ಯಲಹಂಕ: ಕೆರೆ ನೀರು ಬಿಡುವ ವಿಚಾರದಲ್ಲಿ ಕಾಂಗ್ರೆಸ್​​-ಬಿಜೆಪಿ ನಡುವೆ ರಾಜಕೀಯ ಕೆಸರೆರಚಾಟ

ಒತ್ತುವರಿ ತೆರವು ಮಾಡಿ ನಂತರ ನೀರು ಬಿಡಿ ಎಂದು ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯ ಶಾಸಕ ಕೃಷ್ಣಭೈರೇಗೌಡರ ವಿರುದ್ಧ ಕೆರೆ ಬಳಿಯ ಪ್ರತಿಭಟನೆಯ ಹೈಡ್ರಾಮ ನಡೆಯಿತು. ಒಂದ್ಕಡೆ ಬಿಜೆಪಿಯ ಧಿಕ್ಕಾರ ಮತ್ತೊಂದ್ಕಡೆ ಕಾಂಗ್ರೆಸ್ ಪಕ್ಷದ ಜೈಕಾರಗಳ ನಡುವೆಯೇ ಶಾಸಕರು ಕೆರೆಗೆ ನೀರು ಬಿಟ್ಟು, ಅಭಿವೃದ್ಧಿ ಕೆಲಸಗಳ ಬಗ್ಗೆ ಪರಿಶೀಲನೆ ನಡೆಸಿದರು.

ಯಲಹಂಕ: ಕೆರೆ ನೀರು ಬಿಡುವ ವಿಚಾರದಲ್ಲಿ ಕಾಂಗ್ರೆಸ್​​-ಬಿಜೆಪಿ ನಡುವೆ ರಾಜಕೀಯ ಕೆಸರೆರಚಾಟ

ಯಲಹಂಕ: ಕೆರೆ ನೀರು ಬಿಡುವ ವಿಚಾರದಲ್ಲಿ ಕಾಂಗ್ರೆಸ್​​-ಬಿಜೆಪಿ ನಡುವೆ ರಾಜಕೀಯ ಕೆಸರೆರಚಾಟ

  • Share this:
ಯಲಹಂಕ(ಜೂ.24): "ಹಿಂದಿನ ಕಾಲದಲ್ಲಿ ಕೆರೆ ಕುಂಟೆಗಳ ಮೂಲಕ ಜನರ ಅಭಿವೃದ್ಧಿಗಾಗಿ ಜನಪ್ರತಿನಿಧಿಗಳು, ನಾಯಕರು ಪ್ರಾಣಾರ್ಪಣೆ ಮಾಡಿರುವ ಉದಾಹಾರಣೆಗಳಿದೆ. ಆದರೆ ಈಗಿನ ಆಧುನಿಕ ಕಾಲದಲ್ಲಿ ತದ್ವಿರುದ್ಧ ವಾತಾವರಣವಾಗಿದ್ದು, ನಮ್ಮನ್ನ ಪ್ರೋಟೊಕಾಲ್ ಪ್ರಕಾರ ಕಾರ್ಯಕ್ರಮಕ್ಕೆ ಕರೆದಿಲ್ಲ. ಕೆರೆಯ ಹೂಳೆತ್ತದೆ ಕೆರೆಗೆ ಹೆಚ್.ಎನ್.ವ್ಯಾಲಿಯ ಗಬ್ಬುನಾರುವ ನೀರು ಹರಿಸಲಾಗ್ತಿದೆ" ಎಂದು ಬಿಜೆಪಿ ಪಕ್ಷದ ಕಾರ್ಯಕರ್ತರು ಕೆರೆ ಬಳಿ ರಾಜಕೀಯ ಪ್ರತಿಭಟನೆ ಮಾಡಿ ರಾಜಕೀಯ ಕೆಸರೆರಚಾಟ ಮಾಡಿದ ಘಟನೆ ನಡೆದಿದೆ. 

ಬೆಂಗಳೂರು ಉತ್ತರ ಯಲಹಂಕ ತಾಲ್ಲೂಕಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಹುಣಸಮಾರನಹಳ್ಳಿ ಕೆರೆಗೆ ನೀರು ಹರಿಸುವ ಕಾರ್ಯಕ್ರಮಕ್ಕೆ ಬಿಜೆಪಿ ಕಾರ್ಯಕರ್ತರ ಆಹ್ವಾನ ಮಾಡದೆ ಕಾಂಗ್ರೆಸ್ ಶಾಸಕ ಕೃಷ್ಣಾ ಬೈರೇಗೌಡ ನೀರು ಹರಿಸ್ತಿದ್ದಾರೆ ಎಂದು ಕೆರೆ ಬಳಿ ಪ್ರತಿಭಟನೆ ನಡೆಸಿದರು.

ಹೆಚ್.ಎನ್.ವ್ಯಾಲಿಯ ನೀರನ್ನು ಚಿಕ್ಕಬಳ್ಳಾಪುರ ಮತ್ತು ದೇವನಹಳ್ಳಿ ತಾಲೂಕು ಮತ್ತು ಏರ್ಪೋರ್ಟ್ ಸುತ್ತಮುತ್ತ ಕೆರೆಗಳಿಗೆ ನೀರು ಹರಿಸಲಾಗ್ತಿದೆ. ಯಲಹಂಕ ಸಮೀಪದ ಹುಣಸಮಾರನಹಳ್ಳಿ ಕೆರೆಗೆ ಹೆಚ್.ಎನ್.ವ್ಯಾಲಿಯ ನೀರು ಬಿಡಲಾಯ್ತು. ಆದರೆ ಕೆರೆಯ ಹೂಳೆತ್ತದೆ, ಕೆರೆ ಸುತ್ತಮುತ್ತ ನಾಲ್ಕೈದು ಎಕರೆ ಜಮೀನು ಒತ್ತುವರಿಯಾಗಿದೆ. ಅದನ್ನ ತೆರವು ಗೊಳಿಸಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಒತ್ತುವರಿ ತೆರವು ಮಾಡಿ ನಂತರ ನೀರು ಬಿಡಿ ಎಂದು ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯ ಶಾಸಕ ಕೃಷ್ಣಭೈರೇಗೌಡರ ವಿರುದ್ಧ ಕೆರೆ ಬಳಿಯ ಪ್ರತಿಭಟನೆಯ ಹೈಡ್ರಾಮ ನಡೆಯಿತು. ಒಂದ್ಕಡೆ ಬಿಜೆಪಿಯ ಧಿಕ್ಕಾರ ಮತ್ತೊಂದ್ಕಡೆ ಕಾಂಗ್ರೆಸ್ ಪಕ್ಷದ ಜೈಕಾರಗಳ ನಡುವೆಯೇ ಶಾಸಕರು ಕೆರೆಗೆ ನೀರು ಬಿಟ್ಟು, ಅಭಿವೃದ್ಧಿ ಕೆಲಸಗಳ ಬಗ್ಗೆ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: ‘ರೈತರಿಗೆ ನೀಡಿದಾಗೇ ಮೀನುಗಾರರಿಗೂ ಕಿಸಾನ್ ಕಾರ್ಡ್ ಕೊಡಲಾಗುವುದು‘ - ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಇದೇ ವೇಳೆ ಮಾತನಾಡಿದ ಕೃಷ್ಣಬೈರೇಗೌಡ ಕೊರೋನಾ ಲಾಕ್​​ಡೌನ್​​ನಿಂದ ಕಾಮಗಾರಿ ವಿಳಂಭವಾಗಿದೆ. ಇನ್ನೊಂದು ತಿಂಗಳಲ್ಲಿ ಕಾಮಗಾರಿ ಮುಗಿದು ಕೆರೆಗೆ ನೀರು ತುಂಬಲಿದೆ.‌ ನೀರು ಹರಿದು ಬೆರೆ ಕಡೆಗೆ ಹೋಗುತ್ತೆ. ಹಾಗಾಗಿ ಅರ್ಧ ಎಕರೆಯಷ್ಟು ನೀರು ತುಂಬಿದ್ರೆ ನೀರಿನ ಸಂರಕ್ಷಣೆ ಆಗುತ್ತೆ. ಕೆರೆಗೆ ನೀರು ತುಂಬುವ ವಿಚಾರದಲ್ಲಿ ರಾಜಕೀಯ ಬೇಡ ಎಂದು ಪ್ರತಿಭಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ನೀರಿನ ಕೊಳವೆ ಪೈಪಿಗೆ ಕಲ್ಲು ತುರುಕಿದ್ದ ಬಿಜೆಪಿ ಕಾರ್ಯಕರ್ತರ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು. ಕಣ್ಣು ಕಲ್ಲು ತುಂಬಿದ್ದನ್ನ ತೆರವು ಮಾಡಿ ನೀರು ಹರಿಸಲಾಯಿತು.
First published: