ಬೆಂಗಳೂರಲ್ಲಷ್ಟೇ (Bengaluru) ಅಲ್ಲ, ರಾಜ್ಯಾದ್ಯಂತ ವೋಟರ್ ಗುರುತಿನ ಚೀಟಿ ಸ್ಕ್ಯಾಂ (Voter ID Scam) ನಡೆದಿದ್ಯಾ ಅನ್ನೋ ಅನುಮಾನ ಮೂಡಿದೆ. ವಿಜಯಪುರದಲ್ಲೂ (Vijayapura) ವೋಟರ್ ಐಡಿ ಹಗರಣ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿವೆ. ವಿಜಯಪುರದಲ್ಲಿ ವೋಟರ್ ಐಡಿ ಪರಿಷ್ಕರಣೆಗೆ ಬಂದಿದ್ದ ವ್ಯಕ್ತಿಗೆ ಕಾಂಗ್ರೆಸ್ ಮುಖಂಡರು (Congress Leaders) ತರಾಟೆಗೆ ತೆಗೆದುಕೊಂಡಿದ್ದಾರೆ. ಆ ವ್ಯಕ್ತಿ ಶಾಸಕರ ಕಚೇರಿಯಿಂದ (MLA Office) ಬಂದಿದ್ದ ಎಂದು ಕಾಂಗ್ರೆಸ್ ಆರೋಪಿಸಿದೆ. ಶಾಸಕರ ಪಿಎ ಎನ್ನಲಾದ ವ್ಯಕ್ತಿಗೆ ಕಾಂಗ್ರೆಸ್ ಮುಖಂಡರು ಫೋನ್ನಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ. ಯಾಕೆ ಹೀಗೆಲ್ಲಾ ಮಾಡ್ತಿದ್ದೀರಾ? ನಮ್ಮ ವೋಟ್ ಯಾಕೆ ಡಿಲೀಟ್ ಮಾಡ್ತಿದ್ದೀರಾ? ಇದರ ಬಗ್ಗೆ ತಹಶೀಲ್ದಾರ್ ಆಫೀಸ್ಗೆ ದೂರು ಕೊಡುತ್ತೇವೆ ಎಂದು ಕಾಂಗ್ರೆಸ್ ಮುಖಂಡ ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಜಯಪುರದ ವಾರ್ಡ್ ನಂಬರ್ 30ರಲ್ಲಿ ವೋಟರ್ ಸರ್ವೆ ಮಾಡಲಾಗಿದ್ದು, ದಲಿತ, ಮುಸ್ಲಿಂ ವೋಟ್ಗಳನ್ನ ಟಿಕ್ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದೆ.
ಸಮೀಕ್ಷೆ ಮಾಡೋರನ್ನು ಕೇಳಿದ್ರೆ, ಮೂವರು ಓಡಿ ಹೋಗಿದ್ದು, ಒಬ್ಬ ಕೈಗೆ ಸಿಕ್ಕಿದ್ದಾನೆ. ಅವನನ್ನ ಬಿಡಿಸಲು ಶಾಸಕರ ಪಿಎ ಕಾಲ್ ಮಾಡಿದ್ರು ಅಂತ ಇಫ್ರಾನ್ ಎಂಬವರು ಆರೋಪಿಸಿದ್ದಾರೆ.
ರಾಯಚೂರಿನಲ್ಲಿ ಮತಪಟ್ಟಿ ಕಳ್ಳತನ
ರಾಯಚೂರಲ್ಲಿ ಬೆಂಗಳೂರು ರೀತಿಯ ಮತಪಟ್ಟಿ ಕಳುವಾಗಿದ್ಯಂತೆ. ರಾಯಚೂರು ನಗರ ಕ್ಷೇತ್ರದ 40 ಸಾವಿರ ಮತದಾರರ ಹೆಸರು ಮಾಯವಾಗಿದೆ ಎಂದು ಡಾ. ರಜಾಕ್ ಉಸ್ತಾದ್ ಹಾಗೂ ಜಾವೀದ್ ಉಲ್ ಹಕ್ ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಶಾಸಕ ಡಾ. ಶಿವರಾಜ್ ಪಾಟೀಲರ ಮೇಲೆ ಕಾಂಗ್ರೆಸ್ ನಾಯಕರು ಸ್ಫೋಟಕ ಆರೋಪ ಮಾಡಿದ್ದಾರೆ.
ತುಷಾರ್ ಗಿರಿ ನಾಥ್ಗೆ ನೋಟಿಸ್ ಸಾಧ್ಯತೆ
ಚಿಲುಮೆ ಪ್ರಕರಣಕ್ಕೆ (Chilume) ಪೊಲೀಸರು ಸ್ಫೋಟಕ ಟ್ವಿಸ್ಟ್ ಕೊಡೋ ಸಾಧ್ಯತೆ ಇದೆ. ಈಗಾಗಲೇ ಇಬ್ಬರು ಐಎಎಸ್ಗಳಿಗೆ ಶಾಕ್ ಕೊಡಲಾಗಿದೆ. ಇದೀಗ ಮತ್ತೊಬ್ಬ ಐಎಎಸ್ ಅಧಿಕಾರಿಗೆ (IAS Officer) ಶಾಕ್ ಕೊಡಲು ತಯಾರಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹೌದು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿ ನಾಥ್ಗೆ (BBMP commissioner Tushar giri nath) ನೋಟಿಸ್ ನೀಡಿ ವಿಚಾರಣೆ ನಡೆಸಲು ಸಿದ್ಧತೆ ನಡೆದಿದೆ ಎನ್ನಲಾಗಿದೆ. ವೋಟರ್ ಐಡಿಗೆ ಆಧಾರ್ ಲಿಂಕ್ (Aadhar Link To Voter ID) ಮಾಡುವಂತೆ ಆದೇಶ ಹೊರಡಿಸಿ, ಚಿಲುಮೆ ಸಂಸ್ಥೆಗೆ ಟೆಂಡರ್ ನೀಡಿದ್ದಕ್ಕೆ ತುಷಾರ್ ಗಿರಿ ನಾಥ್ರನ್ನ ವಿಚಾರಣೆಗೆ ಒಳಪಡಿಸೋ ನಿರೀಕ್ಷೆ ಇದೆ.
ಕುಕ್ಕರ್ ಹಂಚಿದ ಕಾಂಗ್ರೆಸ್ ಶಾಸಕ?
ಚುನಾವಣೆಗೆ ಮುನ್ನವೇ ಕಾಂಗ್ರೆಸ್ ಶಾಸಕರು (Congress MLA) ಮತದಾರರಿಗೆ ಆಮಿಷವೊಡ್ಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಅದರಲ್ಲೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC DK Shivakumar) ಸಂಬಂಧಿ, ಕುಣಿಗಲ್ ಶಾಸಕ ಡಾ.ರಂಗನಾಥ್ (Kunigal MLA Dr.Ranganath), ಮತದಾರರಿಗೆ ಕುಕ್ಕರ್ ಕೊಟ್ಟಿದ್ದಾರೆ.
ಕುಣಿಗಲ್ ಪುರಸಭೆಯ 23ನೇ ವಾರ್ಡ್ನ ಮಲ್ಲಿಪಾಳ್ಯದ ಜನತೆಗೆ ಕುಕ್ಕರ್ ಹಾಗೂ ತವಾ ನೀಡಲಾಗಿದೆ. ಮಧ್ಯರಾತ್ರಿಯಲ್ಲಿ ಎರಡು ಆಟೋದಲ್ಲ ಬಂದು ಕುಕ್ಕರ್ ಹಾಗೂ ತವಾ ನೀಡಲಾಗಿದೆ.
ಇದನ್ನೂ ಓದಿ: Islam College: ರಾಜ್ಯದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಕಾಲೇಜು ಸ್ಥಾಪನೆ!
ಈ ವೇಳೆ ಶಾಸಕರಿಗೆ ಕೆಲ ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದಾರೆ. ನಮ್ಮೂರಿಗೆ ಅಭಿವೃದ್ಧಿ ಕೆಲಸ ಮಾಡಿ. ನಿಮ್ಮ ಗಿಫ್ಟ್ ನಮಗೆ ಬೇಡ ಎಂದು ತಿರಸ್ಕರಿಸಿದ್ದಾರೆ. ಸ್ಥಳೀಯರ ವಿರೋಧ ವ್ಯಕ್ತವಾಗುತ್ತಿದ್ದಂತೆ ಶಾಸಕ ಡಾ.ರಂಗನಾಥ್ ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ