ಕೊನೆಗೂ ಮುಗಿದ ರಾಜ್ಯ ಸಂಪುಟ ವಿಸ್ತರಣೆ ಕಸರತ್ತು; ನೂತನ ಸಚಿವರಿಂದ ಇಂದು ಪ್ರಮಾಣವಚನ ಸ್ವೀಕಾರ

ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಶುಕ್ರವಾರ ದೆಹಲಿಯ ರಾಹುಲ್ ಗಾಂಧಿ ನಿವಾಸಕ್ಕೆ ತೆರಳಿದ ರಾಜ್ಯ ಕಾಂಗ್ರೆಸ್ ನಾಯಕರು ರಾಜ್ಯದ ರಾಜಕೀಯ ಬೆಳವಣಿಗೆ ಮತ್ತು ಸಚಿವ ಸ್ಥಾನ ಆಕಾಂಕ್ಷಿಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

Sushma Chakre | news18
Updated:December 22, 2018, 9:17 AM IST
ಕೊನೆಗೂ ಮುಗಿದ ರಾಜ್ಯ ಸಂಪುಟ ವಿಸ್ತರಣೆ ಕಸರತ್ತು; ನೂತನ ಸಚಿವರಿಂದ ಇಂದು ಪ್ರಮಾಣವಚನ ಸ್ವೀಕಾರ
ಪ್ರಾತಿನಿಧಿಕ ಚಿತ್ರ
  • News18
  • Last Updated: December 22, 2018, 9:17 AM IST
  • Share this:
ಗಂಗಾಧರ್

ದೇವನಹಳ್ಳಿ (ಡಿ. 22): ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ಇಂದು ಮುಹೂರ್ತ ನಿಗದಿಯಾಗಿದ್ದು, ಇದುವರೆಗೂ ಸಚಿವ ಸ್ಥಾನಕ್ಕೆ 8 ಶಾಸಕರ ಹೆಸರನ್ನು ಕಾಂಗ್ರೆಸ್​ ಹೈಕಮಾಂಡ್​ ಅಂತಿಮಗೊಳಿಸಿದೆ.

ಇಂದು 8 ಹೊಸ ಸಚಿವರು ಅಧಿಕಾರ ಸ್ವೀಕರಿಸಲಿದ್ದು, ಇಬ್ಬರು ಹಾಲಿ ಸಚಿವರನ್ನು ಸಂಪುಟದಿಂದ ಕೈಬಿಡಲಾಗುವುದು. ಮೊದಲು 7 ಶಾಸಕರ ಹೆಸರು ಅಂತಿಮವಾಗಿತ್ತು. ನಂತರ ಎಂ.ಬಿ. ಪಾಟೀಲ್​ ಹೆಸರು ಅಂತಿಮಗೊಳಿಸಲಾಯಿತು. ಸಂಜೆ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಜಾರಕಿಹೊಳಿ ಸಹೋದರರಲ್ಲಿ ರಮೇಶ್​ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈಬಿಟ್ಟು ಸತೀಶ್​ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಲಾಗುವುದು. ಹಾಗೇ, ಶಂಕರ್​ ಅವರನ್ನು ಕೂಡ ಸಂಪುಟದಿಂದ ಕೈಬಿಡಲಾಗಿದೆ.

ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಶುಕ್ರವಾರ ದೆಹಲಿಯ ರಾಹುಲ್ ಗಾಂಧಿ ನಿವಾಸಕ್ಕೆ ತೆರಳಿದ ರಾಜ್ಯ ಕಾಂಗ್ರೆಸ್ ನಾಯಕರು ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಸಭೆಯಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: ಮೂರು ರಾಜ್ಯ ವಿಜಯ ನಂತರ ಖಡಕ್ ಆದ ರಾಹುಲ್ ಗಾಂಧಿ, ಬಂಡಾಯಗಾರರಿಗೆ ಕೊಕ್

8 ಶಾಸಕರ ಹೆಸರು ಸಚಿವ ಸ್ಥಾನಕ್ಕೆ ಅಂತಿಮವಾಗಿರುವುದು ನಿಜ. ಸತೀಶ್ ಜಾರಕಿಹೊಳಿ, ಆರ್ ಬಿ ತಿಮ್ಮಾಪುರ, ಸಿ.ಎಸ್. ಶಿವಳ್ಳಿ, ಇ. ತುಕಾರಾಂ, ಎಂಟಿಬಿ ನಾಗರಾಜ್, ರಹೀಂ ಖಾನ್, ಪಿಟಿ ಪರಮೇಶ್ವರ್ ನಾಯ್ಕ ಗೆ ಸಚಿವ ಸ್ಥಾನ ಸಿಗುವುದು ಖಚಿತ. ಎಂ.ಬಿ. ಪಾಟೀಲ್​ ಬಗ್ಗೆಯೂ ಮಾತುಕತೆ ನಡೆದಿದೆ. ರಮೇಶ್​ ಜಾರಕಿಹೊಳಿ ಹಾಗೂ ಶಂಕರ್​ಗೆ ಕೊಕ್​ ನೀಡುವ ಸಾಧ್ಯತೆಯಿದೆ. ಪಕ್ಷವಿರೋಧಿ ಕೆಲಸಗಳನ್ನು ಮಾಡಿದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು. ನಾನು ಲಾಬಿ ಮಾಡುವುದಿಲ್ಲ. ಪಕ್ಷವೇ ಅಂತಿಮ ನಿರ್ಣಯ ಕೈಗೊಳ್ಳಲಿದೆ ಎಂದು ಕಾಂಗ್ರೆಸ್​ ನಾಯಕ ಜಮೀರ್​ ಅಹಮದ್​ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಸಂಪುಟ ವಿಸ್ತರಣೆ ಸರ್ಕಸ್; ಇಂದು ದೆಹಲಿಯ ರಾಹುಲ್ ನಿವಾಸದಲ್ಲಿ ನಾಯಕರ ಸಭೆ, ಸಚಿವ ಸ್ಥಾನಕ್ಕೆ ಶಾಸಕರ ಲಾಬಿಇನ್ನು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಸ್ಥಾನದ ಆಕಾಂಕ್ಷಿ ಸಿ.ಎಸ್​. ಶಿವಳ್ಳಿ, ನನಗೆ ಸಚಿವ ಸ್ಥಾನ ಸಿಗುವ ಭರವಸೆಯಿದೆ. ಹೈಕಮಾಂಡ್​ನಿಂದ ಉತ್ತಮ ಸ್ಪಂದನೆಯಿದೆ. ಅಧಿಕೃತವಾಗಿ ಘೋಷಣೆ ಆಗಬೇಕಿದೆ ಅಷ್ಟೆ. ಯಾವುದೇ ಸ್ಥಾನ ಕೊಟ್ಟರೂ ನಿಭಾಯಿಸುತ್ತೇನೆ ಎಂದು ಹೇಳಿದ್ದಾರೆ.

ಸಚಿವ ಸ್ಥಾನ ಆಕಾಂಕ್ಷಿ ಆರ್​.ಬಿ. ತಿಮ್ಮಾಪುರ್ ಕೂಡ ಪ್ರತಿಕ್ರಿಯೆ ನೀಡಿದ್ದು, ಸಚಿವ ಸ್ಥಾನ ಸಿಗುವುದು ಪಾರ್ಟಿ ಕಡೆಯಿಂದ‌ ಕನ್ಫರ್ಮ್ ಆಗಿದೆ‌. ಆದರೆ, ಇನ್ನೂ ಅಧಿಕೃತವಾಗಿ ನನಗೆ ಮಾಹಿತಿ ಬಂದಿಲ್ಲ. ದೆಹಲಿಯಲ್ಲಿನ ಸ್ನೇಹಿತರು ಹೇಳಿದರು. ಹೇಗಿದ್ದರೂ ಗೊತ್ತಾಗಲೇ ಬೇಕಲ್ಲ ಎಂದು ಹೇಳಿದ್ದಾರೆ. ತಿಮ್ಮಾಪುರ್ ಕುಟುಂಬಸ್ಥರು ನಿನ್ನೆ ತಡರಾತ್ರಿಯೇ ಬೆಂಗಳೂರಿಗೆ ಹೊರಟಿದ್ದು, ಇಂದು ನಡೆಯುವ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ನಿಗಮ ಮಂಡಳಿಗೆ 20 ಶಾಸಕರ ಪಟ್ಟಿ ಅಂತಿಮ:

ನೂತನ ಸಚಿವರ ಜೊತೆಗೆ  20 ಶಾಸಕರ ಹೆಸರನ್ನು ನಿಗಮ ಮಂಡಳಿಗೆ ಅಂತಿಮಗೊಳಿಸಲಾಗಿದೆ.  ಶಾಸಕರಾದ ಎಸ್.ಟಿ. ಸೋಮಶೇಖರ್,  ಡಾ. ಸುಧಾಕರ್, ಬಿ.ಕೆ. ಸಂಗಮೇಶ್ವರ್, ನಾರಾಯಣ್ ರಾವ್, ಉಮೇಶ್ ಜಾಧವ್, ಮುನಿರತ್ನ, ಅಬ್ಬಯ್ಯ ಪ್ರಸಾದ್, ನರೇಂದ್ರ, ಎನ್.ಎ. ಹ್ಯಾರಿಸ್​ ಸೇರಿದಂತೆ ನಿಗಮ ಮಂಡಳಿಗೆ 20 ಶಾಸಕರುಗಳ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. ಹಾಗೇ, ಮಹಿಳಾ ಶಾಸಕಿಯರಾದ ರೂಪಾ ಶಶಿಧರ್, ಸೌಮ್ಯ ರೆಡ್ಡಿ ಮತ್ತು ಅಂಜಲಿ ನಿಂಬಾಳ್ಕರ್ ಸೇರಿದಂತೆ ಒಟ್ಟು 7 ಜನರಿಗೆ ಸಂಸದೀಯ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ. ಮಾಜಿ ಸಿಎಂ ಧರ್ಮಸಿಂಗ್ ಪುತ್ರ ಅಜಯ್ ಸಿಂಗ್ ಗೆ ದೆಹಲಿ ವಿಶೇಷ ಪ್ರತಿನಿಧಿ, ಹಾಗೂ ಸಂಸದ ವಿ. ಮುನಿಯಪ್ಪ ಅವರಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನ ನೀಡಲಾಗಿದೆ.

First published:December 22, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading