Congress: ಅಳೆದು ತೂಗಿ ಬಿಡುಗಡೆಯಾಗಿರೋ 'ಕೈ' ಮೊದಲ ಪಟ್ಟಿಯ ವಿಶೇಷತೆಗಳೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಡಿಕೆ ಶಿವಕುಮಾರ್ ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ಎಂಬ ಸಂದೇಶ ನೀಡಿದ್ದರು. ಸಾಗರದಿಂದ ಬೇಳೂರು ಗೋಪಾಲಕೃಷ್ಣ ಅವರಿಗೆ ಕಾಂಗ್ರೆಸ್ ಮಣೆಹಾಕಿದೆ.

  • Share this:

ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ (Congess High Command) ಅಳೆದು ತೂಗಿ ಚುನಾವಣಾ ಅಭ್ಯರ್ಥಿಗಳ (Congress Election Candidates) ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಆದರೂ ರಾಜಾಜಿನಗರ (Rajaji nagara), ರಾಮದುರ್ಗ (Ramadurga), ಸಾಗರ (Sagar) ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ರಾಜ್ಯ ಕಾಂಗ್ರೆಸ್​ಗೆ ತಾಗುತ್ತಿದೆ. ಪಟ್ಟಿ ಬಿಡುಗಡೆ ಬಳಿಕ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar), ಯಾವುದೇ ಗೊಂದಲ ಇಲ್ಲ ಎಂದು ಹೇಳಿದ್ರೆ, ವಿಪಕ್ಷ ನಾಯಕ ಸಿದ್ದರಾಮಯ್ಯ (Former CM Siddaramaiah) ಪ್ರತಿಕ್ರಿಯಿಸಲು ಹಿಂದೇಟು ಹಾಕಿದರು. ಕಾಂಗ್ರೆಸ್ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ (Kagodu Thimmappa), ಪುತ್ರಿ ರಾಜನಂದಿನಿ ಅವರಿಗೆ ಟಿಕೆಟ್ ನೀಡುವಂತೆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Congress President Mallikarjun Kharge) ಅವರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದಾರೆ. ಆದ್ರೆ ಡಿಕೆ ಶಿವಕುಮಾರ್ ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ಎಂಬ ಸಂದೇಶ ನೀಡಿದ್ದರು. ಸಾಗರದಿಂದ ಬೇಳೂರು ಗೋಪಾಲಕೃಷ್ಣ ಅವರಿಗೆ ಕಾಂಗ್ರೆಸ್ ಮಣೆಹಾಕಿದೆ.


ಕಾಂಗ್ರೆಸ್ ಮೊದಲ ಪಟ್ಟಿಯ ವಿಶೇಷತೆಗಳೇನು?


1.ಸಿದ್ದರಾಮಯ್ಯ ಅವರಿಗೆ  ವರುಣಾದಿಂದ ಟಿಕೆಟ್ ನೀಡಿ ಮಗ ಯತೀಂದ್ರ ಸಿದ್ದರಾಮಯ್ಯಗೆ ಟಿಕೆಟ್ ನೀಡಿಲ್ಲ.


2.ಹೆಚ್.ಸಿ ಮಹದೇವಪ್ಪಗೆ ಟಿ.ನರಸೀಪುರ ಟಿಕೆಟ್ ನೀಡಿ ಪುತ್ರ ಸುಭಾಸ್ ಬೋಸ್ ಅವರಿಗೆ ಟಿಕೆಟ್ ನೀಡಿಲ್ಲ.


3.ಬೀದರ್ ದಕ್ಷಿಣದಿಂದ ಅಶೋಕ್ ಖೇಣಿಗೆ ಟಿಕೆಟ್


4.ತೀರ್ಥಹಳ್ಳಿ ಟಿಕೆಟ್ ಫೈಟ್ ಇರದಿದ್ದರೂ ಘೋಷಣೆ ಇಲ್ಲ, ಕಿಮ್ಮನೆ ಬೇಸರ?




5.ಕಾಗೋಡು ಮಗಳಿಗೆ ಸಿಗದ ಸಾಗರ ಟಿಕೆಟ್


6.ನಾಲ್ಕು ಜನ ಅಪ್ಪ-ಮಕ್ಕಳಿಗೆ ಕಾಂಗ್ರೆಸ್ ಟಿಕೆಟ್ (ರಾಮಲಿಂಗಾ ರೆಡ್ಡಿ ಮತ್ತು ಸೌಮ್ಯಾ ರೆಡ್ಡಿ, ಎಸ್ಎಸ್ ಮಲ್ಲಿಕಾರ್ಜುನ-ಶಾಮನೂರು ಶಿವಶಂಕರಪ್ಪ)


7.ಆರ್.ಆರ್ ನಗರ ಹೊರತುಪಡಿಸಿ ವಲಸಿಗರ ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿಲ್ಲ. ಆರ್.ಆರ್.ನಗರದಿಂದ ಕುಸುಮಾ ಹೆಚ್ ಅವರಿಗೆ ಟಿಕೆಟ್ ನೀಡಲಾಗಿದೆ.


ಇದನ್ನೂ ಓದಿ:  Congress First List: ಎಲ್ಲಾ ಸಿದ್ದರಾಮಯ್ಯಗಾಗಿಯೇ ಪ್ಲಾನ್? ಮರುಕಳಿಸುತ್ತಾ 2018ರ ರಣತಂತ್ರ?


8.ದೇವನಹಳ್ಳಿ ಟಿಕೆಟ್ ಕೇಂದ್ರದ ಮಾಜಿ ಸಚಿವ ಕೆ.ಹೆಚ್ ಮುನಿಯಪ್ಪೆಗೆ ಘೋಷಣೆ ಮಾಡಲಾಗಿದೆ. ಈ ಮೂಲಕ ರಾಜ್ಯ ರಾಜಕಾರಣಕ್ಕೆ ಮುನಿಯಪ್ಪ ಕಮ್ ಬ್ಯಾಕ್ ಮಾಡುತ್ತಿದ್ದಾರೆ .


9.ಬಹುತೇಕ ಹಾಲಿ ಶಾಸಕರಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ನೀಡಲಾಗಿದೆ.

First published: