KN Rajanna: ದೇವೇಗೌಡರ ಬಗ್ಗೆ ಕೆ ಎನ್ ರಾಜಣ್ಣ ನೀಡಿದ ಹೇಳಿಕೆಗೆ ಆಕ್ರೋಶ

ಜನರನ್ನು  ಉದ್ದೇಶಿಸಿ ಮಾತನಾಡುವ ವೇಳೆ ರಾಜಣ್ಣ ಹೇಳಿಕೆ (Rajanna Statement) ನೀಡಿದ್ದು, ಮಾಜಿ ಪ್ರಧಾನಿಗಳ ಬಗ್ಗೆ ಈ ರೀತಿ ಹೇಳಿಕೆ ನೀಡಿದ್ದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಕೆ ಎನ್ ರಾಜಣ್ಣ ಮತ್ತು ಹೆಚ್ ಡಿ ದೇವೇಗೌಡ

ಕೆ ಎನ್ ರಾಜಣ್ಣ ಮತ್ತು ಹೆಚ್ ಡಿ ದೇವೇಗೌಡ

  • Share this:
ಮಾಜಿ ಶಾಸಕರಾಗಿರುವ ಕೆ.ಎನ್. ರಾಜಣ್ಣ (Former MLA KN Rajanna) ಅವರು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ (Former Prime Minister HD Devegowda)) ಬಗ್ಗೆ ಹೇಳಿಕೆ ನೀಡಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ರಾಜಣ್ಣ ನೀಡಿದ ಹೇಳಿಕೆಯ ವಿಡಿಯೋಗೆ (Video) ಸೋಶಿಯಲ್ ಮೀಡಿಯಾದಲ್ಲಿ (Social Media) ಆಕ್ರೋಶ ವ್ಯಕ್ತವಾಗಿದೆ. ತುಮಕೂರು ಜಿಲ್ಲೆಯ ಮಧುಗಿರಿ (Madhugiri, Tumakuru) ತಾಲ್ಲೂಕಿನ ಕಾವಣದಾಲ ಕಾರ್ಯಕ್ರಮಕ್ಕೆ ಆಗಮಿಸಿ ಜನರನ್ನು  ಉದ್ದೇಶಿಸಿ ಮಾತನಾಡುವ ವೇಳೆ ರಾಜಣ್ಣ ಹೇಳಿಕೆ (Rajanna Statement) ನೀಡಿದ್ದು, ಮಾಜಿ ಪ್ರಧಾನಿಗಳ ಬಗ್ಗೆ ಈ ರೀತಿ ಹೇಳಿಕೆ ನೀಡಿದ್ದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಈಗ ದೇವೇಗೌಡರು ಇಬ್ಬರ ಮೇಲೆ ಹಾಕಿಕೊಂಡು ಹೋಗ್ತಾರೆ. ನಾಲ್ವರ ಮೇಲೆ ಹೋಗುವ ಕಾಲ ಹತ್ತಿರದಲ್ಲಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇದು ನನ್ನ‌ ಕೊನೆಯ ಚುನಾವಣೆಯಾಗಿದೆ. ಶೋಕಿ ಮತ್ತು ಮುಖಸ್ಥುತಿಗೆ ರಾಜಕಾರಣ ಮಾಡೋದು ಬೇಡ. ನಾನು ಎಂಎಲ್ಎ ಆದರೆ ನೀವೆಲ್ಲಾ  ಶಾಸಕರು ಇದ್ದಂತೆ. ನೀವು ಹೋರಾಟ ಮಾಡಿ ನಾನು ಎಂಎಲ್ಎ ಆದರೆ ಸುಮ್ಮನೆ ನಾಮಕಾವಸ್ಥೆಗೆ ಇರ್ತೀನಿ. ಏನಾದ್ರೂ ಕೆಲಸ ಆಗಬೇಕಾದ್ರೆ ನೀವೇ ಅಧಿಕಾರಿಗಳನ್ನ ಕೇಳುವ ಶಕ್ತಿ ನಿಮಗೆ ಬರುತ್ತೆ ಎಂದರು.

ಇದು ನನ್ನ ಕೊನೆಯ ಚುನಾವಣೆ

ಮುಂದಿನ ದಿನಗಳಲ್ಲಿ ಪ್ರತಿ ಮನೆ ಬಾಗಿಲಿಗೂ ಬಂದು ಮತ ಕೇಳುತ್ತೇನೆ. ಇದು ನನ್ನ ಕೊನೆ ಎಲೆಕ್ಷನ್. ಮುಂದೆ ನೀವು ನಿಂತ್ಕೋ ಅಂದ್ರೂ ನಿಲ್ಲಲ್ಲ. ನನಗೆ ಆಗಲೇ 72 ವರ್ಷ,77 ಆದ್ರೆ ಕೈಕಾಲು ಅಲ್ಲಾಡುತ್ತಿರುತ್ತದೆ. ಸರ್ಕಾರ ಬಂದ್ರೇ ನೂರಕ್ಕೆ ನೂರರಷ್ಟು ಮಂತ್ರಿ ಆಗುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:  Karwara: ನಗರಸಭೆಯಲ್ಲಿ ಗೋಲ್ಮಾಲ್! ಕಾಮಗಾರಿ ಮುಗಿದ‌ ಮೇಲೆ ಟೆಂಡರ್ ಯಾಕೆ ಸ್ವಾಮಿ?

ಡಿಕೆಶಿ ಜಾಮೀನು ಅರ್ಜಿ ಮುಂದೂಡಿಕೆ

ಅಕ್ರಮ ಹಣ ಸಂಪಾದನೆ ಮತ್ತು ವರ್ಗಾವಣೆ ಪ್ರಕರಣ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ಸೇರಿದಂತೆ ಐವರು ಜಾರಿ ನಿರ್ದೇಶನಾಲಯದ (Enforcement Directorate) ವಿಶೇಷ ನ್ಯಾಯಾಲಯದ (Court) ಮುಂದೆ ಹಾಜರಾಗಿದ್ದರು.

ಇಡಿ ವಕೀಲರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಡಿಕೆಶಿ ಪರ ವಕೀಲರು, ಇದೇ ಕೋರ್ಟ್ ಕಾರ್ತಿ ಚಿದಂಬರಂಗೆ ಜಾಮೀನು ನೀಡಿದೆ. ಹಾಗಾಗಿ ನಮ್ಮ ಕಕ್ಷಿದಾರರಿಗೂ ಜಾಮೀನು ನೀಡಬಹುದು ಎಂದು ಅರ್ಜಿ ಸಲ್ಲಿಕೆ ಮಾಡಿದರು. ಇತ್ತ ಜಾಮೀನು ಅರ್ಜಿಗೆ ಅಕ್ಷೇಪ ಸಲ್ಲಿಸಲು ಇಡಿ ವಕೀಲರು ಸಮಯಾವಕಾಶ ಬೇಕೆಂದು ನ್ಯಾಯಾಧೀಶರ ಬಳಿ ಮನವಿ ಮಾಡಿದರು. ಈ ಹಿನ್ನೆಲೆ ನ್ಯಾಯಾಲಯ ವಿಚಾರಣೆಯನ್ನು ಜುಲೈ 30ಕ್ಕೆ ಮುಂದೂಡಿತು.

ಕಾಂಗ್ರೆಸ್ 130ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದು ನಿಶ್ಚಿತ: ಸಿದ್ದರಾಮಯ್ಯ

ನಾವು 150 ಸ್ಥಾನಗಳನ್ನು ಗೆಲ್ಲಬೇಕು ಎಂದು ಗುರಿ ಇಟ್ಟುಕೊಂಡಿದ್ದೇವೆ. ಸದ್ಯ ಕಾಂಗ್ರೆಸ್ ಪಕ್ಷ (Congress Party) 130ಕ್ಕೂ ಅಧಿಕ ಸ್ಥಾನ ಗೆಲ್ಲುವ ನಿರೀಕ್ಷೆಯಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ (Opposition Leader Siddaramaiah) ಹೇಳಿದರು.

ಇದನ್ನೂ ಓದಿ:  GST ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಆಗುತ್ತಿದ್ದರೂ ಬಾಯಿ ಬಿಡದ ಬೊಮ್ಮಾಯಿ‌; ಸಿದ್ದರಾಮಯ್ಯ ಕಿಡಿ

ಕಾಂಗ್ರೆಸ್ ಸಮೀಕ್ಷೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ (Chief Minister Basavaraja Bommai) ನೀಡಿರುವ ಹೇಳಿಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, 'ಸಿಎಂ ಅಭಿಪ್ರಾಯ ಬೇರೆ ಇರುತ್ತೆ. ಜನರ ಅಭಿಪ್ರಾಯ ಬೇರೆ ಇರುತ್ತೆ. ಮಾದರಿ ಸಮೀಕ್ಷೆ ಎಂದರೆ ಜನರ ಅಭಿಪ್ರಾಯ ಸಂಗ್ರಹಿಸಲಾಗಿರುತ್ತೆ. ಅಂದರೆ ಮುಖ್ಯಮಂತ್ರಿಗಳು ಜನರ ಅಭಿಪ್ರಾಯ ಒಪ್ಪಿಕೊಳ್ಳಲ್ಲ ಎಂದಾಯಿತು. ಅದೇನೇ ಇದ್ದರೂ ನಾವು ಸ್ಪಷ್ಟಬಹುಮತದ ಮೂಲಕ ಗೆಲ್ಲುವುದನ್ನು ಯಾರಿಂದಲೂ ಅಲ್ಲಗೆಳೆಯಲು ಆಗಲ್ಲ' ಎಂದರು.
Published by:Mahmadrafik K
First published: