Kolar: ನಿಷೇಧಾಜ್ಞೆಗೂ ಡೋಂಟ್ ಕೇರ್, ರಾತ್ರೋರಾತ್ರಿ ಕಾಂಗ್ರೆಸ್-ಬಿಜೆಪಿ ಪ್ರತಿಭಟನೆ

ಫೆಬ್ರವರಿ 1 ರ ರಾತ್ರಿಯಿಂದ ಬಂಗಾರಪೇಟೆ ಪಟ್ಟಣದಾದ್ಯಂತ ನಿಷೇದಾಜ್ಞೆ ಯನ್ನ ತಹಶೀಲ್ದಾರ್ ದಯಾನಂದ ಜಾರಿ ಮಾಡಿದ್ದರು, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಯಾವುದನ್ನೂ ಲೆಕ್ಕಸದೆ ಪ್ರತಿಭಟನೆ ನಡೆಸಿದರು.

ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ

ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ

  • Share this:
ಕೋಲಾರ: ಬಂಗಾರಪೇಟೆ (Bangarapet) ಪಟ್ಟಣದ ಪುರಸಭೆ ನೂತನ ಕಟ್ಟಡ ಉದ್ಗಾಟನೆ (Inauguration) ವಿಚಾರವಾಗಿ ಬಿಜೆಪಿ (BJP) ಹಾಗೂ ಕಾಂಗ್ರೆಸ್ (Congress) ನಾಯಕರ ಮಧ್ಯೆ ಜಟಾಪಟಿ ಶುರುವಾಗಿದೆ. ಫೆಬ್ರವರಿ 2 ರಂದು ಕಚೇರಿಗೆ ಬಂಗಾರಪೇಟೆ ಕಾಂಗ್ರೆಸ್ ಶಾಸಕ (MLA)  ನಾರಾಯಣಸ್ವಾಮಿ (Narayan Swamy) ಪೂಜೆ ಮಾಡಿ ಉದ್ಗಾಟನೆ ಮಾಡೋದಾಗಿ ಮುಹೂರ್ತ ನಿಗದಿ ಮಾಡಿದ್ದರು. ಆದರೆ ಇದಕ್ಕೆ ಬಿಜೆಪಿ ಪುರಸಭಾ ಸದಸ್ಯರು ಹಾಗೂ ಮುಖಂಡರು ವಿರೋದಿಸಿದ್ದು, ಪ್ರತಿಭಟನೆ ನಡೆಸೋದಾಗಿ ಕರೆ ನೀಡಿದ್ದರು. ಹೀಗಾಗಿ ಸ್ತಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ, ಬಂಗಾರಪೇಟೆ ಪಟ್ಟಣದಾದ್ಯಂತ ಫೆಬ್ರವರಿ 1 ರ ರಾತ್ರಿಯಿಂದ ಫೆಬ್ರವರಿ 4 ನೇ ತಾರೀಖು ಮಧ್ಯರಾತ್ರಿವರೆಗೂ ನಿಷೇದಾಜ್ಞೆ (Section 144) ಜಾರಿ ಮಾಡಿ ತಹಶೀಲ್ದಾರ್ ದಯಾನಂದ್ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಪುರಸಭೆ ಕಚೇರಿ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

ಬಂಗಾರಪೇಟೆ ಶಾಸಕರ ವಿರೋಧ

ಇನ್ನು ಪ್ರತಿಭಟನೆ ಹಾಗೂ ಗುಂಪು ಸೇರದಂತೆ ಕಟ್ಟೆಚ್ಚರ ವಹಿಸಲಾಗಿದೆ. ಇದಕ್ಕೆ ಶಾಸಕ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ಯವರು ಅಭಿವೃದ್ದಿಯಲ್ಲೂ ರಾಜಕೀಯ ಮಾಡ್ತಿದ್ದಾರೆಂದು ವಾಗ್ದಾಳಿ ನಡೆಸಿದರು. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ಮುಖಂಡರು, ಉಸ್ತುವಾರಿ ಸಚಿವರು ಹಾಗೂ ಸಂಸದರನ್ನೇ ಬದಿಗೊತ್ತಿ ಕಟ್ಟಡ ಉದ್ಗಾಟನೆ ಮಾಡಲು ನಮ್ಮ ವಿರೋಧವಿದೆ, ಶಾಸಕರು ನಿಯಮ ಫಾಲೋ ಮಾಡಲಿ ಎಂದು ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ.

ಸಂಜೆ ಕಾಂಗ್ರೆಸ್ ಪ್ರತಿಭಟನೆ, ರಾತ್ರೋ ರಾತ್ರಿ ನೆರವೇರಿದ ಪೂಜೆ!

ಬಂಗಾರಪೇಟೆ ಪುರಸಭೆಯ ನೂತನ ಕಟ್ಟಡ ಉದ್ಗಾಟನೆ ವಿಚಾರವಾಗಿ ಬುಧವಾರ ಸಂಜೆಯಿಂದ ರಾತ್ರಿ ವರೆಗೂ ಬಿಜೆಪಿ, ಕಾಂಗ್ರೆಸ್  ಹೈಡ್ರಾಮಾ ಮುಂದುವರೆಯಿತು. ಫೆಬ್ರವರಿ 4 ರ ಮಧ್ಯರಾತ್ರಿ ವರೆಗೂ ಪುರಸಭೆ ಕಚೇರಿ ಸುತ್ತ ಮುತ್ತ ನಿಷೇದಾಜ್ಞೆ ಜಾರಿ ಮಾಡಿದ್ದರು. ಪುರಸಭೆ ನೂತನ ಕಟ್ಟಡವನ್ನ ಪ್ರವೇಶಿಸಲು  ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಶಾಸಕ ನಾರಾಯಣಸ್ವಾಮಿ, ನೂತನ ಕಟ್ಟಡಕ್ಕೆ ಮುತ್ತಿಗೆ ಹಾಕಿದರು. ಈ ವೇಳೆ ಪೊಲೀಸರು ತಡೆ ಹಾಕಿದರೂ ಕೈ ನಾಯಕರ ದಂಡು ಯಾವುದನ್ನೂ ಲೆಕ್ಕಿಸದೇ, ತಮ್ಮನ್ನ ಬಂದಿಸಿ ಜೈಲಿಗೆ ಕಳಿಸುವಂತೆ ರಮೇಶ್ ಕುಮಾರ್ ಸವಾಲು ಹಾಕಿದ್ರು.   ಪ್ರತಿಭಟನೆಯಲ್ಲಿ   ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ, ಎಮ್ಎಲ್‌ಸಿ ಅನಿಲ್ ಕುಮಾರ್ ಹಾಗೂ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು.

ಇದನ್ನೂ ಓದಿ: Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಪವರ್ ಕಟ್, ನಿಮ್ಮ ಏರಿಯಾ ಹೆಸರು ಈ ಲಿಸ್ಟ್​ನಲ್ಲಿದ್ಯಾ ನೋಡಿ

ಪೊಲೀಸರೊಂದಿಗೆ ರಮೇಶ್ ಕುಮಾರ್ ವಾಗ್ವಾದ

ಪೊಲೀಸರೊಂದಿಗೆ ರಮೇಶ್ ಕುಮಾರ್ ಹಾಗೂ ಶಾಸಕ ತೀವ್ರ ವಾಗ್ವಾದ ನಡೆಸಿದ ನಂತರ, ಕಾಂಗ್ರೆಸ್ ಶಾಸಕರು, ಪುರಸಭೆ ಸದಸ್ಯರಿಗೆ ಒಳಗೆ ಹೋಗಲು ಪೊಲೀಸರು ಅನುಮತಿ ನೀಡಿದರು.  ನೂತನ ಕಟ್ಟಡದಲ್ಲಿ  ಅಂಬೇಡ್ಕರ್, ಗಾಂಧೀಜಿ   ಪೋಟೋ ಇಟ್ಟು ಪೂಜೆ ಸಲ್ಲಿಸಿದ ಕಾಂಗ್ರೆಸ್ ನಾಯಕರು, ಕಟ್ಟಡ ಉದ್ಗಾಟನೆ ಮಾಡಿರೊದಾಗಿ ಘೋಷಿಸಿದ್ರು.  ಪುರಸಭೆಯಲ್ಲಿ ಪೂಜೆ ಸಲ್ಲಿಸಿದ ನಂತರ ಕಾಂಗ್ರೆಸ್ ಕಾರ್ಯಕರ್ತರು ಹೊರಗೆ  ಸಂಭ್ರಮಾಚರಣೆ ನಡೆಸಿದರು.

ಕಾಂಗ್ರೆಸ್ ವಿರುದ್ಧ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಕಾಂಗ್ರೆಸ್ ನಡೆ ವಿರೋದಿಸಿ  ಬಿಜೆಪಿ ಮುಖಂಡರು,  ಕಾರ್ಯಕರ್ತರು ಪುರಸಭೆ ಕಟ್ಟಡದ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಎರಡೂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮುಖಾ ಮುಖಿಯಾಗುವ ಮುನ್ನವೇ  ಸ್ತಳದಿಂದ  ಪೊಲೀಸರು ಎಲ್ಲರನ್ನ ಮನವೊಲಿಸಿ ವಾಪಾಸ್ ಕಳಿಸಿದರು.  ಈ ಬಗ್ಗೆ ಮಾತನಾಡಿದ ಬಿಜೆಪಿ ಮುಖಂಡ ಚಂದ್ರಾರೆಡ್ಡಿ, ಸಚಿವರು, ಸಂಸದರನ್ನ ಕರೆಸಿ ಸರ್ಕಾರದ ಕಾರ್ಯಕ್ರಮ ನಡೆಸಿ ಉದ್ಗಾಟನೆ ಮಾಡಬೇಕಿದೆ. ಆದರೆ ಶಾಸಕರು ಹಠಕ್ಕೆ ಬಿದ್ದು ತೋರಿದ ವರ್ತನೆ ಖಂಡನೀಯ ಎಂದು ಕಿಡಿಕಾರಿದರು.

ಇದನ್ನೂ ಓದಿ: Bagalkote: ಪಂಚಮಸಾಲಿ ಸಮುದಾಯದಲ್ಲಿ ಒಗ್ಗಟ್ಟು- ಒಡಕಿನ ಚರ್ಚೆಗೆ ಕಾರಣವಾದ ಮೂರನೇ ಪೀಠ..!

ಕಾಟಾಚಾರದ ನಿಷೇದಾಜ್ಞೆ ಆದೇಶ

ಫೆಬ್ರವರಿ 1 ರ ರಾತ್ರಿಯಿಂದ ಬಂಗಾರಪೇಟೆ ಪಟ್ಟಣ ದಾದ್ಯಂತ ನಿಷೇದಾಜ್ಞೆ ಯನ್ನ ತಹಶೀಲ್ದಾರ್ ದಯಾನಂದ ಜಾರಿ ಮಾಡಿದ್ದರು, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಯಾವುದನ್ನೂ ಲೆಕ್ಕಸದೆ ಪ್ರತಿಭಟನೆ ನಡೆಸಿದರು. ಬೆಳಗ್ಗೆಯಿಂದ ಪುರಸಭೆ ನೂತನ ಕಚೇರಿ ಹೊರಗೆ, ಸುತ್ತ ಮುತ್ತ ನೂರಕ್ಕೂ ಹೆಚ್ಚು ಪೊಲೀಸರನ್ನ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು. ಆದರೆ  ನಿಷೇದಾಜ್ಞೆ ಜಾರಿಯಲ್ಲಿದ್ದರೂ  ಬಿಜೆಪಿ, ಕಾಂಗ್ರೆಸ್ ಪ್ರತಿಭಟನೆಯಿಂದ ಪೊಲೀಸರು ಹೈರಾಣಾಗಿ, ಸುಸ್ತಾದರು. ನಿಷೇದಾಜ್ಞೆ ಉಲ್ಲಂಘನೆ ಮಾಡಿದವರ ವಿರುದ್ದ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡುವ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ದಯಾನಂದ ತಿಳಿಸಿದ್ದಾರೆ.
Published by:Annappa Achari
First published: