News18 India World Cup 2019

ದೆಹಲಿಯಿಂದ ಬೆಂಗಳೂರಿಗೆ ಬಿಎಸ್​ವೈ ದಿಢೀರ್ ವಾಪಸ್ಸಾಗಿದ್ದೇಕೆ?; ಆಪರೇಷನ್ ಕಮಲ ಭೀತಿ ಎದುರಿಸುತ್ತಿದೆಯೇ ಮೈತ್ರಿ ಸರ್ಕಾರ!

news18
Updated:September 9, 2018, 9:11 AM IST
ದೆಹಲಿಯಿಂದ ಬೆಂಗಳೂರಿಗೆ ಬಿಎಸ್​ವೈ ದಿಢೀರ್ ವಾಪಸ್ಸಾಗಿದ್ದೇಕೆ?; ಆಪರೇಷನ್ ಕಮಲ ಭೀತಿ ಎದುರಿಸುತ್ತಿದೆಯೇ ಮೈತ್ರಿ ಸರ್ಕಾರ!
news18
Updated: September 9, 2018, 9:11 AM IST
ರಮೇಶ್ ಹಿರೇಜಂಬೂರು, ನ್ಯೂಸ್ 18 ಕನ್ನಡ

ಬೆಂಗಳೂರು (ಸೆ.9): ದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿಯನ್ನು ಬಿಟ್ಟು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದಿಢೀರ್​ ಎಂದು ಬೆಂಗಳೂರಿಗೆ ವಾಪಸ್ಸಾಗಿರುವುದು ಜೆಡಿಎಸ್​, ಕಾಂಗ್ರೆಸ್ ನಾಯಕರ ತಳಮಳಕ್ಕೆ ಕಾರಣವಾಗಿದೆ.

ಲೋಕಸಭೆ ಚುನಾವಣೆವರೆಗೂ ಮೈತ್ರಿ ಸರ್ಕಾರ ಅಲುಗಾಡಲ್ಲ ಎಂದಿದ್ದ ಕಾಂಗ್ರೆಸ್ ಜೆಡಿಎಸ್ ನಾಯಕರು ಇದೀಗ ಚುನಾವಣೆಗೂ ಮೊದಲೇ ಮೈತ್ರಿ ಸರ್ಕಾರದ ಅಸ್ತಿತ್ವದ ಬಗ್ಗೆ ಭಯ ಪಡುತ್ತಿದ್ದಾರೆ.

ಮೈತ್ರಿ ಸರ್ಕಾರದಲ್ಲಿ ಈ ಅಳಕು ಆರಂಭವಾಗಿದ್ದೆ, ಬೆಳಗಾವಿ ರಾಜಕೀಯ ಕಿತ್ತಾಟದಿಂದ. ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಬ್ರದರ್ಸ್​ ನಡುವೆ ಉಂಟಾದ ಮನಸ್ತಾನದಿಂದಾಗಿ ಅಸಮಾಧಾನಗೊಂಡಿರುವ ಜಾರಕಿಹೊಳಿ ಬ್ರದರ್ಸ್​ ಬಿಜೆಪಿ ಸೇರಲು ಒಲವು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇವರ ಜೊತೆಗೆ 16 ಕಾಂಗ್ರೆಸ್​ ಶಾಸಕರು ಜೊತೆಗಿದ್ದು, ಒಂದು ವೇಳೆ ಜಾರಕಿಹೊಳಿ ಬಿಜೆಪಿ ಸೇರಿದರೆ ಮೈತ್ರಿ ಸರ್ಕಾರಕ್ಕೆ ಕುತ್ತು ಗ್ಯಾರಂಟಿ.

ಇದನ್ನು ಓದಿ: ನಾಳೆ ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲಿರುವ ಸಿಎಂ ನಿಯೋಗ; ಅತಿವೃಷ್ಟಿಯ ಪರಿಹಾರ ಕೋರಿ ಮನವಿ

ಸರ್ಕಾರದ ವಿರುದ್ಧ ಸೆಡ್ಡು ಹೊಡೆದು ನಿಂತ ಜಾರಕಿಹೊಳಿ ಬ್ರದರ್ಸ್ ಕಾಂಗ್ರೆಸ್ ಈಗ ಬಿಸಿತುಪ್ಪವಾಗಿದ್ದಾರೆ. ಯಡಿಯೂರಪ್ಪ ಏನ್ ಮಾಡ್ತಿದ್ದಾರೆ ಎಂಬ ಆತಂಕ ಮೈತ್ರಿ ಸರ್ಕಾರದ ನಾಯಕರಿಗಿದೆ. ತೆರೆ ಮರೆಯಲ್ಲೇ ಶ್ರೀರಾಮುಲು ರಾಜಕೀಯ ಆಟ ಆಡುತ್ತಿದ್ದಾರೆ. ಜಾರಕಿಹೊಳಿ ಬ್ರದರ್ಸ್ ಹಾಗೂ 16 ಶಾಸಕರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಇದರ ಜೊತೆಗೆ ಇದರ ನಡುವೆ ಡಿ.ಕೆ. ಬ್ರದರ್ಸ್​ಗೆ ಐಟಿ, ಇಡಿ ದಾಳಿ ಭೂತ ಕಾಡುತ್ತಿದೆ.
Loading...

ಇದರ ನಡುವೆಯೇ ಬಿಎಸ್​ವೈ ರಾಷ್ಟ್ರೀಯ ಕಾರ್ಯಕಾರಣಿಯನ್ನೂ ಬಿಟ್ಟು ಬೆಂಗಳೂರಿಗೆ ಬಂದಿರುವುದು ಸಿಎಂ ಕುಮಾರಸ್ವಾಮಿ ಅವರ ಆತಂಕ ಹೆಚ್ಚಿಸಿದೆ. ಮತ್ತೆ ಆಪರೇಷನ್ ಕಮಲ ನಡೆಯುವ ಭೀತಿಯಲ್ಲಿ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಹಾಗೂ ಪರಮೇಶ್ವರ್ ಇದ್ದು, ಸರ್ಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.

ಸರ್ಕಾರ ಬೀಳಿಸುವ ಪ್ರಯತ್ನ ಮಾಡಲ್ಲ: ಬಿಎಸ್​ವೈ

ಬಿಎಸ್​ವೈ ಅವರ ನಡೆ ತೀವ್ರ ಕುತೂಹಲ ಕೆರಳಿಸಿದ್ದು, ಮೈತ್ರಿ ಸರ್ಕಾರವನ್ನು ಉರುಳಿಸುವ ಪ್ರಯತ್ನವನ್ನು ಬಿಜೆಪಿ ಮಾಡುವುದಿಲ್ಲ. ಯಾಕಿಷ್ಟು ಭಯ ಪಡುತ್ತಿದ್ದಾರೆ. ಆದರೆ, ಕಾಂಗ್ರೆಸ್​ನ ಹಲವು ಪ್ರಮುಖ ನಾಯಕರು ಬಿಜೆಪಿ ಸೇರುತ್ತಾರೆ ಎನ್ನುವ ಮೂಲಕ ಮತ್ತಷ್ಟು ಕುತೂಹಲ ಹುಟ್ಟು ಹಾಕಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾವು ಲೋಕಸಭೆ ಚುನಾವಣೆಗೆ ಅಣಿಯಾಗುತ್ತಿದ್ದೇವೆ. ಈಗಾಗಲೇ ಚುನಾವಣೆ ಕೆಲಸಗಳು ನಡೆಯುತ್ತಿವೆ. ಕೆಲವು ನಾಯಕರು ರಾಜ್ಯಾದ್ಯಂತ ಪ್ರವಾಸ ಮಾಡ್ತಿದ್ದಾರೆ. ನಾನೂ ಸದ್ಯದಲ್ಲೇ ರಾಜ್ಯಾದ್ಯಂತ ಪ್ರವಾಸ ಮಾಡ್ತೇನೆ. ಮತ್ತೆ ದೆಹಲಿಗೆ ಹೋಗೊಲ್ಲ, ನಿನ್ನೆ ಹೋಗಿ ಬಂದಿದ್ದೇನೆ," ಎಂದು ಹೇಳಿದರು.
First published:September 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...