ಬಾಗಲಕೋಟೆ:ಕಾಂಗ್ರೆಸ್ (Congress) ಜಾತಿ ಆಧಾರದ ಮೇಲೆ ಯಾವತ್ತೂ ಸಿಎಂ ಆಯ್ಕೆ ಮಾಡುವುದಿಲ್ಲ. ಆ ಕಾಲಕ್ಕೆ ಯಾರು ಸಮರ್ಥರಿದ್ದಾರೋ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುತ್ತಾರೆ ಅಂತ ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್ (G. Parameshwar) ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ದಲಿತ ಸಿಎಂ (Dalit Chief Minister) ಆಗಬೇಕು ಅಂತ ಆಯಾ ಸಮುದಾಯದವರು ಅಭಿಲಾಷೆ ಪಡುತ್ತಾರೆ. ಅವರು ಆಸೆ ಪಡುವುದು ಸಹಜ ಅದನ್ನು ತಡೆಯುವುದಕ್ಕೆ ಯಾರಿಗೂ ಸಾಧ್ಯವಿಲ್ಲ. ದುರ್ದೈವ ಅಂದರೆ ಇತ್ತೀಚಿಗೆ ಜಾತಿ ಆಧಾರದ ಮೇಲೆ ರಾಜಕಾರಣ (Politics) ನಡೆಯುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಸನ್ನಿವೇಶ ಹಾಗೇ ಇರುವಾಗಿ ಅವರ ಕಷ್ಟ ಸುಖ ಕೇಳಬೇಕಲ್ಲ. ಹೀಗಾಗಿ ಡಿ.ಕೆ. ಶಿವಕುಮಾರ್ (D.K.Shivakumar) ಅವರು ಪಕ್ಷದ ಅಧ್ಯಕ್ಷರಾಗಿ ತಮ್ಮ ಸಮುದಾಯದ ಬೆಂಬಲ ಕೋರುವುದು ತಪ್ಪಲ್ಲ ಎಂದು ಹೇಳಿದ್ದಾರೆ.
ದಲಿತ ಸಿಎಂ ವಿಚಾರವಾಗಿ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಅನಗವಾಡಿ ಗ್ರಾಮದಲ್ಲಿ ಮಾತನಾಡಿದ ಅವರು, ಆಯಾ ಸಮುದಾಯವರು ತಮ್ಮವರು ಸಿಎಂ ಆಗಬೇಕು ಅಂತಾರೆ. ದಲಿತ ಸಿಎಂ ಆಗಬೇಕು ಅಂತ ಆಯಾ ಸಮುದಾಯದವರು ಅಭಿಲಾಷೆ ಪಡುತ್ತಾರೆ. ಅವರು ಆಸೆ ಪಡುವುದು ಸಹಜ ಅದನ್ನು ತಡೆಯುವುದಕ್ಕೆ ಯಾರಿಗೂ ಸಾಧ್ಯವಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಬಹುಮತ ಬಂದ ಮೇಲೆ ಯಾರು ಸಮರ್ಥರಿರುತ್ತಾರೋ ಅವರನ್ನು ಹೈಕಮಾಂಡ್ ಸಿಎಂ ಮಾಡುತ್ತದೆ ಎಂದಿದ್ದಾರೆ.
ದುರ್ದೈವ ಅಂದರೆ ಇತ್ತೀಚಿಗೆ ಜಾತಿ ಆಧಾರದ ಮೇಲೆ ರಾಜಕಾರಣ ನಡೆಯುತ್ತಿದೆ. ಇದು ನಿಜಕ್ಕೂ ದುರ್ದೈವ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಸನ್ನಿವೇಶ ಹಾಗೇ ಇರುವಾಗ ಅವರ ಕಷ್ಟ ಸುಖ ಕೇಳಬೇಕಲ್ಲ. ಹೀಗಾಗಿ ಡಿ.ಕೆ. ಶಿವಕುಮಾರ್ ಅವರು ಪಕ್ಷದ ಅಧ್ಯಕ್ಷರಾಗಿ ತಮ್ಮ ಸಮುದಾಯದ ಬೆಂಬಲ ಕೋರುವುದು ತಪ್ಪಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಬರೀ ದಲಿತರನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಮುಖ್ಯಮಂತ್ರಿಯರನ್ನಾಗಿ ಮಾಡಲ್ಲ, ನಾವು ರಾಷ್ಟ್ರಪತಿ ಮಾಡಿದ್ದೇವೆ ಎನ್ನುವ ಬಿಜೆಪಿ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಸಣ್ಣ ಟೀಕೆ, ಟಿಪ್ಪಣಿಗಳಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ.
ನಾವು ದೇಶದಲ್ಲಿ ಮೂಲತಃ ಡಾ.ಅಂಬೇಡ್ಕರ್ ಅವರನ್ನು ಸಂವಿಧಾನ ರಚನೆಗೆ ಅಧ್ಯಕ್ಷರನ್ನಾಗಿ ಮಾಡಿದ್ದೇವು. ಇವತ್ತು ಪ್ರಪಂಚದ ಅತ್ಯಂತ ಶ್ರೇಷ್ಠ ಸಂವಿಧಾನ ರಚನೆ ಮಾಡಿದ್ದೇವೆ. ಇದಕ್ಕೆ ಕಾಂಗ್ರೆಸ್ ಡಾ.ಅಂಬೇಡ್ಕರ್ ಅವರಿಗೆ ಅವಕಾಶ ಕೊಟ್ಟಿತ್ತು. ಸಂವಿಧಾನದ ಅಡಿಯಲ್ಲೆ ನೀವು ಸಿಎಂ, ಗೌರರ್ನರ್, ರಾಷ್ಟ್ರಪತಿ ಮಾಡಬಹುದು. ನಿಮ್ಮನ್ನು ತಡೆಯುವವರು ಯಾರು ಇಲ್ಲ. ಪ್ರತಿಯೊಬ್ಬರಿಗೂ ಅವಕಾಶ ಇದೆ ಎಂದು ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಕೆಲ ಆಕಾಂಕ್ಷಿಗಳ ಟಿಕೆಟ್ ಘೋಷಣೆ ಮಾಡಿದ್ದಾರೆ ಎಂಬ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾರೋ ಬಂದು ನಮ್ಮ ಬಳಿ ಒಂದು ಅವಕಾಶ ಮಾಡಿಕೊಡಿ ಅಂತ ಕೇಳಿದರೆ, ಅದರಲ್ಲಿ ತಪ್ಪಿದಿಯಾ? ನಾನು ಅವರಿಗೆ ಅರ್ಜಿ ಹಾಕಬೇಡಿ ಅಂತ ಹೇಳುವುದಕ್ಕೆ ಆಗುತ್ತಾ? ಸಿದ್ದರಾಮಯ್ಯ ಯಾರನ್ನು ಘೋಷಣೆ ಮಾಡಿಲ್ಲ. ಕೆಲವೆಡೆ ಸಿಟ್ಟಿಂಗ್ ಎಂಎಲ್ಎ ಇದ್ದಾಗ, ಆ ಕ್ಷೇತ್ರಕ್ಕೆ ಸಿದ್ದರಾಮಯ್ಯ ಆಗಲಿ ಡಿಕೆಶಿ ಆಗಲಿ ಅಥವಾ ನಾನಾಗಲಿ ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಉದಯವಾಯ್ತು ಥರ್ಡ್ ಫ್ರಂಟ್; ಸಿಎಂ ಗಾದಿಗಾಗಿ ದಲಿತ ಅಸ್ತ್ರ..!
ಇತ್ತೀಚೆಗಷ್ಟೇ ಉಗ್ರ ಶಾರೀಕ್ ಪರ ಬ್ಯಾಟ್ ಬೀಸಿದ್ದ ಡಿ.ಕೆ. ಶಿವಕುಮಾಮಾರ್ ವಿರುದ್ಧ ಬಿಜೆಪಿಗರು ನಡೆಸುತ್ತಿರುವ ವಾಗ್ದಾಳಿ ಕುರಿತಂತೆ ಪರಮೇಶ್ವರ್ ಆಕ್ರೋಶ ಹೊರಹಾಕಿದ್ದು, ಉಗ್ರನ್ನ ಅಮಾಯಕ ಅಂತ ಡಿಕೆಶಿ ಹೇಳಿಲ್ಲ. ಅವರು ಹೇಳಿದ ಅರ್ಥನೇ ಬೇರೆ, ಆದರೆ ಇವರು ಟ್ವಿಸ್ಟ್ ಮಾಡಿ ಮಾತನಾಡುತ್ತಿದ್ದಾರೆ. ಉಗ್ರರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎನ್ನುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಇದೆಲ್ಲಾ ಅವರ ಸ್ಟ್ಯಾಟರ್ಜಿ ಎಂದು ಕಿಡಿಕಾರಿದ್ದಾರೆ.
ನಾವು ಹೇಳಿದ್ದನ್ನು ಜನಕ್ಕೆ ಬೇರೆ ರೀತಿ ತಿಳಿಸುವುದಕ್ಕೆ ಹೋಗುತ್ತಾರೆ. ಇದು ಹೊಸದೇನಲ್ಲ. ಬಹಳ ಹಿಂದೆನಿಂದಲೂ ನೋಡುತ್ತಲೇ ಇದ್ದೇವೆ. ನಮ್ಮ ಹೇಳಿಕೆಯನ್ನು ಬೇರೆ ರೀತಿಯಲ್ಲಿ ಅರ್ಥೈಸುವ ಹಾಗೆ ಜನಕ್ಕೆ ಹೇಳುತ್ತಾರೆ. ಇದು ಅವರ ಸ್ಟ್ಯಾಟರ್ಜಿ. ಅವರ ಹೇಳಿಕೆಗೆ ನಾವು ಕೌಂಟರ್ ಕೊಡುತ್ತೇವೆ, ಅದಕ್ಕೇನು ತೊಂದರೆ ಇಲ್ಲ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ