ಯಶವಂತಪುರ ಉಪಚುಣಾವಣೆ: ಕಣದಿಂದ ಹಿಂದೆ ಸರಿದ ರಾಜಕುಮಾರ್​​​; ಪಿ. ನಾಗರಾಜ್​​ಗೆ ಕಾಂಗ್ರೆಸ್​​ ಟಿಕೆಟ್​​​

ಮೊದಲಿಗೆ ಯಶವಂತಪುರದಿಂದ ರಾಜಕುಮಾರ್ ಎಂಬವರಿಗೆ ಟಿಕೆಟ್​​ ಘೋಷಿಸಲಾಗಿತ್ತು. ಆದರೆ, ಎಸ್​​​.ಟಿ ಸೋಮಶೇಖರ್​​ ಎದುರು ಸ್ಪರ್ಧಿಸಲು ರಾಜಕುಮಾರ್​​​ ಹಿಂದೇಟು ಹಾಕಿದ್ದಾರೆ. ಹಾಗಾಗಿಯೇ ಪಿ. ನಾಗರಾಜ್​​ಗೆ ಕಾಂಗ್ರೆಸ್​ ಘೋಷಿಸಿದೆ ಎನ್ನಲಾಗುತ್ತಿದೆ.

news18-kannada
Updated:November 17, 2019, 7:21 PM IST
ಯಶವಂತಪುರ ಉಪಚುಣಾವಣೆ: ಕಣದಿಂದ ಹಿಂದೆ ಸರಿದ ರಾಜಕುಮಾರ್​​​; ಪಿ. ನಾಗರಾಜ್​​ಗೆ ಕಾಂಗ್ರೆಸ್​​ ಟಿಕೆಟ್​​​
ಮೊದಲಿಗೆ ಯಶವಂತಪುರದಿಂದ ರಾಜಕುಮಾರ್ ಎಂಬವರಿಗೆ ಟಿಕೆಟ್​​ ಘೋಷಿಸಲಾಗಿತ್ತು. ಆದರೆ, ಎಸ್​​​.ಟಿ ಸೋಮಶೇಖರ್​​ ಎದುರು ಸ್ಪರ್ಧಿಸಲು ರಾಜಕುಮಾರ್​​​ ಹಿಂದೇಟು ಹಾಕಿದ್ದಾರೆ. ಹಾಗಾಗಿಯೇ ಪಿ. ನಾಗರಾಜ್​​ಗೆ ಕಾಂಗ್ರೆಸ್​ ಘೋಷಿಸಿದೆ ಎನ್ನಲಾಗುತ್ತಿದೆ.
  • Share this:
ಬೆಂಗಳೂರು(ನ.17): ಬೆಂಗಳೂರು ಉತ್ತರ ವ್ಯಾಪ್ತಿಗೆ ಸೇರುವ ಯಶವಂತಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಿ. ನಾಗರಾಜ್​ ಎಂಬುವರನ್ನು ಕಾಂಗ್ರೆಸ್​​ ಕಣಕ್ಕಿಳಿಸಿದೆ. ಇಲ್ಲಿನ ಚುನಾವಣಾ ಕಣದಿಂದ ರಾಜಕುಮಾರ್​​ ಎಂಬುವರು ಹಿಂದೆ ಸರಿದ ಕಾರಣ ಪಿ. ನಾಗರಾಜ್​ಗೆ ಕಾಂಗ್ರೆಸ್​​ ಟಿಕಟ್​ ಘೋಷಿಸಿದೆ. ಖುದ್ದು ಕಾಂಗ್ರೆಸ್​ ಹೈಕಮಾಂಡ್​​​ ಸೋನಿಯಾ ಗಾಂಧಿಯವರೇ ಪಿ. ನಾಗರಾಜ್​​ಗೆ ಟಿಕೆಟ್​​ ನೀಡಿದ್ಧಾರೆ.

ಈಗಾಗಲೇ ಕರ್ನಾಟಕ ಉಪಚುನಾವಣೆಗೆ 15 ಕ್ಷೇತ್ರಗಳಿಗೂ ಕಾಂಗ್ರೆಸ್​​ ಟಿಕೆಟ್​ ಘೋಷಿಸಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್​​ ಗುಂಡೂರಾವ್​​​​ ನೇತೃತ್ವದಲ್ಲಿ ನಡೆದ ಕಾಂಗ್ರೆಸ್​ ನಾಯಕರ ಸಭೆಯಲ್ಲಿ ಕ್ಷೇತ್ರಗಳಿಗೆ ಟಿಕೆಟ್​​ ಫೈನಲ್ ಮಾಡಲಾಗಿದೆ. ಮೊದಲಿಗೆ ಯಶವಂತಪುರದಿಂದ ರಾಜಕುಮಾರ್ ಎಂಬವರಿಗೆ ಟಿಕೆಟ್​​ ಘೋಷಿಸಲಾಗಿತ್ತು. ಆದರೆ, ಎಸ್​​​.ಟಿ ಸೋಮಶೇಖರ್​​ ಎದುರು ಸ್ಪರ್ಧಿಸಲು ರಾಜಕುಮಾರ್​​​ ಹಿಂದೇಟು ಹಾಕಿದ್ದಾರೆ. ಹಾಗಾಗಿಯೇ ಪಿ. ನಾಗರಾಜ್​​ಗೆ ಕಾಂಗ್ರೆಸ್​ ಘೋಷಿಸಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಹೆಸರಿಗೆ ಜಾತಿ ಸೇರಿಸಿಕೊಂಡ ಎಸ್.ಟಿ. ಸೋಮಶೇಖರ್; ಯಶವಂತಪುರದಲ್ಲಿ ಗೆಲುವಿಗೆ ಅನರ್ಹ ಶಾಸಕರ ಹೊಸ ತಂತ್ರ

ಯಶವಂತಪುರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಅನರ್ಹ ಶಾಸಕ ಎಸ್.ಟಿ. ಸೋಮಶೇಖರ್ ಕಣಕ್ಕಿಳಿದಿದ್ದಾರೆ. ಈಗಾಗಲೇ ಉಪಚುನಾವಣೆ ಗೆಲ್ಲಲು ಸರ್ಕಸ್​​ ಕೂಡ ಮಾಡುತ್ತಿದ್ಧಾರೆ. ಅದಕ್ಕಾಗಿಯೇ ತಮ್ಮ ಹೆಸರು ಸ್ವಲ್ಪ ಮಾರ್ಪಾಡು ಮಾಡಿಕೊಂಡಿದ್ಧಾರೆ.

ಎಸ್.ಟಿ. ಸೋಮಶೇಖರ್ ಗೌಡ ಎಂದು ಬರೆಯಲಾಗಿರುವ ಪೋಸ್ಟರ್​​ಗಳು ಕ್ಷೇತ್ರದಲ್ಲಿ ಕಾಣಿಸುತ್ತಿವೆ. ಒಕ್ಕಲಿಗ ಮತಗಳ ಕ್ರೋಢೀಕರಣಕ್ಕೆ ಅವರು ಮುಂದಾಗಿರುವಂತಿದೆ. ಈ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಜವರಾಯಿ ಗೌಡ ಅವರು ಕಣದಲ್ಲಿರುವುದು ಒಕ್ಕಲಿಗ ಮತಗಳು ಹಂಚಿಕೆಯಾಗುವ ಸಾಧ್ಯತೆ ತಂದಿದೆ. ಈ ಹಿನ್ನೆಲೆಯಲ್ಲಿ ಎಸ್.ಟಿ. ಸೋಮಶೇಖರ್ ಅವರು ಒಕ್ಕಲಿಗ ಮತಗಳನ್ನು ಹಿಡಿದಿಟ್ಟುಕೊಳ್ಳಲು ತಮ್ಮ ಸಮುದಾಯದ ಹೆಸರನ್ನು ಸೇರಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ಯಡಿಯೂರಪ್ಪ ಸಿಎಂ ಆಗಲು ಅಧಿಕಾರ ತ್ಯಾಗ ಮಾಡಿದ 17 ಅನರ್ಹ ಶಾಸಕರ ಗೆಲ್ಲಿಸಬೇಕಿದೆ: ಶೋಭಾ ಕರಂದ್ಲಾಜೆ
----------
First published: November 17, 2019, 6:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading