ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಬೃಹತ್ ಜಾಥಾ

12 ಜಿಲ್ಲೆಗಳಿಂದ ಕಾಂಗ್ರೆಸ್​ನ ಕಾರ್ಯಕರ್ತರು, ರೈತರು ಇಂದು ಬೆಂಗಳೂರಿಗೆ ಆಗಮಿಸಿ ಫ್ರೀಡಂ ಪಾರ್ಕ್​ವರೆಗೂ ಬೃಹತ್ ಮೆರವಣಿಗೆ ನಡೆಸಿದ್ದಾರೆ. ಸರ್ಕಾರದ ರೈತ ವಿರೋಧಿ ನೀತಿ ವಿರುದ್ಧ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಈ ಹೋರಾಟ ನಡೆದಿದೆ.

ಬೆಂಗಳೂರಿನ ಮೌರ್ಯ ಸರ್ಕಲ್​ನಲ್ಲಿ ಕಾಂಗ್ರೆಸ್ ಪ್ತತಿಭಟನೆ

ಬೆಂಗಳೂರಿನ ಮೌರ್ಯ ಸರ್ಕಲ್​ನಲ್ಲಿ ಕಾಂಗ್ರೆಸ್ ಪ್ತತಿಭಟನೆ

 • Share this:
  ಬೆಂಗಳೂರು(ಜ. 20): ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ನೀತಿಗಳನ್ನ ವಿರೋಧಿಸಿ ಕಾಂಗ್ರೆಸ್ ಪಕ್ಷ ಇಂದು ನಗರದಲ್ಲಿ ಬೃಹತ್ ರ್ಯಾಲಿ ನಡೆಸಿದೆ. ಕಾಂಗ್ರೆಸ್ ಪಕ್ಷದ ರೈತ ಘಟಕದಿಂದ ಆಯೋಜಿಸಲಾಗಿರುವ ಈ ಜಾಥಾದಲ್ಲಿ 12 ಜಿಲ್ಲೆಗಳಿಂದ ರೈತರು ನಗರಕ್ಕೆ ಆಗಮಿಸಿ ಪಾಲ್ಗೊಂಡಿದ್ದಾರೆ. ಫ್ರೀಡಂ ಪಾರ್ಕ್​ವರೆಗೂ ಪ್ರತಿಭಟನಾ ಮೆರವಣಿಗೆ ಸಾಗಿ ಸೇರಲಿದೆ. ಅಲ್ಲಿ ಬೃಹತ್ ಸಮಾವೇಶವಾಗಲಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮೆಜೆಸ್ಟಿಕ್ ಬಳಿ ರ್ಯಾಲಿಗೆ ಚಾಲನೆ ನೀಡಿದರು. ಸಿದ್ದರಾಮಯ್ಯ ನೇತೃತ್ವದಲ್ಲಿ ಈ ಹೋರಾಟ ನಡೆಯಲಿದೆ ಎಂದು ಈ ಸಂದರ್ಭದಲ್ಲಿ ಡಿಕೆಶಿ ಘೋಷಿಸಿದರು. ಕಾಂಗ್ರೆಸ್ ಪಕ್ಷದ ಕಿಸಾನ್ ಘಟಕ ಮಾತ್ರವಲ್ಲದೆ ಎನ್​ಎಸ್​ಯುಐ, ಸೇವಾದಳ ಸೇರಿದಂತೆ ಕಾಂಗ್ರೆಸ್ ಪಕ್ಷದ ಇತರ ಘಟಕಗಳೂ ಈ ಪ್ರತಿಭಟನೆಯಲ್ಲಿ ಭಾಗಿಯಾಗಿವೆ.

  ನಿನ್ನೆ ರಾತ್ರಿಯಿಂದಲೇ ವಿವಿಧ ಜಿಲ್ಲೆಗಳಿಂದ ರೈತರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಬಸ್ಸು, ರೈಲು ಹೀಗೆ ವಿವಿಧ ವಾಹನಗಳಿಂದ ಬೆಂಗಳೂರಿಗೆ ಆಗಮಿಸಿದ್ದರು. ದಾವಣಗೆರೆ, ಮಂಡ್ಯ ಜಿಲ್ಲೆಗಳಿಂದ ಕೆಲ ರೈತರು ಟ್ರ್ಯಾಕ್ಟರ್​ಗಳಲ್ಲೇ ಬಂದು ಬೆಂಗಳೂರಿನ ರಸ್ತೆಯಲ್ಲಿ ಇಂದು ಮೆರವಣಿಗೆ ನಡೆಸಿ ಪ್ರೀಡಂ ಪಾರ್ಕ್​ನಲ್ಲಿ ಜವಾವಣೆಗೊಂಡಿದ್ದಾರೆ. ಫ್ರೀಡಂ ಪಾರ್ಕ್​ನಲ್ಲಿ ಸಾವಿರಾರು ಮಂದಿಯ ಸಮಾವೇಶಕ್ಕೆ ವೇದಿಕೆ ಸಜ್ಜುಗೊಳಿಸಲಾಗಿದೆ.

  ಇದನ್ನೂ ಓದಿ: ಗುರುವಾರ ಖಾತೆ ಹಂಚಿಕೆ ಪಟ್ಟಿ ಪ್ರಕಟ; ಅತೃಪ್ತ ಶಾಸಕರ ಅಸಮಾಧಾನ ಶಮನಕ್ಕೆ ಸಿಎಂ ಕಸರತ್ತು

  ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರಲ್ಲದೆ, ಜಿ. ಪರಮೇಶ್ವರ್, ಕೆ.ಜೆ. ಜಾರ್ಜ್, ಡಿಕೆ ಸುರೇಶ್, ಮಾಜಿ ಮೇಯರ್ ರಾಮಚಂದ್ರಪ್ಪ, ಭವ್ಯಾ ನರಸಿಂಹಮೂರ್ತಿ, ಕವಿತಾ ನಾಯ್ಡು, ಉಮಾ ಶಂಕರ್, ಕನೀಜ್ ಫಾತಿಮಾ ಮೊದಲಾದ ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
  Published by:Vijayasarthy SN
  First published: