ಕಾಂಗ್ರೆಸ್, ಜೆಡಿಎಸ್​​ಗೆ ಲೋಕಸಭೆ ಚುನಾವಣೆಯಲ್ಲಿ ಆದ ಗತಿಯೇ ಆಗಲಿದೆ; ಡಿಸಿಎಂ ಲಕ್ಷ್ಮಣ ಸವದಿ ವ್ಯಂಗ್ಯ

ಅಥಣಿ ಮತ್ತು‌ ಕಾಗವಾಡ ಇಬ್ಬರೂ ಬಿಜೆಪಿ ಶಾಸಕರನ್ನು ಡಿಸೆಂಬರ್​​ 10 ರಂದು ವಿಧಾನಸೌಧಕ್ಕೆ ಕರೆದೊಯ್ಯುತ್ತೇನೆ. ಸಿಎಂ ಬಿ.ಎಸ್​.ಯಡಿಯೂರಪ್ಪನವರನ್ನು ಭೇಟಿ ಮಾಡುತ್ತೇನೆ- ಲಕ್ಷ್ಮಣ ಸವದಿ

ಡಿಸಿಎಂ ಲಕ್ಷ್ಣಣ ಸವದಿ

ಡಿಸಿಎಂ ಲಕ್ಷ್ಣಣ ಸವದಿ

  • Share this:
ಬೆಳಗಾವಿ(ಡಿ.05): ಅಥಣಿ ಮತ್ತು ಕಾಗವಾಡದಲ್ಲಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಜಯಗಳಿಸಲಿದ್ದಾರೆ. ಕಾಂಗ್ರೆಸ್​​ ಮತ್ತು ಜೆಡಿಎಸ್​ ಪಕ್ಷಗಳಿಗೆ ಲೋಕಸಭಾ ಚುನಾವಣೆಯಲ್ಲಿ ಆದ ಗತಿಯೇ ಆಗಲಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಲೇವಡಿ ಮಾಡಿದ್ದಾರೆ. 

ಅಥಣಿ ಮತಕ್ಷೇತ್ರದ ನಾಗನೂರ ಬಿ. ಕೆ. ಗ್ರಾಮದಲ್ಲಿ ಮತದಾನ ಮಾಡಿದ ಬಳಿಕ ನ್ಯೂಸ್​ 18 ಕನ್ನಡದ ಜೊತೆ ಮಾತನಾಡಿದರು." ಅಥಣಿ ಮತ್ತು ಕಾಗವಾಡಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಜಯಗಳಿಸಲಿದ್ದಾರೆ. ಸಿಎಂ‌ ಬಿ. ಎಸ್. ಯಡಿಯೂರಪ್ಪ ಅವರಿಗೆ ನೀಡಿದ ಭರವಸೆ ಈಡೇರಿಸುವೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.

Karnataka Bypolls | ಸಿದ್ದರಾಮಯ್ಯರನ್ನು ಬಿಜೆಪಿಗೆ ಕರೆತರುತ್ತೇವೆ: ರಮೇಶ್ ಜಾರಕಿಹೊಳಿ

"ಅಥಣಿ ಮತ್ತು‌ ಕಾಗವಾಡ ಇಬ್ಬರೂ ಬಿಜೆಪಿ ಶಾಸಕರನ್ನು ಡಿಸೆಂಬರ್​​ 10 ರಂದು ವಿಧಾನಸೌಧಕ್ಕೆ ಕರೆದೊಯ್ಯುತ್ತೇನೆ. ಸಿಎಂ ಬಿ.ಎಸ್​.ಯಡಿಯೂರಪ್ಪನವರನ್ನು ಭೇಟಿ ಮಾಡುತ್ತೇನೆ," ಎಂದರು.

"ರಾಜ್ಯದಲ್ಲಿ ಬಹುತೇಕ ಎಲ್ಲ 15 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ.  ಕಾಂಗ್ರೆಸ್, ಜೆಡಿಎಸ್​​​ ಪಕ್ಷಗಳಿಗೆ ಲೋಕಸಭೆ ಚುನಾವಣೆಯಲ್ಲಿ ಆದ ಗತಿಯೇ ಆಗಲಿದೆ. ಸಮಾಧಾನಕರ ಎಂಬಂತೆ ಕಾಂಗ್ರೆಸ್, ಜೆಡಿಎಸ್ ಗೆ ತಲಾ ಒಂದು ಸ್ಥಾನ‌ ಬಂದರೂ ಬರಬಹುದು," ಎಂದು ವ್ಯಂಗ್ಯ ಮಾಡಿದರು.

ಕಾಫಿಗೆ ಅಂತ ಕರ್ಕೊಂಡ್ ಹೋಗಿ ಬಿಜೆಪಿಗೆ ಸೇರಿಸಿಬಿಟ್ರು: ವಸಂತ್ ಅಳಲು
First published: