ಬಳ್ಳಾರಿಯಲ್ಲಿ ಬಿಜೆಪಿ ಮನೆ ಮನೆ ಪ್ರಚಾರ; ಕಾಂಗ್ರೆಸ್ ಗುಡಿಗುಂಡಾರ-ಮಸೀದಿ ಭೇಟಿ

Latha CG | news18
Updated:October 17, 2018, 5:28 PM IST
ಬಳ್ಳಾರಿಯಲ್ಲಿ ಬಿಜೆಪಿ ಮನೆ ಮನೆ ಪ್ರಚಾರ; ಕಾಂಗ್ರೆಸ್ ಗುಡಿಗುಂಡಾರ-ಮಸೀದಿ ಭೇಟಿ
  • News18
  • Last Updated: October 17, 2018, 5:28 PM IST
  • Share this:
-ಶರಣು ಹಂಪಿ, ನ್ಯೂಸ್ 18 ಕನ್ನಡ

ಬಳ್ಳಾರಿ (ಅ.17): ಗಣಿನಾಡು ಬಳ್ಳಾರಿಯಲ್ಲಿ ಲೋಕಸಭಾ ಉಪ ಚುನಾವಣೆ ಪ್ರಚಾರ ಇಂದಿನಿಂದ ಆರಂಭಗೊಂಡಿದೆ. ಪ್ರತಿಷ್ಠೆಯ ಕಣವಾಗಿರುವ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜೆ ಶಾಂತ ಮನೆ ಮನೆಗೆ ತೆರಳಿ ಪ್ರಚಾರ ಕೈಗೊಂಡರೆ, ಕಾಂಗ್ರೆಸ್ ಅಭ್ಯರ್ಥಿ ಗುಡಿಗುಂಡಾರ, ಮಸೀದಿ ಭೇಟಿ ನೀಡಿದರು. ತಂಗಿ ಜೆ ಶಾಂತ ಪರವಾಗಿ ಶ್ರೀರಾಮುಲು ಪ್ರಚಾರದ ಶುರುವಿಟ್ಟುಕೊಂಡಿದ್ದಾರೆ. ಆದರೆ ಚುನಾವಣಾ ನೇತೃತ್ವ ವಹಿಸಿರುವ ಡಿ ಕೆ ಶಿವಕುಮಾರ್ ನಾಮಪತ್ರ ಸಲ್ಲಿಸಿ ಬೆಂಗಳೂರು ಕಡೆ ಮುಖ ಮಾಡಿದ್ದಾರೆ.ಪ್ರತಿಷ್ಠೆಯ ಕಣವಾಗಿರುವ ಬಳ್ಳಾರಿ ಲೋಕಸಭಾ ಉಪ ಚುನಾವಣೆ ಪ್ರಚಾರಕ್ಕೆ ಎರಡೂ ರಾಷ್ಟ್ರೀಯ ಪಕ್ಷಗಳು ಇಂದಿನಿಂದ ಪ್ರಚಾರ ಕೈಗೊಂಡಿವೆ. ನಿನ್ನೆ ಭರ್ಜರಿಯಾಗಿ ಮೆರವಣಿಗೆ ಮೂಲಕ ಕೈ ಕಮಲ ನಾಯಕರು ನಾಮಪತ್ರ ಸಲ್ಲಿಸಿ ಕದನಕ್ಕೆ ವೇದಿಕೆ ಸಿದ್ಧರಿದ್ದೇವೆ ಎಂದು ತೋರಿಸಿದ್ದರು. ಅದರಂತೆ ಇಂದು ಬಿ.ಶ್ರೀರಾಮುಲು ಹೂವಿನಹಡಗಲಿ ತಾಲೂಕಿನ ಮೈಲಾರದಿಂದ ತಂಗಿ ಜೆ ಶಾಂತಿ ಪರ ಪ್ರಚಾರ ಕೈಗೊಂಡರು. ಮೈಲಾರಲಿಂಗೇಶ್ವರ ದರುಶನ ಪಡೆದು, ಗೊರವಯ್ಯನವರಿಂದ ಭಂಡಾರ ಹಚ್ಚಿಸಿಕೊಂಡು ಆರ್ಶಿವಾದ ಪಡೆದು ಮನೆ ಮನೆಗೆ ತೆರಳಿ ಪ್ರಚಾರ ಕೈಗೊಂಡರು.ಇನ್ನು ಬಳ್ಳಾರಿ ಗ್ರಾಮಾಂತರ ಪ್ರದೇಶದಲ್ಲಿ ಬೆಳಗ್ಗೆಯಿಂದಲೇ ಬಿಜೆಪಿ ಅಭ್ಯರ್ಥಿ ಜೆ ಶಾಂತ ಪ್ರಚಾರ ಕೈಗೊಂಡಿದ್ದಾರೆ. ಕಮಲ ನಾಯಕರೊಂದಿಗೆ ಬೆಳಗಲ್, ಹೊನ್ನಳ್ಳಿ, ಹಲಕುಂದಿ ಸೇರಿದಂತೆ ಮತ್ತಿತರೆ ಗ್ರಾಮಗಳಲ್ಲಿ ಮನೆ ಮನೆ ಪ್ರಚಾರ ಕೈಗೊಂಡಿದೆ. ಹಲಕುಂದಿ ಗ್ರಾಮದಲ್ಲಿ ಅಭ್ಯರ್ಥಿ ಜೆ ಶಾಂತ ಅವರಿಗೆ ಮನೆ ಮಗಳೆಂಬಂತೆ ಉಡಿ ತುಂಬಿಸಿಕೊಂಡು ಮತದಾರರಿಂದ ಆರ್ಶಿವಾದ ಪಡೆಯುತ್ತಿದ್ದ ದೃಶ್ಯಗಳು ಕಂಡುಬಂದವು. ಕನಕಪುರದ ಗೌಡರು ಎಂಬ ಹೇಳಿಕೆಯನ್ನು ದೊಡ್ಡದು ಮಾಡುವ ಅಗತ್ಯವಿಲ್ಲ. ನಮ್ಮ ಭಾಗದಲ್ಲಿ ಗೌಡಿಕೆ ಮಾಡೋದು ಅಂತಾರೆ. ಇದಕ್ಕೆ ಜಾತಿ ಬಣ್ಣ ಬಳಿಯುವುದು ಬೇಡ ಎಂದೇಳಿದ ಶಾಂತ, ಕೈ ಅಭ್ಯರ್ಥಿ ಉಗ್ರಪ್ಪ ನಿಮ್ಮ ಬೀಗರಲ್ಲವೇ ಎಂಬ ಪ್ರಶ್ನೆಗೆ ನಗುವಿನ ಉತ್ತರ ನೀಡಿ ಮುನ್ನಡೆದರು.

ಇನ್ನು ಕಾಂಗ್ರೆಸ್ ಅಭ್ಯರ್ಥಿ ವಿ ಎಸ್ ಉಗ್ರಪ್ಪ ಬೆಳಗ್ಗೆ ಬಳ್ಳಾರಿ ಖಾಸಗಿ ಹೋಟೆಲ್ ನಲ್ಲಿ ಜಿಲ್ಲಾ ನಾಯಕರೊಂದಿಗೆ ಸಭೆ ನಡೆಸಿದರು. ಮುನಿಸಿಕೊಂಡ ಶಾಸಕರು, ನಾಯಕರನ್ನು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ನಡೆಸಿದರು. ಸಂಜೆ ವೇಳೆಗೆ ಹೊಸಪೇಟೆಯ ಕೊಟ್ಟೂರುಸ್ವಾಮಿ ಮಠದಲ್ಲಿ ವೀರಶೈವ ಲಿಂಗಾಯತ ಸಮಾಜದ ಮುಖಂಡರ ಜೊತೆ ಸಮಾಲೋಚನೆ ನಡೆಸಿದರು. ವಾಲ್ಮೀಕಿ ಸಮಾಜದ ಏಳುಕೇರಿಗಳ ಶಕ್ತಿದೇವತೆಗಳಿಗೆ ಪೂಜೆ, ಮುಸ್ಲಿಂ ಸಮಾಜದ ಮುಖಂಡರ ಸಭೆ ನಡೆಸಿ ಸಮಾಲೋಚನೆ ನಡೆಸಿದರು. ಶ್ರೀರಾಮುಲು ನಮಗೆ ಬೀಗರಾಗಬೇಕು, ನನ್ನ ಅಡ್ರೆಸ್ ಗೊತ್ತಿಲ್ಲವೆಂದಿದ್ದೀರಿ. ನಾನು ಸಾಧನೆಯ ಮೂಲಕ ಜನಮಾನಸದಲ್ಲಿದ್ದೇನೆ. ನೀವ್ಯಾವ ಪುರುಷಾರ್ಥಕ್ಕಾಗಿ ಹಲವು ಬಾರಿ ರಾಜೀನಾಮೆ ನೀಡಿದ್ದೀರಿ ಎಂದು ಪ್ರಶ್ನಿಸಿದರು.ಅತ್ತ ಬಿಜೆಪಿ ಪ್ರಚಾರದ ವೇಳೆ ಸಮಸ್ಯೆ ಬಗೆಹರಿಸುವಂತೆ ಹಲಕುಂದಿ ಗ್ರಾಮಸ್ಥರು ದಿಢೀರ್ ಹಕ್ಕೊತ್ತಾಯ ಮಾಡಿದರು. ಮನೆ ಮನೆಗೆ ಪ್ರಚಾರಕ್ಕೆ ಬಂದ ಬಿಜೆಪಿ ಅಭ್ಯರ್ಥಿ ಜೆ ಶಾಂತ ಗ್ರಾಮಸ್ಥರ ಪ್ರಶ್ನೆಗೆ ತಬ್ಬಿಬ್ಬಾದರು. ಗೆದ್ದು ಅಧಿಕಾರಕ್ಕೆ ಬಂದ ಮೇಲೆ ಕೆಲಸ ಮಾಡಿಸುತ್ತೇನೆ ಎಂದು ಸಬೂಬು ನೀಡಿದರು. ಇತ್ತ ಕಾಂಗ್ರೆಸ್ ನಲ್ಲಿ ಚುನಾವಣಾ ಉಸ್ತುವಾರಿ ಹೊತ್ತಿರುವ ಡಿ ಕೆ ಶಿವಕುಮಾರ್ ನಾಮಪತ್ರ ಸಲ್ಲಿಸಿ ಬೆಂಗಳೂರಿಗೆ ತೆರಳಿದ್ದಾರೆ. ಹಬ್ಬದ ನಂತರ ಚುನಾವಣೆ ಪ್ರಚಾರ ಕಾವು ಇನ್ನಷ್ಟು ಹೆಚ್ಚಾಗಲಿದೆ.
First published: October 17, 2018, 5:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading