ಕಾಂಗ್ರೆಸ್​ನ ಟಾರ್ಗೆಟ್ ಲೋಕಸಭೆ ಟೀಮ್​ಗಳಲ್ಲಿ ರಮ್ಯಾ, ಖರ್ಗೆ, ರಾಜೀವ್ ಗೌಡಗೆ ಸ್ಥಾನ


Updated:August 25, 2018, 5:57 PM IST
ಕಾಂಗ್ರೆಸ್​ನ ಟಾರ್ಗೆಟ್ ಲೋಕಸಭೆ ಟೀಮ್​ಗಳಲ್ಲಿ ರಮ್ಯಾ, ಖರ್ಗೆ, ರಾಜೀವ್ ಗೌಡಗೆ ಸ್ಥಾನ
ರಮ್ಯಾ
  • Share this:
- ಧರಣೀಶ್ ಬೂಕನಕೆರೆ, ನ್ಯೂಸ್18 ಕನ್ನಡ

ನವದೆಹಲಿ(ಆ. 25): ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧತೆಯಾಗಿ ಕಾಂಗ್ರೆಸ್ ಪಕ್ಷವು ಮೂರು ಸಮಿತಿಗಳನ್ನ ರಚಿಸಿದೆ. ಕೋರ್ ಗ್ರೂಪ್ ಕಮಿಟಿ, ಪಬ್ಲಿಸಿಟಿ ಕಮಿಟಿ ಮತ್ತು ಮ್ಯಾನಿಫೆಸ್ಟೋ ಕಮಿಟಿಗಳನ್ನ ರಚಿಸಿ ಚುನಾವಣೆಗೆ ಅಣಿಗೊಳಿಸಲಾಗುತ್ತಿದೆ. ಬಹುಮುಖ್ಯವೆಂದು ಪರಿಗಣಿಸಲಾಗಿರುವ ಕೋರ್ ಗ್ರೂಪ್​ನಲ್ಲಿ 9 ಮಂದಿ ಹಿರಿಯ ಕಾಂಗ್ರೆಸ್ಸಿಗರಿದ್ದಾರೆ. ಇದರಲ್ಲಿ ಮಲ್ಲಿಕಾರ್ಜುನ ಖರ್ಗೆ ಕೂಡ ಒಳಗೊಂಡಿದ್ದಾರೆ. ಎ.ಕೆ. ಆಂಟನಿ, ಗುಲಾಮ್ ನಬಿ ಆಜಾದ್, ಪಿ. ಚಿದಂಬರಂ, ವೇಣುಗೋಪಾಲ್, ಅಹ್ಮದ್ ಪಟೇಲ್​ರಂಥ ಘಟಾನುಘಟಿಗಳೂ ಈ ಸಮಿತಿಯಲ್ಲಿದ್ಧಾರೆ. ಪಕ್ಷಕ್ಕೆ ಸರ್ವತೋಮುಖವಾಗಿ ಮಾರ್ಗದರ್ಶನ ನೀಡುವ ಕೆಲಸವನ್ನು ಈ ಹಿರಿಯರು ಮಾಡಲಿದ್ದಾರೆ.

ಪಬ್ಲಿಸಿಟಿ ಕಮಿಟಿ ಅಥವಾ ಪ್ರಚಾರ ಸಮಿತಿಯಲ್ಲಿ ನಟಿ ರಮ್ಯಾ ಅಕಾ ದಿವ್ಯಾ ಸ್ಪಂದನಾ ಅವರು ಇತರ 11 ಮಂದಿಯೊಂದಿಗೆ ಸ್ಥಾನ ಪಡೆದಿದ್ದಾರೆ. ಈ ಸಮಿತಿಯಲ್ಲಿ ಯುವಕರು ಮತ್ತು ಹಿರಿಯರಿಗೂ ಜವಾಬ್ದಾರಿ ಕೊಡಲಾಗಿದೆ.

ಇನ್ನು, ಕಾಂಗ್ರೆಸ್​ನ ಪ್ರಣಾಳಿಕೆ ಸಮಿತಿಗೆ ರಾಜ್ಯಸಭಾ ಸದಸ್ಯ ಪ್ರೊ| ಎಂ.ವಿ. ರಾಜೀವ್ ಗೌಡ ಅವರನ್ನು ಸೇರಿಸಿಕೊಳ್ಳಲಾಗಿದೆ. ಈ ಸಮಿತಿಯಲ್ಲಿ 19 ಮಂದಿ ಇದ್ದು, ಎಲ್ಲರೂ ಪ್ರಬುದ್ಧ ಚಿಂತಕರೇ ಆಗಿದ್ದಾರೆ. ಸ್ಯಾಮ್ ಪಿತ್ರೋಡಾ, ಶಶಿ ತರೂರ್, ಪಿ. ಚಿದಂಬರಮ್, ಮೀನಾಕ್ಷಿ ನಟರಾಜನ್, ಜೈರಾಮ್ ರಮೇಶ್ ಮೊದಲಾದ ಅನುಭವಿ ಅರ್ಥಶಾಸ್ತ್ರಜ್ಞರು, ಹಣಕಾಸು ತಜ್ಞರು, ಆಡಳಿತಗಾರರು ಈ ಸಮಿತಿಯಲ್ಲಿದ್ದಾರೆ. ಇವರ ಮಧ್ಯೆ ರಾಜೀವ್ ಗೌಡ ಅವರಿಗೂ ಮಣೆ ಹಾಕಿರುವುದು ವಿಶೇಷ. ಬೆಂಗಳೂರಿನ ಐಐಎಂನಲ್ಲಿ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿರುವ ರಾಜೀವ್ ಗೌಡ ಅವರು ರಿಸರ್ವ್ ಬ್ಯಾಂಕ್​ನ ಮಂಡಳಿಯ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಹಲವು ವರ್ಷಗಳಿಂದ ಕಾಂಗ್ರೆಸ್ ಜೊತೆ ಜೋಡಿಸಿಕೊಂಡಿರುವ ರಾಜೀವ್ ಗೌಡ ಈ ಹಿಂದೆ ಪಕ್ಷದ ವಿವಿಧ ಸ್ತರಗಳಲ್ಲಿ ಪ್ರಣಾಳಿಕೆ ರಚನೆಯಲ್ಲಿ ರಚನಾತ್ಮಕ ಪಾತ್ರ ವಹಿಸಿದ್ದಾರೆ. 2014ರಿಂದಲೂ ಅವರು ಕಾಂಗ್ರೆಸ್​ನ ರಾಜ್ಯಸಭಾ ಸದಸ್ಯರಾಗಿ ಸಂಸತ್​ನಲ್ಲಿ ಗಂಭೀರ ಚರ್ಚೆಯಲ್ಲಿ ಭಾಗವಹಿಸಿದ್ದಾರೆ.

ಇನ್ನೊಂದೆಡೆ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಸೋಷಿಯಲ್ ಮೀಡಿಯಾ ಮುಖ್ಯಸ್ಥೆಯಾಗಿ ಹಲವು ಮಂದಿಯ ಹುಬ್ಬೇರಿಸಿದ್ದ ದಿವ್ಯಾ ಸ್ಪಂದನ ಅಕಾ ನಟಿ ರಮ್ಯಾ ಅವರು ಹಲವು ತಿಂಗಳಿಂದ ಬಹುತೇಕ ಅಜ್ಞಾತವಾಸಿಯಾಗಿಬಿಟ್ಟಿದ್ದರು. ಕಾಂಗ್ರೆಸ್​ನ ಸೋಷಿಯಲ್ ಮೀಡಿಯಾದಿಂದ ಅವರು ದೂರವಾಗಿದ್ದರು. ರಾಜಕೀಯದಿಂದ ಹಿಂದೆ ಸರಿದು ಅವರು ಸಿನಿಮಾ ಕ್ಷೇತ್ರಕ್ಕೆ ಮರಳುತ್ತಾರೆಂಬ ಗಟ್ಟಿ ಸುದ್ದಿ ಓಡಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ನ ಪ್ರಚಾರ ಸಮಿತಿಯಲ್ಲಿ ಸ್ಥಾನ ಪಡೆಯುವ ಮೂಲಕ ರಮ್ಯಾ ಅವರು ಭರ್ಜರಿಯಾಗಿ ಕಂಬ್ಯಾಕ್ ಮಾಡಿದ್ದಾರೆ.

ಕಾಂಗ್ರೆಸ್ ಪ್ರಚಾರ ಸಮಿತಿ:
ಭಕ್ತಚರಣ್ ದಾಸ್ಪ್ರವೀಣ್ ಚಕ್ರವರ್ತಿ
ಮಿಲಿಂದ್ ದೇವೋರಾ
ಕೇತ್ಕರ್ ಕುಮಾರ್
ಪವನ್ ಖೇರಾ
ವಿ.ಡಿ. ಸತೀಶನ್
ಆನಂದ್ ಶರ್ಮಾ
ಜೈವೀರ್ ಶೆರ್ಗಿಲ್
ರಾಜೀವ್ ಶುಕ್ಲಾ
ದಿವ್ಯಾ ಸ್ಪಂದನ (ರಮ್ಯಾ)
ರಣದೀಪ್ ಸುರ್ಜೆವಾಲ
ಪ್ರಮೋದ್ ತಿವಾರಿ

ಕೋರ್ ಗ್ರೂಪ್ ಕಮಿಟಿ
ಎ.ಕೆ. ಆಂಟನಿ
ಗುಲಾಮ್ ನಬಿ ಆಜಾದ್
ಪಿ. ಚಿದಂಬರಂ
ಅಶೋಕ್ ಗೆಹ್ಲೋಟ್
ಮಲ್ಲಿಕಾರ್ಜುನ ಖರ್ಗೆ
ಅಹ್ಮದ್ ಪಟೇಲ್
ಜೈರಾಮ್ ರಮೇಶ್
ರಣದೀಪ್ ಸುರ್ಜೆವಾಲ
ಕೆ.ಸಿ. ವೇಣುಗೋಪಾಲ್

ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆ ಸಮಿತಿ
ಮನಪ್ರೀತ್ ಬಾದಲ್
ಪಿ. ಚಿದಂಬರಂ
ಸುಷ್ಮಿತಾ ದೇವ್
ಪ್ರೊ| ರಾಜೀವ್ ಗೌಡ
ಭೂಪೇಂದ್ರ ಸಿಂಗ್ ಹೂಡಾ
ಜೈರಾಮ್ ರಮೇಶ್
ಸಲ್ಮಾನ್ ಖುರ್ಷಿದ್
ಬಿಂದು ಕೃಷ್ಣನ್
ಸೆಲ್ಜಾ ಕುಮಾರ್
ರಘುವೀರ್ ಮೀನಾ
ಪ್ರೊ. ರಾಘವೇಂದ್ರ ಮುಂಗೇಕರ್
ಮೀನಾಕ್ಷಿ ನಟರಾಜನ್
ರಜನಿ ಪಾಟೀಲ್
ಸ್ಯಾಮ್ ಪಿತ್ರೋಡಾ
ಸಚಿನ್ ರಾವ್
ತಾಮ್ರಧ್ವಜ್ ಸಾಹು
ಮುಕುಲ್ ಸಾಂಗ್ಮಾ
ಶಶಿ ತರೂರ್
ಲಲಿತೇಶ್ ತ್ರಿಪಾಠಿ
First published: August 25, 2018, 5:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading