ಐಟಿ ಅಧಿಕಾರಿಗಳಿಗೆ ನಮ್ಮ ಮನೇಲಿ ಎರಡು ಹಳೇ ಚಪ್ಪಲಿಗಳು ಸಿಕ್ಕಿವೆ; ಕೆ.ಬಿ.ಕೋಳಿವಾಡ ಪುತ್ರ ಪ್ರಕಾಶ್​ ಲೇವಡಿ

 ಬಿಜೆಪಿ ಪ್ರಯೋಜಿತ ದಾಳಿ ನಮಗೆ ವರವಾಗಿದೆ. ದಾಳಿಯಿಂದ ಗೆಲುವಿನ ಅಂತರ ಹೆಚ್ಚಾಗಿದೆ. ನಿಮ್ಮ ಚೈಲ್ಡಿಶ್ ಪಾಲಿಟಿಕ್ಸ್​​​  ನಮಗೆ ವರವಾಗಿದೆ. ಕಾರ್ಯಕರ್ತರ ಮನೋಬಲ ಕುಗ್ಗಿಸಲು ಈ ರೀತಿ ದಾಳಿ ಮಾಡಿಸಿದ್ದಾರೆ ಎಂದು ಕಿಡಿಕಾರಿದರು.

ಕೆಬಿ ಕೋಳಿವಾಡ

ಕೆಬಿ ಕೋಳಿವಾಡ

  • Share this:
ರಾಣೆಬೆನ್ನೂರು(ಡಿ.04): ಉಪಚುನಾವಣೆ ಹೊಸ್ತಿಲಲ್ಲೇ ನಿನ್ನೆ ರಾಣೆಬೆನ್ನೂರು ಕಾಂಗ್ರೆಸ್​ ಅಭ್ಯರ್ಥಿ ಕೆ.ಬಿ.ಕೋಳಿವಾಡ ಮೇಲೆ ಐಟಿ ದಾಳಿ ನಡೆದಿತ್ತು. ಈ ಹಿನ್ನೆಲೆ, ಇಂದು ಕೆ.ಬಿ.ಕೋಳಿವಾಡ ಪುತ್ರ, ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶ್​ ಕೋಳಿವಾಡ ಸುದ್ದಿಗೋಷ್ಠಿ ನಡೆಸಿದ್ದಾರೆ. 

ಅಬಕಾರಿ ಮತ್ತು ಐಟಿ ಅಧಿಕಾರಿಗಳಿಗೆ ನಮ್ಮ ಮನೆಯಲ್ಲಿ ಎರಡು ಹಳೆಯ ಚಪ್ಪಲಿ ಸಿಕ್ಕಿದ್ದಾವೆ. ಅವರು ಆ ಹಳೇ ಚಪ್ಪಲಿಗಳನ್ನೇ ತೆಗೆದುಕೊಂಡು ಹೋಗಿದ್ದಾರೆ ಎಂದು ಪ್ರಕಾಶ್​ ಕೋಳಿವಾಡ ಲೇವಡಿ ಮಾಡಿದ್ದಾರೆ.

ಅಬಕಾರಿ ಮತ್ತು ಐಟಿ ಅಧಿಕಾರಿಗಳಿಗೆ ಮತ್ತೊಮ್ಮೆ ದಾಳಿಗೆ ಆಹ್ವಾನ ನೀಡುತ್ತೇನೆ.  ಕೋಳಿವಾಡರ ಬಳಿ ಚುನಾವಣೆಗೆ ದುಡ್ಡು ಇಲ್ಲ, ನಾನು ನನ್ನ ಸ್ನೇಹಿತರ ಬಳಿ ಸಾಲ ಮಾಡಿಕೊಂಡು ಎಲೆಕ್ಷನ್ ಮಾಡ್ತಾ ಇದ್ದೀನಿ ಎಂದು ಸ್ಪಷ್ಟಪಡಿಸಿದರು.

ನಾಮಪತ್ರ ಸಲ್ಲಿಕೆ ಆಗದ ಹಿನ್ನೆಲೆ, ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ ಮತ್ತೆ ಮುಂದೂಡಿಕೆ

ಗುಜರಾತ್ ಪೊಲೀಸರನ್ನು ಚುನಾವಣೆಗೆ ಬಳಸಿಕೊಳ್ಳಲಾಗ್ತಿದೆ. ಪೊಲೀಸರನ್ನು ಕೋಳಿವಾಡ ಮನೆ ಕಡೆ ಕಳುಹಿಸಿ ಬಿಜೆಪಿ ನಾಯಕರು ಹಣ ಹಂಚಿದ್ದಾರೆ. ಹಣ ಹಂಚುವುದಕ್ಕೋಸ್ಕರ ಆಡಳಿತ ಪಕ್ಷ ಪೊಲೀಸರನ್ನು ಡೈವರ್ಟ್ ಮಾಡಿದ್ದಾರೆ ಎಂದು ಪ್ರಕಾಶ್​ ಕೋಳಿವಾಡ ಗಂಭೀರ ಆರೋಪ ಮಾಡಿದ್ದಾರೆ.

ಮಧ್ಯರಾತ್ರಿ ಮಲಗಿದ ಸಂದರ್ಭದಲ್ಲಿ ರೇಡ್ ಮಾಡಿದೆ. ಆಡಳಿತ ಪಕ್ಷ ದ್ವೇಷದ ರಾಜಕಾರಣ ಮಾಡಿದೆ. ಕೋಳಿವಾಡ ಗೆಲುವು ಸಾಧಿಸ್ತಾರೆ ಅಂತ ಐಟಿ ದಾಳಿ ಮಾಡಿಸಿದ್ದಾರೆ. ಬಿಜೆಪಿ ಪ್ರಯೋಜಿತ ದಾಳಿ ನಮಗೆ ವರವಾಗಿದೆ. ದಾಳಿಯಿಂದ ಗೆಲುವಿನ ಅಂತರ ಹೆಚ್ಚಾಗಿದೆ. ನಿಮ್ಮ ಚೈಲ್ಡಿಶ್ ಪಾಲಿಟಿಕ್ಸ್​​​  ನಮಗೆ ವರವಾಗಿದೆ. ಕಾರ್ಯಕರ್ತರ ಮನೋಬಲ ಕುಗ್ಗಿಸಲು ಈ ರೀತಿ ದಾಳಿ ಮಾಡಿಸಿದ್ದಾರೆ ಎಂದು ಕಿಡಿಕಾರಿದರು.

ವೀರಪ್ಪನ್ ಊರಲ್ಲಿ ತಮಿಳು ಬದಲು ಕನ್ನಡ ಮಾಧ್ಯಮ ಶಾಲೆ - ಸುರೇಶ್ ಕುಮಾರ್ ಆದೇಶ

ಅನುಕಂಪಕ್ಕಾಗಿ ನಾವೇ ಹೇಳಿ ರೇಡ್ ಮಾಡಿಸಿದ್ದೇವೆ ಎನ್ನುವ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸುತ್ತಿದ್ದಾರೆ. ನಮಗೆ ಭಯವಿದೆ, ಕೆಟ್ಟಿರುವ ಇವಿಎಂ ಮಿಷಿನ್ ಗಳನ್ನ ತಂದಿರಬಹುದು ಎಂದು ಪ್ರಕಾಶ್​ ಅನುಮಾನ ವ್ಯಕ್ತಪಡಿಸಿದರು.  ಇದೇ ವೇಳೆ,  ರಾಣೆಬೆನ್ನೂರಿನಲ್ಲಿ ಹೊಸ ಇವಿಎಂ ಕೊಟ್ಟು ಚುನಾವಣೆ ಮಾಡಿ ಎಂದು ಪ್ರಕಾಶ್​ ಕೋಳಿವಾಡ ಮನವಿ ಮಾಡಿದರು.

ಅನರ್ಹ ಮಾಜಿ ಶಾಸಕ ಶಂಕರ್ ನಮ್ಮ ಕಾರ್ಯಕರ್ತರಿಗೆ ಧಮ್ಕಿ ಹಾಕಿದ್ದಾರೆ. ನಮ್ಮ ಕಾರ್ಯಕರ್ತರ ಚೆಕ್ ಗಳನ್ನ ಪಡೆದು ಚೆಕ್ ಬೌನ್ಸ್ ಕೇಸ್ ಹಾಕಿಸುತ್ತಾರಂತೆ. ಶಂಕರ್ ನಮ್ಮ ಕಾರ್ಯಕರ್ತರಿಗೆ ತೊಂದರೆ ಕೊಟ್ಟರೆ ನಾವು ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದರು.

ಹುಳಿಮಾವು ಕೆರೆ ಕೋಡಿ ಒಡೆದ ಪ್ರಕರಣ; 10 ದಿನದೊಳಗೆ ವರದಿ ನೀಡುವಂತೆ ಸಿಎಂ ಸೂಚನೆ
First published: