HOME » NEWS » State » CONGRESS AND BJP PREPARE STRATEGIES FOR VIDHANA MANDALA SESSION WHICH STARTS TODAY SNVS

ಇಂದಿನಿಂದ ಅಧಿವೇಶನ; ರಾಜ್ಯಪಾಲರು ಸಿಎಎ ಬಗ್ಗೆ ಮಾತನಾಡಿದರೆ ಅಡ್ಡಿಪಡಿಲು ಕಾಂಗ್ರೆಸ್ ನಿರ್ಧಾರ; ಬಿಜೆಪಿಯಿಂದಲೂ ಪ್ರತಿತಂತ್ರ

ಇವತ್ತು ಪ್ರಾರಂಭವಾಗಲಿರುವ ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯಪಾಲ ವಜುಭಾಯಿ ವಾಲ ಅವರು ಬೆಳಗ್ಗೆ 11ಗಂಟೆಗೆ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಲಿದ್ದಾರೆ.

news18-kannada
Updated:March 4, 2020, 7:57 PM IST
ಇಂದಿನಿಂದ ಅಧಿವೇಶನ; ರಾಜ್ಯಪಾಲರು ಸಿಎಎ ಬಗ್ಗೆ ಮಾತನಾಡಿದರೆ ಅಡ್ಡಿಪಡಿಲು ಕಾಂಗ್ರೆಸ್ ನಿರ್ಧಾರ; ಬಿಜೆಪಿಯಿಂದಲೂ ಪ್ರತಿತಂತ್ರ
ವಿಧಾನಸೌಧ
  • Share this:
ಬೆಂಗಳೂರು(ಫೆ. 17): ವಿಧಾನಮಂಡಲದಲ್ಲಿ ಜಂಟಿ ಅಧಿವೇಶನ ಇವತ್ತು ಪ್ರಾರಂಭವಾಗುತ್ತಿದ್ದು ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ತಂತ್ರ ಪ್ರತಿತಂತ್ರಗಳನ್ನ ಹೆಣೆದುಕೊಂಡು ಸಿದ್ಧವಾಗಿವೆ. ನಿನ್ನೆ ಭಾನುವಾರ ಎರಡೂ ಪಕ್ಷಗಳು ತಮ್ಮ ಶಾಸಕಾಂಗ ಪಕ್ಷದ ಸಭೆ ನಡೆಸಿ ರಣತಂತ್ರ ರೂಪಿಸಿವೆ. ರಾಜ್ಯಪಾಲರು ಸಿಎಎ ವಿಚಾರ ಪ್ರಸ್ತಾಪಿಸಿ ಸಮರ್ಥನೆ ಮಾಡಿದರೆ ಅದನ್ನು ಬಲವಾಗಿ ವಿರೋಧಿಸಿ ಅಡ್ಡಿಪಡಿಸುವುದು ಕಾಂಗ್ರೆಸ್​ನ ಪ್ರಮುಖ ನಿಲುವಾಗಿದೆ.

ಭಾನುವಾರ ಅಶೋಕ ಹೋಟೆಲ್​ನಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಅಧಿವೇಶನದಲ್ಲಿ ಚರ್ಚೆ ಮಾಡಬೇಕಾದ ವಿಚಾರಗಳನ್ನ ಅವಲೋಕಿಸಲಾಯಿತು. ರಾಜ್ಯಪಾಲರ ಭಾಷಣದ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆಯಿತು. ಒಂದು ವೇಳೆ ಸದನದಲ್ಲಿ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಸಿಎಎ ವಿಚಾರ ಪ್ರಸ್ತಾಪವಾದರೆ ಅಡೆತಡೆ ಮಾಡಲು ನಿರ್ಧರಿಸಲಾಯಿತು. ರಾಜ್ಯಪಾಲರು ಸಿಎಎ ಪ್ರಸ್ತಾಪ ಮಾಡದೇ ಇದ್ದರೆ ಸದನಕ್ಕೆ ಯಾವುದೇ ಭಂಗ ಮಾಡದಿರಲೂ ನಿರ್ಣಯ ಕೈಗೊಳ್ಳಲಾಯಿತು.

ಇದನ್ನೂ ಓದಿ: ಅಸಂಖ್ಯ ಪ್ರಮಥರ ಗಣಮೇಳದ ನಿರ್ಣಯಗಳು; ಬಸವಾದಿ ಶರಣರಿಂದ ಬಿಎಸ್​ವೈಗೆ ಸನ್ಮಾನ

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಮಾಜಿ ಡಿಸಿಎಂ ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ರಾಮಲಿಂಗಾ ರೆಡ್ಡಿ, ರಮೇಶ್ ಕುಮಾರ್, ಕೃಷ್ಣ ಭೈರೇಗೌಡ, ಯು.ಟಿ. ಖಾದರ್, ಎಸ್.ಆರ್. ಪಾಟೀಲ್, ಹೆಚ್.ಕೆ. ಪಾಟೀಲ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಬಹುತೇಕ ವಿಧಾನಸಭಾ ಸದಸ್ಯರು ಮತ್ತ ವಿಧಾನಪರಿಷತ್ ಸದಸ್ಯರು ಪಾಲ್ಗೊಂಡಿದ್ದರು.

ಸದನದಲ್ಲಿ ಮಾತನಾಡುವಾಗ ಬಹಳ ಆಕ್ರಮಣಕಾರಿಯಾಗಿರಬೇಕು. ಹಿರಿಯ ನಾಯಕರು ಎದ್ದು ನಿಂತು ಮಾತನಾಡುವಾಗ ಇತರರು ಬೆಂಬಲಕ್ಕೆ ನಿಲ್ಲಬೇಕು. ಮಾತನಾಡುವವರು ವಿಷಯ ಚೆನ್ನಾಗಿ ತಿಳಿದು ಮಾತನಾಡಬೇಕು. ಸರ್ಕಾರದ ವಿರುದ್ಧ ಬಹಳ ಆಕ್ರಮಣಕಾರಿಯಾಗಿ ಮಾತನಾಡಬೇಕು ಎಂದು ಪಕ್ಷದ ಸದಸ್ಯರಿಗೆ ಸಿದ್ದರಾಮಯ್ಯ ಮತ್ತು ಜಿ. ಪರಮೇಶ್ವರ್ ಸೂಚಿಸಿದರು.

ಇದನ್ನೂ ಓದಿ: ಆನೇಕಲ್​​ ಅರಣ್ಯದಂಚಿನಲ್ಲಿ ಗ್ರಾನೈಟ್​ ಕಾರ್ಖಾನೆಗಳ ತ್ಯಾಜ್ಯ: ವಿಲೇವಾರಿಗೆ ಸಚಿವ ಆನಂದ್​​ ಸಿಂಗ್​​ ಆದೇಶ

ಇನ್ನೊಂದೆಡೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕೂಡ ನಡೆಯಿತು. ಸಿಎಂ ಯಡಿಯೂರಪ್ಪ ಅವರು ಸರ್ವ ಶರಣದ ಸಮ್ಮೇಳನ ಮುಗಿಸಿ ಬಂದು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಖಾಸಗಿ ಹೋಟೆಲ್​ನಲ್ಲಿ ನಡೆದ ಸಭೆಯಲ್ಲಿ ಸದನದ ಬಗ್ಗೆ ತಂತ್ರಗಳನ್ನ ರೂಪಿಸಲಾಯಿತು. ಕಾಂಗ್ರೆಸ್ ಮತ್ತು ಜೆಡಿಎಸ್ ಹೂಡುವ ತಂತ್ರಕ್ಕೆ ಪ್ರತಿತಂತ್ರ ರೂಪಿಸುವುದನ್ನು ಚರ್ಚಿಸಲಾಯಿತು.ಯಡಿಯೂರಪ್ಪ, ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ್, ಸೋಮಶೇಖರ್ ರೆಡ್ಡಿ, ಗೋವಿಂದ ಕಾರಜೋಳ, ಮಾಧುಸ್ವಾಮಿ ಮೊದಲಾದವರು ಪಾಲ್ಗೊಂಡಿದ್ದರು. ಅಸಮಾಧಾನಿತ ಶಾಸಕಾರದ ಉಮೇಶ್ ಕತ್ತಿ, ರಾಜೂಗೌಡ, ಬಸನಗೌಡ ಪಾಟೀಲ್ ಯತ್ನಾಳ್ ಮೊದಲಾದವರು ಗೈರಾಗಿದ್ದು ಗಮನ ಸೆಳೆಯಿತು.

ಇವತ್ತು ಪ್ರಾರಂಭವಾಗಲಿರುವ ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯಪಾಲ ವಜುಭಾಯಿ ವಾಲ ಅವರು ಬೆಳಗ್ಗೆ 11ಗಂಟೆಗೆ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

Youtube Video
First published: February 17, 2020, 7:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories