• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Election ಫಲಿತಾಂಶಕ್ಕೂ ಮೊದಲೇ ಪಕ್ಷೇತರ ಅಭ್ಯರ್ಥಿಗೆ ‘ಕೈ’ ಗಾಳ: ಯಾವ ಕ್ಷೇತ್ರ?

Karnataka Election ಫಲಿತಾಂಶಕ್ಕೂ ಮೊದಲೇ ಪಕ್ಷೇತರ ಅಭ್ಯರ್ಥಿಗೆ ‘ಕೈ’ ಗಾಳ: ಯಾವ ಕ್ಷೇತ್ರ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Kundgol Constituency: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಚಿಕ್ಕನಗೌಡರನ್ನು ಸೆಳೆಯಲು ಕಾಂಗ್ರೆಸ್ ಮುಂದಾಗಿದೆ.

  • Share this:

ಹುಬ್ಬಳ್ಳಿ: ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶಕ್ಕೂ (Karnataka Assembly Election 2023) ಮೊದಲೇ ಕುಂದಗೋಳ (Kundgol Constituency) ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಸ್​.ಐ.ಚಿಕ್ಕನಗೌಡರನ್ನು (Independent Candidate SI Chikkanagowda) ಕಾಂಗ್ರೆಸ್ ಸಂಪರ್ಕ ಮಾಡಿದೆ ಎನ್ನಲಾಗಿದೆ. ಬಿಜೆಪಿ (BJP) ಟಿಕೆಟ್ ಸಿಗದ ಹಿನ್ನೆಲೆ ಎಸ್​ಐ ಚಿಕ್ಕನಗೌಡರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಇದೀಗ ಮಾಜಿ ಸಿಎಂ ಜಗದೀಶ್ ಶೆಟ್ಟರ್​ (Former CM Jgadish Shettar) ಮೂಲಕ ಎಸ್ಐ ಚಿಕ್ಕಗೌಡರನ್ನು ಸೆಳೆಯಲು ಕಾಂಗ್ರೆಸ್ (Congress) ಮುಂದಾಗಿದೆ ಎಂದು ತಿಳಿದು ಬಂದಿದೆ.


ಕುಂದಗೋಳದಲ್ಲಿ ಹಾಲಿ ಕಾಂಗ್ರೆಸ್ ಶಾಸಕಿ ಕುಸುಮಾವತಿ ಶಿವಳ್ಳಿ ಎರಡನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಶಾಸಕಿ ಕುಸಮಾವತಿ ಶಿವಳ್ಳಿ ಅವರಿಗೆ ಟಿಕೆಟ್ ನೀಡಬಾರದು ಕಾಂಗ್ರೆಸ್ ಅಂಗಳದಲ್ಲಿ ಕೂಗು ಕೇಳಿ ಬಂದಿತ್ತು. ಕೊನೆ ಗಳಿಗೆಯಲ್ಲಿ ಟಿಕೆಟ್ ಪಡೆಯುವಲ್ಲಿ ಕುಸುಮಾವತಿ ಶಿವಳ್ಳಿ (Kundgol MLA Kusumavati Shivalli) ಯಶಸ್ವಿಯಾಗಿದ್ದರು.


ಎಸ್​ಐ ಚಿಕ್ಕನಗೌಡ, ಪಕ್ಷೇತರ ಅಭ್ಯರ್ಥಿ


ಕುಸುಮಾ ಶಿವಳ್ಳಿ ವಿರುದ್ಧ ವಿರೋಧಿ ಅಲೆ


ಕ್ಷೇತ್ರದಲ್ಲಿ ವ್ಯಾಪಕ ವಿರೋಧಿ ಅಲೆ ಹೊಂದಿರುವ ಕುಸುಮಾವತಿ ಶಿವಳ್ಳಿ ಅವರ ಗೆಲುವು ಕಷ್ಟ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆಯಂತೆ. ಈ ಹಿನ್ನೆಲೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಚಿಕ್ಕನಗೌಡರನ್ನು ಸೆಳೆಯಲು ಕಾಂಗ್ರೆಸ್ ಮುಂದಾಗಿದೆ.




ಯಾರು ಈ ಎಸ್​ಐ ಚಿಕ್ಕನಗೌಡ?


ಎಸ್​ಐ ಚಿಕ್ಕನಗೌಡರು ಬಿಜೆಪಿ ಮೂಲದವರು ಮತ್ತು ಜಗದೀಶ್ ಶೆಟ್ಟರ್ ಬೆಂಬಲಿಗರಲ್ಲಿ ಪ್ರಮುಖರು. ಇನ್ನು ಬಿಜೆಪಿಯಿಂದ ಸ್ಪರ್ಧೆ ಮಾಡಿರುವ ಎಂ.ಆರ್.ಪಾಟೀಲ್ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬಣದಲ್ಲಿ ಗುರುತಿಸಿಕೊಂಡಿದ್ದಾರೆ.




ಇದನ್ನೂ ಓದಿ:  HD Kumaraswamy: ಷರತ್ತುಗಳ ಜೊತೆಯಲ್ಲಿ ಮೈತ್ರಿಗೆ ಸಿದ್ಧ ಎಂದ HDK? ಯಾರತ್ತ ದಳಪತಿಗಳ ಒಲವು?


ಜಗದೀಶ್ ಶೆಟ್ಟರ್ ಬಣದಲ್ಲಿ ಗುರುತಿಸಿಕೊಂಡಿದ್ದಕ್ಕೆ ಬಿಜೆಪಿ ಟಿಕೆಟ್ ತಪ್ಪಿದೆ ಎಂಬ ಮಾತುಗಳು ಕುಂದಗೋಳ ಕ್ಷೇತ್ರದಲ್ಲಿ ಕೇಳಿ ಬಂದಿದ್ದವು.

top videos
    First published: