Twitter War| ಕಾಂಗ್ರೆಸ್ ಆಡಿಯೋ ಹಂಗಾಮ; ಕಮಿಷನ್ ರಾಜಕಾರಣ ಮಾಡ್ತಾರಾ ಡಿಕೆಶಿ? ಕೈ-ಕಮಲ ಟ್ವಿಟರ್​ ವಾರ್!

ಈ ಆಡಿಯೋವನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಕಾಂಗ್ರೆಸ್​ ಕಾಲೆಳೆಯುತ್ತಿದ್ದಾರೆ. ಅಲ್ಲದೆ, ಡಿ.ಕೆ. ಶಿವಕುಮಾರ್​ ಅವರ ಮನೆ ಮೇಲೆ ಏಕೆ ಐಟಿ ದಾಳಿ ಆಯ್ತು? ಎಂಬ ಸತ್ಯ ಈಗ ಜನರಿಗೆ ಅರ್ಥವಾಗಿದೆ ಮತ್ತು ಡಿ.ಕೆ. ಶಿವಕುಮಾರ್ ಓರ್ವ ಭ್ರಷ್ಟ, ಕಮಿಷನ್ ರಾಜಕಾರಣಿ ಎಂದು ಉಲ್ಲೇಖಿಸಿ ಟ್ವಿಟರ್​ನಲ್ಲಿ ದಾಳಿ ನಡೆಸುತ್ತಿದ್ದಾರೆ.

ಡಿಕೆ ಶಿವಕುಮಾರ್.

ಡಿಕೆ ಶಿವಕುಮಾರ್.

 • Share this:
  ಬೆಂಗಳೂರು (ಅಕ್ಟೋಬರ್​ 13); ಆಡಳಿತ ಪಕ್ಷ ಬಿಜೆಪಿ ಕಮಿಷನ್ ರಾಜಕಾರಣ (Karnataka Commission Politics) ಮಾಡುತ್ತಿದೆ, ಕೊರೋನಾ ಕಾಲದಲ್ಲೂ ಭ್ರಷ್ಟಾಚಾರ ಎಗಿದೆ ಎಂದು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ (Congress) ಕಳೆದ ಒಂದು ವರ್ಷದಿಂದ ಆರೋಪಿಸುತ್ತಿದೆ. ಈ ಬಗ್ಗೆ ಹೋರಾಟವನ್ನೂ ರೂಪಿಸಿತ್ತು. ಆದರೆ, ನಿನ್ನೆ ಕಾಂಗ್ರೆಸ್ ಪಕ್ಷದ ​ಪತ್ರಿಕಾಗೋಷ್ಠಿಯಲ್ಲೇ ಲೀಕ್ ಆದ ಒಂದು ಆಡಿಯೋ ಇದೀಗ ಸ್ವತಃ ಕಾಂಗ್ರೆಸ್​ ಪಕ್ಷವನ್ನು ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (Dk Shivakumar) ಅವರನ್ನೇ ಮುಜುಗುರಕ್ಕೆ ಈಡುಮಾಡಿದೆ. ಡಿ.ಕೆ. ಶಿವಕುಮಾರ್​ ಕಮಿಷನ್ ರಾಜಕಾರಣ ನಡೆಸುತ್ತಿದ್ದಾರ? ಅವರ ಎಲ್ಲಾ ಬೆಂಬಲಿಗರೂ ಕೋಟಿ ಕೋಟಿ ಲೂಟಿ ಮಾಡಿದ ಭ್ರಷ್ಟರಾ? ಎಂಬ ಚರ್ಚೆಗಳು ಇದೀಗ ರಾಜ್ಯ ರಾಜಕಾರಣದಲ್ಲಿ ಹರಿದಾಡುದಾಡುತ್ತಿದೆ. ಅಲ್ಲದೆ, ಈ ವಿಚಾರ ಕಾಂಗ್ರೆಸ್​ ಮತ್ತು ಬಿಜೆಪಿ ನಡುವಿನ ಟ್ವಿಟರ್​ ವಾರ್​ ಅರ್ಥಾತ್​ ಕೆಸರೆರಚಾಟಕ್ಕೂ ಕಾರಣವಾಗಿದೆ.

  ಏನಿದು ಘಟನೆ?; 

  ನಿನ್ನೆ ಕಾಂಗ್ರೆಸ್​ ಕಚೇರಿಯಲ್ಲಿ ಹಿರಿಯ ನಾಯಕ ಉಗ್ರಪ್ಪ ಪತ್ರಿಕಾಗೋಷ್ಠಿ ಆಯೋಜಿಸಿದ್ದರು. ಈ ಪತ್ರಿಕಾಗೋಷ್ಠಿ ಆರಂಭಕ್ಕೂ ಮುನ್ನ ಅವರ ಪಕ್ಕ ಕುಳಿತಿದ್ದ ಕಾಂಗ್ರೆಸ್​ ಮಾಧ್ಯಮ ಸಂಯೋಜನ ಸಲೀಂ ಅಹಮ್ಮದ್ ಉಗ್ರಪ್ಪ ಅವರ ಕಿವಿಯಲ್ಲಿ ಜಲ ಸಂಪನ್ಮೂಲ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದರು. ಅಲ್ಲದೆ, "ಈ ಭ್ರಷ್ಟಾಚಾರದಲ್ಲಿ ಡಿ.ಕೆ. ಶಿವಕುಮಾರ್​ ಬೆಂಬಲಿಗರು ನೂರಾರು ಕೋಟಿ ಹಣ ಲೂಟಿ ಮಾಡಿದ್ದು, ಸ್ವತಃ ಡಿಕೆಶಿ ಅವರಿಗೆ 8 ರಿಂದ 12 ಪರ್ಸೆಂಟ್ ಕಮಿಷನ್ ಹೋಗುತ್ತದೆ" ಎಂದಿದ್ದರು. ಆದರೆ, ಪತ್ರಿಕಾಗೋಷ್ಠಿಯಲ್ಲಿ ಮೈಕ್ ಆಫ್ ಆಗಿರದ ಕಾರಣ ಈ ಖಾಸಗಿ ಸಂಭಾಷಣೆ ಇದೀಗ ರಾಜ್ಯ ರಾಜಕೀಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

  ಈ ಆಡಿಯೋವನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಕಾಂಗ್ರೆಸ್​ ಕಾಲೆಳೆಯುತ್ತಿದ್ದಾರೆ. ಅಲ್ಲದೆ, ಡಿ.ಕೆ. ಶಿವಕುಮಾರ್​ ಅವರ ಮನೆ ಮೇಲೆ ಏಕೆ ಐಟಿ ದಾಳಿ ಆಯ್ತು? ಎಂಬ ಸತ್ಯ ಈಗ ಜನರಿಗೆ ಅರ್ಥವಾಗಿದೆ ಮತ್ತು ಡಿ.ಕೆ. ಶಿವಕುಮಾರ್ ಓರ್ವ ಭ್ರಷ್ಟ, ಕಮಿಷನ್ ರಾಜಕಾರಣಿ ಎಂದು ಉಲ್ಲೇಖಿಸಿ ಟ್ವಿಟರ್​ನಲ್ಲಿ ದಾಳಿ ನಡೆಸುತ್ತಿದ್ದಾರೆ.

  ಡಿ.ಕೆ. ಶಿವಕುಮಾರ್​ ಹಾಗೂ ಕಾಂಗ್ರೆಸ್​ ವಿರುದ್ಧ ಟ್ವಿಟರ್​ನಲ್ಲಿ ಹರಿಹಾಯ್ದಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಳ್, "ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್​ ಬಗ್ಗೆ ಅವರ ಪಕ್ಷದವರೇ ಹೇಳಿರುವ ಮಾತುಗಳನ್ನು ರಾಜ್ಯದ ಜನ ಕೇಳುತ್ತಿದ್ದಾರೆ. ಡಿಕೆಶಿ ಮೇಲೆ ಇಡಿ, ಸಿಬಿಐ ದಾಳಿಯಾದಾಗ ರಾಜಕೀಯ ಪ್ರೇರಿತ ಎಂದವರಿಗೆ ಅವರದ್ದೇ ಪಕ್ಷದ ಮುಖಂಡರು ಸಾಕ್ಷ್ಯ ನೀಡಿದ್ದಾರೆ.  ಕಾಂಗ್ರೆಸ್ ಪಕ್ಷದಲ್ಲಿದ್ದು, ಕೆಪಿಸಿಸಿ ಕಚೇರಿಯಲ್ಲಿ ಕುಳಿತು ಸತ್ಯ ಹೇಳಿರುವ ಕಾಂಗ್ರೆಸ್ ಮುಖಂಡರಿಗೆ ಧನ್ಯವಾದಗಳು. ನಿಮ್ಮ ಮಾತುಗಳನ್ನು ಜನರಿಗೆ ತಲುಪಿಸಿರುವ ಮಾಧ್ಯಮಗಳಿಗೆ ಅಭಿನಂದನೆ" ಎಂದಿದ್ದಾರೆ.  ಅಲ್ಲದೆ ಮತ್ತೊಂದು ಟ್ವೀಟ್​ನಲ್ಲಿ, "ತಕ್ಕಡಿ‌‌ ಮೇಲೆಳುತ್ತಿಲ್ಲ ಎನ್ನುವ ಮೂಲಕ ಕಾಂಗ್ರೆಸ್ಸಿಗೆ ಭವಿಷ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡರೇ ಗುಟ್ಟಾಗಿ ಒಪ್ಪಿಕೊಂಡಿದ್ದಾರೆ. ಡಿ.ಕೆ. ಶಿವಕುಮಾರ್ ರಾರಾಜ್ಯಾಧ್ಯಕ್ಷರಾಗಿ ಇದ್ದರೆ ಪಕ್ಷ ನಿರ್ನಾಮವಾಗಲಿದೆ ಎಂದು ಕಾಂಗ್ರೆಸ್ಸಿಗರು ಹೇಳಿರುವುದು ತಡವಾಗಿಯಾದರೂ ಜ್ಞಾನೋದಯವಾದಂತಾಗಿದೆ" ಎಂದು ಲೇವಡಿ ಮಾಡಿದ್ದಾರೆ.  ಮಾಜಿ ಸಚಿವ ಸಿ.ಟಿ. ರವಿ ಸಹ ಡಿಕೆ ಶಿವಕುಮಾರ್​ ಬಗ್ಗೆ ವ್ಯಂಗ್ಯವಾಡಿದ್ದು, "ಕೊತ್ವಾಲ್ ರಾಮಚಂದ್ರನ ಶಿಷ್ಯನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಅವರದೇ ಪಕ್ಷದ ಮುಖಂಡರು ಕರ್ನಾಟಕ ಕಾಂಗ್ರೆಸ್​ ಕಚೇರಿಯಲ್ಲೇ ಬಹಿರಂಗಪಡಿಸಿದ್ದಾರೆ ಎಂದರೆ ಕೆಪಿಸಿಸಿಗೆ ಎಂಥ ದುರ್ಗತಿ ಬಂದಿರಬಹುದು?  ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಅವರು ನಡೆಸುತ್ತಿರುವ ಕಲೆಕ್ಷನ್ ಗುಟ್ಟನ್ನು ಕೊನೆಗೂ ಅವರದೇ ಪಕ್ಷದ ಮುಖಂಡರಾದ ವಿ.ಎಸ್.ಉಗ್ರಪ್ಪ ಮತ್ತು ಸಲೀಂ ಅಹಮ್ಮದ್ ಗುಸುಗುಸಿನಲ್ಲೇ ಜಗಜ್ಜಾಹಿರು ಮಾಡಿದ್ದಾರೆ. ಕಾಣದ ಕಲೆಕ್ಷನ್ ಇನ್ನು ಎಷ್ಟಿರಬಹುದು?" ಎಂದು ಪ್ರಶ್ನೆ ಮಾಡಿದ್ದಾರೆ.  ಮತ್ತೊಂದು ಟ್ವೀಟ್​ನಲ್ಲಿ, "ಸಿದ್ದರಾಮಯ್ಯನವರ ಶಿಷ್ಯ ಪಡೆ ನಿಮಗೆ ಖೆಡ್ಡಾ ತೋಡಲು ಪ್ರಾಯಶಃ ಸಜ್ಜಾಗಿರುವಂತೆ ಕಾಣುತ್ತಿದೆ. ಒಂದು ಕಡೆ ತಮ್ಮ ನಾಯಕನನ್ನು ಹೊಗಳಿ, ಇನ್ನೊಂದು ಕಡೆ ನಿಮ್ಮನ್ನು ಜನತೆ ಮುಂದೆ ಬೆತ್ತಲು ಮಾಡಲು ಹೊರಟಿದಂತಿದೆ. ಯಾವುದಕ್ಕೂ ಎಚ್ಚೆತ್ತುಕೊಳ್ಳುವುದು ಒಳಿತು" ಎಂದು ಎಚ್ಚರಿಕೆ ನೀಡಿದ್ದಾರೆ.  ಅಲ್ಲದೆ, "ಐಟಿ-ಇಡಿ ದಾಳಿ ರಾಜಕೀಯ ಪ್ರೇರಿತ ಎಂದು ಬೊಬ್ಬೆ ಹೊಡೆಯುವ ನಾಯಕರೇ ನಿಮ್ಮ ಅಧ್ಯಕ್ಷರ ಬ್ರಹ್ಮಾಂಡ ಭ್ರಷ್ಟಾಚಾರ ಬೆತ್ತಲಾಗಿದೆ. ಭ್ರಷ್ಟ ಅಧ್ಯಕ್ಷನನ್ನು ಇಟ್ಟುಕೊಂಡು ಉಪಚುನಾವಣೆಯಲ್ಲಿ ಯಾವ ಮುಖವಿಟ್ಟುಕೊಂಡು ಮತ ಕೇಳುತ್ತೀರಿ?" ಎಂದು ಕಾಂಗ್ರೆಸ್ ವಿರುದ್ಧ ಛೀಮಾರಿ ಹಾಕಿದ್ದಾರೆ.  ಆದರೆ, ಬಿಜೆಪಿ ನಾಯಕರಿಗೆ ಟ್ವಿಟರ್​ನಲ್ಲೇ ಸರಣಿ ಟ್ವೀಟ್​ ಮೂಲಕ ತಿರುಗೇಟು ನೀಡಿರುವ ಕಾಂಗ್ರೆಸ್​, "ಆಧಾರ ರಹಿತವಾಗಿ ಮಾತನಾಡಿದ್ದ ಸಲೀಂ ಅವರನ್ನು ಅಮಾನತು ಮಾಡಿದ್ದೇವೆ. ತಮ್ಮ ಸರ್ಕಾರದ ವಿರುದ್ಧ ಪುಂಖಾನುಪುಂಖವಾಗಿ ಆರೋಪಗಳ ಸುರಿಮಳೆಗೈದ ಯತ್ನಾಳ್, ಹೆಚ್. ವಿಶ್ವನಾಥ್ ಅವರ ಮೇಲೆ ಬಿಜೆಪಿ ಕ್ರಮ ಕೈಗೊಳ್ಳುವ ಧೈರ್ಯ ತೋರುವುದೇ ಅಥವಾ ಅವರ ಆರೋಪಗಳನ್ನು ಒಪ್ಪಿಕೊಳ್ಳುವ ಪ್ರಾಮಾಣಿಕತೆ ತೋರುವುದೇ?" ಎಂದು ಪ್ರಶ್ನೆ ಮಾಡಿದೆ.  ಮತ್ತೊಂದು ಟ್ವೀಟ್​ನಲ್ಲಿ, "ಹಿಂದೊಮ್ಮೆ ಕಾಂಗ್ರೆಸ್ ಬಗ್ಗೆ ಸುಳ್ಳು ಆರೋಪ ಮಾಡಲು ಕುಳಿತ ವೇದಿಕೆಯಲ್ಲೇ ಬಿ.ಎಸ್. ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ಅವರು ಬಿಜೆಪಿ ಹೈಕಮಾಂಡಿಗೆ ತಾವು ಕಪ್ಪ ಕಾಣಿಕೆ ಸಲ್ಲಿಸಿದ್ದನ್ನು ಬಹಿರಂಗಪಡಿಸಿದ್ದರು. ಯಾವ ಭ್ರಷ್ಟಾಚಾರದ ಹಣವನ್ನು ದೆಹಲಿಗೆ ರವಾನಿಸಿದ್ದರು? ಹೈಕಮಾಂಡ್ ಮೆಚ್ಚಿಸಲು ರಾಜ್ಯವನ್ನು ಲೂಟಿ ಹೊಡೆದರಾ? ಬಿಜೆಪಿಯವರು ಉತ್ತರಿಸಬೇಕು" ಎಂದು ಕಾಂಗ್ರೆಸ್ ಆಗ್ರಹಿಸಿದೆ.  ಇದೇ ಸಂದರ್ಭದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆಯೂ ಉಲ್ಲೇಖಿಸಿರುವ ಕಾಂಗ್ರೆಸ್​, "ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಸ್ವಪಕ್ಷಿಯರೇ ಡಂಗುರ ಸಾರಿತ್ತಾ ಆರೋಪಿಸಿದ್ದಾರೆ. ಯತ್ನಾಳ್, ವಿಶ್ವನಾಥ್, ಸುರೇಶ್ ಗೌಡ ಅವರುಗಳು ತಮ್ಮದೇ ಸರ್ಕಾರದ ವಿರುದ್ಧದ ಆರೋಪಗಳಿಗೆ ಬಿಜೆಪಿ ಯಾವುದೇ ಕ್ರಮ ಕೈಗೊಳ್ಳದಿರುವುದು ತಮ್ಮ ಸರ್ಕಾರದ ಭ್ರಷ್ಟಾಚಾರವನ್ನ ಒಪ್ಪಿಕೊಂಡಂತಾಗಿದೆ. ಅವರ ಆರೋಪಗಳಿಗೆ ಬಿಜೆಪಿ ಉತ್ತರಿಸಬೇಕಿದೆ.
  #ಭ್ರಷ್ಟಬಿಜೆಪಿ  ಅನಧಿಕೃತ ಮಾತುಗಳನ್ನು ಇಟ್ಟುಕೊಂಡು ರೊಟ್ಟಿ ನೆಕ್ಕುತ್ತಿರುವ ಬಿಜೆಪಿ ತಮ್ಮದೇ ಪಕ್ಷದವರು ಅಧಿಕೃತವಾಗಿಯೇ ಪತ್ರಿಕಾಗೋಷ್ಠಿ ನಡೆಸಿಯೇ ಮಾಡಿದ ಆರೋಪಗಳಿಗೆ ಉತ್ತರ ನೀಡಲಿ. ನೀರಾವರಿ ಹಗರಣದ ಬಗ್ಗೆ ಹೆಚ್. ವಿಶ್ವನಾಥ್ ಅವರ ಆರೋಪ, ಯಡಿಯೂರಪ್ಪ ಕುಟುಂಬದ ಭ್ರಷ್ಟಾಚಾರ ಆರೋಪಗಳಿಗೆ ಮೊದಲು ಬಿಜೆಪಿ ತನ್ನ 'ಅಧಿಕೃತ' ಎಂಬ ಮುದ್ರೆ ಒತ್ತಲಿ" ಎಂದು ಕಾಂಗ್ರೆಸ್​ ಆಗ್ರಹಿಸಿದೆ.
  Published by:MAshok Kumar
  First published: