ಬಳ್ಳಾರಿಯಲ್ಲಿ ಕಾಂಗ್ರೆಸ್ (Congress Rally) ಬೃಹತ್ ಸಮಾವೇಶವನ್ನು ಆಯೋಜನೆ ಮಾಡಿದೆ. ಇದೀಗ ರಾಜ್ಯ ಬಿಜೆಪಿ (Karnataka BJP) ಟ್ವಿಟರ್ ಖಾತೆಯಿಂದ ಸಾಲು ಸಾಲು ಟ್ವೀಟ್ಗಳನ್ನು ಮಾಡಲಾಗಿದೆ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ (Rahul Gandhi) ವಿರುದ್ಧ ವಾಗ್ದಾಳಿ ನಡೆಸಿರುವ ರಾಜ್ಯ ಬಿಜೆಪಿ ಮತ್ತೊಮ್ಮೆ ನೆನಪಿಸುತ್ತಿದ್ದೇವೆ ಎಂದು ಹೇಳುತ್ತಾ ಕುಟುಕಿದೆ. ಕರ್ನಾಟಕಕ್ಕೆ ವಿದಾಯ ಹೇಳುವ ಮುನ್ನ ರಾಹುಲ್ ಗಾಂಧಿ ಅವರಿಗೆ ಮತ್ತೊಮ್ಮೆ ನೆನಪಿಸುತ್ತಿದ್ದೇವೆ. ಮುಂದಿನ ಯಾತ್ರೆಗೆ ಕರ್ನಾಟಕದಲ್ಲೇ (Karnataka) ಇಂಧನ ತುಂಬಿಸಿ. ಬೇರೆ ರಾಜ್ಯಗಳಲ್ಲಿ ಡಿಸೇಲ್ ದರ/ಲೀ ಹಾಕಿ ಇಂಧನ ದರ ಬಗ್ಗೆ ನೀಡಿದ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಆಂಧ್ರಪ್ರದೇಶ - 99.15, ತೆಲಂಗಾಣ - 97.82, ರಾಜಸ್ಥಾನ - 93.72 ಮತ್ತು ಕರ್ನಾಟಕ - 87.94 ರೂಪಾಯಿ ಇದೆ. ಬಿಜೆಪಿಯೇತರ ರಾಜ್ಯದಲ್ಲಿ ಬೆಲೆ ಏರಿಕೆಯ (Price Hike) ಬಿಸಿ ತಾಗಬಹುದು ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಅವರು ನೆನಪಿಡಲೇ ಬೇಕಾದ ರಾಜ್ಯದ ಕೆಲವೊಂದಷ್ಟು ಸಂಗತಿಗಳಿವೆ. ಅಮೇಥಿ ಸೋಲಿನ ಭಯದಿಂದ ಸೋನಿಯಾ ಬಳ್ಳಾರಿಯಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆದ್ದರು. ಆದರೆ, ಗೆದ್ದ ಬಳಿಕ ಅದೇ ಕ್ಷೇತ್ರವನ್ನು ಎಡಗಾಲಿನಲ್ಲಿ ಒದ್ದು ರಾಜಿನಾಮೆ ನೀಡಿ, ಅಮೇಥಿಗೆ ಓಡಿ ಹೋದರು. ನೀವು ಮರೆತಿರಬಹುದು, ರಾಜ್ಯದ ಜನತೆ ಮರೆತಿಲ್ಲ.
ರಾಜ್ಯದ ಜನತೆ ಮರೆತಿಲ್ಲ
ಇಂದಿರಾ ಗಾಂಧಿ ಚಿಕ್ಕಮಗಳೂರಿನಲ್ಲಿ ಸ್ಪರ್ಧಿಸಿದಾಗ ಅವರ ಗೆಲುವಿನಲ್ಲಿ ಮತ್ತೊಬ್ಬ ಮಹಿಳೆ ಮೋಟಮ್ಮ ಮಹತ್ತರ ಪಾತ್ರ ವಹಿಸಿದ್ದರು. ಅದೇ ಮೋಟಮ್ಮ ಅವರನ್ನು ನಂತರದ ದಿನಗಳಲ್ಲಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರು ನಿಕೃಷ್ಟವಾಗಿ ನಡೆಸಿಕೊಂಡರು. ನೀವು ಮರೆತಿರಬಹುದು, ರಾಜ್ಯದ ಜನತೆ ಮರೆತಿಲ್ಲ ಎಂದು ವಾಗ್ದಾಳಿ ನಡೆಸಿದೆ.
ಕರ್ನಾಟಕ ಬಿಡುವ ಮುನ್ನ ಒಮ್ಮೆ ನೆನಪಿಸಿಕೊಳ್ಳಿ
ರಾಜ್ಯದ ಪ್ರಬಲ ವೀರಶೈವ ಲಿಂಗಾಯತ ನಾಯಕ, ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲರನ್ನು ಅತ್ಯಂತ ಅಮಾನವೀಯವಾಗಿ ರಾಜೀವ್ ಗಾಂಧಿ ಪದಚ್ಯುತಗೊಳಿಸಿದ್ದರು. ರಾಹುಲ್ ಗಾಂಧಿ ಅವರೇ, ತಮ್ಮದೇ ಪಕ್ಷದ ವೀರಶೈವ ಲಿಂಗಾಯತ ನಾಯಕನೊಬ್ಬನನ್ನು ರಾಜಕೀಯವಾಗಿ ತುಳಿದ ಘಟನೆಯನ್ನು ಕರ್ನಾಟಕ ಬಿಡುವ ಮುನ್ನ ಒಮ್ಮೆ ನೆನಪಿಸಿಕೊಳ್ಳಿ.
ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ
ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಗುಡುಗಿದ್ದಾರೆ. ಸಿದ್ದರಾಮಯ್ಯಗೆ ಗತಿ ಇಲ್ಲ.. ನಾವ್ಯಾಕೆ ಅವರ ಹಿಂದೆ ಹೋಗೋಣ. ಚಾಮುಂಡಿಯಲ್ಲಿ ಸೋಲ್ತಿನಿ ಅಂತ ಗೊತ್ತಾಗಿ ಬಾದಾಮಿಗೆ ಬಂದ್ರು. ಈಗ ಬಾದಾಮಿ ಯಾಕೆ ಬಿಡ್ತಿದ್ದೀರಿ ಅಂತ ಪ್ರಶ್ನಿಸಿದ್ರು. ಅಲ್ದೇ ಶಾಸಕರಾಗಿ ಕ್ಷೇತ್ರದಲ್ಲಿ ಜನರ ಮನಸ್ಸು ಗೆಲ್ಲೋಕೆ ಆಗದೆ. ಚುನಾವಣೆಯಲ್ಲಿ ಸೋತ್ರು. ಮುಖ್ಯಮಂತ್ರಿ ಆಗಿದ್ದವರಿಗೆ ಇಂತಹ ದಯನೀಯ ಸ್ಥಿತಿ ಬರಬಾರದಿತ್ತು ಅಂತ ಲೇವಡಿ ಮಾಡಿದ್ರು.
ಇದನ್ನೂ ಓದಿ: Sriramulu: ಬಳ್ಳಾರಿಗೆ ಬಂದಿರುವ ರಾಹುಲ್ ಗಾಂಧಿಯನ್ನು ಶ್ರೀರಾಮುಲು ಸ್ವಾಗತಿಸಿದ್ದು ಹೀಗೆ
ಸಿಎಂ ತಿರುಗೇಟು
5 ಕಿಲೋ ಮೀಟರ್ ನಡೆದು ತೋರಿಸಲಿ ಅಂತ ಸವಾಲ್ ಹಾಕಿದ್ದ ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಖಂಡಿತಾ ನಡೆದು ತೋರಿಸೋಣ. ಆದ್ರೆ ಸಿದ್ರಾಮಯ್ಯ ಮಟ್ಟಕ್ಕೆ ಇಳಿದು ವೈಯಕ್ತಿಕ ವಿಷಯದ ಬಗ್ಗೆ ಮಾತಾಡಲ್ಲ. ಅವರ ಆರೋಗ್ಯ ಚೆನ್ನಾಗಿರಲಿ, ಜಿಮ್ ಎಲ್ಲಾ ಮಾಡಿ ಚೆನ್ನಾಗಿರಲಿ. ನೂರು ವರ್ಷ ಬಾಳಲಿ ಅಂತಾ ಹಾರೈಸುತ್ತೇನೆ ಎಂದು ಸಿಎಂ ಹೇಳಿದ್ರು.
ಇದು ಪ್ರಾಯಶ್ಚಿತ ಯಾತ್ರೆ
ಬಳ್ಳಾರಿಯಲ್ಲಿ ಸೋನಿಯಾ ಗಾಂಧಿ ಗೆಲ್ಲಿಸಿದ್ದಕ್ಕೆ ಪ್ರಾಯಶ್ಚಿತ ಯಾತ್ರೆ ಮಾಡ್ತಿದ್ದಾರೆ ಅಂತಾ ಶ್ರೀರಾಮುಲು ಗುಡುಗಿದ್ದಾರೆ.. ಭಾರತ್ ಜೋಡೋ ಯಾತ್ರೆಯ ಬದಲಿಗೆ, ಪ್ರಾಯಶ್ಚಿತ ಯಾತ್ರೆ ನಡೆಸಬೇಕಿತ್ತು ಅಂತಾ ಟ್ವೀಟ್ ಮಾಡಿ ಟಾಂಗ್ ಕೊಟ್ಟಿದ್ದಾರೆ. ಎಲ್ಲದಕ್ಕೂ ಹೌದು ಹುಲಿಯಾ, ಎನ್ನುವವರಲ್ಲ ನಮ್ಮ ಜನ. ಟಗರು ಟಗರು ಎಂದು ಜೈಕಾರ ಹಾಕುವವರೂ ಅಲ್ಲ ಅಂತಾ ತಿರುಗೇಟು ಕೊಟ್ಟಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ