• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Mandya Politics: ಸುಮಲತಾ ಬಿಜೆಪಿಗೆ ಬೆಂಬಲ ಬೆನ್ನಲ್ಲೇ ಕಾಂಗ್ರೆಸ್-ಜೆಡಿಎಸ್ ಅಲರ್ಟ್; ಕಾರ್ಯಕರ್ತರಿಗೆ ಖಡಕ್ ಸಂದೇಶ ರವಾನೆ

Mandya Politics: ಸುಮಲತಾ ಬಿಜೆಪಿಗೆ ಬೆಂಬಲ ಬೆನ್ನಲ್ಲೇ ಕಾಂಗ್ರೆಸ್-ಜೆಡಿಎಸ್ ಅಲರ್ಟ್; ಕಾರ್ಯಕರ್ತರಿಗೆ ಖಡಕ್ ಸಂದೇಶ ರವಾನೆ

ಸುಮಲತಾ ಅಂಬರೀಶ್, ಸಂಸದೆ

ಸುಮಲತಾ ಅಂಬರೀಶ್, ಸಂಸದೆ

ಸುಮಲತಾ ಬಹುತೇಕ ಕೈ ಕಾರ್ಯಕರ್ತರನ್ನ ಸೆಳೆಯುವ ಸಾಧ್ಯತೆಗಳಿವೆ. ಈ ಹಿನ್ನೆಲೆ ಎಲ್ಲರಿಗೂ ಅಲರ್ಟ್​ ಆಗಿರುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್​ದೀಪ್​ ಸುರ್ಜೇವಾಲಾ ಸಂದೇಶ ರವಾನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  • News18 Kannada
  • 4-MIN READ
  • Last Updated :
  • Mandya, India
  • Share this:

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್ (Mandya MP Sumalatha Ambareesh) ಅಧಿಕೃತವಾಗಿ ಬಿಜೆಪಿ (BJP) ಬೆಂಬಲ ನೀಡಿದ್ದಾರೆ. ಈ ಹಿನ್ನೆಲೆ ಹಳೆ ಮೈಸೂರು ಭಾಗದಲ್ಲಿ ತಮ್ಮದೇ ಭದ್ರಕೋಟೆಗಳನ್ನು ಕಟ್ಟಿಕೊಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ (Congress And JDS) ಫುಲ್ ಅಲರ್ಟ್​ ಆಗಿವೆ. ಸುದ್ದಿಗೋಷ್ಠಿ ನಡೆಸಿದ್ದ ಸುಮಲತಾ ಅಂಬರೀಶ್, ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ವಾಗ್ದಾಳಿಗೆ ದಳಪತಿಗಳು ನಿಗಿ ನಿಗಿ ಕೆಂಡವಾಗಿದ್ದು, ತಮ್ಮ ಎಲ್ಲಾ ಕಾರ್ಯಕರ್ತರಿಗೂ (JDS Activist) ಖಡಕ್ ಸಂದೇಶವೊಂದನ್ನು ರವಾನಿಸಿದ್ದಾರೆ. ಇದೀಗ ಎರಡೂ ಪಕ್ಷಗಳು ಸುಮಲತಾ ಅಂಬರೀಶ್ ಅವರನ್ನು ರಾಜಕೀಯವಾಗಿ ಕುಗ್ಗಿಸಲು ರಣತಂತ್ರಗಳನ್ನು ರಚನೆ ಮಾಡಿಕೊಳ್ಳುತ್ತಿವೆ.


ಸುಮಲತಾ ಬಿಜೆಪಿಯಲ್ಲಿ ನೆಲೆ ನಿಲ್ಲಬಾರದು. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಒಂದೇ ಒಂದು ಸೀಟು ಗೆಲ್ಲಲು ಅವಕಾಶ ಮಾಡಬಾರದು. ಒಂದು ವೇಳೆ ಬಿಜೆಪಿ ಗೆದ್ದರೆ ಜೆಡಿಎಸ್ ಅಸ್ತಿತ್ವಕ್ಕೆ ಕೊಡಲಿ ಪೆಟ್ಟು ಬೀಳಲಿದೆ. ಆದ್ದರಿಂದ ಎಲ್ಲರೂ ಅಲರ್ಟ್​ ಆಗಿರಿ ಎಂಬ ಸಂದೇಶವನ್ನು ಕಾರ್ಯಕರ್ತರಿಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.


ಹೆಚ್​​ಡಿಕೆ ಖಡಕ್ ಸೂಚನೆ


ಕಾರ್ಯಕರ್ತರು, ಎರಡನೇ ಹಂತದ ನಾಯಕರು ಸುಮಲತಾ ಜೊತೆ ಬಿಜೆಪಿಗೆ ಹೋಗದಂತೆ ನೋಡಿಕೊಳ್ಳಿ ಎಂದು ತನ್ನ ಎಲ್ಲಾ ಶಾಸಕರಿಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಖಡಕ್ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


ಸುಮಲತಾ ಅವರನ್ನು ರಾಜಕೀಯವಾಗಿ ಕಟ್ಟಿ ಹಾಕಲು ದಳಪತಿಗಳು ಮುಂದಾಗಿದ್ದು, ಶೀಘ್ರದಲ್ಲೇ ಮಂಡ್ಯದ ನಾಯಕರೊಂದಿಗೆ ಸಭೆ ನಡೆಸಿ ರಣತಂತ್ರ ರೂಪಿಸಲಿದ್ದಾರೆ.




ಇತ್ತ ಕಾಂಗ್ರೆಸ್ ಸಹ ಅಲರ್ಟ್​


ಸುಮಲತಾ ಬಿಜೆಪಿ ಸೇರುತ್ತಿರುವ ಹಿನ್ನೆಲೆ ಕಾಂಗ್ರೆಸ್ ಸಹ ಅಲರ್ಟ್ ಆಗಿದೆ. ಮಾಜಿ ಸಚಿವ ಅಂಬರೀಶ್ ಕಾಂಗ್ರೆಸ್​​ನಲ್ಲಿದ್ದ ಕಾರಣ ಸುಮಲತಾ ಅವರ ಬೆಂಬಲಿಗರಲ್ಲಿ ಕೈ ನಾಯಕರಿದ್ದಾರೆ. ಆದ್ದರಿಂದ ಸುಮಲತಾ ಅಂಬರೀಶ್ ಸ್ಥಳೀಯ ಕಾಂಗ್ರೆಸ್ ನಾಯಕರನ್ನು ಬಿಜೆಪಿಯತ್ತ ಸೆಳೆಯುವ ಸಾಧ್ಯತೆಗಳಿವೆ. ಈ ಹಿನ್ನೆಲೆ ಕಾಂಗ್ರೆಸ್ ನಾಯಕರು (Congress Leaders) ಅಲರ್ಟ್ ಆಗಿದ್ದು, ಸ್ಥಳೀಯ ಮುಖಂಡರು


ಸುಮಲತಾ ಬಹುತೇಕ ಕೈ ಕಾರ್ಯಕರ್ತರನ್ನ ಸೆಳೆಯುವ ಸಾಧ್ಯತೆಗಳಿವೆ. ಈ ಹಿನ್ನೆಲೆ ಎಲ್ಲರಿಗೂ ಅಲರ್ಟ್​ ಆಗಿರುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್​ದೀಪ್​ ಸುರ್ಜೇವಾಲಾ ಸಂದೇಶ ರವಾನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.




ಕಾಂಗ್ರೆಸ್​ ಹೈಕಮಾಂಡ್​ನಿಂದ ಬಂತು ಸೂಚನೆ


ಸುಮಲತಾ ಮತ್ತು ಜೆಡಿಎಸ್ ಹಾವು- ಮುಂಗಸಿಯಂತಾಗಿದೆ. ಯಾವುದೇ ಕಾರಣಕ್ಕೂ ಸುಮಲತಾ ಹಿಂದೆ ನಮ್ಮವರು ಹೋಗದಂತೆ ನೋಡಿಕೊಳ್ಳಿ. ಕಾಂಗ್ರೆಸ್ ಮತಬುಟ್ಟಿಗೆ ಕೈ ಹಾಕದಂತೆ ನೋಡಿಕೊಳ್ಳಿ. 2018ರಲ್ಲಿ ಕಾಂಗ್ರೆಸ್ ಶೂನ್ಯ ಆಗಿದೆ. ಈ ಬಾರಿ ಮಂಡ್ಯದಲ್ಲಿ ಒಳ್ಳೆ ವಾತವರಣ ಇದೆ. ಹಾಗಾಗಿ ಅವಕಾಶ ಕೈ ಚೆಲ್ಲಬಾರದು. ಏಳು ಸ್ಥಾನಗಳಲ್ಲಿ ಕನಿಷ್ಟ ನಾಲ್ಕನ್ನಾದರೂ ಗೆಲ್ಲಲೇಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ ಅಂತೆ.


ಇದನ್ನೂ ಓದಿ:  Janardhana Reddy: ಚುನಾವಣೆ ಸಂದರ್ಭದಲ್ಲೇ ಗಣಿಧಣಿಗೆ ಸಂಕಷ್ಟ! ವಿದೇಶಗಳಲ್ಲಿ ರೆಡ್ಡಿ ಹಣದ ಮೂಲದ ಮಾಹಿತಿ ನೀಡಲು ಕೋರ್ಟ್ ಆದೇಶ


ಜೆಡಿಎಸ್ ಬೆನ್ನಲ್ಲೇ ಮಂಡ್ಯದ ಜಿಲ್ಲೆಯ ಪ್ರಮುಖ ನಾಯಕರೊಂದಿಗೆ ರಾಜ್ಯ ಕಾಂಗ್ರೆಸ್ ನಾಯಕರು ಸಭೆ ನಡೆಸಲು ಮುಂದಾಗಿದ್ದಾರೆ. ಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣ್​ದೀಪ್​ ಸುರ್ಜೇವಾಲಾ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.




ಈ ಬಾರಿ ಮಂಡ್ಯಯತ್ತ ಅತಿಹೆಚ್ಚು ಆಸಕ್ತಿ ಹೊಂದಿರುವ ಬಿಜೆಪಿ ಸಾಲು ಸಾಲು ಸಭೆಗಳನ್ನು ನಡೆಸುತ್ತಿದೆ. ಇದರ ಜೊತೆಗೆ ಪಕ್ಷ ಸಂಘಟನೆಯಲ್ಲಿಯೂ ತೊಡಗಿಕೊಂಡಿದೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು