ಉಪಚುನಾವಣೆಗೆ ಇನ್ನೇನು ಕೆಲವೇ ಗಂಟೆಗಳಿರುವಾಗ ಆಪರೇಷನ್​; ಕಾಂಗ್ರೆಸ್ ಬಿಬಿಎಂಪಿ ಸದಸ್ಯ ಬಿಜೆಪಿಗೆ

ಬಿಜೆಪಿ ಸೇರ್ಪಡನೆ ಬಳಿಕ ಮಾತನಾಡಿದ ವಸಂತ ಕುಮಾರ್​, ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು, ಕಾಮಗಾರಿಗಳು ಆಗುತ್ತಿರಲಿಲ್ಲ. ಅದಕ್ಕಾಗಿ ನಾನು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದೇನೆ. ಇಂದು ಸಿಎಂ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದೇನೆ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸರವಣರನ್ನು ಬೆಂಬಲಿಸುತ್ತೇನೆ ಎಂದಿದ್ದಾರೆ.

Seema.R | news18-kannada
Updated:December 3, 2019, 6:52 PM IST
ಉಪಚುನಾವಣೆಗೆ ಇನ್ನೇನು ಕೆಲವೇ ಗಂಟೆಗಳಿರುವಾಗ ಆಪರೇಷನ್​; ಕಾಂಗ್ರೆಸ್ ಬಿಬಿಎಂಪಿ ಸದಸ್ಯ ಬಿಜೆಪಿಗೆ
ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡನೆಗೊಂಡ ಕಾಂಗ್ರೆಸ್​ ನಾಯಕ
  • Share this:
ಬೆಂಗಳೂರು (ಡಿ.3): ಉಪಚುನಾವಣೆ ಇನ್ನೊಂದುವರೆ ದಿನ ಬಾಕಿ ಇರುವಾಗಲೇ ಕಾಂಗ್ರೆಸ್​ ನಾಯಕರಿಗೆ ಬಿಜೆಪಿ ಶಾಕ್​ ನೀಡಿದೆ. ಬಹಿರಂಗ ಪ್ರಚಾರಕ್ಕೆ ಕಡೆಯ ಕ್ಷಣದಲ್ಲಿ ಕಾಂಗ್ರೆಸ್​ ಬಿಬಿಎಂಪಿ ಸದಸ್ಯ ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ಆಘಾತ ನೀಡಿದ್ದಾರೆ. 

ವಸಂತ ಕುಮಾರ್​ ಬಿಜೆಪಿಗೆ ಸೇರ್ಪಡನೆಯಾದ ಕಾಂಗ್ರೆಸ್​ ನಾಯಕ. ಸಂಪಂಗಿರಾಮನಗರ ವಾರ್ಡ್​ ಕಾಂಗ್ರೆಸ್​ ಸದಸ್ಯರಾದ ವಸಂತ್​ ಕುಮಾರ್​ ಅವರನ್ನು ಉಪಚುನಾವಣೆ ಕಡೆ ಕ್ಷಣದಲ್ಲಿ ಕಮಲ ಪಕ್ಷ  ಆಪರೇಷನ್​ ನಡೆಸಿ ಯಶಸ್ವಿಯಾಗಿದೆ.ಇಂದು ಡಾಲರ್ಸ್ ಕಾಲೋನಿಯ ಮುಖ್ಯಮಂತ್ರಿಗಳ ನಿವಾಸದಲ್ಲಿ ಬಿಎಸ್​ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡನೆಯಾಗಿದ್ದಾರೆ.

ಇದನ್ನು ಓದಿ: ಉಪಚುನಾವಣೆ: ಬಹಿರಂಗ ಪ್ರಚಾರಕ್ಕೆ ತೆರೆ; ನಾಳೆ ಮನೆಮನೆ ಪ್ರಚಾರ; ಮತದಾನಕ್ಕೆ ಒಂದೂವರೆ ದಿನ ಬಾಕಿ

ಬಿಜೆಪಿ ಸೇರ್ಪಡನೆ ಬಳಿಕ ಮಾತನಾಡಿದ ವಸಂತ ಕುಮಾರ್​, ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು, ಕಾಮಗಾರಿಗಳು ಆಗುತ್ತಿರಲಿಲ್ಲ. ಅದಕ್ಕಾಗಿ ನಾನು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದೇನೆ. ಇಂದು ಸಿಎಂ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದೇನೆ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸರವಣರನ್ನು ಬೆಂಬಲಿಸುತ್ತೇನೆ ಎಂದಿದ್ದಾರೆ.
First published:December 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading