Congress-SDPI ಒಂದೇ ನಾಣ್ಯದ ಎರಡು ಮುಖಗಳು; ಸುನಿಲ್ ಕುಮಾರ್

ಸುನಿಲ್ ಕುಮಾರ್, ಇಂಧನ ಸಚಿವ

ಸುನಿಲ್ ಕುಮಾರ್, ಇಂಧನ ಸಚಿವ

Sunil Kumar Karkala: ಭಜರಂಗ ದಳ ಹಾಗೂ ಪಿಎಫ್​​ಐನ್ನು ಒಂದೇ ತಕ್ಕಡಿಯಲ್ಲಿ ಅಳತೆ ಮಾಡುವ ಕಾಂಗ್ರೆಸಿಗರ ಮನಸು ರೋಗಗ್ರಸ್ಥವಾಗಿದೆ ಎಂದ ಆಕ್ರೋಶ ಹೊರಹಾಕಿದ್ದಾರೆ.

  • Share this:

ಉಡುಪಿ: ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ (Congress Manifesto) ಭಜರಂಗದಳ (Bajrang Dal) ನಿಷೇಧ ವಿಚಾರಕ್ಕೆ ಇಂಧನ ಸಚಿವ ಸುನಿಲ್ ಕುಮಾರ್ (Minister Sunil Kumar) ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಪ್ರಣಾಳಿಕೆ ರಾಜ್ಯಾದ್ಯಂತ ತೀವ್ರ ವಿವಾದ ಸೃಷ್ಟಿಸುವ ಸಾಧ್ಯತೆ ಇದೆ. ಕಾಂಗ್ರೆಸ್ ಹಾಗೂ ಎಸ್​​​ಡಿಪಿಐ (Congress And SDPI) ಒಂದೇ ನಾಣ್ಯದ ಎರಡು ಮುಖ. ಭಜರಂಗದಳ ನಿಷೇಧಿಸುವುದು ಸೇರಿದಂತೆ ಕಾನೂನು ಕ್ರಮ ತೆಗೆದುಕೊಳ್ಳುವ ವಿಚಾರ ಕಾಂಗ್ರೆಸ್ ಪ್ರಸ್ತಾಪಿಸಿದೆ. ಡಿಕೆ ಶಿವಕುಮಾರ್ (DK Shivakumar) ಸಿದ್ದರಾಮಯ್ಯನವರೇ (Siddaramaiah), ನಾವು ಪಿಎಫ್​ಐ ನಿಷೇಧ ಮಾಡಿದ್ದೇವೆ‌. ಅದೇ ಸಂಕಟ ಹಾಗೂ ದ್ವೇಷವನ್ನು ಭಜರಂಗದಳ ನಿಷೇಧದ ಮೂಲಕ ತೀರಿಸಿಕೊಳ್ಳಲು ಹೊರಟಿದ್ದೀರಾ ಎಂದು ಸುನಿಲ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.


ನಿಮ್ಮ ಹಿಂದೂ ವಿರೋಧಿ ನಿಲುವಿಗೆ ಧಿಕ್ಕಾರ. ಭಜರಂಗದಳ ಎನ್ನುವುದು ಸಮಾಜ ವಿರೋಧಿ ಸಂಘಟನೆಯಲ್ಲ. ಹಿಂದೂಗಳ ರಕ್ಷಣೆಗೆ, ಗೋಮಾತೆಯ ಹಿತಕ್ಕೆ, ಹಿಂದೂ ಸೋದರಿಯರ ಮಾನ ಸಂರಕ್ಷಣೆಗೆ ಸಿದ್ಧವಾಗಿರುವ ಕಾರ್ಯಕರ್ತರ ಪಡೆ.


ಕಾಂಗ್ರೆಸಿಗರ ಮನಸು ರೋಗಗ್ರಸ್ಥ


ಮುಸ್ಲಿಂ‌ ಓಲೈಕೆಗಾಗಿ ಭಜರಂಗದಳ ನಿಷೇಧಿಸುತ್ತೇವೆಂಬ ದಾಷ್ಟ್ಯವೇ? ಭಜರಂಗ ದಳ ಹಾಗೂ ಪಿಎಫ್​​ಐನ್ನು ಒಂದೇ ತಕ್ಕಡಿಯಲ್ಲಿ ಅಳತೆ ಮಾಡುವ ಕಾಂಗ್ರೆಸಿಗರ ಮನಸು ರೋಗಗ್ರಸ್ಥವಾಗಿದೆ ಎಂದ ಆಕ್ರೋಶ ಹೊರಹಾಕಿದ್ದಾರೆ.


ಪಿಎಫ್ಐ ಒಂದು ಭಯೋತ್ಪಾದಕ ಸಂಘಟನೆ ಎಂಬ ಕಾರಣಕ್ಕೆ ನಿಷೇಧ ಮಾಡಿದ್ದೇವೆ. ಭಜರಂಗದಳ ಹಿಂದು ಸಮಾಜ ಮತ್ತು ದೇಶ ಹಿತದ ಸಂಘಟನೆ. ದೇಶಪ್ರೇಮವನ್ನು ಕಾಂಗ್ರೆಸ್ ನಿಷೇಧಿಸುತ್ತದೆಯೇ ಎಂದು ಸುನಿಲ್ ಕುಮಾರ್ ಕಿಡಿಕಾರಿದ್ದಾರೆ.


ಪಿ. ಚಿದಂಬರಂ ಸುದ್ದಿಗೋಷ್ಠಿ


ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಸುದ್ದಿಗೋಷ್ಠಿ ನಡೆಸಿದರು. ಕಾಂಗ್ರೆಸ್ ಪ್ರಚಾರದಲ್ಲಿ ಭಾಗಿಯಾಗಿರುದಕ್ಕೆ ಸಂತೋಷವಾಗಿದೆ. ಕಾಂಗ್ರೆಸ್ ಜನರ ನೈಜ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತಿದೆ.  ಆದರೆ ಇಂದು ಜನರ ಸಮಸ್ಯೆಗಳ ಚರ್ಚೆಯ  ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಹಾಲಿ ರಾಜ್ಯ ಸರ್ಕಾರ ಜನ ಮತದಿಂದ ಅಧಿಕಾರಕ್ಕೆ ಬಂದಿಲ್ಲ. ಬದಲಾಗಿ ಕುದುರೆ ವ್ಯಾಪಾರದಿಂದ ಸರ್ಕಾರ ರಚನೆ ಮಾಡಲಾಗಿದೆ ಎಂದು ಚಿದಂಬರಂ ಹೇಳಿದರು.




ಈ ಕಾರಣಕ್ಕಾಗಿ ಸರ್ಕಾರದಲ್ಲಿ 40% ಭ್ರಷ್ಟಾಚಾರ ಇದೆ. ರಾಜ್ಯ ಸರ್ಕಾರದ ವಿರುದ್ಧ ಇರುವ 40% ಕಮಿಷನ್ ಆರೋಪ ದೇಶದ ಗಮನ ಸೆಳೆಯುತ್ತಿದೆ. ಶಿಕ್ಷಣ, ಆರೋಗ್ಯ, ಕೃಷಿ, ಉದ್ಯೋಗ, ಆರ್ಥಿಕತೆಯ ಭರವಸೆ ಈಡೇರಿಸಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಶಿಕ್ಷಣ ಖಾಸಗೀಕರಣಕ್ಕೆ ಹೊರಟಿದೆ ಎಂದು ಆರೋಪಿಸಿದರು.


ಇದನ್ನೂ ಓದಿ:  Karnataka Opinion Poll: ಕರ್ನಾಟಕದಲ್ಲಿ ಯಾರ ಅಧಿಪತ್ಯ? ಸಮೀಕ್ಷೆಯಲ್ಲಿ ಸಿಕ್ತು ಅಚ್ಚರಿಯ ಫಲಿತಾಂಶ!


ಶಾಲೆಗಳಲ್ಲಿ ಮಕ್ಕಳಿಗೆ ಶೌಚಾಲಯ ಇಲ್ಲ. ವಿದ್ಯಾರ್ಥಿ ವೇತನವೂ ಸಿಗುತ್ತಿಲ್ಲ. ರಾಜ್ಯದಲ್ಲಿ ಮತೀಯ ಆಧಾರದಲ್ಲಿ ಜನರನ್ನು ಸಂಘ ಪರಿವಾರ ವಿಭಜನೆ ಮಾಡುತ್ತಿದೆ. ಮತಾಂತರ ನಿಷೇಧ ಕಾಯ್ದೆ ಮೂಲಕ ಜನರ ನಡುವೆ ಗೊಂದಲ ಸೃಷ್ಟಿ ಮಾಡಿದೆ ಎಂದರು.

First published: