Baburao Chinchansur ಕಾರ್ ಅಪಘಾತ: ಮುಖ, ಕಾಲುಗಳಿಗೆ ಗಾಯ

ಬಾಬುರಾವ್ ಚಿಂಚನಸೂರ್ ಕಾರ್ ಅಪಘಾತ

ಬಾಬುರಾವ್ ಚಿಂಚನಸೂರ್ ಕಾರ್ ಅಪಘಾತ

Car Accident: ಚಾಲಕ ನಿದ್ದೆಯ ಮಂಪರಿನಲ್ಲಿದ್ದ ಕಾರಣ ಅಪಘಾತ ನಡೆದಿದೆ ಎಂದು ತಿಳಿದು ಬಂದಿದೆ.

  • News18 Kannada
  • 5-MIN READ
  • Last Updated :
  • Gulbarga, India
  • Share this:

ಕಲಬುರಗಿ: ಕಾಂಗ್ರೆಸ್ ಅಭ್ಯರ್ಥಿ (Congress Candidate) ಬಾಬುರಾವ್ ಚಿಂಚನಸೂರ್ (Baburao Chinchanasur) ಅವರ ಕಾರ್  (Car Accident( ಅಪಘಾತಕ್ಕೊಳಗಾಗಿದೆ. ರಾತ್ರಿ ಸುಮಾರು 1 ಗಂಟೆಗೆ ಕಲಬುರಗಿಯ (Kalaburagi) ಆಕಾಶವಾಣಿ ಕೇಂದ್ರದ ಬಳಿ ಅಪಘಾತ ನಡೆದಿದೆ. ಚಿಂಚನಸೂರ ಅವರ ಮುಖ ಮತ್ತು ಕಾಲುಗಳಿಗೆ ಗಾಯವಾಗಿದ್ದು, ಸ್ಥಳೀಯರು ನಗರದ ಯುನಿವೆಟೆಟ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಂಚನಸೂರ್ ಅವರ ಜೊತೆಯಲ್ಲಿದ್ದ ಗನ್ ಮ್ಯಾನ್ ಮತ್ತು ಚಾಲಕನಿಗೆ (Gunman And Driver) ಯಾವುದೇ ಗಾಯಗಳಾಗಿಲ್ಲ. ಚಾಲಕ ನಿದ್ದೆಯ ಮಂಪರಿನಲ್ಲಿದ್ದ ಕಾರಣ ಅಪಘಾತ ನಡೆದಿದೆ ಎಂದು ತಿಳಿದು ಬಂದಿದೆ.


ಬಾಬುರಾವ್ ಚಿಂಚನಸೂರ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಯಾವುದೇ ಅಪಾಯವಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ. ಚಿಂಚನಸೂರ್ ಗುರುಮಿಠಕಲ್ (Gurmitkal) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.


ಶುಕ್ರವಾರ ಚುನಾವಣಾ ಪ್ರಚಾರ ಮುಗಿಸಿ ಯಾದಗಿರಿಯಿಂದ ಕಲಬುರಗಿಯತ್ತ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಕಾರ್​ನಲ್ಲಿ ಇಬ್ಬರು ಚಾಲಕರು, ಓರ್ವ ಗನ್ ಮ್ಯಾನ್ ಸೇರಿದಂತೆ ನಾಲ್ಕು ಜನರಿದ್ದರು ಎಂದು ತಿಳಿದು ಬಂದಿದೆ.


ಮಾವನಿಂದಲೇ ಅಳಿಯನ ಕೊಲೆ


ಹಣಕಾಸಿನ ವಿಚಾರಕ್ಕೆ ಗಲಾಟೆ ಶುರುವಾಗಿ ಕೊಲೆಯಲ್ಲಿ ಅಂತ್ಯವಾಗಿರೋ ಘಟನೆ ಯಾದಗಿರಿಯ ರೈಲ್ವೆ ನಿಲ್ದಾಣ ಮಾರ್ಗದಲ್ಲಿ ನಡೆದಿದೆ. ಹಣಕಾಸಿನ ವಿಚಾರಕ್ಕೆ ಮಾವ ಮೈಬೂಬ್ ಅಳಿಯ ಸೋನು ಎಂಬಾತನನ್ನ ಕೊಲೆ ಮಾಡಿದ್ದಾನೆ.
ಸೋನು ಹಾಗೂ ಆರೋಪಿ ಮೈಬೂಬ್ ಕುಟುಂಬಸ್ಥರ ನಡುವೆ ಗಲಾಟೆ ನಡೆದಿದ್ದು, ಮೈಬೂಬ್ ಸೇರಿ ನಾಲ್ವರು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಘಟನೆಯಲ್ಲಿ ಮೂವರಿಗೆ ಗಾಯವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಬಳಿಕ ಸ್ಥಳಕ್ಕೆ ನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಇದನ್ನೂ ಓದಿ: Baburao Chinchansoor: ಬಿಜೆಪಿಗೆ ಆಘಾತ, ಚಿಂಚನಸೂರ್ ಕಾಂಗ್ರೆಸ್‌ ಸೇರ್ಪಡೆಯ ಹಿಂದಿನ ಮಾಸ್ಟರ್‌ಪ್ಲ್ಯಾನ್‌ ಯಾರು ಗೊತ್ತಾ?!


ಈಜಲು ಹೋಗಿದ್ದ ನಾಲ್ವರು ನೀರುಪಾಲು


ಈಜಲು ಹೋಗಿದ್ದ ನಾಲ್ವರು ಯುವಕರು ಘಟಪ್ರಭಾ ನದಿಯಲ್ಲಿ ನೀರುಪಾಲಾಗಿರೋ ಘಟನೆ ಗೋಕಾಕ್ ತಾಲೂಕಿನ ದುಪದಾಳದಲ್ಲಿ ನಡೆದಿದೆ. ಮೃತ ನಾಲ್ವರೂ ಉತ್ತರ ಕನ್ನಡದ ಮುಂಡಗೋಡ ತಾಲೂಕಿನ ಹಿರಿಗೆರೆ ಗ್ರಾಮದವರೆಂಬ ಮಾಹಿತಿ ಇದೆ.. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

top videos
    First published: