ಪೆಗಾಸಸ್​​ ಗೂಢಚರ್ಯೆಯಿಂದಲೇ ಮೈತ್ರಿ ಸರ್ಕಾರವನ್ನು ಉರುಳಿಸಿದರು: ಕಾಂಗ್ರೆಸ್​ ನಾಯಕರಿಂದ ಗಂಭೀರ ಆರೋಪ

ಆಪರೇಷನ್ ಕಮಲ ಎಂಬ ಪದ ಹುಟ್ಟಿದ್ದೇ ಯಡಿಯೂರಪ್ಪ ಅವಧಿಯಲ್ಲಿ, ಯಡಿಯೂರಪ್ಪ ಆಪರೇಷನ್ ಕಮಲದ ಜನಕ. ಇಡೀ ದೇಶಾದ್ಯಂತ ಆಪರೇಷನ್ ಕಮಲ‌ ಎಂಬ ಪದವೇ ಇರಲಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್​ ನಾಯಕರ ಸುದ್ದಿಗೋಷ್ಠಿ

ಕಾಂಗ್ರೆಸ್​ ನಾಯಕರ ಸುದ್ದಿಗೋಷ್ಠಿ

  • Share this:
ದೆಹಲಿ: ಪೆಗಾಸಸ್​​ ಗೂಢಚರ್ಯೆ ವಿವಾದ ಸಂಬಂಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್​ ನಾಯಕರು ಸುದ್ದಿಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಆಪರೇಷನ್ ಕಮಲದ ಮೂಲಕ ಪ್ರಜಾಪ್ರಭುತ್ವವನ್ನು ಕೊಲೆ ಮಾಡಿದೆ ಎಂದು ಸುರ್ಜೆವಾಲಾ ಕಿಡಿಕಾಡಿದರು.   ಹಿಂದಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬೀಳಿಸಲು ಪೆಗಾಸಸ್ ಬಳಸಿದೆ.   ಪೆಗಾಸಿಸ್ ಮೂಲಕ ಚುನಾಯಿತ ಸರ್ಕಾರವನ್ನು ಬೀಳಿಸಿದೆ. ಪ್ರಧಾನಿ ಮೋದಿ ಸರ್ಕಾರ ಪ್ರಜಾತಂತ್ರ ಸರ್ಕಾರವನ್ನು ಹತ್ಯೆ ಮಾಡಿದೆ ಎಂದು ಗಂಭೀರ ಆರೋಪ ಮಾಡಿದರು.

ಪ್ರಧಾನಿ ಮೋದಿ ಸರ್ಕಾರದಿಂದ ದೇಶದ್ರೋಹ ಕೆಲಸ ಆಗಿದೆ. ಇದೇ ಪಗಾಸಸ್ ಗೂಢಾಚಾರ್ಯೆ ಬಳಸಿಕೊಂಡು ಮಧ್ಯಪ್ರದೇಶ ಸರ್ಕಾರವನ್ನು ಬೀಳಿಸಿರಬಹುದು ಎಂಬ ಅನುಮಾನವನ್ನೂ ವ್ಯಕ್ತಪಡಿಸಿದರು. ಕುರ್ಚಿಗಾಗಿ ಗೂಢಾಚಾರ್ಯೆಯಂತ ಸಂವಿಧಾನ ಬಾಹಿರ ಕೆಲಸ ಮಾಡಿದೆ ಎಂದು ಆರೋಪಿಸಿದರು.

ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಪೆಗಾಸಿಸ್ ಪ್ರಕರಣವನ್ನು ಪತ್ರಕರ್ತರ ವಿರುದ್ಧ ಬಳಸಿಕೊಳ್ಳಲಾಗಿತ್ತು, ಈಗ ಸರ್ಕಾರ ಬೀಳಿಸಲು ಬಳಸಿಕೊಳ್ಳಲಾಗಿದೆ. ಬೇರೆ ಯಾವ್ಯಾವ ಕಡೆ ಪೆಗಾಸಸ್ ದುರುಪಯೋಗ ಆಗಿದೆ ಎಂದು ಗೊತ್ತಾಗಲಿದೆ. ಪಗಾಸಸ್ ಮೂಲಕ ಮೋದಿ, ಅಮಿತ್ ಶಾ ಪ್ರಜಾತಂತ್ರ ಹತ್ಯೆ ಮಾಡುತ್ತಿದ್ದಾರೆ.   ಈ ರೀತಿಯ ಗೂಢಾಚಾರ್ಯೆಯಿಂದ ಮಧ್ಯಪ್ರದೇಶ ಮತ್ತು ಗೋವಾ ಸರ್ಕಾರ ಬೀಳಿಸಿರುಬಹುದು.   ಈಗ ಮಹಾರಾಷ್ಟ್ರ ಸರ್ಕಾರ ಬೀಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ಬಗ್ಗೆ ಜನತಾ ನ್ಯಾಯಾಲಯಕ್ಕೆ ಹೋಗುತ್ತೇವೆ. ನಾಳೆ ಈ ವಿಷಯವನ್ನು ಸಂಸತ್ತಿನಲ್ಲಿ ಚರ್ಚೆ ಮಾಡುತ್ತೇವೆ. ಇವರಿಗೆ ಅಧಿಕಾರದಲ್ಲಿರಲು ನೈತಿಕ ಹಕ್ಕಿಲ್ಲ. ಪ್ರಧಾನಿ ಮೋದಿ ಮೇಲೆ ಕೂಡ ತನಿಖೆ ಆಗಬೇಕು ಎಂದು ಆಗ್ರಹಿಸಿದರು. ಫ್ರಾನ್ಸ್ ನಲ್ಲಿ ಸ್ನೂಪಿಂಗ್ ಬಗ್ಗೆ ತನಿಖೆ ಆಗುತ್ತಿದೆ, ಭಾರತದಲ್ಲೂ ತನಿಖೆ ಆಗಬೇಕು. ಪ್ರಧಾನಿ ಮೋದಿ ರಾಜೀನಾಮೆ ನೀಡಬೇಕು ಎಂದು ಎಐಸಿಸಿ ಸಂಘಟನಾ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಒತ್ತಾಯಿಸಿದರು.

ಇದನ್ನೂ ಓದಿ: ಕೊರೊನಾ 2ನೇ ಅಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ಯಾರೂ ಸತ್ತಿಲ್ಲ: ಕೇಂದ್ರ ಸರ್ಕಾರದ ಅಚ್ಚರಿಯ ಉತ್ತರ!

ಪೆಹಾಸಸ್​​​ ನಡೆದಿರುವ ಸಂದರ್ಭವನ್ನು ಗಮನಿಸಿದರೆ ಗೊತ್ತಾಗುತ್ತದೆ. ಕರ್ನಾಟಕ ಸರ್ಕಾರ ಬೀಳಿಸಲೆಂದೇ ಗೂಢಾಚರ್ಯೆ ಮಾಡಿದ್ದಾರೆ. ಕುಮಾರಸ್ವಾಮಿ, ಪರಮೇಶ್ವರ್ ಮತ್ತಿತರರ ಫೋನ್ ಹ್ಯಾಕ್ ಮಾಡಲಾಗಿದೆ. ಈ ದೇಶದಲ್ಲಿ ಯಾರು ಸುರಕ್ಷಿತರಲ್ಲ, ಯಾರಿಗೂ ಪ್ರೈವಸಿ ಎಂಬುದು ಇಲ್ಲದಂತಾಗಿದೆ. ಗೂಡಾಚಾರ್ಯೆ ಪ್ರತಿಮನೆಯ ಬೆಡ್ ರೂಂ, ಬಾತ್ ರೂಂ ಕಿಚನ್ ನಲ್ಲೂ ನಡೆಯುತ್ತಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಉತ್ತರ ನೀಡಲೇಬೇಕು.  ಗೂಢಾಚಾರ್ಯೆ ಪ್ರಕರಣದಿಂದ ಪಲಾಯನ ಮಾಡಲು ಸಾಧ್ಯವಿಲ್ಲ ಎಂದರು.

ಕರ್ನಾಟಕ ಸರ್ಕಾರ ಬೀಳುವಾಗ ನಾವು ಸುಪ್ರೀಂ ಕೋರ್ಟಿಗೆ ಹೋಗಿದ್ದೆವು. ಆಗ ಸುಪ್ರೀಂ ಕೋರ್ಟಿನ ನಡವಳಿ ಬಗ್ಗೆಯೂ ಗೂಡಾಚಾರ್ಯೆ ಆಗಿರಬಹುದು. ಪೆಗಾಸಸ್ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು, ಸುಪ್ರೀಂ ಕೋರ್ಟ್ ಮಾರ್ಗದರ್ಶನದಲ್ಲಿ ತನಿಖೆ ಆಗಬೇಕು. ಜುಲೈ 22ರಂದು ದೇಶಾದ್ಯಂತ ರಾಜಭವನ ಮುತ್ತಿಗೆ ಹಾಕಲಿದ್ದೇವೆ ಎಂದು   ಲೋಕಸಭಾ ಪ್ರತಿಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ತಿಳಿಸಿದರು.

ತನಿಖಾ ಸಂಸ್ಥೆಗಳನ್ನು ಮೋದಿ ಸರ್ಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಪ್ರತಿಪಕ್ಷಗಳ ಸರ್ಕಾರ ಬೀಳಿಸಲು ತನಿಖಾ ಸಂಸ್ಥೆಗಳ ದುರುಪಯೋಗವಾಗುತ್ತಿವೆ. ಇದೇ ಮೋದಿ ಸರ್ಕಾರದ ನ್ಯೂ ಇಂಡಿಯಾ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಆಗಿದ್ದ ರಂಜನ್ ಗೋಗಯ್ ಕೇಂದ್ರ ಸರ್ಕಾರದ ಪರ ಕೆಲಸ ಮಾಡಿದರು ಎಂದು ಮಾಜಿ ಸಿಜೆಐ ಮೇಲೆ ಗಂಭೀರ ಆರೋಪ ಮಾಡಿದ ಅಧೀರ್ ರಂಜನ್ ಚೌಧರಿ. ಇದೇ ಕಾರಣಕ್ಕೆ ಅವರಿಗೆ ನಿವೃತ್ತರಾಗುತ್ತಿದ್ದಂತೆ ರಾಜ್ಯಸಭಾ ನೀಡಲಾಗಿದೆ ಎಂದು ಆರೋಪಿಸಿದರು. ಜನ ಈಗ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಾವು ಎಲ್ಲಿದ್ದೇವು, ಈಗ ಎತ್ತ ಹೋಗುತ್ತಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, 2018ರಲ್ಲಿ ಯಡಿಯೂರಪ್ಪ ಬಹುಮತ ಸಾಬೀತು ಪಡಿಸಲು ವಿಫಲರಾಗಿದ್ದರು. ಬಳಿಕ ಕಾಂಗ್ರೆಸ್ಪ- ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬಂತು. 2019ರಲ್ಲಿ ಬಿಜೆಪಿ ಆಪರೇಷನ್ ಕಮಲ ಮಾಡಿತು. ಆಪರೇಷನ್ ಕಮಲ ಎಂಬ ಪದ ಹುಟ್ಟಿದ್ದೇ ಯಡಿಯೂರಪ್ಪ ಅವಧಿಯಲ್ಲಿ, ಯಡಿಯೂರಪ್ಪ ಆಪರೇಷನ್ ಕಮಲದ ಜನಕ. ಇಡೀ ದೇಶಾದ್ಯಂತ ಆಪರೇಷನ್ ಕಮಲ‌ ಎಂಬ ಪದವೇ ಇರಲಿಲ್ಲ.   ಯಡಿಯೂರಪ್ಪ 17 ಜನ ಶಾಸಕರನ್ನು ಆಪರೇಷನ್ ಕಮಲ‌ ಮಾಡಿದರು.  ಪ್ರಧಾನಿ ಮೋದಿ ಮಾರ್ಗದರ್ಶನದಲ್ಲೇ ಆಪರೇಷನ್ ಕಮಲ ನಡೆದಿದೆ ಎಂದು ವಾಗ್ದಾಳಿ ನಡೆಸಿದರು.

ಆಗ ಶಾಸಕರು ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಿರಲಿಲ್ಲ. ಬಿಜೆಪಿ ನಾಯಕರು ಒತ್ತಡ ಹೇರಿ 17 ಶಾಸಕರಿಗೆ ರಾಜೀನಾಮೆ ಕೊಡಿಸಿದರು. ನಾನು ಪರ್ಸನಲ್ ನಂಬರ್ ಇಲ್ಲದ ಕಾರಣ ನನ್ನ ಪಿಎ ವೆಂಕಟೇಶ ನಂಬರ್ ಟ್ರ್ಯಾಕ್ ಮಾಡಿದ್ದಾರೆ. ಇದೇ ರೀತಿ ಕುಮಾರಸ್ವಾಮಿ ಪಿಎ ನಂಬರ್ ಸತೀಶ್ ಫೋನ್ ಟ್ರ್ಯಾಕ್ ಮಾಡಿದಿದ್ದಾರೆ. ಇದು ಗಂಭೀರವಾದ ಅಪರಾಧ. ಈ ವಿಷಯ ಸಂಸತ್ತಿನಲ್ಲಿ ಚರ್ಚೆ ಆಗಬೇಕು ಎಂದರು. ಪ್ರಕರಣದ ನ್ಯಾಯಾಂಗ ತನಿಖೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​​ ಆಗ್ರಹಿಸಿದರು.
Published by:Kavya V
First published: