ ಶಾ ಬಂಧನಕ್ಕೆ ಸುರ್ಜೇವಾಲಾ ಒತ್ತಾಯ
ಬಿಜೆಪಿ 40 ಸೀಟ್ ಗಿಂತ ಕಡಿಮೆ ಸ್ಥಾನವನ್ನ ಈ ಚುನಾವಣೆಯಲ್ಲಿ ಪಡೆಯಲಿದೆ. ಇದರಿಂದ ವಿಚಲಿತ ಗೊಂಡಿರುವ ಅಮಿತ್ ಶಾ ಈ ರೀತಿ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ದೂರು ನೀಡಲಾಗಿದೆ. ಕೂಡಲೇ ಅವರನ್ನ ಬಂಧನ ಮಾಡಬೇಕು ಎಂದು ರಣ್ದೀಪ್ ಸುರ್ಜೇವಾಲಾ ಒತ್ತಾಯಿಸಿದರು.
ಶಾ ಅವರನ್ನ ಬ್ಯಾನ್ ಮಾಡಬೇಕು
ಅಮಿತ್ ಶಾ ಮತದಾರರನ್ನ ಹೆದರಿಸಿ ಕಾಂಗ್ರೆಸ್ಗೆ ವೋಟ್ ನೀಡಬೇಡಿ ಅನ್ನೋದು ಅವರ ಹೇಳಿಕೆ ಉದ್ದೇಶ. ಕೇಂದ್ರ ಗೃಹ ಸಚಿವರ ಹೇಳಿಕೆ ನಿಜಕ್ಕೂ ಆಶ್ಚರ್ಯವನ್ನುಂಟು ಮಾಡಿದೆ. ಚುನಾವಣೆ ಆಯೋಗ ಅಮಿತ್ ಶಾ ಅವರನ್ನು ಪ್ರಚಾರದಲ್ಲಿ ಭಾಗಿಯಾಗದಂತೆ ಬ್ಯಾನ್ ಮಾಡಬೇಕು ಎಂದು ಡಿಕೆ ಶಿವಕುಮಾರ್ ಆಗ್ರಹಿಸಿದರು.
ಇದನ್ನೂ ಓದಿ: Praveen Nettar ಕನಸಿನ ಗೂಡಿಗೆ ಗೃಹ ಪ್ರವೇಶ; ಕೊಟ್ಟ ಮಾತು ಉಳಿಸಿಕೊಂಡ ಬಿಜೆಪಿ
ಇದೇ ಹೇಳಿಕೆಯನ್ನ ಬೇರೆ ಯಾರಾದ್ರೂ ಮಾಡಿದ್ರೆ ದೊಡ್ಡ ಕ್ರಮ ತೆಗೆದುಕೊಳ್ಳುತ್ತಿದ್ದರು. ಸಣ್ಣ ಹೇಳಿಕೆಗೆ ನಮ್ಮ ನಾಯಕರ ಮೇಲೆ ಏನೆಲ್ಲಾ ಕ್ರಮಗಳು ಆಗಿವೆ ಅನ್ನೋದು ನಿಮಗೆ ಗೊತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ