BJP Twitter War| ಬಿ.ಎಸ್​. ಯಡಿಯೂರಪ್ಪ ಬಗ್ಗೆ ಕಾಂಗ್ರೆಸ್​ ಮೊಸಳೆ ಕಣ್ಣೀರು ಹರಿಸುವ ಅಗತ್ಯವಿಲ್ಲ; ಟ್ವಿಟರ್​ನಲ್ಲಿ ಬಿಜೆಪಿ ಕಿಡಿ

ಕಪಿಲ್‌ ಸಿಬಲ್‌ ಅವರು ನಕಲಿ ಗಾಂಧಿ ಕುಟುಂಬದ ವಿರುದ್ಧ ಮಾತನಾಡಿದರು ಎನ್ನುವ ಕಾರಣಕ್ಕೆ ಕಪಿಲ್‌ ಸಿಬಲ್‌ ಮನೆ ಮೇಲೆ ತನ್ನ ಕಾರ್ಯಕರ್ತರಿಂದ ದಾಳಿ ಮಾಡಿಸುತ್ತದೆ. ನಿಮ್ಮದು ಯಾವ ಟ್ರೆಂಡ್‌? ಎಂದು ಕಾಂಗ್ರೆಸ್​ ಅನ್ನು ಬಿಜೆಪಿ ಪ್ರಶ್ನೆ ಮಾಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಂಗಳೂರು (ಅಕ್ಟೋಬರ್​ 11); ರಾಜ್ಯದ ಪ್ರಬಲ ಬಿಜೆಪಿ ನಾಯಕ ಬಿ.ಎಸ್​. ಯಡಿಯೂರಪ್ಪ (BS Yeddyurappa). ನಾಲ್ಕು ಬಾರಿ ಸಿಎಂ ಆಗಿದ್ದರೂ ಸಹ ಅವರು ಪೂರ್ಣ ಅವಧಿಗೆ ಅಧಿಕಾರವನ್ನು ನಿರ್ವಹಿಸಿರಲಿಲ್ಲ. ವಯಸ್ಸಿನ ಕಾರಣಕ್ಕೆ ಇದೀಗ ಅವರನ್ನು ಅಧಿಕಾರದಿಂದ ಇಳಿಸಿ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಸಿಎಂ ಸ್ಥಾನಕ್ಕೆ ಏರಿಸಲಾಗಿದೆ. ಇದು ಸಾಮಾನ್ಯವಾಗಿ ಯಡಿಯೂರಪ್ಪ ಅವರಿಗೂ ಸಹ ಅಸಮಾಧಾನಕ್ಕೆ ಕಾರಣವಾಗಿರುವುದು ಸುಳ್ಳಲ್ಲ. ಆದರೆ, ಕಾಂಗ್ರೆಸ್ (Congress) ನಾಯಕರು​ ಕಳೆದ ಎರಡು ತಿಂಗಳಿನಿಂದ "ಬಿ.ಎಸ್​. ಯಡಿಯೂರಪ್ಪ ಅವರಿಗೆ ಬಿಜೆಪಿ ಮೋಸ ಮಾಡಿದೆ" ಎಂದು ಮಾತನಾಡುತ್ತಿದ್ದಾರೆ. ಬಿಜೆಪಿಯಲ್ಲಿ ಯಡಿಯೂರಪ್ಪ ಅವರಿಗೆ ಆಗಿರುವ ಅನ್ಯಾಯದ ಬಗ್ಗೆ ವಿಷಾಧ ವ್ಯಕ್ತಪಡಿಸುತ್ತಿ ದ್ದಾರೆ. ಆದರೆ, ಈ ಬಗ್ಗೆ ಇಂದು ಟ್ವಿಟರ್​ನಲ್ಲಿ ಕಿಡಿಕಾರಿರುವ ಬಿಜೆಪಿ (BJP), "ಯಡಿಯೂರಪ್ಪ ಬಗ್ಗೆ ಕಾಂಗ್ರೆಸ್​ನವರು ಮೊಸಳೆ ಕಣ್ಣೀರು ಹರಿಸುವ ಅಗತ್ಯ ಇಲ್ಲ. ಮೊದಲು ನಿಮ್ಮ ಪಕ್ಷದಲ್ಲಿರುವ ಹಿರಿಯರನ್ನು ಗೌರವಯುತವಾಗಿ ನಡೆಸಿಕೊಳ್ಳಿ" ಎಂದು ಕಿಡಿಕಾರಿದೆ.

    ಇಂದು ಬೆಳಗ್ಗೆಯೇ ಟ್ವೀಟ್​ ಮಾಡಿ ಕಾಲೆಳೆದಿದ್ದ ಕಾಂಗ್ರೆಸ್​, "ಯಡಿಯೂರಪ್ಪ ಅವರನ್ನು ಬಿಜೆಪಿ ಸದಾ ಮಲತಾಯಿ ಮಗನಂತೆ ನಡೆಸಿಕೊಂಡಿದೆ. ಅಧಿಕಾರದಲ್ಲಿದ್ದಾಗಲೂ ಬಿಜೆಪಿ ಕಾಡಿತ್ತು, ಅಧಿಕಾರ ಕಳೆದುಕೊಂಡ ಮೇಲೂ ಕಾಡುತ್ತಿದೆ. ಮುಂದಿನ ಚುನಾವಣೆಯೊಳಗೆ ಬಿಎಸ್​ವೂ ಅವರನ್ನು ಸಂಪೂರ್ಣ ಮುಗಿಸುವ 'ಟಾರ್ಗೆಟ್ ಬಿಎಸ್​ವೈ' ಯೋಜನೆಯನ್ನು ಬಿಜೆಪಿ ಹಮ್ಮಿಕೊಂಡಿದೆ. ಪಕ್ಷ ಕಟ್ಟಿದವರನ್ನು ಮುಗಿಸುವುದು ಬಿಜೆಪಿ ಹೊಸ ಟ್ರೆಂಡ್" ಎಂದು ವ್ಯಂಗ್ಯವಾಡಿತ್ತು.



    ಆದರೆ, ಮಾಜಿ ಸಿಎಂ ಯಡಿಯೂರಪ್ಪ ಬಗ್ಗೆ ವಿಷಾಧನೆ ವ್ಯಕ್ತಪಡಿಸಿದ ಕಾಂಗ್ರೆಸ್​ನ ಟ್ವೀಟ್​ಗೆ ಸರಣಿ ಮರು ಟ್ವೀಟ್ ಮೂಲಕ ಉತ್ತರ ನೀಡಿರುವ ಬಿಜೆಪಿ, "ಯಡಿಯೂರಪ್ಪ ಅವರ ಬಗ್ಗೆ ಕಾಂಗ್ರೆಸ್​ ಮೊಸಳೆ ಕಣ್ಣೀರು ಸುರಿಸಬೇಕಾದ ಅಗತ್ಯವಿಲ್ಲ. ರಾಜ್ಯ ಬಿಜೆಪಿಯ ಸರ್ವೋಚ್ಚ ನಾಯಕರಾಗಿ ಅವರು ಪಕ್ಷದಲ್ಲಿ ತಮ್ಮದೆ ಆದ ಸ್ಥಾನಮಾನ ಹೊಂದಿದ್ದಾರೆ. ನಕಲಿ ಗಾಂಧಿ ಕುಟುಂಬದ ವಿರುದ್ಧ ತಿರುಗಿ ಬಿದ್ದಿರುವ #G23 ನಾಯಕರ ಯೋಗಕ್ಷೇಮದ ಬಗ್ಗೆ ನೀವು ಮೊದಲು ಲಕ್ಷ್ಯ ವಹಿಸಿ" ಎಂದು ಕಿಡಿಕಾರಿದೆ.



    ಮತ್ತೊಂದು ಟ್ವೀಟ್​ನಲ್ಲಿ, "ಕಾಂಗ್ರೆಸ್‌ ಪಕ್ಷ ಒಬ್ಬೊಬ್ಬ ಹಿರಿಯ ನಾಯಕರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತದೆ. ಹಿರಿಯ ನಾಯಕ ಕಪಿಲ್‌ ಸಿಬಲ್‌ ಅವರು ನಕಲಿ ಗಾಂಧಿ ಕುಟುಂಬದ ವಿರುದ್ಧ ಮಾತನಾಡಿದರು ಎನ್ನುವ ಕಾರಣಕ್ಕೆ ಕಪಿಲ್‌ ಸಿಬಲ್‌ ಮನೆ ಮೇಲೆ ತನ್ನ ಕಾರ್ಯಕರ್ತರಿಂದ ದಾಳಿ ಮಾಡಿಸುತ್ತದೆ. ನಿಮ್ಮದು ಯಾವ ಟ್ರೆಂಡ್‌?" ಎಂದು ಕಾಂಗ್ರೆಸ್​ ಅನ್ನು ಪ್ರಶ್ನೆ ಮಾಡಿದೆ.

    ಇದನ್ನೂ ಓದಿ: Karnataka SSLC Exam Result: ಎಸ್​ಎಸ್​ಎಲ್​ಸಿ ಪೂರಕ ಫಲಿತಾಂಶ ಪ್ರಕಟ, ಶೇ.55.54ರಷ್ಟು ವಿದ್ಯಾರ್ಥಿಗಳು ಪಾಸ್

    ಒಟ್ಟಾರೆ ಹಿರಿಯ ನಾಯಕರನ್ನು ಗೌರವಯುತವಾಗಿ ನಡೆಸಿಕೊಳ್ಳುವ ಬಗ್ಗೆ ಎರಡೂ ಪಕ್ಷಗಳ ನಡುವೆ ವಾಗ್ವಾದಗಳು ನಡೆಯುತ್ತಲೇ ಇದೆ. ಕಳೆದ ಎರಡು ತಿಂಗಳಿನಿಂದ ಟ್ವಿಟರ್​ನಲ್ಲಿ ಪರಸ್ಪರ ಛೀಮಾರಿ ಹಾಕಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ, ಈ ವಾಗ್ವಾದ ಮುಂದಿನ ದಿನಗಳಲ್ಲಿ ಯಾವ ರೀತಿಯ ತಿರುವು ತೆಗೆದುಕೊಳ್ಳುತ್ತದೆ? ಎಂಬುದನ್ನು ಕಾದುನೋಡಬೇಕಾಗಿದೆ.
    Published by:MAshok Kumar
    First published: