ಕೋವಿಡ್ ನಿಂದ ಸಾವನ್ನಪ್ಪಿದ ತಮಿಳುನಾಡು ಕಾಂಗ್ರೆಸ್ ಅಭ್ಯರ್ಥಿ ಮಾಧವ ರಾವ್; ಒಂದು ವೇಳೆ ಇವರೇ ಗೆದ್ದರೆ ಏನಾಗಲಿದೆ ಗೊತ್ತಾ?

ಮತದಾನ ಮುಗಿದ ನಂತರ ಅಭ್ಯರ್ಥಿ ಸಾವಿಗೀಡಾಗಿರುವುದರಿಂದ ಈಗಲೇ ಮರು ಮತದಾನ ಮಾಡಲು ಸಾಧ್ಯವಿಲ್ಲ. ಚುನಾವಣಾ ಫಲಿತಾಂಶ ಬರುವವರಗೆ ಕಾಯಲೇಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತಮಿಳುನಾಡು(ಏಪ್ರಿಲ್ 11): ತಮಿಳುನಾಡಿನಲ್ಲಿ ಚುನಾವಣೆ ಮುಗಿದು ಫಲಿತಾಂಶ ಬರುವುದಷ್ಟೇ ಬಾಕಿ ಇದೆ. ಇಷ್ಟರಲ್ಲೇ ಮಾರಕ ಕೊರೊನಾಗೆ ಕಾಂಗ್ರೆಸ್ ಅಭ್ಯರ್ಥಿ ಪಿ ಎಸ್ ಡಬ್ಲ್ಯು ಮಾಧವ್ ರಾವ್ ಬಲಿಯಾಗಿದ್ದಾರೆ. ಮೇ 2ನೇ ತಾರೀಖು ಚುನಾವಣಾ ಫಲಿತಾಂಶ ಹೊರಬರಲಿದ್ದು ಒಂದು ವೇಳೆ ಇವರೇ ಗೆದ್ದರೆ ಆಗ ಅನಿವಾರ್ಯವಾಗಿ ಕ್ಷೇತ್ರದಲ್ಲಿ ಮರು ಚುನಾವಣೆ ಮಾಡಬೇಕಾಗುತ್ತದೆ.

ಮತದಾನ ಮುಗಿದ ನಂತರ ಅಭ್ಯರ್ಥಿ ಸಾವಿಗೀಡಾಗಿರುವುದರಿಂದ ಈಗಲೇ ಮರು ಮತದಾನ ಮಾಡಲು ಸಾಧ್ಯವಿಲ್ಲ. ಚುನಾವಣಾ ಫಲಿತಾಂಶ ಬರುವವರಗೆ ಕಾಯಲೇಬೇಕು. ಫಲಿತಾಂಶ ಬಂದ ನಂತರ ಒಂದು ವೇಳೆ ಮಾಧವ್ ರಾವ್ ಅವರೇ ಜಯಶಾಲಿ ಎಂದಾದರೆ ಆಗ ಚುನಾವಣಾ ಆಯೋಗ ಮರು ಚುನಾವಣೆ ನಡೆಸಲು ಆದೇಶಿಸಬಹುದಾಗಿದೆ.

ಮಾಧವ ರಾವ್ ತಮಿಳುನಾಡಿದ ಶ್ರೀವಿಲ್ಲಿಪುಥೂರ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಬಗ್ಗೆ ಎಐಸಿಸಿ ತಮಿಳುನಾಡು ಮತ್ತು ಪುದುಚೆರಿ ಉಸ್ತುವಾರಿ ಕಾರ್ಯದರ್ಶಿ ಸಂಜಯ್ ದತ್ ದುಃಖ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಮಾಧವ ರಾವ್ ಅಗಲಿಕೆ ಪಕ್ಷಕ್ಕೂ, ತಮಿಳುನಾಡಿನ ರಾಜಕೀಯಕ್ಕೂ ತುಂಬಲಾರದ ನಷ್ಟವಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ಸಂಜಯ್ ದತ್ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಏಪ್ರಿಲ್ 6ರಂದು ತಮಿಳುನಾಡಿನ 38 ಜಿಲ್ಲೆಗಳ 234 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಮೇ 2ರಂದು ಫಲಿತಾಂಶ ಘೋಷಣೆಯಾಗಲಿದೆ.
Published by:Soumya KN
First published: