ಬೆಂಗಳೂರು (ನ.30): ಕಾಂಗ್ರೆಸ್ ಹಾಗೂ ಬಿಜೆಪಿ (Congress And BJP) ನಡುವೆ ಟ್ವೀಟ್ (Tweet) ಸಮರ ಮುಂದುವರಿದಿದೆ. ಸೈಲೆಂಟ್ ಸುನೀಲ ಬಿಜೆಪಿ ನಾಯಕರ ಜೊತೆ ಇರುವ ಫೋಟೋಗಳು ಎಲ್ಲೆಡೆ ಹರಿದಾಡುತ್ತಿದ್ದು, ರೌಡಿಶೀಟರ್ (Rowdy Sheeter) ಕಮಲ ಪಕ್ಷ ಸೇರ್ತಾರೆ ಎನ್ನುವ ವರದಿ ಹರಿದಾಡುತ್ತಿತ್ತು. ಆದ್ರೆ ಯಾವುದೇ ರೌಡಿಶೀಟರ್ ಬಿಜೆಪಿ ಪಕ್ಷವನ್ನು ಸೇರುತ್ತಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ಸ್ಪಷ್ಟ ಮಾಹಿತಿ ನೀಡಿದ್ರು. ಆದ್ರೆ ಫೈಟರ್ ರವಿ ರೌಡಿ ಶೀಟರ್ ಅಲ್ವಾ ಎಂದು ಸರಣಿ ಟ್ವೀಟ್ ಮಾಡಿ ಕಾಂಗ್ರೆಸ್ ಕಿಡಿಕಾರಿದೆ.
ಫೈಟರ್ ರವಿ ರೌಡಿಶೀಟರ್ ಅಲ್ವಾ?
ಡ್ಯಾಮೇಜ್ ಕಂಟ್ರೋಲ್ಗಾಗಿ ಸೈಲೆಂಟ್ ಸುನೀಲನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರು ಫೈಟರ್ ರವಿ ಪಕ್ಷ ಸೇರಿದ್ದರ ಬಗ್ಗೆ ಸೈಲೆಂಟ್ ಆಗಿರುವುದೇಕೆ?, ಬಿಜೆಪಿಗರೇ, ಫೈಟರ್ ರವಿ ರೌಡಿ ಶೀಟರ್ ಅಲ್ಲವೇ?, ಇಂತಹ ಸದಾರಮೆ ನಾಟಕ ಮಾಡುವುದಕ್ಕಿಂತ ರೌಡಿ ಮೋರ್ಚಾವನ್ನು ಘೋಷಣೆ ಮಾಡಿಬಿಡಿ ಎಂದು ಕಾಂಗ್ರೆಸ್ ತಿಳಿಸಿದೆ.
ಡ್ಯಾಮೇಜ್ ಕಂಟ್ರೋಲಿಗಾಗಿ ಸೈಲೆಂಟ್ ಸುನಿಲನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದ @nalinkateel ಫೈಟರ್ ರವಿ ಪಕ್ಷ ಸೇರಿದ್ದರ ಬಗ್ಗೆ ಸೈಲೆಂಟ್ ಆಗಿರುವುದೇಕೆ?
ಫೈಟರ್ ರವಿ ರೌಡಿ ಶೀಟರ್ ಅಲ್ಲವೇ @BJP4Karnataka?
ಇಂತಹ ಸದಾರಮೆ ನಾಟಕ ಮಾಡುವುದಕ್ಕಿಂತ ರೌಡಿ ಮೋರ್ಚಾವನ್ನು ಘೋಷಣೆ ಮಾಡಿಬಿಡಲಿ!
— Karnataka Congress (@INCKarnataka) November 30, 2022
ಒಂದೆಡೆ ಸಿ.ಎನ್.ಅಶ್ವತ್ನಾರಾಯಣ ಹಾಗೂ ಸಿಎಂ ರೌಡಿಗಳನ್ನು ಸಮರ್ಥಿಸಿ ಮಾತಾಡುತ್ತಾರೆ, ಮತ್ತೊಂದೆಡೆ ಎಲ್ಲೋ ಅಡಗಿದ್ದ ನಳಿನ್ಕುಮಾರ್ ಕಟೀಲ್ ಧಿಡೀರ್ ಎದ್ದುಬಂದು ಸೈಲೆಂಟ್ ಸುನಿಲನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎನ್ನುತ್ತಾರೆ. ರೌಡಿ ಮೋರ್ಚಾ ಮಾಡುವ ವಿಚಾರದಲ್ಲೂ ಬಿಜೆಪಿ Vs ಬಿಜೆಪಿ ಕಾದಾಟ ನಡೆಯುತ್ತಿದೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಒಂದೆಡೆ @drashwathcn ಹಾಗೂ ಸಿಎಂ ರೌಡಿಗಳನ್ನು ಸಮರ್ಥಿಸಿ ಮಾತಾಡುತ್ತಾರೆ, ಮತ್ತೊಂದೆಡೆ ಎಲ್ಲೋ ಅಡಗಿದ್ದ @nalinkateel ಧಿಡೀರ್ ಎದ್ದುಬಂದು ಸೈಲೆಂಟ್ ಸುನಿಲನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎನ್ನುತ್ತಾರೆ.
ರೌಡಿ ಮೋರ್ಚಾ ಮಾಡುವ ವಿಚಾರದಲ್ಲೂ #BJPvsBJP ಕಾದಾಟ ನಡೆಯುತ್ತಿದೆಯೇ @BJP4Karnataka?
— Karnataka Congress (@INCKarnataka) November 30, 2022
ಬಿಜೆಪಿ ಹಾಗೂ ರೌಡಿಗಳ ನಡುವಿನ ಬಾಂಧವ್ಯಕ್ಕೆ ಬಿಬಿಎಂಪಿ ಕಸ ವಿಲೇವಾರಿಯ ಟೆಂಡರ್ ಸಾಕ್ಷಿಯಾಗುತ್ತಿದೆ. ಬೇನಾಮಿ ಹೆಸರಲ್ಲಿ ಸೈಲೆಂಟ್ ಸುನೀಲನಿಗೆ ಕಸದ ಟೆಂಡರ್ ಕೊಡಿಸಿದ ಸಚಿವ ಯಾರು?, ಆ ಸಚಿವರಿಗೂ ಸುನೀಲನಿಗೂ ಯಾವ ಜನ್ಮದ ಮೈತ್ರಿ? ಅರ್ಹತೆ ಇಲ್ಲದಿದ್ದರೂ ನಿಯಮ ಮೀರಿ ಟೆಂಡರ್ ಕೊಟ್ಟಿದ್ದು ಹೇಗೆ? ಏಕೆ? ಎಂದು ಕಾಂಗ್ರೆಸ್ ಗುಡುಗಿದೆ.
ಇದನ್ನೂ ಓದಿ: Siddaramaiah: ವರುಣಾ ಸಿದ್ದರಾಮಯ್ಯ ಲಕ್ಕಿ ಕ್ಷೇತ್ರ, ಅಲ್ಲಿ ನಿಂತ್ರೆ ಸಿಎಂ ಆಗೋದು ಪಕ್ಕಾ- ಯತೀಂದ್ರ
ಕಾಂಗ್ರೆಸ್ ವಿರುದ್ಧ ಬಿಜೆಪಿ ಟ್ವೀಟ್
ಕಾಂಗ್ರೆಸ್ಸಿಗರೇ, ಸೋಲಿನ ವಾಸನೆ ಬಡಿಯುತ್ತಿದ್ದಂತೆ ಇವಿಎಂ ಸರಿ ಇಲ್ಲ ಅಂತ ಬೊಬ್ಬೆ ಹೊಡೆಯುತ್ತೀರಿ. ಇವಿಎಂ ಅನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಅಂತ ರಂಪ ಮಾಡುತ್ತೀರಿ. ಹೀಗೆ ಮಾಡಿದವರಿಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ. ಇನ್ನು ಮೇಲಾದರೂ ಇವಿಎಂನ ತೋರಿಸಿ ನಿಮ್ಮ ಸೋಲನ್ನು ಮುಚ್ಚಿಕೊಳ್ಳುವುದನ್ನು ನಿಲ್ಲಿಸಿ’ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ