HOME » NEWS » State » CONGRESS CANDIDATE KUSUMA MEETS FORMER CM SIDDARAMAIAH TODAY LG

ಸಿದ್ದರಾಮಯ್ಯರನ್ನು ಭೇಟಿಯಾದ ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ; ಚುನಾವಣೆ ಗೆಲ್ಲುವ ಬಗ್ಗೆ ಮಹತ್ವದ ಚರ್ಚೆ

ಗೌರಮ್ಮ ಅವರು ತುಂಬಾ ದೊಡ್ಡವರು. ಅವರು ಏನೇ ಮಾತಾಡಿದ್ರೂ ಅದು ನನಗೆ ಆಶೀರ್ವಾದ ಇದ್ದಂತೆ ಎಂದರು. ಜೊತೆಗೆ ಡಿ ಕೆ ರವಿ ಹೆಸರಿಗೆ, ಘನತಗೆ ಧಕ್ಕೆ ತರುವಂತಹ ಕೆಲಸವನ್ನು ನಾನು ಹಿಂದೆಯು ಮಾಡಿಲ್ಲ. ಮುಂದೆಯು ಮಾಡಲ್ಲ ಎಂದು ಹೇಳಿದರು.

news18-kannada
Updated:October 8, 2020, 1:42 PM IST
ಸಿದ್ದರಾಮಯ್ಯರನ್ನು ಭೇಟಿಯಾದ ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ; ಚುನಾವಣೆ ಗೆಲ್ಲುವ ಬಗ್ಗೆ ಮಹತ್ವದ ಚರ್ಚೆ
ಆರ್​ ಆರ್​​ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ
  • Share this:
ಬೆಂಗಳೂರು(ಅ.08): ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಕಾಂಗ್ರೆಸ್​ ಅಭ್ಯರ್ಥಿಯಾಗಿ ಡಿ.ಕೆ.ರವಿ ಪತ್ನಿ ಕುಸುಮಾ ಹೆಸರು ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಕುಸುಮಾ ಇಂದು ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ಧನ್ಯವಾದ ತಿಳಿಸಿದ್ದಾರೆ. ಹೌದು, ಗಾಂಧಿ ಭವನದ ಬಳಿ ಇರುವ ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಕುಸುಮಾ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸಿದ್ದಾರೆ. ಬಳಿಕ ಉಳಿದ ಕಾಂಗ್ರೆಸ್​ ನಾಯಕರ ಸಲಹೆಗಳನ್ನೂ ಪಡೆದಿದ್ದಾರೆ. ಈ ಚರ್ಚೆಯಲ್ಲಿ ಮಾಜಿ ಶಾಸಕ ಚೆಲುವರಾಯಸ್ವಾಮಿ, ಶಾಸಕ ಯು.ಟಿ.ಖಾದರ್ ಕೂಡ ಭಾಗಿಯಾಗಿದ್ದಾರೆ. ಆರ್​.ಆರ್​.ನಗರ ಉಪಚುನಾವಣೆ ಗೆಲ್ಲುವ ಬಗ್ಗೆ ಮಹತ್ವದ ಸಮಾಲೋಚನೆ ನಡೆಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಭೇಟಿಯಾದ ಬಳಿಕ ಆರ್​ ಆರ್​ ನಗರ ಕ್ಷೇತ್ರದ ಕೈ ಅಭ್ಯರ್ಥಿ ಕುಸುಮಾ ಮಾಧ್ಯಮಗಳೊಂದಿಗೆ ಮಾತನಾಡಿದರು. ನನಗೆ ಕಾಂಗ್ರೆಸ್ ಟಿಕೆಟ್ ನೀಡಿರುವುದಕ್ಕೆ ಸಿದ್ದರಾಮಯ್ಯ ಸರ್ ಗೆ ಅಭಿನಂದನೆ ಸಲ್ಲಿಸಲು ಬಂದಿದ್ದೆ. ನಾನು ಆರ್ ಆರ್ ನಗರ ಕ್ಷೇತ್ರದ ಹೆಣ್ಣು ಮಗಳು. ಈ ಕ್ಷೇತ್ರದ ಎಲ್ಲ ಸಮಸ್ಯೆಗಳ ಬಗ್ಗೆ ನನಗೆ ಗೊತ್ತಿದೆ. ನಾನು ಬೇರೆ ಕ್ಷೇತ್ರದಿಂದ ಬಂದಿಲ್ಲ. ನನಗೆ ರಾಜಕೀಯ ಹೊಸದೇನಲ್ಲ. ನಮ್ಮ ತಂದೆ ರಾಜಕೀಯ ಮಾಡಿರೋದನ್ನ ನೋಡಿಕೊಂಡು ಬಂದಿದ್ದೇನೆ ಎಂದು ಹೇಳಿದರು.

Indian Air Force Day 2020: ಇಂದು ಭಾರತೀಯ ವಾಯುಪಡೆ ದಿನ; ಇತಿಹಾಸ ಮತ್ತು ಮಹತ್ವ ತಿಳಿಯಿರಿ

ವಿದ್ಯಾವಂತ ಮಹಿಳೆಯರು ರಾಜಕೀಯಕ್ಕೆ ಬರಬೇಕು ಮಹಿಳೆಯರ ಕುಂದು-ಕೊರತೆಗಳಿಗೆ ಒಂದು ವೇದಿಕೆ ಬೇಕು.  ಮಾನಸಿಕವಾಗಿ, ದೈಹಿಕವಾಗಿ ಹೆಣ್ಣಿನ ಮೇಲೆ ಅತ್ಯಾಚಾರ ಆಗ್ತಿದೆ. ಇದರ ವಿರುದ್ಧ ಧ್ವನಿಯಾಗಿ ನಾನು ಕೆಲಸ ಮಾಡುತ್ತೇನೆ.  ನಾನು ರಾಜಕೀಯಕ್ಕೆ ಬರಬೇಕೆಂದುಕೊಂಡಿರಲಿಲ್ಲ. ಈಗ ಅವಕಾಶ ಸಿಕ್ಕಿದೆ, ಅದನ್ನ ಬಳಸಿಕೊಂಡಿದ್ದೇನೆ ಎಂದರು.

ಮುಂದುವರೆದ ಅವರು, ನನ್ನ ಪ್ರತಿಸ್ಪರ್ಧಿ ಬಗ್ಗೆ ನಾನು ಯೋಚನೆ ಮಾಡಲ್ಲ. ನಾನು ನನ್ನ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಇನ್ನು, ತಮ್ಮ ಅತ್ತೆ ಗೌರಮ್ಮ ಕುರಿತಾಗಿ ಮಾತನಾಡಿದ ಕುಸುಮಾ, ಗೌರಮ್ಮ ಅವರು ತುಂಬಾ ದೊಡ್ಡವರು. ಅವರು ಏನೇ ಮಾತಾಡಿದ್ರೂ ಅದು ನನಗೆ ಆಶೀರ್ವಾದ ಇದ್ದಂತೆ ಎಂದರು. ಜೊತೆಗೆ ಡಿ ಕೆ ರವಿ ಹೆಸರಿಗೆ, ಘನತಗೆ ಧಕ್ಕೆ ತರುವಂತಹ ಕೆಲಸವನ್ನು ನಾನು ಹಿಂದೆಯು ಮಾಡಿಲ್ಲ. ಮುಂದೆಯು ಮಾಡಲ್ಲ ಎಂದು ಹೇಳಿದರು.
Published by: Latha CG
First published: October 8, 2020, 1:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories