Karnataka Politics: ಬಿಜೆಪಿ ಅಭ್ಯರ್ಥಿ ಬಸವರಾಜ್ ಹೊರಟ್ಟಿ ಸೋಲಿಸಲು ಕಾಂಗ್ರೆಸ್, ಜೆಡಿಎಸ್ ಮಾಸ್ಟರ್ ಪ್ಲಾನ್

ಹಲವಾರು ವರ್ಷಗಳಿಂದ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಶಿಕ್ಷಕರ ಸಂಘದೊಂದಿಗೆ ಗುರುತಿಸಿಕೊಂಡಿರೋ ಗುರಿಕಾರ ಮೂಲತಃ ಶಿಕ್ಷಕರೇ ಆಗಿದ್ದರು. ಇತ್ತೀಚಿಗೆ ಅವರು ನಿವೃತ್ತಿಯಾಗಿದ್ದಾರೆ.

ಬಸವರಾಜ ಹೊರಟ್ಟಿ

ಬಸವರಾಜ ಹೊರಟ್ಟಿ

  • Share this:
ಧಾರವಾಡ : ರಾಜ್ಯದಲ್ಲಿ ಇದೀಗ ವಿಧಾನ ಪರಿಷತ್ ಚುನಾವಣೆಯ (MLC Poll 2022) ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಅದರಲ್ಲೂ ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರದ (Karnataka West Teachers Constituency) ಚುನಾವಣೆ ಎಲ್ಲರ ಗಮನ ಸೆಳೆಯುತ್ತಿದೆ. ಇದಕ್ಕೆ ಕಾರಣ ಇತ್ತೀಚಿಗಷ್ಟೇ ಬಿಜೆಪಿಗೆ (BJP) ಸೇರ್ಪಡೆಯಾಗಿ, ಬಿಜೆಪಿ ಪಕ್ಷದಿಂದ ಸ್ಪರ್ಧೆಗೆ ಇಳಿದಿರೋ ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ (Former Speaker Basavaraj Horatti). ಇದೀಗ ಅವರ ವಿರುದ್ಧ ಕಾಂಗ್ರೆಸ್ (Congress) ಪಕ್ಷ ಮಾಜಿ ಸರಕಾರಿ ನೌಕರ ಹಾಗೂ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರನ್ನು ಕಣಕ್ಕಿಳಿಸೋ ಮೂಲಕ ಟಕ್ಕರ್ ನೀಡಲು ಸಿದ್ಧವಾಗಿದೆ.

ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರದಲ್ಲಿ ಇದೀಗ ಚುನಾವಣೆಯ ಕಾವು ರಂಗೇರಿದೆ. ಕಳೆದ ಏಳು ಚುನಾವಣೆಯಲ್ಲಿ ನಿರಂತರವಾಗಿ ಗೆದ್ದು ಬಂದಿರೋ ಬಸವರಾಜ್ ಹೊರಟ್ಟಿ ಈ ಬಾರಿ ಬಿಜೆಪಿಯಿಂದ ಕಣಕ್ಕೆ ಇಳಿದಿದ್ಧಾರೆ. ಒಟ್ಟು 42 ವರ್ಷಗಳ ಕಾಲ ಈ ಕ್ಷೇತ್ರದ ಸದಸ್ಯರಾಗಿದ್ದ ಹೊರಟ್ಟಿ ಇತ್ತೀಚಿಗಷ್ಟೇ ಬಿಜೆಪಿ ಸೇರ್ಪಡೆಯಾಗಿ, ಇದೀಗ ಅದೇ ಪಕ್ಷದಿಂದ ಸ್ಪರ್ಧೆಗೆ ಇಳಿದಿದ್ದಾರೆ. ಅವರಿಗೆ ಟಕ್ಕರ್ ನೀಡಲು ಕಾಂಗ್ರೆಸ್ ಪಡೆ ಶಿಕ್ಷಕರ ಸಂಘದ ಮಾಜಿ ರಾಜ್ಯಾಧ್ಯಕ್ಷ ಬಸವರಾಜ ಗುರಿಕಾರ ಅವರನ್ನು ಕಣಕ್ಕಿಳಿಸಿದೆ.

ಹೊರಟ್ಟಿ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಲು ಪ್ಲಾನ್

ಹಲವಾರು ವರ್ಷಗಳಿಂದ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಶಿಕ್ಷಕರ ಸಂಘದೊಂದಿಗೆ ಗುರುತಿಸಿಕೊಂಡಿರೋ ಗುರಿಕಾರ ಮೂಲತಃ ಶಿಕ್ಷಕರೇ ಆಗಿದ್ದರು. ಇತ್ತೀಚಿಗೆ ಅವರು ನಿವೃತ್ತಿಯಾಗಿದ್ದಾರೆ. ಅವರಿಗೆ ಶಿಕ್ಷಕರೊಂದಿಗೆ ಒಳ್ಳೆಯ ಒಡನಾಟವಿದೆ. ಹೀಗಾಗಿ ಅವರನ್ನೇ ಕಣಕ್ಕಿಳಿಸೋ ಮೂಲಕ ಹೊರಟ್ಟಿಯವರ ನಾಗಾಲೋಟಕ್ಕೆ ಕಡಿವಾಣ ಹಾಕಲು ಕೈ ಪಾಳಯ ಯೋಜನೆ ರೂಪಿಸಿದೆ.

ಇದನ್ನೂ ಓದಿ:  Basavaraj Horatti: ದಾಖಲೆ ಬರೀತಾರಾ ಬಸವರಾಜ್ ಹೊರಟ್ಟಿ: ತಮ್ಮ ಅಂಬಾಸಿಡರ್ ಕಾರ್ ಬಗ್ಗೆ ಹೇಳಿದ್ದು ಹೀಗೆ

ಬಸವರಾಜ್ ಗುರಿಕಾರ್ ಕಾಂಗ್ರೆಸ್ ಮುಖಂಡರಾದ ಎಚ್.ಕೆ. ಪಾಟೀಲ್, ಸಲೀಂ ಅಹ್ಮದ್, ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರೆಡ್ಡಿ ಅವದೊಂದಿಗೆ ಧಾರವಾಡದ ಕೆಸಿಡಿ ವೃತ್ತದಿಂದ ಮೆರವಣಿಗೆ ಮೂಲಕ ಆಗಮಿಸಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯಕ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ನಾಮಪತ್ರವನ್ನು ಸಲ್ಲಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಬಸವರಾಜ್ ಗುರಿಕಾರ್

ಶಿಕ್ಷಕ ಮತದಾರರು ಪಕ್ಷೇತರರಾಗಿ ನಿಲ್ಲೋದಕ್ಕಿಂತ ಯಾವುದಾದರೂ ಪಕ್ಷದೊಂದಿಗೆ ಕಣಕ್ಕೆ ಇಳಿಯುವಂತೆ ಹೇಳಿದ್ದಕ್ಕೆ, ಕಾಂಗ್ರೆಸ್ ಪಕ್ಷದ ಮೂಲಕ ಕಣಕ್ಕೆ ಇಳಿದಿರೋದಾಗಿ ಹೇಳಿದರು. ಇನ್ನು ಕಾಂಗ್ರೆಸ್ ನಿಂದ ತಮ್ಮ ಶಕ್ತಿ ಮತ್ತಷ್ಟು ಹೆಚ್ಚಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬಸವರಾಜ್ ಗುರಿಕಾರ ಹೇಳಿದರು.

ಜೆಡಿಎಸ್ ಪ್ರಾಬಲ್ಯ ಕಡಿಮೆ

ಇನ್ನು ಪ್ರತಿಬಾರಿ ಜೆಡಿಎಸ್ ಮೂಲಕವೇ ಬಸವರಾಜ್ ಹೊರಟ್ಟಿ ಕಣಕ್ಕೆ ಇಳಿಸುತ್ತಿದ್ದರು. ಆದರೆ ಅವರು ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿರೋದ್ರಿಂದ ಜೆಡಿಎಸ್ ಪ್ರಾಬಲ್ಯ ತೀರಾನೇ ಕಡಿಮೆಯಾಗಿದೆ. ಅದರೊಂದಿಗೆ ಜಿಲ್ಲೆಯಲ್ಲಿ ಜೆಡಿಎಸ್ ನಿಂದ ಅನೇಕ ಮುಖಂಡರು ಬೇರೆ ಬೇರೆ ಪಕ್ಷ ಸೇರಿದ್ದಾರೆ. ಹೀಗಾಗಿ ಜೆಡಿಎಸ್ ಗೆ ಈ ಬಾರಿ ದೊಡ್ಡ ಹಿನ್ನೆಡೆ ಉಂಟಾಗಿದೆ. ಆದರೂ ಪಕ್ಷದ ಅಭ್ಯರ್ಥಿಯನ್ನಾಗಿ ಶ್ರೀಶೈಲ ಗುಡದಿನ್ನಿ ಅವರನ್ನು ಕಣಕ್ಕೆ ಇಳಿಸಲಾಗಿದೆ.

ಹೊರಟ್ಟಿ ಅವರನ್ನು ಕಟ್ಟಿಹಾಕಲು ಜೆಡಿಎಸ್ ಪ್ಲಾನ್

ಶ್ರೀಶೈಲ ಮೊದಲಿನಿಂದಲೂ ಬಸವರಾಜ ಹೊರಟ್ಟಿಯವರ ಆತ್ಮೀಯ ವಲಯದಲ್ಲಿ ಗುರುತಿಸಿಕೊಂಡವರು. ಆದರೆ ಇದೀಗ ಹೊರಟ್ಟಿ ಬಿಜೆಪಿ ಸೇರಿದ್ದರಿಂದ ಅವರ ಆತ್ಮೀಯರಾಗಿದ್ದ ಶ್ರೀಶೈಲ ಅವರಿಗೆ ಟಿಕೆಟ್ ಕೊಡೋ ಮೂಲಕ ಜೆಡಿಎಸ್ ಮುಖಂಡರು ಹೊರಟ್ಟಿ ಅವರನ್ನು ಕಟ್ಟಿ ಹಾಕಲು ತಂತ್ರ ರೂಪಿಸಿದ್ಧಾರೆ. ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ ಶ್ರೀಶೈಲ ಗುಡದಿನ್ನಿ, ಧಾರವಾಡ ಡಿಸಿ ಕಚೇರಿಯಲ್ಲಿ ನಾಮಪತ್ರವನ್ನು ಸಲ್ಲಿಸಿದರು.

ಇದನ್ನೂ ಓದಿ:  MLC Poll: ವಿಜಯೇಂದ್ರಗೆ ಟಿಕೆಟ್ ಮಿಸ್; ಸರ್ಕಾರದ ಮೇಲೆ ಗಂಭೀರ ಪರಿಣಾಮ ಅಂದ್ರು ಹೆಚ್.ಡಿ.ಕುಮಾರಸ್ವಾಮಿ

ದಾಖಲೆ ಆಗುತ್ತೆ 

ಈ ಭಾರತ ದೇಶದಲ್ಲಿ ಏಳು ಸಲ ಯಾರೂ ಪರಿಷತ್‌ಗೆ ಆರಿಸಿ ಬಂದಿಲ್ಲ. 8 ನೇ ಆರಿಸಿ ಬಂದಲ್ಲಿ ದಾಖಲೆ ಆಗುತ್ತದೆ. ಆ ದಾಖಲೆ ಆಗಬೇಕು ಅಂತಾನೇ ಎಲ್ಲರೂ ನಮ್ಮ ಕಡೆ ಒಲವು ತೋರಿಸಿದ್ದಾರೆ ಎಂದು ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
Published by:Mahmadrafik K
First published: