ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ (Congress High Command) ಕೋಲಾರಕ್ಕೆ (Kolar) ಟಿಕೆಟ್ ಪ್ರಕಟಿಸಿಲ್ಲ. ಇತ್ತ ಹಾಲಿ ಶಾಸಕ ವಿ.ಮುನಿಯಪ್ಪ (MLA V Muniyappa) ಕ್ಷೇತ್ರ ಶಿಡ್ಲಘಟ್ಟ (Shidlaghatta) ಕೂಡ ಘೋಷಣೆ ಆಗಿಲ್ಲ. ಚಿತ್ರದುರ್ಗದಲ್ಲಿ ಮಾಜಿ ಪರಿಷತ್ ಸದಸ್ಯ ರಘು ಆಚಾರ್ಗೆ (Raghu Achar) ಟಿಕೆಟ್ ಕೈ ತಪ್ಪಿದ್ದು, ದೊಡ್ಡಣ್ಣ ಅಳಿಯ ವೀರೇಂದ್ರ ಪಪ್ಪಿಗೆ ಮಣೆ ಹಾಕಿದೆ. ಬಿಜೆಪಿಯಿಂದ ಮತ್ತೆ ಕಾಂಗ್ರೆಸ್ಗೆ ಬಂದ ಬಾಬುರಾವ್ ಚಿಂತನಸೂರ್ಗೆ (Baburao Chinchanasuru) ಟಿಕೆಟ್ ಸಿಕ್ಕಿದೆ. ಹಾಲಿ ಶಾಸಕರ ಆಯ್ಕೆಯಲ್ಲಿ ಗೊಂದಲ ಮುಂದುವರಿದಿದೆ. ಮಾಜಿ ಸಚಿವ ವಿನಯ್ ಕುಲಕರ್ಣಿ (Vinay Kulkarni) ಶಿಗ್ಗಾಂವಿಯಲ್ಲಿ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಆದ್ರೆ, ಧಾರವಾಡ ಟಿಕೆಟ್ ನೀಡಲಾಗಿದೆ.
ಒಟ್ಟಿನಲ್ಲಿ ವೈಎಸ್ವಿ ದತ್ತ ಹೊರತುಪಡಿಸಿ ಎಲ್ಲ ವಲಸಿಗರಿಗೆ ಟಿಕೆಟ್ ನೀಡಲಾಗಿದ್ದು, ಲಿಂಗಸುಗೂರು ಪುಲಕೇಶಿಯ ನಗರ, ಕುಂದಗೋಳ, ಹರಿಹರ, ಶಿಡ್ಲಘಟ್ಟ, ಚಿಕ್ಕಪೇಟೆ, ಕೆಆರ್ ಪುರಂ, ಬೊಮ್ಮನಹಳ್ಳಿ, ದಾಸರಹಳ್ಳಿ, ಸಿವಿ ರಾಮನ್ ನಗರ, ಪುಲಿಕೇಶಿ ನಗರ, ಬೆಂಗಳೂರು ದಕ್ಷಿಣ ಕ್ಷೇತ್ರಗಳ ಕಾಂಗ್ರೆಸ್ ಟಿಕೆಟ್ ಇನ್ನೂ ಘೋಷಣೆಯಾಗಿಲ್ಲ.
ಖರ್ಗೆ ಆಪ್ತರಿಗೆ ಸಿಕ್ತು ಟಿಕೆಟ್
ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಆಪ್ತ ಚನ್ನಾರೆಡ್ಡಿ ಪಾಟೀಲ ತುನ್ನೂರುಗೆ ಯಾದಗಿರಿ ಟಿಕೆಟ್ ಸಿಕ್ಕಿದೆ. ಕಾಂಗ್ರೆಸ್ ಪಕ್ಷವು ಎರಡನೇ ಪಟ್ಟಿಯಲ್ಲಿ ಅಭ್ಯರ್ಥಿಯಾಗಿ ನನ್ನ ಹೆಸರು ಪ್ರಕಟ ಮಾಡಿದ್ದಕ್ಕೆ ತುಂಬಾ ಸಂತೋಷವಾಗಿದೆ. ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸಿ ತರಬೇಕು ಎಂದು ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದ್ರು.
ಗಂಗಾವತಿ ಕಾಂಗ್ರೆಸ್ನಲ್ಲಿ ಬಂಡಾಯ
ಇಕ್ಬಾಲ್ ಅನ್ಸಾರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿದ್ದಕ್ಕೆ ಹೆಚ್.ಆರ್ ಶ್ರೀನಾಥ್ ಅಸಮಾಧಾನಗೊಂಡಿದ್ದಾರೆ. ಟಿಕೆಟ್ ಮಿಸ್ ಆಗಿದ್ದಕ್ಕೆ ಬೇಸರವಿದೆ. ಮುಂದೆ ಬೆಂಬಲಿಗರ ಸಭೆ ಕರೆದು ತೀರ್ಮಾನಿಸುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಎರಡನೇ ಪಟ್ಟಿ ರಿಲೀಸ್ ಆಗ್ತಿದ್ದಂತೆ ರಾಯಚೂರಿನ ಲಿಂಗಸುಗೂರು ಕಾಂಗ್ರೆಸ್ನಲ್ಲಿ ಭಿನ್ನಮತ ಭುಗಿಲೆದ್ದಿದೆ. ಎಚ್.ಬಿ ಮುರಾರಿಗೆ ಟಿಕೆಟ್ ನೀಡಲೇಬೇಕು ಎಂದು ಕಾರ್ಯಕರ್ತರು ಬೀದಿಗಳಿದಿದ್ದಾರೆ.
ಸ್ಥಳೀಯ ಮಾದಿಗ ಸಮಾಜಕ್ಕೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ, ಕಾಲ್ನಡಿಗೆಯ ಮೂಲಕ ಬೀದಿಗಳಲ್ಲಿ ಸಂಚರಿಸಿ ಪ್ರತಿಭಟನೆ ಮಾಡಲಾಗ್ತಿದೆ. ಕಾಂಗ್ರೆಸ್ 2ನೇ ಪಟ್ಟಿಯಲ್ಲಿ ಹಾಲಿ ಶಾಸಕ ಡಿ.ಎಸ್ ಹೂಲಿಗೇರಿಗೂ ಟಿಕೆಟ್ ಘೋಷಿಸಿಲ್ಲ.
ದೇವರ ಮೇಲಾಣೆ, ಕಾಂಗ್ರೆಸ್ ಸೋಲುತ್ತೆ
ಗುಡ್ಡೆಹಳ್ಳಿ ಕೆಂಚಪ್ಪನ ಆಣೆ, ಕಡೂರಲ್ಲಿ ಕಾಂಗ್ರೆಸ್ ಸೋಲುತ್ತೆ. ದತ್ತಣ್ಣಂಗೆ ಟಿಕೆಟ್ ಕೊಡ್ಲಿಲ್ಲ ಅಂದ್ರೆ ಕಡೂರಲ್ಲಿ ಕಾಂಗ್ರೆಸ್ ಗೆಲ್ಲಲ್ಲ ಎಂದು ವೈ.ಎಸ್.ವಿ ದತ್ತಾ ಅಭಿಮಾನಿಗಳು ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಆಡಿಯೋ ವೈರಲ್ ಆಗಿದೆ.
ಒಳ್ಳೆ ಮನುಷ್ಯನಿಗೆ ಟಿಕೆಟ್ ಸಿಕ್ಕಿಲ್ಲ ಅಂದ ಮೇಲೆ ಕಾಂಗ್ರೆಸ್ ಸೋಲೋದು ಪಕ್ಕಾ. ದತ್ತ ಮತ್ತೆ ಜೆಡಿಎಸ್ಗೆ ಬಂದರೆ ನಾವಂತೂ ಗೆದ್ದೇ ಗೆಲ್ಲಿಸ್ತೀವಿ. 47 ಸಾವಿರ ವೋಟು ದತ್ತಣ್ಣನ ಜೇಬಲ್ಲಿ ಇದೆ ಎಂದು ಅಭಿಮಾನಿಗಳು ಶಪಥ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ