ಯಾದಗಿರಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಕೋಟೆಯಲ್ಲಿ ಕಾಂಗ್ರೆಸ್ (Congress) ರಣಕಹಳೆ ಮೊಳಗಿಸಿದೆ. ಕಲ್ಯಾಣ ಕರ್ನಾಟಕ (Kalyana Karnataka) ಭಾಗದಲ್ಲಿ ಮತ್ತೆ ಕಾಂಗ್ರೆಸ್ ಕೋಟೆ ಭದ್ರಗೊಳಿಸಿಕೊಳ್ಳಲು ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ (Prajadhwani yatra) ಮೂಲಕ ಮುಂದಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಿಎಂ ಮೋದಿ ಮಿಂಚಿನ ಸಂಚಾರದ ನಂತರ ಕಾಂಗ್ರೆಸ್ ಮೋದಿ ಅಲೆ ತಗ್ಗಿಸಲು ತಂತ್ರ ಹೆಣೆದು, ಯಾತ್ರೆ ನಡೆಸಿಸುತ್ತಿದೆ. ಈ ಮೂಲಕ ಮತ್ತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ 40 ಸ್ಥಾನ ಗೆಲ್ಲುವ ಟಾರ್ಗೆಟ್ ಇಟ್ಟುಕೊಂಡಿದೆ. ಯಾದಗಿರಿ ಸಮಾವೇಶದಲ್ಲೂ 40 ಸ್ಥಾನ ವಿಜಯ ಸಾಧಿಸಲು ಕಾಂಗ್ರೆಸ್ ಕಾರ್ಯಕರ್ತರ ಸಮ್ಮುಖದಲ್ಲಿ ಪ್ರತಿಜ್ಞೆ ಮಾಡಿದೆ.
ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಮೋದಿ ಅವರು ಅಭಿವೃದ್ಧಿ ಮಾಡದೇ ಸುಳ್ಳು ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಸರಕಾರದ ಯೋಜನೆಗಳನ್ನು ಅವರು ಉದ್ಘಾಟನೆ ಮಾಡಿದ್ದಾರೆ. ನಾರಾಯಣಪುರ ಎಡದಂಡೆ ನೀರಾವರಿ ಯೋಜನೆ ಕಾಂಗ್ರೆಸ್ ಸರಕಾರ ಜಾರಿಗೆ ತಂದಿತ್ತು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ 2013 ರಲ್ಲಿ ತಾಂಡಾ, ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ತೀರ್ಮಾನ ಮಾಡಿದ್ದೆವು. ವಾಸಿಸುವನೇ ಮನೆ ಒಡೆಯ ಎಂಬ ತಿದ್ದುಪಡಿ ಕಾಯ್ದೆ ಜಾರಿಗೆ ತರಲಾಗಿತ್ತು. ಇದನ್ನು ಬಿಜೆಪಿಯವರು ನಾವೇ ಮಾಡಿರುವುದೆಂದು ಹೇಳಿಕೊಳ್ಳುತ್ತಿದ್ದಾರೆ, ನಾವು ಮಾಡಿದ ಅಡುಗೆಯನ್ನುಅವರು ಊಟ ಮಾಡಿದ್ದಾರೆ ಎಂದು ಯಾದಗಿರಿಯಲ್ಲಿ ಕಾಂಗ್ರೆಸ್ ನಾಯಕರು ಕಿಡಿ ಕಾರಿದರು.
40 ಸೀಟು ಜನರು ಗೆಲ್ಲಿಸಬೇಕಿದೆ
ಸಿಎಂ ಬಸವರಾಜ ಬೊಮ್ಮಾಯಿ ಅವರ ಸರಕಾರ ಅಲಿಬಾಬಾ 40 ಕಳ್ಳರಿದ್ದಂತೆ. ಅಲಿಬಾಬಾ ಚಾಲೀಸ್ ಚೋರ್ ನಾಯಕರ ಮುಖ ನೋಡಿದರೆ ರಾಜ್ಯದಲ್ಲಿ ಜನ ಮತ ಹಾಕುವದಿಲ್ಲ. ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲೂ 40 ಸ್ಥಾನಗಳನ್ನು ನೀವು ಗೆಲ್ಲಿಸಬೇಕೆಂದು ವಿಪಕ್ಷ ನಾಯಕ ಕಾರ್ಯಕರ್ತರಿಗೆ ಕರೆ ನೀಡಿದರು.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ 2013 ರಲ್ಲಿ ತಾಂಡಾ, ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ತೀರ್ಮಾನ ಮಾಡಿದ್ದೆವು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನರಸಿಂಹಯ್ಯ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು,
ವಾಸಿಸುವನೇ ಮನೆ ಒಡೆಯ ಎಂಬ ತಿದ್ದುಪಡಿ ಕಾಯ್ದೆ ಜಾರಿಗೆ ತರಲಾಗಿತ್ತು. ಬಿಜೆಪಿಯವರು ನಾವೇ ಮಾಡಿರುವುದೆಂದು ಹೇಳಿಕೊಳ್ಳುತ್ತಿದ್ದಾರೆ, ನಾವು ಮಾಡಿದ ಅಡುಗೆಯನ್ನುಅವರು ಊಟ ಮಾಡಿದ್ದಾರೆ ಎಂದು ಕಿಡಿ ಕಾರಿದರು.
ಬೊಮ್ಮಾಯಿ ಅವರ ಮುಖ ಹಳಸಿದೆ
ಬಸವರಾಜ ಬೊಮ್ಮಾಯಿ ಅವರ ಮುಖ ಹಳಸಿದೆ. ಅದಕ್ಕೆ ಮೋದಿಯವರನ್ನ ಕರೆಸುತ್ತಾರೆ. ಆ ಕಾರ್ಯಕ್ರಮಕ್ಕೆ ಜನರನ್ನು ಹಣ ಕೊಟ್ಟು ಕರೆಸುತ್ತಾರೆ. ಆದರೆ ಕಾಂಗ್ರೆಸ್ಗೆ ಯಾವುದೇ ಹಣವಿಲ್ಲದೇ ಹೆಚ್ಚಿನ ಜನ ಬರುತ್ತಾರೆ. ಕಾಂಗ್ರೆಸ್ ಸರಕಾರ ಮತ್ತೆ ಅಧಿಕಾರಕ್ಕೆ ತರಲು ರಾಜ್ಯದ ಜನ ಮುಂದಾಗಿದ್ದಾರೆ. ಅಲ್ಲದೆ ಬಿಜೆಪಿ ನಾಯಕರು ಚುನಾವಣೆ ಸಂದರ್ಭದಲ್ಲಿ 600 ಭರವಸೆ ನೀಡಿದ್ದರು. ಆದರೆ ನೀಡಿದ ಭರವಸೆಯಲ್ಲಿ ಅರ್ಧದಷ್ಟನ್ನು ಬಿಜೆಪಿ ಸರಕಾರ ಈಡೇರಿಸಿಲ್ಲ.
ನಾನು 165 ಭರವಸೆ ನೀಡಿದ್ದೆ, 158 ಭರವಸೆ ಈಡೇರಿಸಿ , ಬಡಜನರಿಗಾಗಿ ಜನಪರ ಯೋಜನೆ ಜಾರಿಗೆ ತಂದಿದ್ದೆ. ಬೇಕಾದರೆ ಸಿಎಂ ಬಸವರಾಜ ಬೊಮ್ಮಾಯಿ ಈ ಬಗ್ಗೆ ಚರ್ಚೆಗೆ ಬರಲಿ ಎಂದು ಸಿದ್ದು ಸವಾಲ್ ಹಾಕಿದರು.
ಜೆಡಿಎಸ್ನವರಿಗೆ ತತ್ವ ಸಿದ್ದಾಂತವಿಲ್ಲ
ರಾಜ್ಯದಲ್ಲಿ ಜೆಡಿಎಸ್ ನವರಿಗೆ ಯಾವುದೇ ತತ್ವ ಸಿದ್ದಾಂತವಿಲ್ಲ. ಕುಮಾರಸ್ವಾಮಿ ಅವರು ಗೆದ್ದ ಎತ್ತಿನ ಬಾಲ ಹಿಡಿಯುತ್ತಾರೆ. ಜೆಡಿಎಸ್ ಪಕ್ಷಕ್ಕೆ ಜಾತ್ಯಾತೀತ ಸಿದ್ಧಾಂತಕ್ಕೆ ಬದ್ದತೆ ಇಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಅವರಿಗೆ ನೆಲೆಯೂ ಇಲ್ಲ ಎಂದು ಜೆಡಿಎಸ್ ಪಕ್ಷವನ್ನೂ ಟೀಕಿಸಿದರು.
ವಿಧಾನಸೌಧದ ಗೊಡೆ ಸಹಿತ ಕಾಸು ಕಾಸು ಎನ್ನುತ್ತಿದೆ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಮಾತನಾಡಿ, ಬಿಜೆಪಿ ಅವಧಿಯಲ್ಲಿ ವಿಧಾನಸೌಧದ ಗೊಡೆ ಸಹಿತ ಕಾಸು ಕಾಸು ಎನ್ನುತ್ತಿದೆ. ಈಶ್ವರಪ್ಪ 30% ಲಂಚ ಕೇಳಿದ ಹಿನ್ನಲೆ ಗುತ್ತಿಗೆದಾರ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಹೋರಾಟ ಮಾಡಿದ ನಂತರ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇನ್ನು ಮೋದಿ
ಮೋದಿ ಈ ಭಾಗಕ್ಕೆ ಬಂದಿದ್ದರು, ಅವರು ಬಂದ ನಂತರ ಜನ್ ಧನ್ ಖಾತೆಗೆ ಹಣ ಬಂದಿದೆಯಾ? ಜನರ ಖಾತೆಗೆ ಹಣವೂ ಬಂದಿಲ್ಲ, ರೈತರ ಆದಾಯ ದ್ವಿಗುಣಗೊಂಡಿಲ್ಲ, ರೈತರು ಸಂಕಷ್ಟದಲ್ಲಿದ್ದಾರೆ ಎಂದು ಕಿಡಿ ಕಾರಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ