• Home
  • »
  • News
  • »
  • state
  • »
  • Siddaramaiah: ಕೋಲಾರದ ಕಾಂಗ್ರೆಸ್​ ಸಭೆಯಲ್ಲಿ ಕೋಲಾಹಲ, ಚಿನ್ನದ ನಾಡಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಡೌಟ್​!

Siddaramaiah: ಕೋಲಾರದ ಕಾಂಗ್ರೆಸ್​ ಸಭೆಯಲ್ಲಿ ಕೋಲಾಹಲ, ಚಿನ್ನದ ನಾಡಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಡೌಟ್​!

ಸಿದ್ದರಾಮಯ್ಯ, ಮಾಜಿ ಸಿಎಂ

ಸಿದ್ದರಾಮಯ್ಯ, ಮಾಜಿ ಸಿಎಂ

ಕೋಲಾರ ಕಾಂಗ್ರೆಸ್​​ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ರಮೇಶ್ ಕುಮಾರ್ ಹಾಗೂ ಕೆಎಚ್ ಮುನಿಯಪ್ಪ ಬಣದ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ಎದುರೇ ಕೈ ಕೈ ಮಿಲಾಯಿಸಲು ಮುಂದಾಗಿದ್ರು.

  • News18 Kannada
  • Last Updated :
  • Karnataka, India
  • Share this:

ಕೋಲಾರ (ಡಿ.05): ಕೋಲಾರದಿಂದ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಸ್ಪರ್ಧೆ ಮಾಡೋದು ಅನುಮಾನ ಎನ್ನುವ ಮಾತುಗಳು ಕೇಳಿ ಬರ್ತಿದೆ. ಕ್ಷೇತ್ರದ ಹುಡುಕಾಟದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಯಾವ ಅಖಾಡದಿಂದ ಕಣಕ್ಕಿಳೀತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಈ ಬಗ್ಗೆ ಕೋಲಾರದಲ್ಲಿ (Kolara) ಮಾಜಿ ಸಭಾಪತಿ ವಿ.ಆರ್ ಸುದರ್ಶನ್ (R.V Sudharshan) ಆಡಿದ ಮಾತು ಕುತೂಹಲ ಕೆರಳಿಸಿದೆ.  ಸಿದ್ದರಾಮಯ್ಯ ಸ್ಪರ್ಧೆ ಮಾಡದೆ ಹೋದ್ರೆ ಸ್ಥಳೀಯರಿಗೆ ಕೋಲಾರ ಕೈ ಟಿಕೆಟ್ (Congress Ticket) ನೀಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.


ಕೈ ಟಿಕೆಟ್​ಗಾಗಿ ಕೋಲಾರದಲ್ಲಿ ಪೈಪೋಟಿ


ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ, ಇದು ನಮ್ಮ ಸ್ವಾಭಿಮಾನದ ಪ್ರಶ್ನೆ  ಇದು ನನ್ನ ಎಚ್ಚರಿಕೆಯ ಸಂದೇಶ ಎಂದು ವಿ.ಆರ್ ಸುದರ್ಶನ್ ಹೇಳಿದ್ದಾರೆ. ಇನ್ನು ರಮೇಶ್ ಕುಮಾರ್ ಹಾಗೂ ಕೆ.ಎಚ್ ಮುನಿಯಪ್ಪ ಬಣಗಳ ನಡುವಿನ ಭಿನ್ನಮತವನ್ನು ಕೆಪಿಸಿಸಿ ಆದಷ್ಟು ಬೇಗ ಬಗೆಹರಿಸಬೇಕು ಎಂದು ಹೇಳಿದ್ರು.


ಸಿದ್ದರಾಮಯ್ಯ ಸ್ಪರ್ಧಿಸದಿದ್ರೆ ಸ್ಥಳೀಯರಿಗೆ ಟಿಕೆಟ್​ 


ಸಿದ್ದರಾಮಯ್ಯ ಕರ್ನಾಟಕದ ಆಸ್ತಿ, ಸತ್ವ ಭರಿತ, ಗಟ್ಟಿ ವ್ಯಕ್ತಿತ್ವದ ನಾಯಕ, ಅವರು ಕೋಲಾರದಿಂದ ಸ್ಪರ್ಧೆಗೆ ಬಂದಲ್ಲಿ ಎಲ್ಲರೂ ಸ್ವಾಗತ ಮಾಡೋಣ, ಆದ್ರೆ ಸಿದ್ದರಾಮಯ್ಯ ಅವರು ಬರದೆ ಹೋದಲ್ಲಿ, 2ನೇ ಅಭಿಪ್ರಾಯ ಇರಬಾರದು, ಸ್ಥಳೀಯರಿಗೆ ಕಾಂಗ್ರೆಸ್ ಮುಖಂಡರಿಗೆ ಟಿಕೆಟ್ ನೀಡಬೇಕು ಎಂದು ಕೋಲಾರದ ಕಾಂಗ್ರೆಸ್ ಸಭೆಯಲ್ಲಿ ಹಿರಿಯ ನಾಯಕ ವಿ.ಆರ್ ಸುದರ್ಶನ್ ಹೇಳಿಕೆ ನೀಡಿದ್ದಾರೆ.
ಕೋಲಾರ ಕಾಂಗ್ರೆಸ್​​ನಲ್ಲಿ ಭಿನ್ನಮತ ಸ್ಫೋಟ

ಕೋಲಾರ ಕಾಂಗ್ರೆಸ್​​ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ರಮೇಶ್ ಕುಮಾರ್ ಹಾಗೂ ಕೆಎಚ್ ಮುನಿಯಪ್ಪ ಬಣದ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ಎದುರೇ ಕೈ ಕೈ ಮಿಲಾಯಿಸಲು ಮುಂದಾಗಿದ್ರು.  ಸಿದ್ದರಾಮಯ್ಯ ಸ್ಪರ್ಧೆ ನಿರ್ಧಾರ ಹೈಕಮಾಂಡ್​ಗೆ ಬಿಡೋಣ, ಇಲ್ಲಿರೋ ನಾಯಕರು ಒತ್ತಡ ಹೇರೋದು ಬೇಡ,  ಬೇರೆ ಕ್ಷೇತ್ರದ ನಾಯಕರಿಗೆ ಕೋಲಾರ ಉಸಾಬರಿ ಬೇಡ ಎಂದು ಕೆಎಚ್ ಮುನಿಯಪ್ಪ ಹೇಳಿದ್ದಾರೆ.


ಕೋಲಾರದ ಸಭೆಯಲ್ಲಿ ಕೋಲಾಹಲ


ಇದೇ ವೇಳೆ ಕಾಂಗ್ರೆಸ್​ ಕಾರ್ಯಕರ್ತರು ಸಿದ್ದರಾಮಯ್ಯ ಅವರೇ ಕೋಲಾರದಿಂದ ಸ್ಪರ್ಧಿಸಲಿ ಎಂದು ಸಿದ್ದರಾಮಯ್ಯರಿಗೆ ಜೈಕಾರ ಹಾಕಿದ್ರು. ಈ ವೇಳೆ ಕೆಎಚ್ ಮುನಿಯಪ್ಪ ಪರ ಘೋಷಣೆ ಕೆಲ ಕಾರ್ಯಕರ್ತರು ಘೋಷಣೆ ಕೂಗಿದ್ರು. ಎರಡೂ ಕಡೆಯವರ ಮಧ್ಯೆ ಗೊಂದಲ ಉಂಟಾಯ್ತು ಈ ವೇಳೆ ಪರಸ್ಪರ ವಾಗ್ವಾದ, ನೂಕಾಟ ತಳ್ಳಾಟ, ಕೈ ಕೈ ಮಿಲಾಯಿಸಲು ನಾಯಕರು ಮುಂದಾದ್ರು.


ಗೊಂದಲದ ಗೂಡಾಯ್ತು ಕಾಂಗ್ರೆಸ್​ ಸಭೆ


ವಾಗ್ವಾದ ನಿಂತ ಬಳಿಕ ಮತ್ತೊಮ್ಮೆ ಭಾಷಣ ಮಾಡಿದ ಕೆಎಚ್ ಮುನಿಯಪ್ಪ, ಹೀಗೆ ಗಲಾಟೆ ಮಾಡೋರು ಸಿದ್ದರಾಮಯ್ಯ ರನ್ನ ಕ್ಯಾಂಡೇಟ್ ಮಾಡೋಕೆ ಹೋಗಿದ್ದಾರೆ ಎಂದು ನಕ್ಕಿ ಸಮ್ಮನಾದ್ರು. ಕಾಂಗ್ರೆಸ್ ಸಭೆಯಲ್ಲಿ ಗೊಂದಲ ಸೃಷ್ಟಿಸಲು ಕೆಲವರು ಬೇಕಂತಲೇ ಸಭೆಗೆ ಬಂದಿದ್ದಾರೆ ಎಂದು  ಕೆಎಚ್ ಮುನಿಯಪ್ಪ ಬೆಂಬಲಿಗರು ಕಿಡಿಕಾರಿದ್ರು. ಸ್ಥಳಕ್ಕೆ ಆಗಮಿಸಿದ ಕೋಲಾರ ನಗರ ಪೊಲೀಸರು ಎರಡೂ ಕಡೆಯವರನ್ನ ಸಮಾಧಾನ ಪಡಿಸಿದ್ರು.


ಇದನ್ನೂ ಓದಿ: Karnataka Politics: ಸಿದ್ರಾಮುಲ್ಲಾಖಾನ್ ಎಂದಿದ್ದಕ್ಕೆ ಕಾಂಗ್ರೆಸ್​ನವರಿಗೆ ಉರಿಯುತ್ತದೆ: ಸಿ ಟಿ ರವಿ ಕಿಡಿ


ಸಿದ್ದರಾಮಯ್ಯಗೆ ಮತ್ತೊಂದು ಆಫರ್​


ಮಾಜಿ ಸಿಎಂ ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿಸೋದು ಬೇಡ ಎಂದಿದ್ದ ಮಾಜಿ ಸಚಿವ ಸಂತೋಷ್ ಲಾಡ್ ತಮ್ಮ ಕ್ಷೇತ್ರ ಬಿಟ್ಟುಕೊಡಲು ಸಿದ್ಧ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಕಲಘಟಗಿ ಕ್ಷೇತ್ರಕ್ಕೆ ಬಂದ್ರೆ ನಾನು ಬಿಟ್ಟು ಕೊಡ್ತೀನಿ ಎಂದರು. ಸಿದ್ದರಾಮಯ್ಯರನ್ನ ಕರ್ನಾಟಕದ ಎಲ್ಲಾ ಕಡೆ ಕರೆಯುತ್ತಿದ್ದಾರೆ. ಕಲಘಟಗಿ ಬಂದ್ರೂ ಸ್ವಾಗತ ಕೋರುತ್ತೇನೆ ಎಂದು ಲಾಡ್ ತಿಳಿಸಿದರು‌. ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಚುನಾವಣೆ ನಿಲ್ಲಬಾರದು ಅನ್ನೋದು ನನ್ನ ವೈಯಕ್ತಿಕ ಹೇಳಿಕೆ.

Published by:ಪಾವನ ಎಚ್ ಎಸ್
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು