HOME » NEWS » State » CONGRESS CHINA AND PAKISTAN BEHIND THE DELHI FARMERS RALLY VIOLENCE SAYS BJP MLA BASANAGOUDA PATIL YATNAL SCT

ದೆಹಲಿ ರೈತರ ಹಿಂಸಾಚಾರಕ್ಕೆ ಕಾಂಗ್ರೆಸ್, ಪಾಕಿಸ್ತಾನ, ಚೀನಾದಿಂದ ಫಂಡಿಂಗ್; ಯತ್ನಾಳ್ ಗಂಭೀರ ಆರೋಪ

ದೆಹಲಿಯ ರೈತರ ಪ್ರತಿಭಟನೆ ವೇಳೆ ನಡೆದ ಗಲಭೆಗೆ ಪಾಕಿಸ್ತಾನ, ಚೀನಾ, ಕಾಂಗ್ರೆಸ್ ಫಂಡಿಂಗ್ ಮಾಡಿವೆ. ನರೇಂದ್ರ ಮೋದಿ ಅವರ ಹೆಸರನ್ನು ಕೆಡಿಸಲು ದೇಶವಿರೋಧಿ ಶಕ್ತಿಗಳು ವ್ಯವಸ್ಥಿತವಾಗಿ ಷಡ್ಯಂತ್ರ ಮಾಡಿವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪ ಮಾಡಿದ್ದಾರೆ. 

news18-kannada
Updated:January 27, 2021, 1:12 PM IST
ದೆಹಲಿ ರೈತರ ಹಿಂಸಾಚಾರಕ್ಕೆ ಕಾಂಗ್ರೆಸ್, ಪಾಕಿಸ್ತಾನ, ಚೀನಾದಿಂದ ಫಂಡಿಂಗ್; ಯತ್ನಾಳ್ ಗಂಭೀರ ಆರೋಪ
ಬಸನಗೌಡ ಪಾಟೀಲ್ ಯತ್ನಾಳ್
  • Share this:
ವಿಜಯಪುರ (ಜ. 27): ದೆಹಲಿಯಲ್ಲಿ ರೈತರ ಹೋರಾಟ ಹಿಂಸಾಚಾರ ರೂಪ ಪಡೆದ ಘಟನೆಯಲ್ಲಿ ಪಾಕಿಸ್ತಾನ ಮತ್ತು ಚೀನಾದ ಕೈವಾಡವಿದೆ. ಅಲ್ಲದೆ, ಈ ಹಿಂಸಾಚಾರಕ್ಕೆ ಆ ದೇಶಗಳು ಫಂಡಿಂಗ್ ಕೂಡ ಮಾಡಿವೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗಂಭೀರ ಆರೋಪ ಮಾಡಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ದೇಶವನ್ನು ಪ್ರಗತಿಯತ್ತ ಒಯ್ಯುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರನ್ನು ಕೆಡಿಸಲು ನಮ್ಮ ದೇಶದಲ್ಲಿರುವ ದೇಶವಿರೋಧಿ ಶಕ್ತಿಗಳು ವ್ಯವಸ್ಥಿತವಾಗಿ ಷಡ್ಯಂತ್ರ ಮಾಡಿವೆ. ರೈತರ ಪ್ರಗತಿಗಾಗಿ ಮೂರು ಕೃಷಿ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಈ ಮಸೂದೆಗಳನ್ನು ವಿಫಲಗೊಳಿಸಲು ಕಾಂಗ್ರೆಸ್, ಕಮ್ಯುನಿಸ್ಟ್​ ಮತ್ತು ಆಮ್ ಆದ್ಮಿ ಪಕ್ಷಗಳು ಪ್ರಯತ್ನಿಸುತ್ತಿವೆ. ಇದರಲ್ಲಿ ಚೀನಾ ಮತ್ತು ಪಾಕಿಸ್ತಾನದ ಕೈವಾಡವೂ ಇದೆ ಎಂದಿದ್ದಾರೆ.

ಪಾಕಿಸ್ತಾನ ಮತ್ತು ಚೀನಾ, ಕಾಂಗ್ರೆಸ್ ದೆಹಲಿಯ ರೈತರ ಪ್ರತಿಭಟನೆ ವೇಳೆ ನಡೆದ ಗಲಭೆಗೆ ಫಂಡಿಂಗ್ ಮಾಡಿವೆ.  ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ಹತಾಶರಾಗಿದ್ದಾರೆ.  ಮುಂದಿನ 20 ವರ್ಷ ನರೇಂದ್ರ ಮೋದಿಯೇ ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ.  ತಾವು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ದೇಶ ವಿರೋಧಿ ಶಕ್ತಿಗಳು, ಖಲಿಸ್ತಾನ, ಪಾಕಿಸ್ತಾನದ ಅಣತಿಯಂತೆ ನಡೆಯುವ ದೇಶದಲ್ಲಿರುವ ಶಕ್ತಿಗಳು ಇದರಲ್ಲಿ ಶಾಮೀಲಾಗಿವೆ. ಈ ಬಗ್ಗೆ ಗುಪ್ತಚರ ಇಲಾಖೆ ಮೊದಲೇ ಮಾಹಿತಿ ನೀಡಿದ್ದವು.  ಆದರೆ, ಸುಪ್ರೀಂ ಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಕೈಕಟ್ಟುವಂತಾಯಿತು.  ಇಲ್ಲದಿದ್ದರೆ, ಪೊಲೀಸರು ಅನುಮತಿಯನ್ನೇ ಕೊಡುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಈ ಘಟನೆಯ ಬಗ್ಗೆ ಉಗ್ರಪ್ಪನಂಥವರು ನೀಡುವ ಹೇಳಿಕೆಯನ್ನು ನೋಡಿದರೆ, ಅವರಿಗೆ ದೇಶ ಬೇಕಾಗಿಲ್ಲ. ಕೇವಲ ಕುರ್ಚಿ ಬೇಕಾಗಿದೆ. ಈಗ ಖಲಿಸ್ತಾನ ಹೋರಾಟ ಮುಗಿದ ಅಧ್ಯಾಯ.  ಈಗ ನಮ್ಮ ದೇಶದಲ್ಲಿ ಪಾಕಿಸ್ತಾನದ ಪರ ಘೋಷಣೆ ಹಾಕುವ ಹುಳುಗಳಿವೆ.  ಅಂಥ ಹುಳಗಳು ಇಲ್ಲಿಯೂ ಇವೆ.  ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್​ ಈವರೆಗೆ ಬೆಳೆಸಿದ ಎಲ್ಲ ದೇಶ ವಿರೋಧಿ ಸಂಘಟನೆಗಳು ನಿನ್ನೆ ಹೊರಗೆ ಬಂದಿವೆ ಎಂದಿದ್ದಾರೆ.

ಪ್ರಧಾನಿ ಮತ್ತು ಗೃಹ ಸಚಿವರು ಇಂಥ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಾರೆ.  ಇಂಥ ದುಷ್ಟರನ್ನು ಯಾವ ಜನ್ನತ್ ಗೆ ಕಳುಹಿಸಬೇಕೋ ಅಥವಾ ಮತ್ತೆಲ್ಲಿಗೆ ಕಳುಹಿಸಬೇಕು ಎಂಬುದರ ಬಗ್ಗೆ ಕೇಂದ್ರ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಯತ್ನಾಳ ತಿಳಿಸಿದರು.

(ವರದಿ: ಮಹೇಶ ವಿ. ಶಟಗಾರ)
Published by: Sushma Chakre
First published: January 27, 2021, 1:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories