ಕಾಂಗ್ರೆಸ್ ಟಿಕೆಟ್ ಘೋಷಣೆ ಬೆನ್ನಲ್ಲೇ ರಾಜ್ಯದ ಹಲವೆಡೆ ಭಿನ್ನಮತ ಸ್ಫೋಟ: ದಾಂಧಲೆ, ಪಕ್ಷಾಂತರ ಪರ್ವ


Updated:April 16, 2018, 8:17 PM IST
ಕಾಂಗ್ರೆಸ್ ಟಿಕೆಟ್ ಘೋಷಣೆ ಬೆನ್ನಲ್ಲೇ ರಾಜ್ಯದ ಹಲವೆಡೆ ಭಿನ್ನಮತ ಸ್ಫೋಟ: ದಾಂಧಲೆ, ಪಕ್ಷಾಂತರ ಪರ್ವ

Updated: April 16, 2018, 8:17 PM IST
-ನ್ಯೂಸ್ 18
ಬೆಂಗಳೂರು(ಏ.16): ಅಂತೂಇಂತೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗಿದೆ. ಟಿಕೆಟ್ ಘೋಷಣೆ ಬೆನ್ನಲ್ಲೇ ಬಂಡಾಯದ ಬಿಸಿ ಪಕ್ಷಕ್ಕೆ ಜೋರಾಗಿಯೇ ತಟ್ಟಿದೆ. ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಕೆಲವೆಡೆ ಪ್ರತಿಭಟನೆ ಭುಗಿಲೆದ್ದಿದೆ. ಹಲವೆಡೆ ಜಿಲ್ಲಾ ಕಚೇರಿಗಳಿಗೆ ನುಗ್ಗಿ ದಾಂದಲೆ ನಡೆಸಿದರೆ ಮತ್ತೆ ಕೆಲವೆಡೆ ಪಕ್ಷಾಂತರ ಪರ್ವ ಶುರುವಾಗಿದೆ.

ಮಂಡ್ಯದಲ್ಲಿ ಅಂಬರೀಶ್​ಗೆ ಕಾಂಗ್ರೆಸ್‌ ಟಿಕೆಟ್​​ ನೀಡಿದ್ದಕ್ಕೆ ಗಾಣಿಗ ರವಿ‌ಕುಮಾರ್ ಬೆಂಬಲಿಗರ ಆಕ್ರೋಶ ಜೋರಾಗಿದೆ. ಮಂಡ್ಯದ ಕಾಂಗ್ರೆಸ್ ಕಚೇರಿಗೆ ನುಗ್ಗಿ ಕುರ್ಚಿ ಒಡೆದು ಹಾಕಿ ಭಾರೀ ದಾಂಧಲೆ ಮಾಡಿದ್ದಾರೆ. ಪಕ್ಷದಲ್ಲಿನ ಪಿಠೋಪಕರಣ ಧ್ವಂಸ ಮಾಡಿ, ಹೈಕಮಾಂಡ್ ಹಾಗೂ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಈ ನಡುವೆ ಟಿಕೆಟ್ ಘೋಷಣೆ ಆದರೂ ರೆಬೆಲ್ ಸ್ಟಾರ್ ಅಂಬರೀಶ್ ಸುಳಿವಿಲ್ಲ. ಯಾವ ಕಾಂಗ್ರೆಸ್​ ನಾಯಕರನ್ನೂ ಯಾವ ಬೆಂಬಲಿಗರನ್ನೂ ಭೇಟಿ ಮಾಡಿಲ್ಲ. ಪ್ರಚಾರದ ಬಗ್ಗೆ ತಲೆಯನ್ನೇ ಕೆಡಿಸಿಕೊಂಡಿಲ್ಲ.

ಇನ್ನೂ ಚಿಕ್ಕಮಗಳೂರು ಕಾಂಗ್ರೆಸ್‌ನಲ್ಲಿ ಭಿನ್ನಮತ ಭುಗಿಲೆದ್ದಿದೆ. ಗಾಯತ್ರಿ ಶಾಂತೇಗೌಡರಿಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬೆಂಬಲಿಗರು ಕಾಂಗ್ರೆಸ್ ಕಚೇರಿಗೆ ನುಗ್ಗಿ ಕುರ್ಚಿಗಳನ್ನು ಪುಡಿಪುಡಿ ಮಾಡಿದ್ದಾರೆ. ನೂರಾರು ಸಂಖ್ಯೆಯ ಬೆಂಬಲಿಗರಿಂದ ಭಾರೀ ದಾಂಧಲೆ ನಡೆದಿದೆ.

ಈ ಮಧ್ಯೆ, ಕಾಂಗ್ರೆಸ್​ನಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿರುವ ವಿ.ಆರ್. ಸುದರ್ಶನ್ ಬಿಜೆಪಿಗೆ ಸೇರುವ ಹಾದಿಯಲ್ಲಿದ್ದಾರೆ. ಕೋಲಾರ ನಗರ ಕ್ಷೇತ್ರದ ಆಕಾಕ್ಷಿಯಾಗಿದ್ದ ವಿ.ಆರ್. ಸುದರ್ಶನ್ ಅಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ಸಿಕ್ಕ ಹಿನ್ನೆಲೆಯಲ್ಲಿ ಕಮಲದತ್ತ ಮುಖ ಮಾಡಿದ್ದಾರೆ. ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ನವಲಗುಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆ.ಎನ್​. ಗಡ್ಡಿ ಕೆಪಿಸಿಸಿ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಪುಲಕೇಶಿನಗರ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಬಿ.ಪ್ರಸನ್ನ ಕುಮಾರ್ ಜೆಡಿಎಸ್‌ನತ್ತ ಮುಖ ಮಾಡಿದ್ದಾರೆ. ನನಗೆ ಕಾಂಗ್ರೆಸ್ ಪಕ್ಷ ಮೋಸ ಮಾಡಿದೆ. ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರು ನನ್ನ ಕೈಬಿಟ್ಟಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ನಂಬಿದ್ದೆ, ಅವರೂ ಟಿಕೆಟ್ ಕೊಡಿಸಲಿಲ್ಲ ಎಂದು ಅಸಮಧಾನ ತೋರ್ಪಡಿಸಿದ್ದಾರೆ.
First published:April 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...