• Home
  • »
  • News
  • »
  • state
  • »
  • Siddaramaiah: ಕೋಲಾರದಿಂದಲೇ ಸ್ಪರ್ಧೆ ಮಾಡುತ್ತೇನೆ; ಅಧಿಕೃತವಾಗಿ ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

Siddaramaiah: ಕೋಲಾರದಿಂದಲೇ ಸ್ಪರ್ಧೆ ಮಾಡುತ್ತೇನೆ; ಅಧಿಕೃತವಾಗಿ ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಸಿದ್ದರಾಮಯ್ಯ, ಮಾಜಿ ಸಿಎಂ

ಸಿದ್ದರಾಮಯ್ಯ, ಮಾಜಿ ಸಿಎಂ

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದಲೇ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೇನೆ. ಆದರೆ ಪಕ್ಷದ ನಿರ್ಧಾರ ಅಂತಿಮವಾಗಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

  • Share this:

ಕೋಲಾರ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Assembly Election 2023) ಕೋಲಾರದಿಂದಲೇ (Kolar) ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೇನೆ. ಆದರೆ ಪಕ್ಷದ ನಿರ್ಧಾರ ಅಂತಿಮವಾಗಲಿದೆ. ಹೈಕಮಾಂಡ್  (Congress) ತೀರ್ಮಾನವೇ ಅಂತಿಮವಾಗಲಿದೆ. ಇಲ್ಲಿ ಯಾವುದೇ ಕಾರಣಕ್ಕೂ ತಪ್ಪು ಸಂದೇಶ ಹೋಗಬಾರದು. ನೀವು ಯಾವುದೇ ಕಾರಣಕ್ಕೂ ಸಂಶಯ ಪಡಬೇಡಿ. ಸಿದ್ದರಾಮಯ್ಯ ಇಲ್ಲಿ ಬರೋದಿಲ್ಲ, ಜನರ ಕಷ್ಟ ಸುಖ ಕೇಳೋದಿಲ್ಲ. ಸಿದ್ದರಾಮಯ್ಯ ಹೊರಗಿನವರು ಅಂತ ಅಪಪ್ರಚಾರ ಮಾಡ್ತಾರೆ. ಆದರೆ ಈಗ ಮಾತು ಕೊಡುತ್ತೇನೆ, ಪ್ರತಿ ವಾರ ಕ್ಷೇತ್ರಕ್ಕೆ ಭೇಟಿ ನೀಡುತ್ತೇನೆ. ಚಡ್ಡಿ ಹಾಕಿದವನು ಕೂಡ, ಅಂದರೇ ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿ ಕೂಡ ನನ್ನನ್ನು ಭೇಟಿ ಮಾಡಬಹುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಹೇಳಿದ್ದಾರೆ. 


ಇಂದು ಕೋಲಾರ ನಗರದ ಮಿನಿ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ನಾನು ಕೋಲಾರ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲು ನಿರ್ಧಾರ ಮಾಡಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಮಾಡುವುದು ನಮ್ಮ ಉದ್ದೇಶ.


ಇದನ್ನೂ ಓದಿ: Siddaramaiah: ಮೋದಿ ಎದುರು ತುಟಿ ಬಿಚ್ಚಲಾಗದ ಸಿಎಂ ಬೊಮ್ಮಾಯಿಯನ್ನ ಹುಲಿ-ಸಿಂಹಕ್ಕೆ ಹೋಲಿಸಲು ಆಗುತ್ತಾ? ಮಾಜಿ ಸಿಎಂ ಸಿದ್ದರಾಮಯ್ಯ


ಕೋಲಾರ ಕಡಿಮೆ ಮಳೆಯಾಗುವ ಜಿಲ್ಲೆಯಾಗಿದೆ. ಇಲ್ಲಿ ಜನರು ಬಹಳ ಶ್ರಮ ಜೀವಿಗಳು. ಹಾಲು, ಹಣ್ಣು, ರೇಷ್ಮೆ ಹಾಗೂ ತರಕಾರಿಗಳನ್ನು ಬಹಳ ಶ್ರಮವಹಿಸಿ ಬೆಳೆಸುತ್ತಾರೆ. ಈ ಹಿಂದೆ ನಾನು ಸಿಎಂ ಆಗಿದ್ದಾಗ ರಾಜ್ಯದ ಎಲ್ಲಾ ಭಾಗಗಳಿಗೂ ವಿಶೇಷ ಯೋಜನೆಗಳನ್ನು ನೀಡಿ ಅಭಿವೃದ್ಧಿಯ ಪಥ ನಿರ್ಮಿಸಿದ್ದೇವು. ಆದರೆ ಕಳೆದ ಬಾರಿ ಅಧಿಕಾರಕ್ಕೆ ಬರಲು ಆಗಲಿಲ್ಲ. ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದೇ ಬರುತ್ತೇವೆ. ಈಗಾಗಲೇ ಭರವಸೆ ನೀಡಿದ್ದಂತೆ, ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ ಎಂದು ತಿಳಿಸಿದರು.


ಅಧಿಕಾರಕ್ಕೆ ಬಂದ 2 ವರ್ಷದಲ್ಲಿ ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸುತ್ತೇವೆ


ನಾವು ಯಾವತ್ತು ಅಭಿವೃದ್ಧಿ ಮಾಡಲು ಹಿಂದೆ ಬಿದ್ದಿಲ್ಲ. ನಾನು ಸ್ಪರ್ಧೆ ಮಾಡಿದ ಯಾವುದೇ ಕ್ಷೇತ್ರದಲ್ಲೂ ಅಭಿವೃದ್ಧಿ ಕಾರ್ಯಗಳು ವೇಗ ಪಡೆದುಕೊಂಡಿದೆ. ಬಾದಾಮಿ ಕ್ಷೇತ್ರದಲ್ಲೂ ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಈ ಹಿಂದೆ ಕೆಸಿ ವ್ಯಾಲಿ ಯೋಜನೆ ಮಾಡಬೇಕು ಅಂತ ಕ್ಷೇತ್ರದ ನಾಯಕರು ಬಂದು ಮನವಿ ಮಾಡಿದ್ದರು. ಅವರ ಮನವಿಯಂತೆ ಎಷ್ಟೇ ಕೋಟಿಯಾದರು ಮಾಡ್ತೀವಿ ಅಂತ ಹೇಳಿ. ಹೇಳಿದಂತೆ ಎಲ್ಲಾ ಕೆರೆಗಳಿಗೂ ನೀರು ಕೊಟ್ಟಿದ್ದೇವು.


ಸಿದ್ದರಾಮಯ್ಯ, ಮಾಜಿ ಸಿಎಂ


ಅಲ್ಲದೇ. 13 ಸಾವಿರ ಕೋಟಿ ರೂಪಾಯಿಗಳ ಎತ್ತಿನಹೊಳೆ ಯೋಜನೆಗೆ ಭೂಮಿ ಪೂಜೆ ಮಾಡಿದ್ದೆವು. ಆದರೆ ಮತ್ತೆ ನಾವು ಬಂದಿದ್ದರೇ ಯೋಜನೆಯನ್ನು ಪೂರ್ಣಗೊಳಿಸುತ್ತಿದ್ದೆವು. ಮುಂದಿನ ಚುನಾವಣೆಯಲ್ಲಿ ನಾವು ಗೆದ್ದು ಅಧಿಕಾರಕ್ಕೆ ಬಂದ ಕೂಡಲೇ 2 ವರ್ಷದಲ್ಲಿ ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಿ ನೀರು ಕೊಡುತ್ತೇವೆ.


ಕೋಲಾರ ಜಿಲ್ಲೆಗೆ ಸೂಪರ್ ಸ್ಪೆಷಲಿಟಿ ಆಸ್ಪತ್ರೆ


ಕೋಲಾರ ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಒಂದು. ಜಿಲ್ಲೆಯಲ್ಲಿ ಯಾವುದೇ ದೊಡ್ಡ ನದಿ ಇಲ್ಲ. ನೇತ್ರಾವತಿ ನದಿಯಿಂದ ನೀರು ತಂದು ಇಲ್ಲಿನ ಕೆರೆಗಳನ್ನು ತುಂಬಿಸಲು ಮುಂದಾಗಿದ್ದೇವೆ. ಇಲ್ಲಿನ ರೈತರು ಬಹಳ ಕಷ್ಟ ಪಡ್ತಾರೆ. ಅದ್ದರಿಂದಲೇ ನಾವು ಕೋಲಾರವನ್ನು ಸಿಲ್ಕ್​-ಮಿಲ್ಕ್​ ಅಂತ ಹೇಳ್ತೇವೆ. ಈ ಭಾಗದ ಜನರಿಗೆ ನೀರು ಕೊಡುವ ಕೆಲಸವನ್ನು ಮೊದಲು ಮಾಡುತ್ತೇವೆ.


ಇದನ್ನೂ ಓದಿ: Siddu Nija Kanasugalu: ಇಂದು ಬಿಜೆಪಿಯಿಂದ ‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆ; ಕಾಂಗ್ರೆಸ್​ನಿಂದ ದೂರು ದಾಖಲು


ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಅಂತ ಮನವಿ ಮಾಡಿದ್ದಾರೆ. ಅಧಿಕಾರಕ್ಕೆ ಬಂದ ಕೂಡಲೇ ಅದನ್ನು ಮಾಡ್ತೀವಿ. ಈ ಹಿಂದೆ 165 ಭರವಸೆಗಳನ್ನು ಕೊಟ್ಟಿದ್ದೇವು. ಅದರಲ್ಲಿ 160 ಭರವಸೆಗಳನ್ನು ಈಡೇರಿಸಿದ್ದೇವು. ನಾವು ಮಾಡಿದ್ದ ಯಾವುದೇ ಯೋಜನೆ ಈಗ ಮುಂದುವರಿದಿಲ್ಲ.


ಪ.ಜಾತಿ/ವರ್ಗಗಳಿಗೆ ನೀಡುವ ಹಣವನ್ನು ಅವರಿಗೆ ಖರ್ಚು ಮಾಡ್ಬೇಕು ಅಂತ ಕಾನೂನು ಮಾಡಿದ್ದು ನಮ್ಮ ಸರ್ಕಾರ. 30 ಸಾವಿರ ಕೋಟಿ ಹಣವನ್ನು ನಾನು ಪ.ಜಾತಿ/ವರ್ಗಗಳಿಗೆ ಮೀಸಲು ಇಟ್ಟಿದ್ದೇವು. ಈ ಕಾನೂನು ಜಾರಿ ಅದ್ಮೇಲೆ 80 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ರಾಜಕೀಯ, ಸಾಮಾಜಿಕ ಶಕ್ತಿಯನ್ನು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ ಎಂದು ಹೇಳಿದರು.

Published by:Sumanth SN
First published: